Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ಮಗುವಿನ ಮೇಲೆ ಕೆಟ್ಟ ದೃಷ್ಟಿ ಬಿದ್ದಿದ್ಯಾ? ಹಾಗಾದ್ರೆ ಈ ರೀತಿ ಮಾಡಿ!
ಎಲ್ಲವೂ ಚೆನ್ನಾಗಿದ್ದ ಮನೆಯಲ್ಲಿ ಇದ್ದಕಿದ್ದ ಹಾಗೆ ಸಮಸ್ಯೆಗಳು ಕಾಣಿಸಿಕೊಂಡರೆ ಅಥವಾ ಆ ಮನೆಯವರಿಗೆ ಕಷ್ಟದ ಮೇಲೆ ಕಷ್ಟ ಬಂದರೆ ಖಂಡಿತ ಆ ಮನೆಯ ಮೇಲೆ ಯಾರದ್ದೋ ಕೆಟ್ಟ ದೃಷ್ಟಿ ಬಿದ್ದಿದೆ ಎಂದರ್ಥ. ಅದ್ರಲ್ಲೂ ಮಕ್ಕಳ ಮೇಲೆ ಹೊರಗಿನವರ ಕೆಟ್ಟ ದೃಷ್ಟಿ ಬಿದ್ದಾಗ ಬಹು ಬೇಗನೇ ಗೊತ್ತಾಗುತ್ತದೆ.

ಮಕ್ಕಳನ್ನು ಎಲ್ಲಾದರೂ ಹೊರಗಡೆ ಕರೆದುಕೊಂಡು ಹೋದ್ರೆ ಮತ್ತೆ ಮನೆಗೆ ವಾಪಾಸ್ಸ್ ಬಂದಾಗ ಮಕ್ಕಳು ಒಂದೇ ಸಮನೇ ಅಳೋದಕ್ಕೆ ಶುರು ಮಾಡ್ತಾರೆ. ಯಾರು ಏನು ಹೇಳಿದ್ರೂ ಕೂಡ ಮಕ್ಕಳನ್ನು ನಿಯಂತ್ರಣಕ್ಕೆ ತರೋದು ಕಷ್ಟ. ಮಕ್ಕಳಿಗೆ ಏನಾಗುತ್ತಿದೆ ಎಂದು ಪೋಷಕರು ಗೊಂದಲಕ್ಕೆ ಒಳಗಾಗುತ್ತಾರೆ. ಅಷ್ಟಕ್ಕು ಮಕ್ಕಳ ಮೇಲೆ ಹೊರಗಿನವರ ಕೆಟ್ಟ ದೃಷ್ಟಿ ಬಿದ್ದರೆ ಇದಕ್ಕೆ ಪರಿಹಾರ ಏನು ಅನ್ನೋದನ್ನು ತಿಳಿಯೋಣ.
ಕೆಟ್ಟ ದೃಷ್ಟಿ ನಿವಾರಿಸಲು ಈ ರೀತಿ ಪರಿಹಾರ ಮಾಡಿ!
ಮಕ್ಕಳ ಮೇಲೆ ಹೊರಗಿನವರ ಕೆಟ್ಟ ದೃಷ್ಟಿ ಬಿದ್ದರೆ ಆ ಮಕ್ಕಳು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗೂ ಇದ್ದಕ್ಕಿದ್ದ ಹಾಗೆ ಜೋರಾಗಿ ಅಳುತ್ತಾರೆ.
ಎಳ್ಳೆಣ್ಣೆಯಿಂದ ದೃಷ್ಟಿ ಎತ್ತಿ!
ಮಗುವಿನ ಮೇಲಿರುವ ಕೆಟ್ಟ ದೃಷ್ಟಿಯನ್ನು ನಿವಾರಿಸಲು ಮೊದಲಿಗೆ ಹಿಟ್ಟಿನ ದೀಪವನ್ನು ತಯಾರಿಸಿ. ನಂತರ ಅದಕ್ಕೆ ಎಳ್ಖೆಣ್ಣೆಯನ್ನು ಹಾಕಿ ಅದರಿಂದ ನಾಲ್ಕು ದೀಪಗಳನ್ನು ಹಚ್ಚಿರಿ. ನಂತರ ಅದರಿಂದ ನಿಮ್ಮ ಮಗುವಿನ ದೃಷ್ಟಿ ತೆಗೆಯಿರಿ.
ನಂತರ ಈ ದೀಪವನ್ನು ಮೂರು ದಾರಿ ಸೇರುವ ಕಡೆ ಹಾಕಬೇಕು. ಹೀಗೆ ಮಾಡಿದರೆ ನಿಮ್ಮ ಮಗುವಿನ ಮೇಲಿರುವ ದೃಷ್ಟಿದೋಷ ನಿವಾರಣೆಯಾಗುತ್ತದೆ. ಹಾಗೂ ನಿಮ್ಮ ಮಗು ಮೊದಲಿನ ಹಾಗೆಯೇ ಆಗುತ್ತದೆ. ಆದಷ್ಟು ಮಕ್ಕಳನ್ನು ದುಷ್ಟ ದೃಷ್ಟಿಯಿಂದ ದೂರ ಇಡೋದಕ್ಕಾಗಿ ದೃಷ್ಟಿ ರಕ್ಷಾ ಕವಚವನ್ನು ಧರಿಸಿ. ಇದರಿಂದ ಮಕ್ಕಳ ಮೇಲೆ ಕೆಟ್ಟ ದೃಷ್ಟಿ ಬೀಳುವುದನ್ನು ತಪ್ಪಿಸಬಹುದು.
ಮೆಣಸಿನ ಕಾಯಿ, ಉಪ್ಪು, ಅರಶಿನದಿಂದ ಪರಿಹಾರ!
ಈ ರೀತಿ ಮಾಡಿದ್ರೆ ಕೂಡ ಮಕ್ಕಳ ಮೇಲಿನ ದೃಷ್ಟಿಯನ್ನು ತೆಗೆದು ಹಾಕಬಹುದು. ಏಳು ಮೆಣಸಿನಕಾಯಿಗಳು, ಸ್ವಲ್ಪ ಉಪ್ಪು ಮತ್ತು ಅರಿಶಿನವನ್ನು ತೆಗೆದುಕೊಂಡು ಮಗುವಿನ ತಲೆಯ ಸುತ್ತ ಏಳು ಬಾರಿ ತಿರುಗಿಸಬೇಕು. ಆ ನಂತರ ಅದನ್ನು ಬೆಂಕಿಗೆ ಅರ್ಪಿಸಬೇಕು. ಇದರಿಂದ ನಿಮ್ಮ ಮಗುವಿನ ಮೇಲಿದ್ದ ಕೆಟ್ಟ ದೃಷ್ಟಿಯೆಲ್ಲಾ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.
ಹನುಮಾನ್ ಚಾಲೀಸಾ ಪಠಿಸಿರಿ!
ಆಂಜನೇಯನನ್ನು ತೊಂದರೆಗಳನ್ನು ವಿಮೋಚನೆ ಮಾಡುವವನು ಅಂತ ಕರೆಯಲಾಗುತ್ತದೆ. ಅವನು ಎಲ್ಲಾ ತೊಂದರೆಗಳನ್ನು ನಾಶಮಾಡುವವನು. ಅದರಿಂದ ನಿಮ್ಮ ಮಗು ನಿತ್ಯ ಹನುಮಾನ್ ಚಾಲೀಸ್ ಪಠಿಸುವಂತೆ ನೋಡಿಕೊಳ್ಳಿ. ನಿತ್ಯ ಈ ಮಂತ್ರಗಳನ್ನು ಪಠಿಸುತ್ತಿದ್ದರೆ ಕಷ್ಟಗಳೆಲ್ಲಾ ತನ್ನಿಂದ ತಾನೇ ದೂರವಾಗುತ್ತದೆ.
ಪಂಚಮುಖಿ ಆಂಜನೇಯನ ಲಾಕೆಟ್ ಧರಿಸಿ!
ಪಂಚಮುಖಿ ಆಂಜನೇಯ ತುಂಬಾನೇ ಪವರ್ ಫುಲ್. ಮನೆಯಲ್ಲಿ ಪಂಚಮುಖಿ ಆಂಜನೇಯನ ವಿಗ್ರಹವಿದ್ದರೆ ಯಾವುದೇ ರೀತಿ ತೊಂದರೆ ಎದುರಾಗೋದಿಲ್ವಂತೆ. ಅದೇ ರೀತಿ ನೀವು ಪಂಚಮುಖಿ ಆಂಜನೇಯನ ಲಾಕೆಟ್ ಅನ್ನು ಧರಿಸಿದ್ರೆ ನಿಮ್ಮ ಕಷ್ಟಗಳೆಲ್ಲಾ ನಿವಾರಣೆಯಾಗೋದ್ರ ಜೊತೆಗೆ ಕೆಟ್ಟ ದೃಷ್ಟಿ ಬೀಳೋದ್ರಿಂದ ತಪ್ಪಿಸಿಕೊಳ್ಳಬಹುದು.
ಜೀವನದಲ್ಲಿ ತೊಂದರೆಗಳ ಮೇಲೆ ತೊಂದರೆಗಳು ಬರುತ್ತಿದ್ದಾಗ ಈ ರೀತಿ ಯಾವುದಾದರೂ ಕೆಟ್ಟ ದೃಷ್ಟಿ ಬಿದ್ದಿದೆ ಅಂತ ಹೇಳಬಹುದು. ಹೀಗಾಗಿ ನೀವು ತುಂಬಾನೇ ಹುಷಾರಾಗಿರಿ. ಹಾಗೂ ನಿಮ್ಮ ಮಕ್ಕಳ ಮೇಲೆ ಒಂದು ಕಣ್ಣಿಟ್ಟಿರಿ. ಈ ರೀತಿ ಪರಿಹಾರಗಳನ್ನು ಮಾಡಿದ್ರೆ ಎಲ್ಲಾ ಸಮಸ್ಯೆಗಳು ನಿವಾರಣೆ ಆಗಲಿದೆ.



Click it and Unblock the Notifications
