Latest Updates
-
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ!
ಫೆಬ್ರವರಿ 4ಕ್ಕೆ ರಥ ಸಪ್ತಮಿ: ಈ ದಿನ ಯಾವ ಮಂತ್ರಪಠಿಸಬೇಕು? ದಾನದ ಮಹತ್ವವೇನು?
ಧಾರ್ಮಿಕ ನಂಬಿಕೆಗಳಲ್ಲಿ ರಥ ಸಪ್ತಮಿ ದಿನಕ್ಕೆ ತುಂಬಾನೇ ಮಹತ್ವವಿದೆ. ಈ ವರ್ಷ ರಥ ಸಪ್ತಮಿಯನ್ನು ಫೆಬ್ರವರಿ 4ರಂದು ಆಚರಿಸಲಾಗುತ್ತಿದೆ. ಈ ದಿನವನ್ನು ಮಾಘ ಸಪ್ತಮಿ, ಮಾಘ ಜಯಂತಿ ಅಥವಾ ಸೂರ್ಯ ಜಯಂತಿಯೆಂದು ಆಚರಿಸಲಾಗುವುದು. ಮಾಘ ಮಾಸದಲ್ಲಿಬರುವ ಶುಕ್ಲಪಕ್ಷದ ಸಪ್ತಮಿಯಂದು ರಥ ಸಪ್ತಮಿ ಆಚರಿಸಲಾಗುವುದು.
ರಥ ಸಪ್ತಮಿಯಂದು ಮಾಡುವ ದಾನ ಧರ್ಮಕ್ಕೆ ತುಂಬಾನೇ ಮಹತ್ವವಿದೆ, ಈ ದಿನ ದಾನ ಮಾಡುವುದರಿಂದ ಸೂರ್ಯನ ಕೃಪೆಗೆ ಪಾತ್ರರಾಗುತ್ತೇವೆ, ಇದರಿಂದ ಒಳಿತಾಗಲಿದೆ ಎಂಬುವುದು ನಂಬಿಕೆ.

ರಥ ಸಪ್ತಮಿ ತಿಥಿ
ರಥ ಸಪ್ತಮಿ ತಿಥಿ ಪ್ರಾರಂಭ: ಫೆಬ್ರವರಿ 4 ಬೆಳಗ್ಗೆ 07:56ಕ್ಕೆ
ರಥ ಸಪ್ತಮಿ ತಿಥಿ ಮುಕ್ತಾಯ: ಪೆಬ್ರವರಿ5 ಬೆಳಗ್ಗೆ 05:29ರವರೆಗೆ ಇರಲಿದೆ. ಉದಯ ತಿಥಿ ಪ್ರಕಾರ ರಥ ಸಪ್ತಮಿಯನ್ನು ಫೆಬ್ರವರಿ 4ರಂದು ಆಚರಿಸಲಾಗುವುದು.
ಈ ದಿನದ ಮಹತ್ವವೇನು?
ಪೌರಾಣಿಕ ನಂಬಿಕೆಯ ಪ್ರಕಾರ ಸೂರ್ಯನು ಸಪ್ತ ಕುದುರೆಗ ರಥವನ್ನು ಏರಿ ಉತ್ತಾರಾಯಣದ ಕಡೆಗೆ ಕಡೆಗೆ ಪ್ರಯಾಣಿಸುತ್ತಾನೆ. ಈ ಸಮಯವನ್ನು ಉತ್ತರಾಯಣ ಪುಣ್ಯಕಾಲವೆಂದು ಕರೆಯಲಾಗುವುದು. ಧಾರ್ಮಿಕ ಕಾರ್ಯಗಳನ್ನು ಮಾಡಲು ಈ ಸಮಯ ತುಂಬಾನೇ ಉತ್ತಮವಾಗಿದೆ. ಈ ದಿನದಂದು ಸೂರ್ಯನಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಈ ದಿನ ಸೂರ್ಯನನ್ನು ಆರಾಧನೆ ಮಾಡುವುದರಿಂದ ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ಇರಲಿದೆ, ಈ ದಿನ ಮಾಡುವ ದಾನದಿಂದ ನಿಮ್ಮ ಸಮೃದ್ಧಿ ಹೆಚ್ಚಾಗಲಿದೆ ಎಂದು ಹೇಳಲಾಗುವುದು.
ರಥ ಸಪ್ತಮಿಯಂದು ಪುಣ್ಯ ಸ್ನಾನದ ಮಹತ್ವ
ಈ ದಿನ ಸೂರ್ಯೋದಯಕ್ಕೆ ಮುನ್ನ ಎದ್ದು ಸೂರ್ಯನಿಗೆ ಆರ್ಘ್ಯ ಅರ್ಪಿಸಬೇಕು. ಈ ದಿನ ಸೂರ್ಯ ದೇವನನ್ನು ಪೂಜಿಸುವುದರಿಂದ ಕಾಯಿಲೆಗಳಿಂದ ಗುಣ ಮುಖರಾಗುತ್ತಾರೆ ಎಂಬ ನಂಬಿಕೆಯಿದೆ. ಈ ದಿನ ಗಂಗಾನದಿಯಲ್ಲಿ ಸ್ನಾನ ಮಾಡಲಾಗುವುದು. ಇದೀಗ ಮಹಾಕುಂಭಮೇಳ ನಡೆಯುತ್ತಿರುವುದರಿಂದ ತ್ರಿವೇಣಿಯಲ್ಲಿ ಸ್ನಾನ ಮಾಡಲು ಕೋಟ್ಯಾಂತರ ಹಿಂದಗಳು ಪ್ರಯಾಗ್‌ರಾಜ್‌ಗೆ ಪ್ರಯಾಣಿಸಿದ್ದಾರೆ.
ಈ ದಿನ ಸೂರ್ಯನಿಗೆ ಆರ್ಘ್ಯ ಅರ್ಪಿಸುವಾಗ ಕಲಶದ ನೀರಿಗೆ ಸ್ವಲ್ಪ ಕುಂಕುಮ ಹಾಕಿ ಆರ್ಘ್ಯ ಅರ್ಪಿಸಲಾಗುವುದು. ಈ ದಿನ ತುಪ್ಪ ಹಾಕಿದ ಮಣ್ಣಿನ ಹಣತೆ ಹಚ್ಚಿಟ್ಟು ಸೂರ್ಯನಿಗೆ ಪೂಜೆ ಸಲ್ಲಿಸುತ್ತಾರೆ.
ರಥ ಸಪ್ತಮಿಯಂದು ಈ ಮಂತ್ರಗಳನ್ನು ಪಠಿಸಿ
ಸೂರ್ಯ ನಮಸ್ಕಾರ ಮಂತ್ರ : ಓಂ ಮಿತ್ರಾಯ ನಮಃ
ಓಂ ರವಾಯ್ರೇ ನಮಃ
ಓಂ ಸೂರ್ಯಾಯ ನಮಃ
ಓಂ ಭಾನವೇ ನಮಃ
ಓಂ ಖಗಾಯ ನಮಃ
ಓಂ ಪುಷ್ನೇ ನಮಃ
ಓಂ ಹಿರಣ್ಯಗರ್ಭಾಯ ನಮಃ
ಓಂ ಮರೀಚಯೇ ನಮಃ
ಓಂ ಆದಿತ್ಯಾಯ ನಮಃ
ಓಂ ಸವಿತ್ರೇ ನಮಃ
ಓಂ ಅರ್ಕಾಯ ನಮಃ
ಓಂ ಭಾಸ್ಕರಾಯ ನಮಃ
ಸೂರ್ಯ ಬೀಜ ಮಂತ್ರ :
ಓಂ ಹರಂ ಹ್ರೀ ಹ್ರೌಂ ಸಃ ಸೂರ್ಯಾಯ ನಮಃ
ಸೂರ್ಯ ಗಾಯತ್ರಿ ಮಂತ್ರ :
ಓಂ ಭಾಸ್ಕರಾಯ ವಿದ್ಮಹೇ ಮಹಾದುತ್ಯಾತಿಕರಾಯ ಧೀಮಹಿ ತಾನಃ ಸೂರ್ಯ ಪ್ರಚೋದಯಾತ್ ಓಂ ಆದಿತ್ಯಾಯ ವಿದ್ಮಹೇ ಮಾರ್ತಾಂಡೇ ಧೀಮಹಿ ತನಃ ಸೂರ್ಯ ಪ್ರಚೋದಯಾತ್ ಓಂ ಸಪ್ತ ತುರಂಗಾಯ ವಿದ್ಮಹೇ ಸಹಸ್ರ ಕೀರ್ಣಯ ಧೀಮಹಿ ತನ್ನೋ ರವಿ ಪ್ರಚೋದಯಾತ್
ಆದಿತ್ಯ ಹೃದಯಂ ಮಂತ್ರ :
ಆದಿತ್ಯನ ಹೃದಯದ ಪುಣ್ಯವೇ ಶತ್ರುನಾಶ ಜಯವಹಂ ಜಪೇನ್ನಿತ್ಯಂ ಅಕ್ಷಯ ಪರಂ ಶಿವಮ್



Click it and Unblock the Notifications
