Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರಾಮನಗರದಲ್ಲಿರುವ ಹಳ್ಳಿಯ ಒಂಟಿ ತೋಟದ ಮನೆಯಲ್ಲಿ 25 ತಲೆ ಬುರುಡೆ ಇಟ್ಟು ಪೂಜೆ ಮಾಡುತ್ತಿರುವ ಮಾಂತ್ರಿಕ!
ಚಂದ್ರಲೋಕ, ಮಂಗಳ ಗ್ರಹಕ್ಕೆ ಮನುಷ್ಯ ಹೋಗಲು ಪ್ರಯತ್ನಿಸುತ್ತಿರುವ ಈ ಕಾಲದಲ್ಲಿಯೂ ಮಾಟ ಮಂತ್ರ ಅಂತ ಕೂರುವ ಎಷ್ಟೋ ಜನರಿದ್ದಾರೆ. ಅದರಲ್ಲೂ ರಾಮನಗರದ ತೋಟದ ಮನೆಯಲ್ಲಿ ನಡೆಯುತ್ತಿದ್ದ ಮಾಟ -ಮಂತ್ರ ಕತೆ ಎಂಥವರನ್ನೂ ಬೆಚ್ಚಿ ಬೀಳಿಸುವಂತಿದೆ, ಏಕೆಂದರೆ ಆ ಒಂಟಿ ಮನೆಯಲ್ಲಿ ಪತ್ತೆಯಾಗಿರುವುದು 25 ಮನುಷ್ಯರ ತಲೆ ಬುರುಡೆ.
ರಾಮನಗರ ಜಿಲ್ಲೆಯ ಬಿಡದಿ ಬಳಿಯ ಜೋಗನಹಳ್ಳಿಯ ಗ್ರಾಮದಲ್ಲಿರುವ ಒಂಟಿ ಮನೆ, ಆ ಮನೆಯಲ್ಲಿ ವಾಸವಾಗಿರುವುದು ಬಲರಾಮ್ ಎಂಬ ವ್ಯಕ್ತಿ. ಆ ವ್ಯಕ್ತಿಯ ನಡೆತೆ, ವೇಷ ಭೂಷಣ ಎಲ್ಲವೂ ನೋಡುಗರಿಗೆ ನಿಗೂಢ ಎಂದು ಗ್ರಾಮಸ್ಥರಿಗೆ ಅನಿಸುತ್ತಿತ್ತು. ಆದರೆ ಆತನ ಮನೆಯಲ್ಲಿ ಏನು ನಡೆಯುತ್ತದೆ ಎಂಬುವುದು ಯಾರಿಗೂ ಗೊತ್ತಿರಲಿಲ್ಲ, ಆದರೆ ಈಗ ಅಲ್ಲಿ ಪತ್ತೆಯಾಗಿರುವ ತಲೆ ಬುರುಡೆಗಳು, ಮನುಷ್ಯನ ದೇಹದ ಮೂಳೆಗಳನ್ನು ನೋಡಿ ಪೊಲೀಸರು ಹಾಗೂ ಗ್ರಾಮಸ್ಥರು ಶಾಕ್ ಆಗಿದ್ದಾರೆ.
ಬಲರಾಮ್‌ನ ನಿಗೂಢ ವರ್ತನೆ
ಆ ಗ್ರಾಮಸ್ಥರಿಗೆ ಈ ವ್ಯಕ್ತಿಯನ್ನು ನೋಡುವಾಗ ಸ್ವಲ್ಪ ವಿಚಿತ್ರ ಅನಿಸುತ್ತಿತ್ತು, ಅವನು ಮಾಟ ಮಂತ್ರ ಮಾಡುತ್ತಾನೆ ಎಂದು ಕೆಲವರು ಮಾತನಾಡುತ್ತಿದ್ದರು. ಈ ವ್ಯಕ್ತಿ ಶಿವರಾತ್ರಿಯ ಮಾರನೇಯ ದಿನ ಸ್ಮಶಾನದಲ್ಲಿ ಪೂಜೆ ಮಾಡುತ್ತಿರುವುದನ್ನು ನೋಡಿ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಬಂದ ಪೊಲೀಸರು ಆತನನ್ನು ವಿಚಾರಿಸಿ, ಆತನ ಮನೆ ಬಗ್ಗೆ ವಿಚಾರಿಸಿ ಅವನ ಜೊತೆಗೆ ಮನೆಗೆ ಹೋದವರು ಶಾಕ್ ಆಗಿದ್ದಾರೆ.
ಆ ಮನೆಯಲ್ಲಿ ತುಂಬಾನೇ ತಲೆಬುರುಡೆಗಳು , ಆತ ಹೇಳುವ ಪ್ರಕಾರ ತಾತನ ಕಾಲದಿಂದಾಲೇ ಬುರುಡೆಗಳಿಗೆ ಪೂಜೆ ಮಾಡುತ್ತಿದ್ದರು ಎಂಬ ವಿಷಯ ಬಹಿರಂಗ ಪಡಿಸಿದ್ದಾನೆ. ಇನ್ನು ಆತ ಮಲಗುತ್ತಿದ್ದ ಮಂಚ ಕೂಡ ಮನುಷ್ಯನ ಮೂಳೆಗಳಿಂದ ಮಾಡಿದ್ದು, ಅಲ್ಲಿ ಮನುಷ್ಯನ ಕೈ ಕಾಲುಗಳ ಮೂಳೆಯೂ ಇದೆಯಂತೆ.

ಇದೀಗ ಈ ವಿಷಯ ಕೇಳಿದವರು ಅಬ್ಬಾ! ಹೀಗೀ ಇದೆಯೇ ಎಂದು ಅಚ್ಚರಿ ಪಡೆಯುತ್ತಿದ್ದಾರೆ. ಈ ತಲೆಬುರುಡೆಗಳು ಎಷ್ಟು ವರ್ಷ ಹಳೆಯದ್ದು, ಈ ವ್ಯಕ್ತಿಯನ್ನು ಯಾರನ್ನಾದರೂ ಬಲಿ ಪಡೆದಿದ್ದೀರಾ ಎಂಬುವುದು ತನಿಖೆಯಿಂದ ತಿಳಿದು ಬರಬೇಕಷ್ಟೇ...
ಒಂದು ಹಳ್ಳಿಯಲ್ಲಿ ಈ ರೀತಿ ಮನೆಯ ಬಗ್ಗೆ ಇಷ್ಟು ತಡವಾಗಿ ತಿಳಿದು ಬಂದಿರುವುದು ಅಚ್ಚರಿಯೇ ಸರಿ
ಸಾಮಾನ್ಯವಾಗಿ ಹಳ್ಳಿಗಳಲ್ಲಿ ದೂರ-ದೂರ ಮನೆಯಿದ್ದರೂ ಪ್ರತಿಯೊಂದು ಮನೆಯ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ, ಹಳ್ಳಿಯ ಜನರು ಸಿಟಿಯ ಜನರಿಗಿಂತ ಹೆಚ್ಚು ಸಂಪರ್ಕದಲ್ಲಿರುತ್ತಾರೆ, ಆದರೆ ಇದೊಂದು ಹಳ್ಳಿಯ ಮನೆಯಾಗಿದ್ದು ಈ ಮನೆಯ ಬಗ್ಗೆ ಆ ಹಳ್ಳಿಯವರಿಗೆ ಗೊತ್ತಿರಲಿಲ್ಲವೇ ಎಂಬುವುದೇ ದೊಡ್ಡ ಅಚ್ಚರಿ. ಈ ವ್ಯಕ್ತಿ ಕಾಳಿ ಮಠ ಎಂದು ಬೋರ್ಡ್ ಹಾಕಿ ಪೂಜೆ ಮಾಡುತ್ತಿದ್ದ.
ಈ ರೀತಿ ಮಾಟ ಮಂತ್ರ ಮಾಡುವವರು ಯಾರನ್ನು ಟಾರ್ಗೆಟ್ ಮಾಡುತ್ತಾರೆ?
ಈ ರೀತಿ ಮಾಟ ಮಂತ್ರ, ನಿಗೂಢ ಪೂಜೆ ಮಾಡುವವರನ್ನು ತುಂಬಾನೇ ದೂರವಿಡಬೇಕು. ಇವರ ಟಾರ್ಗೆಟ್ ದುರ್ಬಲ ಮನಸ್ಸಿನವರು, ಅವರು ಮೊದಲೇ ಹಲವು ಸಮಸ್ಯೆಗಳಿಂದ ಆತ್ಮವಿಶ್ವಾಸ ಕಡಿಮೆಯಾಗಿರುತ್ತದೆ, ಅಂಥವರಿಗೆ ನೀವು ಈ ಪೂಜೆ ಮಾಡಿ ಆ ಪೂಜೆ ಮಾಡಿ ಎಂದು ಅವರಿಂದ ಹಣ ಕಿತ್ತು ಮಾಟ-ಮಂತ್ರ ಮಾಡುತ್ತಾರೆ, ಜನರು ಇಂಥವರ ಬಳಿ ಹೋಗಲೇಬಾರದು.
ಏನೇ ಸಮಸ್ಯೆ ಇರಲಿ ನೀವು ಇಂಥ ವ್ಯಕ್ತಿ ಬಳಿ ಹೋಗಬಾರದು, ನಿಮ್ಮ ಇಷ್ಟ ದೇವರನ್ನು ಪೂಜಿಸಿ ಆರಾಧಿಸಿ, ಆದರೆ ಈ ರೀತಿ ತಲೆಬುರುಡೆ ಅಥವಾ ವಿಚಿತ್ರ ರೀತಿಯಲ್ಲಿ ಪೂಜೆ ಮಾಡುವವರಿಂದ ದೂರವಿರಬೇಕು. ಏಕೆಂದರೆ ಇವರ ತಲೆಯಲ್ಲೂ ಅಂಧತ್ವ ತುಂಬಿರುತ್ತದೆ, ಹೀಗಾಗಿಯೇ ಈ ಬಲಿ ಎಲ್ಲಾ ಈಗಲೂ ನಡೆಯುತ್ತಿದೆ.



Click it and Unblock the Notifications
