Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಪ್ರಾಣಿಗಳ ಆರೈಕೆಗಾಗಿ ಆಸ್ಪತ್ರೆ ಕಟ್ಟಿಸಿದ ರತನ್ ಟಾಟಾ..! ಇವರ ಪ್ರಾಣಿ ಪ್ರೇಮಕ್ಕೆ ಸಾಟಿ ಯಾರು?
ಟಾಟಾ ಗ್ರೂಪ್ ಮುಖ್ಯಸ್ಥ ಭಾರತದ ಆಗರ್ಭ ಶ್ರೀಮಂತ ರತನ್ ಟಾಟಾ ಕೇವಲ ಉದ್ಯಮದ ಕಾರಣಕ್ಕೆ ಹಾಗೂ ಆಸ್ತಿ ವಿಚಾರವಾಗಿ ಮಾತ್ರ ಸುದ್ದಿಯಾಗುವುದಿಲ್ಲ. ಬದಲಿಗೆ ಅವರ ಸಮಾಜಮುಖಿ ಕಾರ್ಯಗಳಿಂದಲೂ ಅವರು ಸುದ್ದಿಯಾಗುತ್ತಾರೆ. ಉದ್ಯಮ ಕಟ್ಟಿ ಬೆಳಸುವುದು ಮಾತ್ರವಲ್ಲ ಆರೋಗ್ಯಯುತ ಸಮಾಜ ಕಟ್ಟಲು ಅವರು ಇನ್ನಿಲ್ಲದ ಕೊಡುಗೆ ನೀಡುತ್ತಾ ಬಂದಿದ್ದಾರೆ. ತಮ್ಮ ಸಂಪತ್ತಿನಲ್ಲಿ ಅರ್ಧಕ್ಕೂ ಹೆಚ್ಚು ಭಾಗ ಅವರು ದಾನ, ಧರ್ಮದಲ್ಲಿ ವಿನಿಯೋಗಿಸುತ್ತಿದ್ದಾರೆ.
ಹೀಗೆ ದೊಡ್ಡ ದೊಡ್ಡ ಉದ್ಯಮ ಕಟ್ಟಿ ಬೆಳೆಸಿರುವ ಅವರಿಗೆ ಪ್ರಾಣಿಗಳೆಂದರೆ ವಿಶೇಷ ಪ್ರೀತಿ. ಅದರಲ್ಲು ಬೀದಿ ನಾಯಿಗಳ ಪರವಾಗಿ ಅವರ ಕಾಳಜಿ ಎಲ್ಲರಿಗೂ ಮಾದರಿಯಾಗಿದೆ. ಇತ್ತೀಚಿಗಷ್ಟೆ ರತನ್ ಟಾಟಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇದೇ ಮೊದಲ ಬಾರಿಗೆ ನಾಯಿಗಾಗಿ ಜನರ ಬಳಿ ನೆರವು ಕೇಳಿದ್ದರು. ನೀವು ಸಹಾಯ ನೀಡಿದ್ದರೆ ಒಳ್ಳೆಯದಿತ್ತು, 7 ತಿಂಗಳ ಈ ನಾಯಿಮರಿಗೆ ರಕ್ತದ ಅವಶ್ಯಕತೆ ಇದೆ, ರಕ್ತಹೀನತೆ ಹಾಗೂ ಲಿವರ್ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ, ಹಾಗಾಗಿ ಮುಂಬೈಯಲ್ಲಿರುವ ತಮ್ಮ ನಾಯಿಯ ರಕ್ತ ದಾನ ನೀಡಿ ಎಂದು ಮನವಿ ಮಾಡಿದ್ದರು.

ಆದರೆ ಈಗ ಪ್ರಾಣಿಗಳಿಗಾಗಿಯೇ ಅವರು ಆಸ್ಪತ್ರೆಯೊಂದನ್ನು ಆರಂಭಿಸಿದ್ದಾರೆ. 86 ವರ್ಷದ ಕೈಗಾರಿಕೋದ್ಯಮಿ ಮುಂಬೈನಲ್ಲಿ ಸಣ್ಣ ಪ್ರಾಣಿ ಆಸ್ಪತ್ರೆಯೊಂದನ್ನು ತೆರೆದಿದ್ದಾರೆ. ಇದು "ಭಾರತದ ಅತಿದೊಡ್ಡ 24 ಗಂಟೆ ತೆರೆದಿರುವ ಪ್ರಾಣಿಗಳ ಆಸ್ಪತ್ರೆ" ಎಂಬ ಕೀರ್ತಿ ಪಡೆದಿದೆ.
ಟಾಟಾ ಟ್ರಸ್ಟ್ ಸಣ್ಣ ಪ್ರಾಣಿ ಆಸ್ಪತ್ರೆ ಅಂತಿಮವಾಗಿ ಸಾರ್ವಜನಿಕರಿಗೆ ತೆರೆದಿರುತ್ತದೆ, ಪಶುವೈದ್ಯಕೀಯ ಆರೈಕೆಗಾಗಿ ಈ ಹೊಸ ದಿನವನ್ನು ತರಲು ನಾವು ಉತ್ಸುಕರಾಗಿದ್ದೇವೆ, ಇದು ಆರೈಕೆಯನ್ನು ಗುರುತಿಸುವ ದಿನವಾಗಿದೆ. ಇಲ್ಲಿಯವರೆಗೆ ಮತ್ತು ಮುಂಬರುವ ವರ್ಷಗಳಲ್ಲಿ ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು, "ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಜೊತೆಗೆ ರತನ್ ಟಾಟಾ ಅವರು ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಈ ಆಸ್ಪತ್ರೆಯನ್ನು ಉದ್ಘಾಟಿಸಿ ಅವರೊಂದಿಗೆ ಮಾತುಕತೆಯಲ್ಲಿರುವುದು ನೋಡಬಹುದು.
ಈ ಪೋಸ್ಟ್ ಹಂಚಿಕೊಂಡ ನಂತರ ಏಳು ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ದಾಟಿದೆ. ಅನೇಕರು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಪೋಸ್ಟ್‌ನ ಕಾಮೆಂಟ್‌ಗಳ ಮಾಡುತ್ತಿದ್ದಾರೆ. ಅಲ್ಲದೆ ರತನ್ ಟಾಟಾ ಅವರ ಪ್ರಾಣಿಗಳ ಕುರಿತ ಆಲೋಚನೆ ಹಾಗೂ ಪ್ರೀತಿಗೆ ಜನ ಫಿದಾ ಆಗಿದ್ದಾರೆ. ಜೊತೆಗೆ ಇವರೆ ನಿಜವಾದ ಹೀರೋ ಎಂದು ಹಾಡಿ ಹೊಗಳಿದ್ದಾರೆ.
"ರತನ್ ಟಾಟಾ ಚಿನ್ನದಂತಹ ಹೃದಯ ಹೊಂದಿದ್ದಾರೆ ಮಾನವೀಯತೆಯ ಅತ್ಯಂತ ಶುದ್ಧ ಮತ್ತು ದಯೆಯ ಆತ್ಮ. ಸರ್, ನೀವು ಸಂಪೂರ್ಣ ರತ್ನ ಮತ್ತು ಹೊಸ ಪೀಳಿಗೆಗೆ ನಮ್ಮ ಸುತ್ತಲಿನ ಪ್ರತಿಯೊಂದು ಜೀವಿಯಲ್ಲೂ ಸಹಾನುಭೂತಿ ಮತ್ತು ಪ್ರೀತಿಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ಈ ಕಾರ್ಯ ಉದಾಹರಣೆಯಾಗಿದೆ, "ಎಂದು ವ್ಯಕ್ತಿಯೊಬ್ಬರು ಬರೆದುಕೊಂಡಿದ್ದಾರೆ. ನಮ್ಮ ಒಂದೇ ಹೃದಯವನ್ನು ನೀವು ಎಷ್ಟು ಬಾರಿ ಗೆಲ್ಲುತ್ತೀರಿ ಎಂದು ಮತ್ತೊಬ್ಬರು ಕಮೆಂಟ್ ವಿಭಾಗದಲ್ಲಿ ಸೇರಿಸಿದ್ದಾರೆ.
ಇನ್ನು ರತನ್ ಟಾಟಾ ತಮ್ಮ ಐಷಾರಾಮಿ ಹೋಟೆಲ್‌ನಲ್ಲೂ ನಾಯಿಗಳಿಗೆ ಮುಕ್ತ ಅವಕಾಶ ನೀಡುವಂತೆ ಸಿಬ್ಬಂದಿಗೆ ಸೂಚಿಸಿರುವುದು ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ತಾಜ್ ಹೋಟೆಲ್‌ಗೆ ನೀವು ಎಂಟ್ರಿ ಕೊಡಬೇಕಾದರೆ ನಿಮ್ಮನ್ನು ಗೇಟ್‌ನಲ್ಲಿ ಯಾರಾದರು ಪ್ರಶ್ನಿಸಬಹುದು. ಆದರೆ ಆ ಹೋಟೆಲ್‌ಗೆ ನಾಯಿಗಳು ಆರಾಮವಾಗಿ ಹೋಗುತ್ತವೆ. ಮತ್ತೊಂದೆಡೆ ಟಾಟಾ ಗ್ರೂಪ್‌ನ ಕೇಂದ್ರ ಕಚೇರಿಯಲ್ಲಿ ನಾಯಿಗಳೇ ತುಂಬಿರುತ್ತವೆಯಂತೆ. ಏಕೆಂದರೆ ಇಲ್ಲಿ ನಾಯಿಗಳಿಗಾಗಿಯೇ ಪ್ರತ್ಯೇಕ ಕೊಠಡಿಯೇ ಇದೆಯಂತೆ. ಹೀಗಾಗಿ ಟಾಟಾ ಪ್ರಧಾನ ಕಚೇರಿಯಲ್ಲಿ ಬೀದಿ ನಾಯಿಗಳಿಗೆ ಓಡಾಡಲು ಮುಕ್ತ ಅವಕಾಶ ನೀಡಲಾಗಿದೆಯಂತೆ.



Click it and Unblock the Notifications
