Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಮಾಯಣ ಪಾರಾಯಣ ಮಾಡುವಾಗ ಅಪ್ಪಿ-ತಪ್ಪಿಯೂ ಈ ತಪ್ಪುಗಳನ್ನು ಮಾಡದಿರಿ!
ರಾಮಾಯಣದ ಅಧ್ಯಯನದಿಂದ ನಾವು ಕಲಿಯಬೇಕಾಗಿರೋದು ತುಂಬಾನೇ ಇದೆ. ಅದರಲ್ಲಿರುವ ಒಂದೊಂದು ಅಧ್ಯಾಯಗಳು ನಮಗೆ ಒಂದೊಂದು ಪಾಠವನ್ನು ಕಲಿಸಿ ಕೊಡುತ್ತದೆ. ಸಾಮಾನ್ಯವಾಗಿ ಹಿಂದೂಗಳ ಪೂಜಾ ಕೋಣೆಯಲ್ಲಿ ಪವಿತ್ರ ರಾಮಾಯಣದ ಪುಸ್ತಕವನ್ನು ಇಡಲಾಗುತ್ತದೆ. ಆದರೆ ಕೆಲವೇ ಕೆಲವು ಜನ ಮಾತ್ರ ಅದನ್ನು ಆಸಕ್ತಿಯಿಂದ ಓದುತ್ತಾರೆ. ರಾಮಾಯಣ ಪಾರಾಯಣ ಮಾಡೋದ್ರಿಂದ ನಮ್ಮ ದೇಹ ಹಾಗೂ ಮನಸ್ಸು ಶುದ್ಧವಾಗುತ್ತಂತೆ.
ಆದರೆ ರಾಮಾಯಣವನ್ನು ಓದುವಾಗ ಕೆಲವೊಂದು ರೀತಿ ರಿವಾಜುಗಳನ್ನು ಪಾಲನೆ ಮಾಡೋದು ತುಂಬಾನೇ ಮುಖ್ಯವಾಗುತ್ತದೆ. ನಮಗೆ ಬೇಕಾದ ಹಾಗೆ, ಯಾವಾಗ ಎಂದರೆ ಆವಾಗ ರಾಮಾಯಣ ಪಠನೆ ಮಾಡುವುದು ತಪ್ಪು. ಅಷ್ಟಕ್ಕು ರಾಮಾಯಣ ಪಾರಾಯಣ ಕ್ರಮ ಹೇಗೆ? ಯಾವೆಲ್ಲಾ ನಿಯಮ ಪಾಲಿಸಬೇಕು ಅನ್ನೋದನ್ನು ತಿಳಿಯೋಣ.

ಹಳೆಯ ಪುಸ್ತಕ ಬಳಸಬೇಡಿ
ರಾಮಾಯಣವನ್ನು ಓದಬೇಕೆಂದು ನಿರ್ಧರಿಸಿದಾಗ ಯಾವುದೋ ಹಳೆಯ ಗೆದ್ದಲು ಹಿಡಿದ ಪುಸ್ತಕವನ್ನು ಬಳಸಬಾರದು. ಪುಸ್ತಕ ಹರಿದಿರಲು ಬಾರದಂತೆ. ಚೆನ್ನಾಗಿರುವ ಪುಸ್ತಕವನ್ನೇ ಬಳಕೆ ಮಾಡಬೇಕು. ಈ ವಿಚಾರವನ್ನು ಗಮನದಲ್ಲಿ ಇಡಿ. ರಾಮಾಯಣದ ಉತ್ತಮ ಪುಸ್ತಕದೊಂದಿಗೆ ಪಾರಾಯಣ ಆರಂಭಿಸಿ.
ದೇವರ ಮುಂದೆ ದೀಪ ಹಚ್ಚಿ ಓದಲು ಆರಂಭಿಸಿ
ನಿಮ್ಮ ಮನಸ್ಸಿಗೆ ಯಾವಾಗ ಅನ್ನಿಸುತ್ತೋ ಆವಾಗ ನೀವು ರಾಮಾಯಣವನ್ನು ಓದಬಹುದು. ಆದರೆ ಸಂಜೆ ಮಾತ್ರ ಬೇಡ. ರಾಮಾಯಣವನ್ನು ಸಂಜೆ ಹೊರತುಪಡಿಸಿ ಯಾವಾಗ ಬೇಕಾದರೂ ಓದಬಹುದು. ಆದರೆ ರಾಮಾಯಣ ಓದುವ ಮೊದಲು ದೇವರ ಮುಂದೆ ದೀಪ ಹಚ್ಚಿ, ರಾಮನ ನಾಮ ಸ್ಮರಣೆ ಮಾಡುತ್ತಾ ರಾಮಾಯಣ ಓದಿ. ಭಕ್ತಿಯಿಂದ ಓದಬೇಕು. ಇದರಿಂದ ಶುಭ ಫಲಗಳು ಲಭಿಸುತ್ತೆ ಅನ್ನೋ ನಂಬಿಕೆಯಿದೆ.
ಸ್ಪಷ್ಟವಾಗಿ ಉಚ್ಚರಿಸಿ
ರಾಮಾಯಣ ಓದುವಾಗ ಎಲ್ಲಾ ಪದಗಳನ್ನು ಸರಿಯಾಗಿ ಗಮನವಿಟ್ಟು ಸರಿಯಾಗಿ ಓದಬೇಕು. ರಾಮಾಯಣವನ್ನು ಓದುವಾಗ ಏಕಾಗ್ರತೆ ಇರಬೇಕು. ಎಲ್ಲೆಲ್ಲೋ ಮನಸ್ಸಿಟ್ಟು ಓದಿದರೆ ಅದು ವ್ಯರ್ಥ. ನಮ್ಮ ಮನಸ್ಸು ಶುದ್ಧವಾಗಿರೋದು ತುಂಬಾನೇ ಮುಖ್ಯವಾಗುತ್ತದೆ. ಶುದ್ಧ ಮನಸ್ಸಿನಿಂದ ಏನೇ ಮಾಡಿದರೂ ದೇವರು ಅದಕ್ಕೆ ಅಸ್ತು ಎನ್ನುತ್ತಾನಂತೆ.
ರಾಮನ ನಾಮವನ್ನು ಪಠಿಸುವ ಮೂಲಕ ಓದಲು ಪ್ರಾರಂಭಿಸಿ
ರಾಮಾಯಣದ ಯಾವುದೇ ಅಧ್ಯಯನವನ್ನು ಓದುವ ಮೊದಲು ಶ್ರೀ ರಾಮ ನಾಮವನ್ನು ಜಪಿಸಬೇಕು. ರಾಮಾಯಣ ಪಾರಾಯಣ ಮಾಡುವಾಗ ಯಾವುದೇ ಯುದ್ಧ, ಸಾವು, ಅಪಶ್ರುತಿಯ ಮಾತನ್ನು ಆಡುವ ಮೂಲಕ ರಾಮಾಯಣ ಪಾರಾಯಣ ಮಾಡಬಾರದು.
ಯುದ್ಧಕಾಂಡದ ಕೊನೆಯ ಭಾಗವನ್ನು ಓದಬೇಕು
ಪ್ರತಿದಿನ ರಾಮಾಯಣವನ್ನು ಓದುವಾಗ ಯುದ್ಧ ಕಾಂಡದ ಕೊನೆಯ ಭಾಗವಾದ ರಾಮಾಯಣ ಮಹಾತ್ಮೆಯನ್ನು ಓದೋದನ್ನು ಮರೆಯದಿರಿ. ಸಂಪೂರ್ಣ ರಾಮಾಯಣವನ್ನು ಓದಿದರೆ ಮಾತ್ರ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.
ಸಂಜೆಯ ಸಮಯದಲ್ಲಿ ರಾಮಾಯಣ ಓದಬೇಡಿ
ರಾಮಾಯಣ ಓದುವುದು ಒಂದು ರೀತಿ ನಂಬಿಕೆ ಇದ್ದ ಹಾಗೆ. ಹಿಂದಿನ ಅಧ್ಯಯನವನ್ನು ಓದುವ ಮೂಲಕ ಈ ದಿನ ಹೊಸದಾಗಿ ರಾಮಾಯಣ ಓದಲು ಆರಂಭಿಸಬೇಕು. ಅಪ್ಪಿ- ತಪ್ಪಿಯೂ ಸಂಜೆಯ ಸಮಯದಲ್ಲಿ ರಾಮಾಯಣ ಓದೋದಕ್ಕೆ ಹೋಗಬೇಡಿ. ಸಂಜೆ ರಾಮಯಾಣ ಓದುವುದರಿಂದ ಎಲ್ಲಾ ದೇವತೆಗಳು ರಾಮಾಯಣ ಕೇಳಲು ಶುರು ಮಾಡುತ್ತಾರಂತೆ. ಹೀಗಾಗಿ ಸಂಜೆಯ ಸಮಯದಲ್ಲಿ ಸಂಜೆಯ ಪ್ರಾರ್ಥನೆ ನಿಲ್ಲುತ್ತೆ ಎಂಬ ನಂಬಿಕೆಯಿದೆ.
ರಾಮಾಯಣ ಒಂದು ಪವಿತ್ರ ಗ್ರಂಥ. ಹೀಗಾಗಿ ನಮ್ಮ ಮನಸ್ಸಿಗೆ ಇಷ್ಟ ಬಂದ ಹಾಗೆ ಇದನ್ನು ಓದಬಾರದು. ಮೈ, ಮನಸ್ಸು ಎರಡೂ ಕೂಡ ಶುದ್ಧವಾಗಿರಬೇಕು. ಒಂದು ಸಲ ರಾಮಾಯಣ ಓದಲು ಆರಂಭಿಸಿದ್ದೀರಿ ಎಂದರೆ ಯಾವುದೇ ಕಾರಣಕ್ಕೂ ಅರ್ಧದಲ್ಲಿ ನಿಲ್ಲಿಸೋದಕ್ಕೆ ಹೋಗಬೇಡಿ. ಸಂಪೂರ್ಣ ಮಾಡಲೇಬೇಕು.



Click it and Unblock the Notifications
