Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಇದು ಮೂರು ಸೊಂಡಿಲು 6 ಕೈಗಳ ಅಪರೂಪದ ಗಣಪ: ಈ ದೇವಾಲಯ ಎಲ್ಲಿದೆ ಗೊತ್ತಾ?
ಗಣೇಶೋತ್ಸವದ ಸಂದರ್ಭದಲ್ಲಿ ವಿಭಿನ್ನ ಹಾಗೂ ವಿಶೇಷ ರೀತಿಯ ಗಣೇಶನ ಮೂರ್ತಿಗಳ ಪ್ರತಿಷ್ಠಾಪಿಸುವುದು ನೋಡಿರಬಹುದು. ಈ ವಿಭಿನ್ನ ಮೂರ್ತಿನ್ನು ನೋಡಲೆಂದೇ ದೂರದೂರಿನಿಂದಲೂ ಜನರು ಆಗಮಿಸುವುದು ಸಾಮಾನ್ಯ. ಆದ್ರೆ ಗಣೇಶೋತ್ಸವ ಹೊರುಪಡಿಸಿ ಕೆಲವು ದೇವಾಲಯದಲ್ಲೂ ಕೂಡ ವಿಶೇಷ ಹಾಗೂ ವಿಭಿನ್ನ ರೀತಿಯ ಗಣೇಶನಿರುವುದು ನೋಡಬಹುದು.
ಕೆಲವೊಂದು ದೇವಾಲಯದಲ್ಲಿನ ಗಣೇಶನ ವಿಗ್ರಹವು ಬಹಳ ಅಪರೂಪ ಎನ್ನುವಂತಿರಲಿದೆ. ಹಾಗೆ ಇಲ್ಲೊಂದು ದೇವಾಲಯದಲ್ಲಿ 3 ಸೊಂಡಿಲು ಹೊಂದಿರುವ ಗಣೇಶನ ಮೂರ್ತಿ ಇದೆ. ಇದು ಭೂಮಿ ಮೇಲಿನ ಏಕೈಕ ಹಾಗೂ ವಿಶೇಷದಲ್ಲಿ ವಿಶೇಷ ಗಣೇಶ ಎಂಬ ಹೆಸರು ಪಡೆದಿದೆ. ಈ ಮೂರು ಸೊಂಡಿಲುಗಳಿಗೂ ಒಂದೊಂದು ರೀತಿಯ ಪ್ರಾಮುಖ್ಯತೆ ನೀಡಲಾಗಿದೆ.

ಪುಣೆಯ ಸೋಮವಾರ ಪೇಟೆಯ ಹೃದಯಭಾಗದಲ್ಲಿರುವ ತ್ರಿಶುಂಡ್ ಮಯೂರೇಶ್ವರ ಗಣಪತಿ ದೇವಾಲಯವು ಪುಣೆಯಲ್ಲಿರುವ ಒಂದು ವಿಶಿಷ್ಟ ದೇವಾಲಯವಾಗಿದೆ. ಈ ದೇವಾಲಯದಲ್ಲಿ ನೀವು ಬೇರೆಲ್ಲೂ ನೋಡಿರದಂತಹ ಮೂರು ಸೋಂಡಿಲು ಹೊಂದಿರುವ ಗಣೇಶನ ಮೂರ್ತಿ ಇದೆ. ಅದ್ರಲ್ಲೂ ಒಂದೊಂದು ಸೊಂಡಿಲು ಒಂದೊಂದು ಕಡೆ ತಿರುಗಿರುವ ರಚನೆಯನ್ನು ಹೊಂದಿದೆ. ಹಾಗೆ 6 ಕೈಗಳ ಹೊಂದಿರುವುದು ಈ ಮೂರ್ತಿಯ ವಿಶೇಷತೆ ಆಗಿದೆ.
ಈ ಮೂರು ಸೋಂಡಿಲುಗಳನ್ನು ಬ್ರಹ್ಮ ವಿಷ್ಣು ಮಹೇಶ್ವರನ ರೂಪಕ ಎಂದು ಹೇಳುತ್ತಾರೆ. ಆದರೆ ಈ ಗಣಪ ಇಲಿಯ ಮೇಲೆ ಆಸಿನರಾಗುವ ಬದಲು ನವಿಲಿನ ಮೇಲೆ ಕುಳಿತಿರುವುದು ಕೂಡ ವಿಶೇಷ ಎನಿಸಿದೆ. ಹಾಗೆ ಈ ಮೂರು ಸೊಂಡಿಲುಗಳು ಭೂತಕಾಲ, ವರ್ತಮಾನ ಕಾಲ ಮತ್ತು ಭವಿಷ್ಯ ಕಾಲದ ಪ್ರತೀಕ ಎಂದು ಪರಿಗಣಿಸಲಾಗಿದೆ.
ಈ ದೇವಾಲಯವನ್ನು ಸುಮಾರು 1754 ಮತ್ತು 1770 ರ ನಡುವೆ ಧಂಪುರದಿಂದ ಬಂದ ಮೋರ್ಯ ಗೋಸಾವಿಯ ಮಾರ್ಗದರ್ಶನದಲ್ಲಿ ನಿರ್ಮಿಸಲಾಯಿತು. ಅವರು ಮಯೂರೇಶ್ವರ ಅಷ್ಟವಿನಾಯಕ ಎಂಬ ದೇವಾಲಯವನ್ನು ಸ್ಥಾಪಿಸಿದರು, ಇದು ಮಹಾನ್ ಪೇಶ್ವೆಗಳಿಂದ ಸಹಾಯವನ್ನು ಪಡೆಯಿತು. ಗಣೇಶನು ಪೇಶ್ವೆಗಳ ಕುಲದೈವವಾಗಿರುವುದರಿಂದ, ಮಯೂರೇಶ್ವರ ಸೇರಿದಂತೆ ಮಹಾರಾಷ್ಟ್ರದ ಎಲ್ಲಾ ಗಣೇಶ ದೇವಾಲಯಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಅಭಿವೃದ್ಧಿಗೊಳಿಸಲು ಅವರು ಶ್ರಮಿಸಿದರು ಎಂದು ತಿಳಿದುಬಂದಿದೆ.
ದೇವಾಲಯದ ಗೋಡೆಗಳ ಮೇಲೇ ದೇವನಗರಿ, ಪರ್ಷಿಯನ್ ಮತ್ತು ಸಂಸ್ಕೃತ ಭಾಷೆಗಳಲ್ಲಿಯೂ ಶಾಸನಗಳನ್ನು ಹೊಂದಿವೆ. ಗಣೇಶ ಚತುರ್ಥಿಯ ಸಮಯದಲ್ಲಂತು ಈ ದೇವಾಯದಲ್ಲಿ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಾರೆ. ವಿಶೇಷ ಅಲಂಕಾರದಿಂದ ಕೂಡಿರುವ ಗಣಪನ ದರ್ಶನ ಪಡೆಯುತ್ತಾರೆ. ಹಾಗೆ ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಪ್ರಸಾದ ತೆಗೆದುಕೊಂಡು ಹೋಗಿ ಸಾರ್ವಜನಿಕ ಗಣೇಶೋತ್ಸವ ಆರಂಭಿಸುವ ಸಂಪ್ರದಾಯ ಕೂಡ ನಡೆದುಬಂದಿದೆ.
ಈ ದೇವಾಲಯವು ವರ್ಷ ಎಲ್ಲಾ ದಿನವು ತೆರೆದಿರುತ್ತದೆ. ಗ್ರಹಣ ಸಮಯದಲ್ಲಿ ಮಾತ್ರ ಬಾಗಿಲು ಹಾಕಲಾಗುತ್ತದೆ. ಹಾಗೆ ಈ ಗಣಪನು ಕಪ್ಪು ಬಣ್ಣದಲ್ಲಿದ್ದು, ಬಹಳ ಶ್ರೇಷ್ಠ ಎಂದು ಕೂಡ ನಂಬಲಾಗಿದೆ. ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ರಾಜರು ಕೂಡ ಯುದ್ದಕ್ಕೆ ತೆರಳುತ್ತಿದ್ದರು ಎಂದು ಇತಿಹಾಸದಲ್ಲಿ ಉಲ್ಲೇಖವಿದೆ. ಹಾಗೆ ಇದು ಶಕ್ತಿಶಾಲಿ, ಬೇಡಿದನ್ನು ನೀಡುವ ಗಣಪ ಎಂಬ ನಂಬಿಕೆ ಇದೆ.
ಈ ದೇವಾಲಯವನ್ನು ಗಿರಿ ಗೋಸವಿ ಪಂಥದ ತಪಸ್ವಿಯಾಗಿದ್ದ ಭೀಮಗೀರ್ಜಿ ಗೋಸವಿ ಸ್ಥಾಪಿಸಿದರು ಎಂದು ಹೇಳಲಾಗಿದೆ. ಈ ದೇವಾಲಯವು ಶಿವ ದೇವಾಲಯವಾಗಿರಬೇಕಿತ್ತು ಆದರೆ ನಂತರ ಗಣಪತಿ ದೇವಾಲಯವಾಗಿ ಮಾರ್ಪಟ್ಟಿದೆ ಎಂದು ಹೇಳಲಾಗಿದೆ. ಈ ದೇವಾಲಯವು ಧಾರ್ಮಿಕ ಸ್ಥಳ, ಸಮಾಧಿ ಮತ್ತು ಹತ್ಯೋಗಿಗಳಿಗೆ ಅಭ್ಯಾಸ ಶಾಲೆ ಮುಂತಾದ ಬಹು ಉದ್ದೇಶಿತವಾಗಿ ಬಳಕೆಯಾಗಿತ್ತು. ಭೀಮಗೀರ್ಜಿ ಗೋಸಾವಿಯ ಸಮಾಧಿ ಸಹ ಹೊಂದಿರುವುದು ನೋಡಬಹುದು. 1757 ರ ಪ್ಲಾಸಿ ಕದನದ ನಂತರದ ಪರಿಣಾಮಗಳನ್ನು ಬ್ರಿಟಿಷ್ ಸೈನಿಕ ಮತ್ತು ಸರಪಳಿಯಿಂದ ಬಂಧಿಸಲ್ಪಟ್ಟ ಖಡ್ಗಮೃಗದೊಂದಿಗೆ ಚಿತ್ರಿಸುವ ಐತಿಹಾಸಿಕ ಫಲಕವನ್ನು ಇಲ್ಲಿ ಕಾಣಬಹುದು.



Click it and Unblock the Notifications