Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
10 ತಲೆಯ ರಾವಣನಿಗೆ ಹತ್ತಾರು ಕಡೆ ಪೂಜೆ..! ಭಾರತದ ಎಲ್ಲೆಲ್ಲಿ ಪೂಜೆ ನೆರವೇರುತ್ತೆ ಗೊತ್ತಾ?
ದಸರಾ ಆಚರಣೆ ಅಂದ್ರೆ ಭಾರತದ ಮೂಲೆ ಮೂಲೆಯಲ್ಲೂ ವಿವಿಧ ರೀತಿಯಲ್ಲಿ ಆಚರಿಸುವುದು ನೋಡಬಹುದು. ಅದ್ರಲ್ಲೂ ಉತ್ತರ ಭಾರತ ಹಾಗೆ ದಕ್ಷಿಣ ಭಾರತದಲ್ಲಿ ವಿಭಿನ್ನ ರೀತಿಯಲ್ಲಿ ದಸರಾ ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಒಂದು ರೀತಿಯಾದರೆ ಉತ್ತರ ಭಾರದಲ್ಲಿ ವಿಶೇಷ ರೀತಿಯ ದಸರಾ ನೋಡಬಹುದು. ಶ್ರೀರಾಮನು ರಾವಣನ ವಿರುದ್ಧದ ಯುದ್ಧದಲ್ಲಿ ಜಯಗಳಿಸಿದ ದಿನವನ್ನಾಗಿ ಆಚರಿಸಲಾಗುತ್ತೆ.
ಹೀಗಾಗಿ ಈ ದಿನದಂದು ಲಂಕಾಸುರ ರಾವಣನನ್ನು ದಹಿಸಲಾಗುತ್ತದೆ. ರಾವಣನ ದೊಡ್ಡ ಪ್ರತಿಮೆಯನ್ನು ದಹಿಸಿ ದುಷ್ಟ ಶಕ್ತಿಯ ವಿರುದ್ಧ ಧರ್ಮದ ವಿಜಯವಾಗಿ ಆಚರಿಸಲಾಗುತ್ತದೆ. ರಾವಣನು ಸೀತಾ ಮಾತೆಯ ಅಪಹರಿಸಿ ಅಶೋಕವನದಲ್ಲಿ ಇಟ್ಟು ರಾಮನನ್ನು ಯುದ್ದಕ್ಕೆ ಆಹ್ವಾನಿಸಿದ್ದ. ಹಾಗೆ ಲಂಕಾಸುರನು 10 ತಲೆಗಳಷ್ಟು ಬುದ್ದಿವಂತಿಕೆ ಒಬ್ಬನಲ್ಲೇ ಇತ್ತು ಎಂದು ಹೇಳಲಾಗಿದೆ.

ಬ್ರಾಹ್ಮಣನಾಗಿ ಜನಿಸಿದ್ದ ರಾವಣನು ಅಪ್ಪಟ ಶಿವಭಕ್ತನಾಗಿದ್ದ. ಆದ್ರೆ ರಾಮ, ಸೀತೆ ವನವಾಸದಲ್ಲಿದ್ದಾಗ ರಾವಣನ ಸಹೋದರಿ ಸೀತೆ ಹಾಗೂ ರಾಮನ ಕಂಡು ಇಡೀ ರಾಮಾಯಣ ಪಡೆದಿರುವುದನ್ನು ನೀವು ಕೂಡ ಕೇಳಿರಬಹುದು. ರಾಮನ ವಿವಾಹವಾಗುವ ಇರಾದೆ ಹೊಂದಿದ್ದ ಶೂರ್ಪನಖನಿಂದ ಸೀತೆಯ ಅಪಹರಣವಾಗುತ್ತದೆ.
ಇನ್ನು ಲಂಕಾಸುರನು ಸೀತೆಯ ಅಪಹರಿಸಿ ಇಟ್ಟಿದ್ದ ಹಾಗೆ ರಾಮನ ಮೇಲೆ ಯುದ್ಧ ಸಾರಿದ್ದ. ಆದ್ರೆ ರಾಮನಿಂದ ಕೊಲ್ಲಲ್ಪಟ್ಟ. ಹೀಗಾಗಿ ರಾವಣ ಅಂದರೆ ದುಷ್ಟ, ಅಧರ್ಮವನ್ನು ಪ್ರತಿನಿಧಿಸಲಿದೆ. ಹಾಗೆ ರಾಮ ಧರ್ಮ ರಕ್ಷಣೆಗೆ ಭೂಲೋಕಕ್ಕೆ ಬಂದ ಅವತಾರ ಎಂದು ಹೇಳಲಾಗುತ್ತದೆ. ಹೀಗಾಗಿ ವಿಜಯದಶಮಿಯಲ್ಲಿ ಹಲವು ಭಾಗದಲ್ಲಿ ರಾವಣನ ಪ್ರತಿಮೆ ದಹಿಸಲಾಗುತ್ತದೆ.
ಆದ್ರೆ ಈ ವೈವಿಧ್ಯತೆಯ ಭಾರತದಲ್ಲಿ ರಾವಣನನ್ನು ಕೂಡ ಪೂಜಿಸಲಾಗುತ್ತದೆ. ಹೌದು ರಾವಣ ಹಲವರಿಗೆ ರಾಕ್ಷಸನಾದರೆ ಮತ್ತೆ ಕೆಲವರಿಗೆ ದೇವರಾಗಿದ್ದಾನೆ. ಹಾಗಾದ್ರೆ ರಾವಣನಿಗೆ ಎಲ್ಲಿ ಪ್ರಾಮುಖ್ಯತೆ ನೀಡಲಾಗುತ್ತದೆ. ಆತನನ್ನು ಪೂಜಿಸುವ ಉದ್ದೇಶವೇನು? ಅವರಿಗ್ಯಾಕೆ ರಾವಣ ರಾಕ್ಷಸನಾಗಿಲ್ಲ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಹಾರಾಷ್ಟ್ರದಲ್ಲಿ ರಾವಣನ ಪೂಜೆ
ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ರಾವಣವನನ್ನು ಪೂಜಿಸಲಾಗುತ್ತಿದೆ. ಈ ಗ್ರಾಮದಲ್ಲಿ ರಾವಣನ ಬೃಹತ್ ಪ್ರತಿಮೆಯಿದೆ. ಆತನಿಗೆ ಅಲ್ಲಿ ವಿಶೇಷ ಪೂಜೆಗಳು ನೆರವೇರುತ್ತವೆ. ಹಾಗೆ ಇಡೀ ಗ್ರಾಮ ಶ್ರದ್ಧಾ ಭಕ್ತಿಯಿಂದ ರಾವಣನನ್ನು ಪೂಜಿಸುತ್ತದೆ. ಹರಕೆ ಮಾಡುವುದು, ಹಬ್ಬದಲ್ಲಿ ವಿಶೇಷ ಪೂಜೆಗಳ ನರವೇರಿಸುತ್ತಾರೆ. ಆತನ ಪೂಜಿಸುವುದು ಮಕ್ಕಳ ವಿದ್ಯಾಭ್ಯಾಸದಲ್ಲಿ ಗೆಲುವು ಪಡೆಯುತ್ತಾರೆ ಎಂದು ನಂಬುತ್ತಾರೆ. ಆತ ಮಹಾನ್ ಶಿವಭಕ್ತ ಹೀಗಾಗಿ ಆತನ ಪೂಜಿಸಿದರೆ ಶಿವನ ಆಶೀರ್ವಾದ ಪಡೆಯಬಹುದು ಎಂದು ಹೇಳಲಾಗಿದೆ.
ಹಾಗೆ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲೂ ಕೂಡ ರಾವಣನ ದೇವಾಲಯವಿದೆ. ರಾವಣ ಮತ್ತು ಅವನ ಮಗ ಮೇಘಾನಂದನಿಗೆ ಗೌರವ ಸಲ್ಲಿಸುವ ಗೊಂಡ್ ಬುಡಕಟ್ಟಿನ ಒಂದು ಸಂಪ್ರದಾಯವಿದೆ. ಈ ಬುಡಕಟ್ಟು ಜನಾಂಗದವರು ಫಾಲ್ಗುಣ ಎಂಬ ತಮ್ಮ ಬುಡಕಟ್ಟು ಹಬ್ಬದಲ್ಲಿ ರಾವಣನಿಗೆ ಮೀಸಲಾದ ವಿಶೇಷ ಪ್ರಾರ್ಥನೆಗಳನ್ನು ಮಾಡುತ್ತಾರೆ.
ಉತ್ತರ ಪ್ರದೇಶದ ಎರಡು ದೇವಾಲಯಗಳು
ಕಾನ್ಪುರದಲ್ಲಿರುವ 100 ವರ್ಷಗಳಿಗೂ ಹೆಚ್ಚು ಹಳೆಯದಾದ ರಾವಣನ ದೇವಾಲಯವಿದೆ. ರಾಜ ಗುರು ಪ್ರಸಾದ್ ಶುಕ್ಲ 1890 ರಲ್ಲಿ ಈ ದೇವಾಲಯ ನಿರ್ಮಿಸಿದರು.
ಹಾಗೆ ರಾವಣನ ಜನ್ಮಸ್ಥಳವೆಂದು ನಂಬಲಾದ ಬಿಸ್ರಾಖ್‌ನಲ್ಲಿ ವಿಶೇಷ ದೇವಾಲಯವಿದೆ. ನವರಾತ್ರಿಯ ಒಂಬತ್ತು ದಿನಗಳನ್ನು ಬಿಸ್ರಾಖ್ ಪಟ್ಟಣದಲ್ಲಿ ಶೋಕಾಚರಣೆಯ ಅವಧಿಯಾಗಿ ಆಚರಿಸಲಾಗುತ್ತದೆ.
ರಾಜಸ್ಥಾನದ ಜೋಧಪುರದ ಕೆಲವು ಪ್ರದೇಶಗಳಲ್ಲಿ ರಾವಣನನ್ನು ದಸರಾದಲ್ಲಿ ಮಾತ್ರವಲ್ಲದೆ ನಿತ್ಯವೂ ಪೂಜಿಸಲಾಗುತ್ತದೆ. ರಾವಣನು ಮಂಡೋರ್ ಎಂದು ಗುರುತಿಸಲ್ಪಟ್ಟ ರಾಜ ಮಂದವರ್‌ನ ಮಗಳು ಮಂಡೋದರಿಯೊಂದಿಗೆ ವಿವಾಹವಾದನು. ಈಗ ಈ ವಂಶಸ್ಥರು ನೆಲೆಸಿದ್ದ ಪ್ರದೇಶದಲ್ಲಿ ರಾವಣನಿಗೆ ನಿತ್ಯವೂ ಪೂಜೆ ನಡೆಯುತ್ತದೆ.



Click it and Unblock the Notifications











