Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಅಂದು ಹಳ್ಳಿ ಹೈದ ರಾಜೇಶ್..ಇಂದು ಚಂದ್ರಶೇಖರ್ ಸಿದ್ದಿ.! ಕತ್ತು ಹಿಸುಕಿದ ನಗರ!
ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದ ಚಂದ್ರಶೇಖರ್ ಸಿದ್ದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಎಲ್ಲರಲ್ಲೂ ಆಘಾತ ತಂದಿದೆ. ಕಾಮಿಡಿ ಶೋ ವೇದಿಕೆಯ ಮೇಲೆ ಅದ್ಭುತ ನಟನೆ ಮಾಡುತ್ತಿದ್ದ ಸಿದ್ದಿ ಯುವಕ ಏಕಾಏಕಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಚಿಮ್ಮಳ್ಳಿ ಗ್ರಾಮದ ಅರಣ್ಯದಲ್ಲಿ ಆತನ ಶವ ಪತ್ತೆಯಾಗಿದೆ. ತಾಲೂಕಿನ ಕಟ್ಟಿಗೆ ಗ್ರಾಮಕ್ಕೆ ಪತ್ನಿಯೊಂದಿಗೆ ಕೆಲಸಕ್ಕೆಂದು ಚಂದ್ರಶೇಖರ ಸಿದ್ದಿ ಹೋಗಿದ್ದರು. ಶನಿವಾರ ಮಧ್ಯಾಹ್ನ 2 ಗಂಟೆಗೆ ತನ್ನ ಮಗನೊಂದಿಗೆ ಶಾಲೆ ಬಿಟ್ಟು ಮನೆಗೆ ಬಂದಿದ್ದರು. ಬಳಿಕ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದರು.

ಆದ್ರೆ ಎಷ್ಟು ಸಮಯ ಕಳೆದರು ವಾಪಾಸು ಬಾರದ ಹಿನ್ನಲೆ ಹುಡುಕಾಟ ಆರಂಭಿಸಿದ್ದಾರೆ. ಹೆಂಡತಿ ಹುಡುಕಾಡಿದಾಗ ಮರಕ್ಕೆ ಹಗ್ಗದಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ. ಕೆಲ ತಿಂಗಳಿನಿಂದ ಕಾರವಾರದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು ಎಂದು ಕೂಡ ತಿಳಿದುಬಂದಿದೆ.
ಒಂದಿಷ್ಟು ಅವಕಾಶ ಅವರ ಹುಡುಕಿ ಬಂದಿದ್ದವು
ಚಂದ್ರಶೇಖರ ಸಿದ್ದಿ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿ ರಿಯಾಲಿಟಿ ಶೋನಲ್ಲಿ ಕೆಲ ಕಾಲ ಕಾಣಿಸಿಕೊಂಡಿದ್ದರು. ನಿನಾಸಂನಲ್ಲಿ ನಾಟಕ ತರಬೇತಿ ಪಡೆದಿದ್ದ ಈತ ಕನ್ನಡದ ಕೆಲವು ಧಾರವಾಹಿಗಳಲ್ಲಿಯೂ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಅವಕಾಶಗಳು ಕಡಿಮೆಯಾದವು. ಹೀಗಾಗಿ ಅವರು ತಮ್ಮ ಹುಟ್ಟೂರಿಗೆ ತೆರಳಿದ್ದರು. ಆದ್ರೆ ಅಲ್ಲಿ ಅವರಿಗೆ ಖಿನ್ನತೆ ಕಾಡತೊಡಗಿತ್ತು. ಮಾನಸಿಕ ಸ್ಥಿತಿ ಹದಗೆಟ್ಟ ಪರಿಣಾಮ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಈಗ ಅವರು ತಮ್ಮ 31ನೇ ವರ್ಷದಲ್ಲಿಯೇ ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಂಡಿದ್ದಾರೆ ಇದು ಎಲ್ಲರಲ್ಲೂ ಆಘಾತಕ್ಕೆ ಕಾರಣವಾಗಿದೆ.
ಹಳ್ಳಿ ಹೈದನ ಕಥೆಯೂ ಹೀಗೆ ಆಗಿತ್ತು
ಈ ಹಿಂದೆ ಖಾಸಗಿ ವಾಹಿನಿಯ 'ಹಳ್ಳಿ ಹೈದ ಪ್ಯಾಟೇಗ್ ಬಂದ' ಎಂಬ ರಿಯಾಲಿಟಿ ಶೋಗೆ ಆಗಮಿಸಿದ್ದ ಹಳ್ಳಿ ಹುಡುಗನ ಬದುಕು ಕೂಡ ಅರ್ಧದಲ್ಲೇ ಅಂತ್ಯಗೊಂಡಿತ್ತು. ಎಚ್.ಡಿ.ಕೋಟೆ ತಾಲೂಕು ಬಳ್ಳೆ ಹಾಡಿಯ ಗಿರಿಜನ ಯುವಕ ರಾಜೇಶ್ ಕೇವಲ 24 ವರ್ಷಕ್ಕೆ ಪ್ರಾಣ ಕಳೆದುಕೊಂಡಿದ್ದ. ಆತ ಕೂಡ ರಿಯಾಲಿಟಿ ಶೋನಲ್ಲಿ ನಟಿಸಿ ಸ್ಪರ್ಧಿಗೆ ಕಪಾಳ ಮೋಕ್ಷ ಮಾಡಿ ರಾದ್ದಾಂತ ಮಾಡಿಕೊಂಡಿದ್ದ.
ರಿಯಾಲಿಟಿ ಶೋನಲ್ಲಿ ಫೇಮಸ್ ಆದ ಹುಡುಗ ಬಳಿಕ ಸಿನಿಮಾ ರಂಗಕ್ಕೂ ಎಂಟ್ರಿ ಕೊಟ್ಟಿದ್ದ. ಮುಗ್ದನಾಗಿದ್ದ ಆತನಿಗೆ ಹೊಸ ಜೀವನ, ನಗರ ಜೀವನಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಿತ್ತು. ಹಾಗೆ ಆತ ಜಂಗಲ್ ಜಾಕಿ ಎಂಬ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ. ಆದ್ರೆ ಸಿನಿಮಾ ಬಿಡುಗಡೆಯಾಗದೆ ತಡವಾಗಿತ್ತು. ಇದರಿಂದ ನೊಂದುಕೊಂಡಿದ್ದ ಆತ ಖಿನ್ನತೆಗೂ ಒಳಗಾಗಿದ್ದ.
ಹಣಕಾಸು ಹಾಗೂ ಸಿನಿಮಾ ವಿಚಾರವಾಗಿ ಬಹಳ ನೊಂದಿದ್ದ ಆತ ಮನೆಯ ಮಹಡಿಯಿಂದ ಕೆಳಗೆ ಹಾರಿದ್ದ. ಈ ವೇಳೆ ಕಾಂಪೌಂಡ್‌ಗೆ ಹಾಕಿದ್ದ ಸರಳುಗಳು ಆತನ ದೇಹವನ್ನು ಹೊಕ್ಕಿದ್ದವು ಇದರಿಂದ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ. ಒಂದು ಸಿನಿಮಾ ಕಂಪ್ಲೀಟ್ ಮಾಡಿದ್ದ ಹಾಗೆ ಮತ್ತೊಂದು ಸಿನಿಮಾ ಮುಗಿಯುವ ಹಂತ ತಲುಪಿತ್ತು. ಹೊಸ ಸಿನಿಮಾ ಇನ್ನೂ ಸೆಟ್ಟೇರಬೇಕಿತ್ತು. ಆದ್ರೆ ನಗರ ಜೀವನಕ್ಕೆ ಹೊಂದಿಕೊಳ್ಳದ ಆತ ಜೀವ ತೆಗದುಕೊಳ್ಳುವ ನಿರ್ಧಾರ ಮಾಡಿದ್ದ.
ಈಗ ಮತ್ತೋರ್ವ ಸಿದ್ದಿ ಯುವಕ ಹೆಂಡತಿ ಮಕ್ಕಳನ್ನು ಬಿಟ್ಟು ಆತ್ಮಹತ್ಯೆಗೆ ಒಳಗಾಗಿರುವುದು ಆಘಾತ ಮೂಡಿಸಿದೆ. ಹಳ್ಳಿಯಿಂದ ಬರುವ ಮಂದಿ ಸಿಟಿಯಲ್ಲಿ ಜೀವನ ಕಟ್ಟಿಕೊಳ್ಳುವ ಭರದಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ.



Click it and Unblock the Notifications

