Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
ಶಿವರಾತ್ರಿ ದಿನ ಹೋಮ ಹವನ: ರಾಷ್ಟ್ರಗೀತೆ ಮೂಲಕ ರಾಮೇಶ್ವರಂ ಕೆಫೆ ರೀಓಪನ್..!
ರಾಮೇಶ್ವರಂ ಕೆಫೆ ನೀವು ಸಹ ಈ ಹೆಸರು ಕೇಳಿರುತ್ತೀರಿ. ಬೆಂಗಳೂರಲ್ಲಿ ಸ್ವಾದಿಷ್ಟ ಹೋಟೆಲ್‌ಗೆ ರಾಮೇಶ್ವರಂ ಕೆಫೆ ಹೆಸರುವಾಸಿಯಾಗಿದೆ. ಕಳೆದ 15 ದಿನದ ಹಿಂದೆ ಬೆಂಗಳೂರಿನ ಶಾಖೆಯೊಂದರಲ್ಲಿ ಬಾಂಬ್ ಸ್ಫೋಟಗೊಂಡು ಆತಂಕಕ್ಕೆ ಕಾರಣವಾಗಿತ್ತು, ಹೋಟೆಲ್‌ನಲ್ಲಿದ್ದ ಕೆಲವು ಗ್ರಾಹಕರು ಹಾಗೂ ಸಿಬ್ಬಂದಿ ಘಟನೆಯಲ್ಲಿ ಗಾಯಗೊಂಡಿದ್ದರು.
ಈಗ ಈ ಬಾಂಬರ್ ಹಿಂದೆ ಎನ್‌ಐಎ ತಂಡ ಬಿದ್ದಿದ್ದು, ತನಿಖೆ ಮುಂದುವರೆದಿದೆ. ಆದರೆ ಬಾಂಬ್ ಸ್ಫೋಟದಿಂದ ಸ್ಥಗಿತಗೊಂಡಿದ್ದ ರಾಮೇಶ್ವರಂ ಕೆಫೆ ಈಗ ಮತ್ತೆ ಆರಂಭಗೊಂಡಿದೆ. ಹೌದು ನಿನ್ನೆಯ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಶಾಖೆಯನ್ನು ಮತ್ತೆ ಆರಂಭಿಸಲಾಗಿದೆ. ಶಾಖೆಯಲ್ಲಿ ವಿಶೇಷ ಪೂಜೆ ನೆರವೇರಿಸುವ ಮೂಲಕ ಮತ್ತೆ ಬಿದ್ದಲ್ಲಿಯೇ ಎದ್ದು ನಿಲ್ಲುತ್ತೇವೆ ಎಂಬ ಸಂದೇಶ ನೀಡಿದ್ದಾರೆ.

ರಾಮೇಶ್ವರಂ ಕೆಫೆಗೆ ಭದ್ರತೆ
ಇನ್ನು ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡ ಹಿನ್ನೆಲೆ ಈಗ ಕೆಫೆಯಲ್ಲಿ ಭಾರೀ ಭದ್ರತೆ ಒದಗಿಸಲಾಗಿದೆ. 2 ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ. ಕೆಫೆಗೆ ಬರುವ ಪ್ರತಿಯೊಬ್ಬ ಗ್ರಾಹಕರನ್ನು ತಪಾಸಣೆ ಮಾಡಲಾಗುತ್ತಿದೆ. ಎರಡು ವಾಚ್ ಡಾಗ್ಸ್‌ಗಳು, ನಿವೃತ್ತ ಆರ್ಮಿ ಆಫಿಸರ್‌ಗಳಿಂದ ಭದ್ರತೆ ನೀಡಲಾಗಿದೆ. ಜೊತೆಗೆ ನಿನ್ನೆ ರಾಷ್ಟ್ರಗೀತೆ ಹಾಡುವ ಮೂಲಕ ಶಾಖೆಯನ್ನು ಮತ್ತೆ ತೆರೆಲಾಗಿದೆ.
ನಾವು ಇಡೀ ಭಾರತದಲ್ಲಿ ನಮ್ಮ ಶಾಖೆ ತೆರೆಯಲು ಸಿದ್ಧತೆ ನಡೆಸಿದ್ದೇವೆ. ಸಿಂಗಾಪುರಮ ದುಬೈ, ಅಮೆರಿಕದಲ್ಲೂ ಬ್ರಾಂಚ್ ತೆರೆಯಲು ಸಿದ್ಧತೆ ನಡೆಸಿದ್ದೇವೆ. ಆದರೆ ಇಲ್ಲಿ ಬಾಂಬ್ ಏಕೆ ಇಟ್ಟರು ಎಂದು ತಿಳಿಯಲಿಲ್ಲ. ಇದರಿಂದ ನಾವೇನು ಭಯಗೊಂಡಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ. ಜನ ಹೆಚ್ಚಿರುತ್ತಾರೆ ಎಂದು ತಿಳಿದು ಆತ ಬಾಂಬ್ ಇಟ್ಟಿರಬಹುದು ಎಂದು ರಾಮೇಶ್ವರಂ ಕೆಫೆ ಮಾಲಿಕರಾದ ದಿವ್ಯಾ ರಾಘವೇಂದ್ರ ರಾವ್ ದಂಪತಿ ಹೇಳಿದ್ದಾರೆ.
ಈ ರಾಮೇಶ್ವರ ಕೆಫೆ ಹುಟ್ಟು ಹಾಕಿದವರು ಯಾರು?
ಇದು ದಿವ್ಯಾ ರಾಘವೇಂದ್ರ ರಾವ್ ಅವರ ಕನಸು. ನಾನು ಒಂದು ರೆಸ್ಟೋರೆಂಟ್ ಪ್ರಾರಂಭಿಸುತ್ತೇನೆ ಎಂಬುವುದನ್ನು ಕನಸಿನಲ್ಲಿಯೂ ಅಂದು ಕೊಂಡಿರಲಿಲ್ಲ ಎಂದು ರಾವ್ ಹೇಳುತ್ತಾರೆ. ಅವರು ಇದರ ಸಹ ಸಂಸ್ಥಾಪಕರಾಗಿದ್ದಾರೆ.
ದಿವ್ಯಾ ರಾಘವೇಂದ್ರ ರಾವ್ ಅವರು ಪ್ರಾರಂಭದಲ್ಲಿಯೇ ಈ ಆಹಾರ ಉದ್ಯಮದಲ್ಲಿ ಆಸಕ್ತಿ ಹೊಂದಿದ್ದರು. ಅವರು ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡುತ್ತಿದ್ದಾಗ ಮೆಕ್ ಡೊನಾಲ್ಡ್, ಕೆಎಫ್‌ಸಿ, ಸ್ಟಾರ್‌ಬರ್ಕ್ಸ್ ಇವುಗಳ ಬಗ್ಗೆ ಅಧ್ಯಯನ ಮಾಡಿದ್ದರು, ಅವರ ಪ್ರೊಫೆಸರ್ ಒಬ್ಬರು ಭಾರತೀಯರು ಅಂಥ ಫುಡ್ ಬ್ಯುಸ್‌ನೆಸ್ ನಡೆಸುತ್ತಿಲ್ಲ ಎಂದಿದ್ದರು, ಹಾಗಾಗಿ ಅವರು ನಾನೇ ಏಕೆ ಈ ಆಹಾರ ಉದ್ಯಮದಲ್ಲಿ ಹೊಸತನ ಟ್ರೈ ಮಾಡಬಾರದು ಎಂದು ತೀರ್ಮಾನಿಸಿ ಪ್ರಾರಂಭಿಸಿ ಅವರೀಗ ದಕ್ಷಿಣ ಭಾರತದ ಸ್ವಾದಿಷ್ಟಕರ ಅಡುಗೆಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ರಾಮೇಶ್ವರಂ ಕೆಫೆಯಲ್ಲಿ ತುಪ್ಪದ ಖಾದ್ಯಗಳೇ ಹೆಚ್ಚು ಫೇಮಸ್ ಆಗಿವೆ. ತುಪ್ಪದ ಇಡ್ಲಿ, ತುಪ್ಪ ಸುರಿದು ಮಾಡುವ ದೋಸೆ ಇಡೀ ದಿನ ಮಾರಾಟವಾಗುತ್ತೆ. ರಾಮೇಶ್ವರಂ ದೋಸೆ ಸವಿಯಲೆಂದೆ ಹುಡುಕಿಕೊಂಡು ಬರುವವರಿದ್ದಾರೆ. ಜೊತೆಗೆ ದಕ್ಷಿಣ ಭಾರತದ ಸಾಂಪ್ರದಾಯಿಕ ಊಟವನ್ನು ಇಲ್ಲಿ ಸವಿಯಬಹುದು.
ಈ ರಾಮೇಶ್ವರಂ ಕೆಫೆ ತಿಂಗಳಿಗೆ ₹4.5 ಕೋಟಿ, ವಾರ್ಷಿಕವಾಗಿ ₹50 ಕೋಟಿಗೂ ಹೆಚ್ಚು ಆದಾಯವನ್ನು ಗಳಿಸುತ್ತದೆ. ಬೆಂಗಳೂರಿನ ಗ್ರಾಹಕರ ಬೇಡಿಕೆಗೆ ತಕ್ಕಂತೆ ಆಹಾರವನ್ನು "ರಾಮೇಶ್ವರಂ ಕೆಫೆ" ನೀಡುತ್ತದೆ. ಇನ್ನು ಇದನ್ನು ಪ್ರಾರಂಭಿಸಿದ ಸಿಎ ಮತ್ತು ಫುಟ್ ಕಾರ್ಟ್ ಮಾಲೀಕರ ಬಗ್ಗೆ ಇಲ್ಲಿ ತಿಳಿಯಿರಿ. ಈ ರಾಮೇಶ್ವರಂ ಕೆಫೆಯು ಪ್ರತಿ ತಿಂಗಳು ₹4.5 ಕೋಟಿ ಆದಾಯ ಗಳಿಸುತ್ತಿದೆ ಎಂದು ಸೇಜಲ್ ಎಂಬುವವರು ಮಾಹಿತಿ ನೀಡಿದ್ದರು.



Click it and Unblock the Notifications
