Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಿಯಲ್ ಲೈಫ್ ಕಹಾನಿ: ಮೃತಪಟ್ಟು 2 ನಿಮಿಷದೊಳಗೆ ಶಿವಾ ಆಗಿ ಬದಲಾದ ಸುಮಿತ್ರಾ! ಈ ಸ್ಟೋರಿ ಕೇಳಿದ್ದೀರಾ?
ಮಾನವ ಜೀವ ನಿಧನದ ಬಳಿಕ ಮುಕ್ತಿ ಪಡೆಯುತ್ತದೆ ಎಂಬುದು ಪುರಾಣದಲ್ಲೂ ಹೇಳಿರುವುದು ನೋಡಬಹುದು. ಹಿಂದೂ ಪುರಾಣಗಳ ಪ್ರಕಾರ ವ್ಯಕ್ತಿ ಮೃತಪಟ್ಟಾಗ ಆತ್ಮವು ಮುಕ್ತಿ ಪಡೆಯಬೇಕಾದರೆ ಹಲವು ಕಾರ್ಯಗಳ ಮಾಡಬೇಕಾಗುತ್ತದೆ. ಹಾಗೆ ಆತ್ಮವು ಮತ್ತೊಂದು ಜೀವನ ಅನುಭವಿಸಲಿದೆ ಎಂಬುದನ್ನು ಹೇಳಲಾಗಿದೆ. ಆದ್ರೆ ಒಮ್ಮೆ ಮೃತಪಟ್ಟ ವ್ಯಕ್ತಿ ಮತ್ತೆಂದು ಮರಳಿ ಭೂಮಿ ಮೇಲೆ ಬರುವುದಿಲ್ಲ ಆತ ಮತ್ತೊಂದು ಜೀವಿಯ ರೂಪದಲ್ಲಿ ಬರಬಹುದು ಎಂದು ಹೇಳಲಾಗುತ್ತದೆ.
ಆದ್ರೆ ಮರಣದ ನಂತರವೂ ವ್ಯಕ್ತಿಯೊಬ್ಬ ಎದ್ದು ಕುಳಿತು ಮಾತನಾಡಿದ್ದು, ಸ್ವರ್ಗ ನರಕ ನೋಡಿ ಬಂದಿರುವುದಾಗಿ ಹೇಳಿರುವ ಸುದ್ದಿಯನ್ನು ನೀವು ಸಹ ಕೇಳಿರಬಹುದು. ಆದ್ರೆ ಮಹಿಳೆಯೊಬ್ಬರು ಮೃತಪಟ್ಟು ಮತ್ತೆ ಜೀವ ಪಡೆದು ನಾನು ನಿಮ್ಮ ಪತ್ನಿಯಲ್ಲ ನಾನು ಬೇರೆ ಮಹಿಳೆ ಎಂದು ತನ್ನ ಹಳೆಯ ವಿಚಾರಗಳನ್ನೆಲ್ಲಾ ಹೇಳಿಕೊಂಡ ಆಘಾತಕಾರಿ ಹಾಗೆ ಅಚ್ಚರಿ ಘಟನೆ ಬಗ್ಗೆ ನಿಮಗೆ ಗೊತ್ತಾ?

ಯಾರಾದರು ಈ ಕಾಲದಲ್ಲಿ ದೆವ್ವ ಭೂತದ ಕಥೆ ಹೇಳಿದ್ರೆ ಅದನ್ನು ಮೂಢನಂಬಿಕೆ ಎಂದು ನಕ್ಕು ಸುಮ್ಮನಾಗಬಹುದು. ವಿಜ್ಞಾನ ಎಷ್ಟು ಮುಂದುವರೆದಿದೆ ಎಂಬುದನ್ನು ಉದಾಹರಣೆಯಾಗಿ ನೀಡಬಹುದು. ಆದ್ರೆ ಉತ್ತರ ಪ್ರದೇಶದ ಈ ಘಟನೆ ವಿದೇಶದಲ್ಲೂ ಸದ್ದು ಮಾಡಿತ್ತು. ಉತ್ತರ ಪ್ರದೇಶದ ಹಳ್ಳಿಯೊಂದರ ಸುಮಿತ್ರಾ ಘಟನೆ ಇಂದಿಗೂ ಅಲ್ಲಿನ ಹಳ್ಳಿಯ ಜನರನ್ನು ನಿದ್ದೆಗೆಡಿಸುತ್ತೆ. ಹಾಗಾದ್ರೆ ಏನಿದು ಸುಮಿತ್ರಾ ಕಥೆ? ಆಕೆ ಶಿವ ದ್ವಿವೇದಿ ಆಗಿ ಬದಲಾಗಿದ್ದು ಹೇಗೆ? ಹಳ್ಳಿಯಲ್ಲಿ ಆಗಿದ್ದೇನು ಎಂಬುದನ್ನು ತಿಳಿದುಕೊಳ್ಳೋಣ.
ಉತ್ತರ ಪ್ರದೇಶದ ಶರೀಫ್‌ಪುರ ಗ್ರಾಮದಲ್ಲಿ ವಾಸವಿದ್ದ ಸುಮಿತ್ರಾಗೆ ಆಗಿನ್ನು 17 ವರ್ಷ. ಆಕೆಗೆ ಮದುವೆಯಾಗಿ ಒಬ್ಬ ಮಗನೂ ಇದ್ದ. ಇದು 1985ರ ಕಥೆ. ಆಕೆ ನಿತ್ಯ ಮನೆಗೆ ಊರಿನ ಹೊರಗಿನಿಂದ ನೀರು ತರುವುದು ಹಾಗೆ ಅಲ್ಲಿನ ಮಹಿಳೆಯರೊಂದಿಗೆ ಸೇರಿ ಒಂದಷ್ಟು ಸಮಯ ಹರಟೆ ಹೊಡೆಯುವುದು ನಡೆದಿತ್ತು. ಆದ್ರೆ ಒಂದು ದಿನ ತನ್ನ ಮಗನನ್ನು ಸೊಂಟದಲ್ಲಿಟ್ಟುಕೊಂಡು ಬಾವಿ ಬಳಿ ಹೋದ ಆಕೆಗೆ ವಿಚಿತ್ರ ಘಟನೆ ಎದುರಾಗಿತ್ತು. ಬಾವಿ ಬಳಿ ನಿಂತ ಆಕೆ ವಿಚಿತ್ರವಾಗಿ ವರ್ತಿಸುತ್ತಿದ್ದಳು. ಹಲ್ಲು ಕಡಿಯುವುದು, ಕೈಗಳನ್ನು ತಿರುಗಿಸಿ ಕಣ್ಣುಗಳನ್ನು ತಿರುಗಿಸುತ್ತಾ ಮಗುವನ್ನು ನೆಲದ ಮೇಲೆ ಇಟ್ಟು ಮೂರ್ತಿಯಂತೆ ನಿಂತುಬಿಟ್ಟಳು. 2 ನಿಮಿಷ ಬಳಿಕ ಮಗುಎತ್ತಿಕೊಂಡು ಮನೆ ಕಡೆ ಓಡಿದಳು.
ಮನೆಯೊಳಗೆ ಬಂದಾಕೆಗೆ ಮತ್ತೆದೇ ರೀತಿಯ ಘಟನೆ ಎದುರಾಗಿತ್ತು. ನೆಲದ ಮೇಲೆ ಬಿದ್ದ ಆಕೆ ಹಲ್ಲು ಕಡಿಯುತ್ತಿದ್ದಳು, ಕಣ್ಣುಗಳು ತಿರುಗುತ್ತಿದ್ದವು ಇದನ್ನು ಕಂಡ ಮನೆಯವರು ಹೆದರಿದರು. ಈ ಸಮಯದಲ್ಲಿ ಇಡೀ ಹಳ್ಳಿಗೆ ಈ ವಿಚಾರ ತಿಳಿದು ಓಡಿಬಂದರು. ಪತಿಯೊಂದಿಗೆ ಮಾತನಾಡಲು ಆಗದಿರುವ ಸ್ಥಿತಿಯಲ್ಲಿ ಇದ್ದಳು. ಆದ್ರೆ ಜೋರಾಗಿ ಕೂಗಿಕೊಂಡ ಆಕೆ ಇನ್ನು ಮೂರು ದಿನದಲ್ಲಿ ನಾನು ಸಾಯುತ್ತೇನೆ ಎಂದು ಹೇಳಿದಳು.
ಇದನ್ನು ಕೇಳಿದ ಮನೆಯವರು ಆಕೆಯ ದೇಹದಲ್ಲಿ ಆತ್ಮವಿದೆ ಎಂದು ಎಲ್ಲಾ ಮಂತ್ರವಾದಿಗಳ ಬಳಿ ಆಕೆಯನ್ನು ತೋರಿಸಿದರು. ಮನೆಗೆ ಕರೆಸಿ ಪೂಜೆ ಮಾಡಿದರು ಆದ್ರೆ ಯಾವುದೂ ಕೆಲಸಕ್ಕೆ ಬರಲಿಲ್ಲಿ. ಆಕೆ ಹೇಳಿದಂತೆ ಸರಿಯಾಗಿ ಮೂರನೇ ದಿನ ಅದೇ ರೀತಿ ಮತ್ತೆ ತನ್ನ ಕೈ ಕಾಲುಗಳನ್ನು ಮುರಿದು, ಹಲ್ಲು ಕಡಿದು ನೆಲದ ಮೇಲೆ ಬಿದ್ದಳು. ಆಕೆಯನ್ನು ಪರೀಕ್ಷಿಸಿದ ನಾಟಿ ವೈದ್ಯರೊಬ್ಬರು ಆಕೆ ಮೃತಪಟ್ಟಿದ್ದಾಳೆ ಎಂದರು. ಹೀಗಾಗಿ ಆಕೆಯ ಅಂತ್ಯ ಸಂಸ್ಕಾರಕ್ಕೆ ಸಿದ್ದತೆಯೂ ನಡೆದಿತ್ತು. ಆದ್ರೆ ಈ ಸಮಯದಲ್ಲಿ ಅಲ್ಲಿದ್ದವರು ನಡುಗುವಂತಹ ಘಟನೆ ನಡೆದಿತ್ತು.
ಎದ್ದು ಕುಳಿತಳು ಸಮಿತ್ರಾ
ಮೃತಪಟ್ಟಿದ್ದಾಳೆ ಎಂದು ಘೋಷಿಸಿದ ಸುಮಿತ್ರಾ ಹಲ್ಲು ಕಡಿಯುತ್ತಾ ಎದ್ದು ಕುಳಿತಿದ್ದಳು. ಇದನ್ನು ಕಂಡ ಅಲ್ಲಿದ್ದವರು ದಿಕ್ಕಾಪಾಲಾಗಿ ಓಡಿದ್ದರು. ಆದ್ರೆ ಆಕೆಯ ಪತಿ ಸಂತೋಷದಿಂದ ಆಕೆಯನ್ನ ತಂಬಿಕೊಂಡಿದ್ದ. ಆದ್ರೆ ಸುಮಿತ್ರಾ ತನ್ನ ಪತಿಯನ್ನು ದೂರ ತಳ್ಳಿ ಯಾರು ನೀರು ಎಂದು ಜೋರು ಧ್ವನಿಯಲ್ಲಿ ಕೇಳಿದ್ದಳು. ಅಲ್ಲಿದ್ದವರು ಆಘಾತಕ್ಕೊಳಗಾದರು. ನೀವೆಲ್ಲಾ ಯಾರು ಎಂಬುದು ಗೊತ್ತಿಲ್ಲಾ ನಾನು, ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಹಳ್ಳಿಯಲ್ಲಿ ಕೊಲೆಯಾದ ಮಹಿಳೆ. ನನ್ನ ಮನೆಗೆ ಹೋಗಬೇಕು. ನನ್ನ ಮಕ್ಕಳು ರಿಂಕು, ಪಿಂಕುವನ್ನು ನೋಡಬೇಕು ಎಂದು ಕೂಗಿದಳು. ಈ ಮಾತು ಕೇಳಿ ಎಲ್ಲರೂ ಶಾಕ್ ಆಗಿದ್ರು.
ಈ ಸುಮಿತ್ರಾ ಕಥೆ ಇಡೀ ರಾಜ್ಯಕ್ಕೆ ಹರಡಿತ್ತು, ವಿದೇಶದಿಂದಲೂ ಆಕೆಯನ್ನು ಪರೀಕ್ಷಿಸಲು ತಜ್ಞರು ಆಗಮಿಸಿದ್ದರು. ಆದ್ರೆ ಆಕೆ ತನ್ನ ಹಳೆಯ ಕುಟುಂಬದ ಕುರಿತಾಗಿ ಹೇಳುತ್ತಿದ್ದಳು.
ಶಿವ ದ್ವಿವೇದಿ ಆಗಿ ಬದಲಾಗಿದ್ದ ಸುಮಿತ್ರಾ
ಸುಮಿತ್ರಾ ತನ್ನ ಹೆಸರನ್ನು ಶಿವ ದ್ವಿವೇದಿ ಎಂದು ಹೇಳುತ್ತಿದ್ದಳು. ಹಾಗೆ ಆಕೆ ಹೇಳಿದ ಕಥೆ ಎಲ್ಲರನ್ನು ಬೆಜ್ಜಿ ಬೀಳಿಸಿತ್ತು. ಆಕೆಯನ್ನು ಕೊಲೆ ಮಾಡಿರುವುದಾಗಿಯೂ ತಾನು ಅವರ ಮೇಲೆ ಸೇಡು ತೀರಿಸಿಕೊಳ್ಳುತ್ತೇನೆ ಎನ್ನುತ್ತಿದ್ದಳು. ಆದ್ರೆ ಇದನ್ನು ಕೇಳಿದ ಕುಟುಂಬದವರು ಹಾಗೆ ಜನರು ಆಕೆಗೆ ಹುಚ್ಚು ಹಿಡಿದಿದೆ ಎಂದು ಮಾತನಾಡಿಕೊಳ್ಳಲು ಆರಂಭಿಸಿದರು.
ಆದ್ರೆ ಈ ವಿಚಾರ ಶಿವಾ ದ್ವಿವೇದಿ ಕುಟುಂಬಕ್ಕೂ ತಿಳಿದುಬಂದಿದೆ. ತಕ್ಷಣವೇ ಒಂದು ಫೋಟೋ ಆಲ್ಬಮ್ ಹಿಡಿದು ರಾಮ್ ಸಿಯಾ ತ್ರಿಪಾಠಿ ಸುಮಿತ್ರಾ ಅವರ ಮನೆ ಮುಂದೆ ಬಂದಿದ್ದರು. ರಾಮ್ ಸಿಯಾ ತ್ರಿಪಾಠಿ ಹೆಸರು ಕೇಳುತ್ತಿದ್ದಂತೆ ಸುಮಿತ್ರಾ ಓಡಿ ಬಂದು ನಾನು ನಿಮ್ಮ ಮಗಳು ಶಿವಾ ದ್ವಿವೇದಿ ಎಂದು ಹೇಳಿ ತಂಬಿ ಅಳತೊಡಗಿದಳು. ಇದು ರಾಮ್ ಸಿಯಾ ತ್ರಿಪಾಠಿ ಅವರಿಗೆ ಆಘಾತ ತಂದಿತ್ತು.
ಆಕೆ ಆಲ್ಬಮ್‌ನಲ್ಲಿರುವ ಜನರನ್ನು ಗುರುತು ಹಿಡಿದಳು. ಆಕೆಯ ಅತ್ತೆ ಮಾವ ಸೇರಿ ತನ್ನನ್ನು ಕೊಲೆ ಮಾಡಿರುವುದಾಗಿ ಹೇಳಿದಳು. ಇದು ನಿಜ ಎಂದು ರಾಮ್ ಸಿಯಾ ತ್ರಿಪಾಠಿ ಕೂಡ ಒಪ್ಪಿಕೊಂಡರು. ಆದ್ರೆ ಶಿವಾ ದ್ವಿವೇದಿ 1985 ರ ಮೇ 18 ಅಥವಾ 19 ರಂದು ನಿಧನರಾಗಿದ್ದಳು. ಇದಾದ ಬಳಿಕ ಆಕೆ ಶಿವಾ ದ್ವಿವೇದಿಯಾಗಿ ಬದುಕಿದಳು.
ವರ್ಜೀನಿಯಾ ವಿಶ್ವವಿದ್ಯಾಲಯದ ವೈದ್ಯಕೀಯ ಶಾಲೆ ಪ್ರಕಟಿಸಿದ 'ಎ ಕೇಸ್ ಆಫ್ ದಿ ಪೊಸೆಷನ್ ಟೈಪ್ ಇನ್ ಇಂಡಿಯಾ ವಿತ್ ಎವಿಡೆನ್ಸ್ ಆಫ್ ಪ್ಯಾರನಾರ್ಮಲ್ ನಾಲೆಡ್ಜ್' ಎಂಬ ಜರ್ನಲ್‌ನಲ್ಲಿಯೂ ಈ ಪ್ರಕರಣವನ್ನು ಉಲ್ಲೇಖಿಸಲಾಗಿದೆ. ಇದೊಂದು ವಿಶೇಷ ಘಟನೆ ಎಂದು ಕೂಡ ಕರೆಯಲಾಗಿದೆ. ಇದನ್ನು ಅಧ್ಯಯನ ವಿಷಯವಾಗಿಯೂ ನೋಡಲಾಗುತ್ತದೆ. ಈ ರೀತಿ ಒಮ್ಮೆ ಮೃತಪಟ್ಟ ವ್ಯಕ್ತಿ ಮತ್ತೆ ಜೀವ ಪಡೆಯುವುದು ಹೇಗೆ ಅನ್ನೋದು ವಿಜ್ಞಾನಕ್ಕೂ ದೊಡ್ಡ ಪ್ರಶ್ನೆಯಾಗಿದೆ.



Click it and Unblock the Notifications

