Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ!
ವಿಘ್ನ ನಿವಾರಕನ ಪೂಜೆಯಲ್ಲಿ ಪವಿತ್ರ ತುಳಸಿಗೆ ಜಾಗವಿಲ್ಲ ಯಾಕೆ?
ಯಾವುದೇ ಶುಭ ಕಾರ್ಯಗಳು ನಡೆಯಬೇಕಾದರೆ ಮೊದಲಿಗೆ ವಿಘನಿವಾರಕನಾದ ಗಣೇಶನನ್ನು ನೆನೆಯಲೇಬೇಕು. ಹಾಗೂ ಆತನಿಗೆ ಮೊದಲ ಪೂಜೆ ಸಲ್ಲಿಸಲೇಬೇಕು. ಯಾವುದೇ ಕೆಲಸ ಮಾಡಬೇಕಾದರೂ ಮೊದಲಿಗೆ ಗಣಪತಿಯನ್ನು ಸ್ಮರಿಸಿ ಮುಂದಿನ ಕೆಲಸ ಮಾಡಲಾಗುತ್ತದೆ. ಕೇವಲ ಮನುಷ್ಯರಷ್ಟೇ ಅಲ್ಲ, ದೇವತೆಗಳು ಕೂಡ ವಿನಾಯಕನನ್ನು ಸ್ಮರಣೆ ಮಾಡುತ್ತಾರಂತೆ. ಶಿವ ಹಾಗೂ ವಿಷ್ಣುವು ಕೂಡ ತಮ್ಮ ಕೆಲಸ ಯಾವುದೇ ವಿಘ್ನಗಳಿಲ್ಲದೆ ನೆರವೇರಲು ಗಣಪತಿಯನ್ನು ಆರಾಧನೆ ಮಾಡುತ್ತಿದ್ದರಂತೆ.
ಗರಿಕೆ ಹುಲ್ಲನ್ನು ಗಣಪನಿಗೆ ತಪ್ಪದೇ ಅರ್ಪಣೆ ಮಾಡಲೇಬೇಕು. ಇದ್ರ ಜೊತೆಗೆ ದಾಸವಾಳ ಹೂವು ಕೂಡ ಇದ್ದರೆ ಗಣೇಶ ಸಂತೃಪ್ತನಾಗುತ್ತಾನಂತೆ. ಏಕೆಂದರೆ ಗಣೇಶನಿಗೆ ಗರಿಕೆ ಮತ್ತು ದಾಸವಾಳದ ಹೂವೆಂದರೆ ತುಂಬಾನೇ ಇಷ್ಟವಂತೆ. ಇನ್ನೂ ಸಾಮಾನ್ಯವಾಗಿ ತುಳಸಿಯನ್ನು ಪ್ರತಿ ಪೂಜೆಯಲ್ಲೂ ಬಳಸದೇ ಇರೋದಿಲ್ಲ. ಬೆಳಗ್ಗೆ ಎದ್ದ ತಕ್ಷಣ ತುಳಸಿಗೆ ನೀರು ಎರೆದು ಭಕ್ತಿಯಿಂದ ಬೇಡಿಕೊಂಡರೆ ಕಷ್ಟಗಳೆಲ್ಲಾ ಕಳೆಯುತ್ತೆ ಅನ್ನೋ ನಂಬಿಕೆ ಕೂಡ ಇದೆ. ಆದರೆ ವಿಘ್ನ ನಿವಾರಕನಿಗೆ ಯಾಕೆ ತುಳಸಿಯನ್ನು ಅರ್ಪಣೆ ಮಾಡೋದಿಲ್ಲ. ಇದರ ಹಿಂದಿನ ಕಾರಣವೇನು ಅನ್ನೋದನ್ನು ತಿಳಿದುಕೊಳ್ಳೋಣ.

ಗಣೇಶನಿಗೆ ತುಳಸಿಯನ್ನು ಅರ್ಪಿಸೋದಿಲ್ಲ ಯಾಕೆ?
ತುಳಸಿಯು ಧರ್ಮರಾಜನ ಮಗಳು. ತುಳಸಿ ಯುವತಿಯಾಗಿರುವಾಗ ಆಕೆ ನಾರಾಯಣನ (ಭಗವಾನ್ ವಿಷ್ಣುವಿನ) ಮಹಾನ್ ಭಕ್ತೆಯಾಗಿದ್ದಳು. ಒಮ್ಮೆ ಅವಳು ಗಂಗೆಯ ದಡದಲ್ಲಿ ನಡೆದುಕೊಂಡು ಹೊಗುತ್ತಿರಬೇಕಾದರೆ ಅವಳು ಗಣೇಶನನ್ನು ನೋಡುತ್ತಾಳೆ. ಗಣೇಶನು ಕೃಷ್ಣನ ಧ್ಯಾನದಲ್ಲಿ ತಲ್ಲೀನನಾಗಿದ್ದನು. ಗಣೇಶನ ಸೌಂದರ್ಯಕ್ಕೆ ತುಳಸಿ ಸಂಪೂರ್ಣವಾಗಿ ಮನಸೋಲುತ್ತಾಳೆ. ಅವರಿಬ್ಬರಲ್ಲೂ ಇದ್ದ ಸಾಮ್ಯಾತೆ ಎಂದರೆ ಇಬ್ಬರೂ ಮದುವೆಯ ವಯಸ್ಸಿಗೆ ಬಂದಿದ್ದರೂ ಹಾಗೂ ಇಬ್ಬರೂ ಭಗವಾನ್ ವಿಷ್ಣುವಿನ ಭಕ್ತರಾಗಿದ್ದರು.
ತುಳಸಿಯನ್ನು ಮದುವೆಯಾಗಲು ನಿರಾಕರಿಸಿದ ಗಣೇಶ!
ಗಣೇಶನನ್ನು ನೋಡಿದ ತಕ್ಷಣ ತುಳಸಿ ಪ್ರೀತಿಯಲ್ಲಿ ಬೀಳುತ್ತಾಳೆ. ಹಾಗೂ ತನ್ನನ್ನು ಮದುವೆಯಾಗು ಎಂದು ಕೇಳಿಕೊಳ್ಳುತ್ತಾಳೆ. ಗಣೇಶ ಧ್ಯಾನದಲ್ಲಿದ್ದಿದ್ದರಿಂದ ಆ ಸಮಯದಲ್ಲಿ ಆತ ಬ್ರಹ್ಮಚಾರಿಯಾಗಿದ್ದನು. ತುಳಸಿಯನ್ನು ಮದುವೆಯಾಗೋದಕ್ಕೆ ಗಣೇಶನಿಗೆ ಇಷ್ಟ ಇರಲಿಲ್ಲ. ಒಂದು ವೇಳೆ ಮದುವೆಯಾಗುವುದಾದರೂ ತನ್ನ ತಾಯಿ ಪಾರ್ವತಿಯಂತೆಯೇ ಅದೇ ರೀತಿ ದೈವಿಕ ಗುಣಗಳನ್ನು ಹೊಂದಿರುವ ಹುಡುಗಿಯನ್ನು ಮದುವೆಯಾಗಲು ಬಯಸಿದ್ದನು. ಹೀಗಾಗಿ ತುಳಸಿಯ ಪ್ರೀತಿಯನ್ನು ಗಣೇಶ ತಿರಸ್ಕರಿಸುತ್ತಾನೆ.
ಗಣೇಶನಿಗೆ ಶಾಪ ಕೊಟ್ಟ ತುಳಸಿ!
ತುಳಸಿ ಪ್ರೀತಿಯನ್ನು ಗಣೇಶ ನಿರಾಕರಿಸಿದ್ದರಿಂದ ಅವಳ ಹೃದಯ ಒಡೆದು ಹೋಯಿತು. ಒಂದು ಕಡೆಯಿಂದ ತುಳಸಿಗೆ ಆದ ಅವಮಾನ ತಡೆದುಕೊಳ್ಳಲಾಗಲಿಲ್ಲ. ಮತ್ತೊಂದು ಕಡೆಯಿಂದ ಗಣೇಶನ ಮೇಲಿದ್ದ ಕೆಟ್ಟ ಕೋಪ. ಹೀಗಾಗಿ ಗಣೇಶನಿಗೆ ಆಕೆ ಶಾಪ ನೀಡುತ್ತಾಳೆ. ಅದೇನೆಂದರೆ ಒಂದಾ ನಿನಗೆ ಜೀವನ ಪರ್ಯಂತ ಮದುವೆಯಾಗೋದಿಲ್ಲ. ಇಲ್ಲವಾದರೆ ನೀನು ಬಯಸಿದ ಹುಡುಗಿ ನಿನಗೆ ಸಿಗದಿರಲಿ ಎಂದು ಹೇಳುತ್ತಾಳೆ.
ಗಣೇಶನಿಂದ ಮರುಶಾಪ ಪಡೆದ ತುಳಸಿ!
ತುಳಸಿ ಮಾತು ಕೇಳಿ ಕೋಪಗೊಂಡ ಗಣೇಶನು ತುಳಸಿಗೆ ಮರು ಶಾಪ ನೀಡುತ್ತಾನೆ. ನೀನು ಅಸುರನನ್ನು ವಿವಾಹವಾಗು ಎಂದು ಹೇಳುತ್ತಾನೆ. ಆನಂತರ ತನ್ನ ತಪ್ಪಿನ ಅರಿವಾದ ತುಳಸಿಯು ಗಣೇಶನಲ್ಲಿ ಕ್ಷಮೆಯಾಚಿಸುತ್ತಾಳೆ. ದೈವಿಕ ಸ್ತೋತ್ರಗಳಿಂದ ಗಣೇಶನ್ನು ಪ್ರಾರ್ಥಿಸಿದಳು. ಆಕೆಯ ಪ್ರಾಮಾಣಿಕ ಪ್ರಾರ್ಥನೆಯನ್ನು ಕೇಳಿದ ಗಣೇಶನಿಗೆ ಸಂತಸವಾಯಿತು. ಮತ್ತು ನೀನು ಸಸ್ಯಗಳಲ್ಲೇ ಶ್ರೇಷ್ಠ ಸಸ್ಯವಾಗಿರು ಎಂದು ವರ ನೀಡುತ್ತಾನೆ.
ಅಷ್ಟೇ ಅಲ್ಲ, ನಿನ್ನ ಸುಗಂಧದಿಂದ ಎಲ್ಲಾ ದೇವತೆಗಳೂ ಸಂತೋಷ ಪಡುತ್ತಾರೆ. ನಿನ್ನ ಎಲೆಯನ್ನು ಬಳಸಿ ಪೂಜೆಯನ್ನು ಮಾಡಿದರೆ ವಿಷ್ಣುವು ಸಂತುಷ್ಟನಾಗುತ್ತಾನೆ. ಆದರೆ ನನ್ನ ಪೂಜೆಗೂ ನೀವು ಯಾವತ್ತಿದ್ದರೂ ಸ್ವೀಕಾರಾರ್ಹವಲ್ಲ ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ. ನಂತರ ಗಣೇಶನ ಶಾಪದಂತೆ ತುಳಸಿ 'ಶಂಖಚೂಡ' (ಜಲಂಧರ) ಎಂಬ ರಾಕ್ಷಸ ರಾಜನನ್ನು ಮದುವೆಯಾಗುತ್ತಾಳೆ. ಅವರು ಹಲವಾರು ವರ್ಷಗಳ ಕಾಲ ಸಂತೋಷದಿಂದ ಜೀವನವನ್ನೂ ನಡೆಸುತ್ತಾರೆ. ಆದರೆ ಒಂದು ದಿನ ಅವಳ ಪತಿ ದೇವತೆಗಳೊಂದಿಗೆ ನಡೆದ ಯುದ್ಧದಲ್ಲಿ ಕೊಲ್ಲಲ್ಪಟ್ಟರು. ನಂತರ ದೇವರ ಆಶೀರ್ವಾದವನ್ನು ಪಡೆದ ನಂತರ ಅವಳು ತುಳಸಿಯು ಪವಿತ್ರ ತುಳಸಿಯಾಗಿ ಬದಲಾಗುತ್ತಾಳೆ. ಹೀಗಾಗಿ ಪ್ರತಿಯೊಬ್ಬರು ಪವಿತ್ರ ತುಳಸಿಯನ್ನು ಪೂಜೆ ಮಾಡುತ್ತಾರೆ.
ಅಂದಿನಿಂದ ಇಂದಿನವರೆಗೂ ವಿನಾಯಕನನ್ನು ಪೂಜಿಸುವಾಗ ತುಳಸಿ ಎಲೆಯನ್ನು ಬಳಕೆ ಮಾಡೋದಿಲ್ಲ. ಒಂದು ತುಳಸಿ ಬಳಸಿದರೆ ಅಶುಭ ಎಂಬ ನಂಬಿಕೆಯಿದೆ.



Click it and Unblock the Notifications
