Latest Updates
-
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಪಾರ್ಸಿ ಆಚರಣೆಯಂತೆ ರತನ್ ಟಾಟಾ ಅಂತಿಮ ವಿಧಿವಿಧಾನ..! ಎಷ್ಟು ವಿಚಿತ್ರ ನಿಯಮವಿದೆ ಗೊತ್ತಾ?
ಅನಾರೋಗ್ಯ ಸಮಸ್ಯೆ ಹಿನ್ನೆಲೆ ಟಾಟಾ ಸಮೂಹದ ಮಾಜಿ ಅಧ್ಯಕ್ಷ ರತನ್ ಟಾಟಾ (87) ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ದೇಶ ಕಂಡ ಅತ್ಯಂತ ಸರಳ ಉದ್ಯಮಿಗಳಲ್ಲಿ ಮುಂಚೂಣಿಯಲ್ಲಿದ್ದವರು ರತನ್ ಟಾಟಾ. ರತನ್ ಟಾಟಾ ಅವರು ನೇವಲ್ ಟಾಟಾ ಅವರ ಪುತ್ರರಾಗಿದ್ದರು. ಅವರನ್ನು ಜಮ್ಸೆಟ್ಜಿ ಟಾಟಾ ಅವರ ಮಗ ರತನ್ಜಿ ಟಾಟಾ ಅವರು ದತ್ತು ಪಡೆದಿದ್ದು, ಅವರು ಟಾಟಾ ಗ್ರೂಪ್ ಸಂಸ್ಥಾಪಕರಾಗಿದ್ದರು .
ಸದ್ಯ ಅವರ ನಿಧನಕ್ಕೆ ಇಡೀ ದೇಶ ದೂಖಃತಪ್ತವಾಗಿದೆ. ಈಗ ಮುಂಬೈನಲ್ಲಿ ಅವರ ಅಂತಿಮ ವಿಧಾನ ಕೂಡ ನೆರವೇರುತ್ತಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ಇನ್ನು ಅವರ ಅಂತಿಮ ವಿಧಿ ವಿಧಾನಗಳು ಪಾರ್ಸಿ ಸಮುದಾಯದಂತೆ ನೆರವೇರಲಿದೆ.

ಪಾರ್ಸಿಗಳು ಭಾರತದಲ್ಲಿ ಜೊರಾಸ್ಟ್ರಿಯನ್ ಧರ್ಮವನ್ನು ಅಭ್ಯಾಸ ಮಾಡುವ ಧಾರ್ಮಿಕ ಮತ್ತು ಜನಾಂಗೀಯ ಸಮುದಾಯ ಎಂದು ವರ್ಗೀಕರಿಸಲಾಗಿದೆ. ಜೊರಾಸ್ಟ್ರಿಯನ್ ಸಂಪ್ರದಾಯದ ಪ್ರಕಾರ ರತನ್ ಟಾಟಾ ಅವರ ಅಂತಿಮ ವಿಧಿಗಳನ್ನು ನಡೆಸದಿದ್ದರೂ, ಅವರ ಪಾರ್ಥಿವ ಶರೀರವನ್ನು ಮುಂಬೈನ ವರ್ಲಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಹಾಗಾದ್ರೆ ಏನಿದು ಜೊರಾಸ್ಟ್ರಿಯನ್ ಸಂಪ್ರದಾಯ? ಇದರ ಆಚರಣೆ ಹೇಗಿರುತ್ತೆ?
ಜೊರಾಸ್ಟ್ರಿಯನ್ ಧರ್ಮದ ಅನುಯಾಯಿಗಳು ಸಾಂಪ್ರದಾಯಿಕವಾಗಿ "ಡೋಖ್ಮೆನಾಶಿನಿ" ಅಥವಾ "ಟವರ್ ಆಫ್ ಸೈಲೆನ್ಸ್" ವಿಧಾನ ಎಂದು ಕರೆಯಲ್ಪಡುವ ವಿಶಿಷ್ಟವಾದ ಅಂತ್ಯಕ್ರಿಯೆಯ ಆಚರಣೆಯನ್ನು ಅನುಸರಿಸುತ್ತಾರೆ. ಈ ವಿಧಾನದಲ್ಲಿ ಮೃತರನ್ನು ದಖ್ಮಾ ಎಂಬ ರಚನೆಯ ಮೇಲೆ ಇರಿಸಲಾಗುತ್ತದೆ. ಅಂದರೆ ಇಲ್ಲಿ ಶವವನ್ನು ಹೂಳುವುದು ಅಥವಾ ಬೆಂಕಿಯಲ್ಲಿ ಸುಡುವ ಸಂಪ್ರದಾಯವಿಲ್ಲ.
ಬದಲಿಗೆ ಎತ್ತರದ ಒಂದು ಕಲ್ಲು ಕೋಟೆಯಂತಹ ರಚನೆಯ ಮೇಲೆ ಶವವನ್ನು ಇಟ್ಟು ಆ ಶವವೂ ಪ್ರಾಣಿ, ಪಕ್ಷಿಗಳ ಪಾಲಿಗೆ ಬಿಡಲಾಗುತ್ತದೆ. ಆ ಶವವನ್ನು ರಣಹದ್ದುಗಳು ತಿನ್ನಬೇಕು ಎಂಬ ನಿಯಮವಿದೆ. ಆದರೆ ರತನ್ ಟಾಟಾ ಅವರ ವಿಧಿವಿಧಾನದಲ್ಲಿ ಈ ರೀತಿ ನಡೆಯುವುದಿಲ್ಲ. ಜೊರಾಸ್ಟ್ರೀಯನ್ಸ್ ನಂಬಿಕೆ ಪ್ರಕಾರ ಬೆಂಕಿ ಹಾಗೂ ಭೂಮಿ ಪವಿತ್ರವಾದವು ಅವುಗಳಿಗೆ ಶವವಿಟ್ಟು ಅಪವಿತ್ರಗೊಳಿಸಬಾರದು ಎಂಬುದು ಅವರ ನಂಬಿಕೆಯಾಗಿದೆ.
ಪಾರ್ಸಿ ಸಮುದಾಯದಲ್ಲಿ ಮತರಿಗೆ ಸಂಪ್ರದಾಯದಂತೆ ಕೊನೆಯ ಬಾರಿಗೆ ಧಾರ್ಮಿಕ ಪ್ರಾರ್ಥನೆ ಮಾಡಲಾಗುತ್ತಿತ್ತು. ದೇಹ ಶುದ್ಧೀಕರಣ ಪ್ರಕ್ರಿಯೆಯ ಬಳಿಕ ಮನೆಯ ಸದಸ್ಯರು ಕೊನೆಯ ಬಾರಿಗೆ ಪ್ರಾರ್ಥನೆ ಸಲ್ಲಿಸುವುದು. ಅಲ್ಲಿಂದ ದೇಹವನ್ನ ದಖ್ಮಾಗೆ ಮೆರವಣಿಗೆ ಮೂಲಕ ಕರೆತರಲಾಗುತ್ತಿತ್ತು. ದೇಹದ ಪ್ರಕೃತಿಯ ಕೊಡುಗೆ ಹೀಗಾಗಿ ಮತ್ತೆ ಪ್ರಕೃತಿಗೆ ಸಲ್ಲಬೇಕು ಎಂಬುದು ಅವರ ನಂಬಿಕೆಯಾಗಿತ್ತು, ಹೀಗಾಗಿ ದಖ್ಮಾ ಎಂಬ ಕೋಟೆಯಂತಹ ರಚನೆಯ ಮೇಲೆ ಶವವನ್ನು ಇಟ್ಟು ಬರುತ್ತಿದ್ದರು.
ರತನ್ ಟಾಟಾ ಅತ್ಯಕ್ರಿಯೆ ಹೇಗೆ?
ಪಾರ್ಸಿಗಳಲ್ಲಿ ಈ ಸಂಪ್ರದಾಯ ನಡೆಯುವುದು ನಿಂತಿದೆ. ದಶಕಗಳ ಹಿಂದೆ ಈ ನಿಯಮದ ಪ್ರಕಾರವೇ ಅಂತ್ಯಕ್ರಿಯೆ ನಡೆಯುತ್ತಿತ್ತು, ಆದರೆ ಬರುಬರುತ್ತಾ ರಣಹದ್ದುಗಳಿಲ್ಲದೆ ಶವಗಳು ಕೊಳೆಯುತ್ತಿದ್ದವು ಹಾಗೆ ಇದೊಂದು ಅಸಂಪ್ರದಾಯಿಕ ಸಂಸ್ಕಾರ ನಿಯಮ ಎಂದು ತಿಳಿದ ಅವರು ವಿದ್ಯುತ್ ಚಿತಾಗಾರದ ಮೂಲಕ ಅಂತ್ಯಸಂಸ್ಕಾರಕ್ಕೆ ತೆರೆದುಕೊಂಡರು. ಈಗ ರತನ್ ಟಾಟಾ ಅವರ ಅಂತ್ಯ ಸಂಸ್ಕಾರ ಸಹ ಬಹುತೇಕ ವಿದ್ಯುತ್ ಚಿತಾಗಾರದಲ್ಲಿ ನೆರವೇರುವ ಸಾಧ್ಯತೆ ಇದೆ.
ಪಾರ್ಸಿ ಸಂಪ್ರದಾಯದಲ್ಲಿ, ಮರಣದ 24 ಗಂಟೆಗಳ ಒಳಗೆ ಅಂತ್ಯಕ್ರಿಯೆ ಸಮಾರಂಭವನ್ನು ಸಾಮಾನ್ಯವಾಗಿ ನಡೆಸಲಾಗುತ್ತದೆ. ದೇಹವನ್ನು ತೊಳೆದು ಬಿಳಿ ಬಟ್ಟೆಗಳನ್ನು ಧರಿಸಲಾಗುತ್ತದೆ, ಇದು ಶುದ್ಧತೆ ಮತ್ತು ಮುಗ್ಧತೆಯನ್ನು ಸಂಕೇತಿಸುತ್ತದೆ. ಸಮಾರಂಭವನ್ನು ಪಾದ್ರಿಯೊಬ್ಬರು ಮುನ್ನಡೆಸುತ್ತಾರೆ, ಅವರು ಆತ್ಮವನ್ನು ಮರಣಾನಂತರದ ಜೀವನಕ್ಕೆ ಮಾರ್ಗದರ್ಶನ ಮಾಡಲು ಸಹಾಯ ಮಾಡಲು ಪ್ರಾರ್ಥನೆ ಮತ್ತು ಆಚರಣೆಗಳನ್ನು ಮಾಡುತ್ತಾರೆ.



Click it and Unblock the Notifications