Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ರಾಮ ಮಂದಿರ ಉದ್ಘಾಟನೆಗೆ ಬರುವ ಗಣ್ಯರಿಗೆ 'ರಾಮ್‌ರಾಜ್' ಉಡುಗೊರೆ..? ಏನಿದು ಗೊತ್ತಾ?
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ಧಾರ್ಮಿಕ ಕಾರ್ಯಗಳು ಆರಂಭಗೊಂಡಿದ್ದು, ಕೋಟ್ಯಂತರ ಭಕ್ತರ ಗಮನ ಸೆಳೆಯುತ್ತಿದೆ. ಈ ಭವ್ಯ ವೈಭವ ಕಣ್ತುಂಬಿಕೊಳ್ಳಲು ದೇಶದ, ವಿದೇಶದ ಮೂಲೆಯಿಂದಲೂ ಭಕ್ತರು ಅಯೋಧ್ಯೆ ತಲುಪುತ್ತಿದ್ದಾರೆ. ಸುಮಾರು ಒಂದು ವಾರಗಳ ಕಾಲ ಧಾರ್ಮಿಕ ಕಾರ್ಯಗಳು ನಡೆಯುಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಣಪ್ರತಿಷ್ಠಾಪನೆ ದಿನ ಪಾಲ್ಗೊಳ್ಳುವ ಮೂಲಕ ಮಂದಿರ ಲೋಕಾರ್ಪಣೆ ಕಾರ್ಯ ಅಂತ್ಯವಾಗುತ್ತಿದೆ.
ಹೀಗಾಗಿ ಈ ಭವ್ಯ ಸ್ಮರಣೀಯ ಗಳಿಗೆಗೆ ಸಾಕ್ಷಿಯಾಗಲು ನೂರಾರು ಗಣ್ಯರಿಗೆ ಆಹ್ವಾನ ನೀಡಲಾಗಿದೆ. ದೇಶದ ವಿದೇಶಿ ಗಣ್ಯರಿಗೂ ಮಂದಿರ ಉದ್ಘಾಟನೆಗೆ ಬರುವಂತೆ ಆಹ್ವಾನ ನೀಡಲಾಗಿದೆ. ಜನವರಿ 22ರಂದು ಅಯೋಧ್ಯೆಯಲ್ಲಿ ನೂರಾರು ಗಣ್ಯರು ಈ ವೈಭವ ಕಣ್ತುಂಬಿಕೊಳ್ಳಲಿದ್ದಾರೆ.
ಇನ್ನು ಈ ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರಿಗೆ ಉಡುಗೊರೆಯಾಗಿ 'ರಾಮ್‌ರಾಜ್' ನೀಡುವುದಾಗಿ ರಾಮ ಜನ್ಮ ಭೂಮಿ ಟ್ರಸ್ಟ್ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಹೇಳಿದ್ದಾರೆ. ಹಾಗಾದರೆ ಈ ರಾಮ್‌ರಾಜ್ ಎಂದರೆ ಏನು? ಈ ಉಡುಗೊರೆಯಲ್ಲಿ ಏನಿದೆ? ಇದರ ವಿಶೇಷತೆ ಏನು ಎಂಬ ಕುರಿತು ಇಲ್ಲಿದೆ ಮಾಹಿತಿ.

ಆಹ್ವಾನಿತ ಗಣ್ಯರಿಗೆ ಟೋಕನ್ ನೀಡಲು ನಿರ್ಧರಿಸಲಾಗಿದೆ. ಪ್ರತಿಯೊಬ್ಬ ಗಣ್ಯರಿಗೂ ಕಾರ್ಯಕ್ರಮದ ಅಂತ್ಯದಲ್ಲಿ ರಾಮ್ ರಾಜ್ ಮತ್ತು ಪ್ರಸಾದ ನೀಡುತ್ತಾರೆ ಎನ್ನಲಾಗಿದೆ.
'ರಾಮ್‌ರಾಜ್' ಎಂದರೇನು?
'ರಾಮ್‌ರಾಜ್' ಎಂದರೆ ರಾಮ ಮಂದಿರ ನಿರ್ಮಾಣಕ್ಕಾಗಿ ನಿಗದಿಯಾಗಿದ್ದ ಜಾಗದಿಂದ ತೆಗೆದಿರುವ ಮಣ್ಣು. ಹೌದು ಮಂದಿರ ನಿರ್ಮಾಣಕ್ಕಾಗಿ ಅಡಿಪಾಯ ತೆಗೆಯಲಾಗಿದ್ದು, ಈ ವೇಳೆ ಮುಖ್ಯಗರ್ಭಗುಡಿಯ ಬಳಿ ಇದ್ದ ಮಣ್ಣನ್ನು ಸಂಗ್ರಹಿಸಿ ಇಡಲಾಗಿದೆ. ಇದನ್ನು ರಾಮ ಮಂದಿರ ಉದ್ಘಾಟನೆಗೆ ಆಗಮಿಸುವ ಗಣ್ಯರಿಗೆ ಬಾಕ್ಸ್‌ವೊಂದರಲ್ಲಿ ಹಾಕಿ ನೀಡಲು ನಿರ್ಧರಿಸಲಾಗಿದೆ.
ಗಿಫ್ಟ್ ಬಾಕ್ಸ್ ಏನನ್ನು ಒಳಗೊಂಡಿರುತ್ತದೆ?
'ಪ್ರಾಣ ಪ್ರತಿಷ್ಠಾ' ಸಮಾರಂಭದಲ್ಲಿ ಪಾಲ್ಗೊಳ್ಳುವ ಆಹ್ವಾನಿತರಿಗೆ ಉಡುಗೊರೆಯಾಗಿ ನೀಡಲಾಗುವ ಈ ಉಡುಗೊರೆ ಬಾಕ್ಸ್‌ಗಳ ಸುತ್ತ ಸಾಕಷ್ಟು ಕುತೂಹಲವಿದೆ. 'ರಾಮರಾಜ್' ಅನ್ನು ಸಣ್ಣ ಪೆಟ್ಟಿಗೆಗಳಲ್ಲಿ 'ಮೋತಿಚೂರ್ ಲಡ್ಡೋಸ್' ಜೊತೆಗೆ ಪ್ಯಾಕ್ ಮಾಡಲಾಗುವುದು, 'ದೇಸಿ ತುಪ್ಪ'ದಿಂದ ಮಾಡಲಾಗಿರುವ ಪ್ರಸಾದವೂ ಸಹ ಈ ಉಡುಗೊರೆ ಬಾಕ್ಸ್‌ನಲ್ಲಿರಲಿದೆ ಎನ್ನಲಾಗಿದೆ.
ಯಾರಿಗೆಲ್ಲ ಆಹ್ವಾನ ನೀಡಲಾಗಿದೆ?
ಪ್ರಾಣ ಪ್ರತಿಷ್ಠಾ ಸಮಾರಂಭದ ಮುಖ್ಯ ಅತಿಥಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹೊಸ ವರದಿಗಳ ಪ್ರಕಾರ, ಸೆಲೆಬ್ರಿಟಿಗಳು, ಕೈಗಾರಿಕೋದ್ಯಮಿಗಳು, ರಾಜಕಾರಣಿಗಳು ಮತ್ತು ಆಧ್ಯಾತ್ಮಿಕ ನಾಯಕರು ಸೇರಿ 7,000ಕ್ಕೂ ಹೆಚ್ಚು ಆಹ್ವಾನಗಳನ್ನು ಕಳುಹಿಸಲಾಗಿದೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಅಮಿತಾಭ್ ಬಚ್ಚನ್, ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಸೇರಿದಂತೆ ರಾಜ್ಯದ ರಿಷಬ್ ಶೆಟ್ಟಿಗೂ ಆಹ್ವಾನ ಬಂದಿದೆ ಎಂದು ಹೇಳಲಾಗಿದೆ.
22 ಜನವರಿ 2024 ರಂದು ಮಧ್ಯಾಹ್ನ 12:20 ಕ್ಕೆ ಪವಿತ್ರಾಭಿಷೇಕ ಸಮಾರಂಭವು ಪ್ರಾರಂಭವಾಗುತ್ತದೆ ಮತ್ತು ವಾರಣಾಸಿಯ ಪುರೋಹಿತರು ನಾಲ್ಕು ಟ್ರಸ್ಟಿಗಳು ಮತ್ತು ನಾಲ್ಕು ಪುರೋಹಿತರೊಂದಿಗೆ ಇದನ್ನು ನಡೆಸುತ್ತಾರೆ.
ಪ್ರತಿಷ್ಠಾಪನೆ ದಿನ ತಿರುಪತಿಯೊಂದ 1 ಲಕ್ಷ ಲಡ್ಡು
ತಿರುಪತಿಗೆ ಹೋದರೆ ಲಡ್ಡು ತಂದು ಹಂಚುತ್ತೇವೆ, ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿ ದಕ್ಷಿಣ ಭಾರತದಲ್ಲಿ ಅತ್ಯಂತ ಪ್ರಸಿದ್ದಿ ಪಡೆದಿರುವ ತಿರುಪತಿ ದೇವಾಲಯದಲ್ಲಿ ಲಡ್ಡು ಪ್ರಸಾದವೇ ಪ್ರಮುಖವಾಗಿದೆ. ಈ ಲಡ್ಡು ಪ್ರಸಾದವನ್ನೇ ಶ್ರೀರಾಮನಿಗೆ ತಿರುಪತಿಯ ಕೊಡುಗೆಯಾಗಿ ನೀಡಲಾಗುತ್ತಿದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮನ ಪ್ರತಿಷ್ಟಾಪನೆಗೆ ಹೋಗುವ ಭಕ್ತರಿಗೆ ನೀಡಲೆಂದೇ 1 ಲಕ್ಷ ಲಡ್ಡುಗಳನ್ನು ತಿರುಪತಿ ದೇವಾಲಯದಿಂದ ಕಳುಹಿಸಿಕೊಡಲಾಗುವುದು.



Click it and Unblock the Notifications
