Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಶ್ರೀ ರಾಮ ಚಂದ್ರ ಗುರೂಜಿ ಪುನೀತ್ ಆತ್ಮದ ಜೊತೆ ಸಂಭಾಷಣೆ ನಡೆಸಿದ್ರಾ? ಪುನೀತ್ ಇವರಿಗೆ ಹೇಳಿರುವ ಆ 3 ವಿಚಾರಗಳೇನು?
ಪುನೀತ್ ನಿಧನದ ಸುದ್ದಿ ಇನ್ನೂ ಅರಗಿಸಿಕೊಳ್ಳಲು ನಮಗೆ ಆಗುತ್ತಿಲ್ಲ, ನಗುವಿನ ಪರಮಾತ್ಮ ನಮ್ಮ ಜೊತೆಯೇ ಇದ್ದಾನೆ ಅನಿಸುತ್ತೆ, ಎಷ್ಟೋ ಅಪ್ಪು ಅಭಿಮಾನಿಗಳಿಗೆ ಒಂದೇ ಒಂದು ಕ್ಷಣ ಅಪ್ಪು ನಮ್ಮ ಕಣ್ಮುಂದೆ ಬರಬಾರದೇ ಎಂದು ಯೋಚಿಸುತ್ತಾರೆ.
ಎಷ್ಟೋ ಜನರಿಗೆ ಅಪ್ಪು ಒಬ್ಬರು ಒಳ್ಳೆಯ ನಟ ಎಂಬುವುದು ಗೊತ್ತಿತ್ತು, ಆದರೆ ಅವರೊಬ್ಬರು ಅನರ್ಘ್ಯ ರತ್ನ ಎಂಬುವುದು ತಿಳಿದಿದ್ದು ಅವರ ಮರಣದ ನಂತರ, ಅಪ್ಪುಗೆ ಸರಿಸಾಟಿ ಅಪ್ಪನೇ. ಇದೀಗ ಗುರೂಜಿಯೊಬ್ಬರು ಪುನೀತ್ ರಾಜ್‌ಕುಮಾರ್ ಆತ್ಮದ ಜೊತೆಗೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ, ಇವರ ಹೇಳಿಕೆ ಇದೀಗ ಗಮನ ಸೆಳೆದಿದೆ.

ಪುನೀತ್ ಆತ್ಮಕ್ಕೆ ಮೂರು ಪ್ರಶ್ನೆ ಕೇಳಿದೆ ಎಂದು ಹೇಳಿದ ಶ್ರೀ ರಾಮಚಂದ್ರ ಗುರೂಜಿ
ಒಂದು ಯೂಟ್ಯೂಬ್ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಆತ್ಮ ಸಂಚಾರ, ಭೂತ-ಪ್ರೇತ, ಅಗೋಚರ ಶಕ್ತಿ ಇವುಗಳ ಬಗ್ಗೆ ತುಂಬಾನೇ ಮಾಹಿತಿ ಹೇಳಿದ್ದಾರೆ, ಹೀಗೆ ಮಾತನಾಡುತ್ತಾ ನಾನು ಮೂರು ಪ್ರಶ್ನೆಗಳನ್ನು ಪುನೀತ್ ಆತ್ಮದ ಜೊತೆ ಕೇಳಿದೆ , ಅದಕ್ಕೆ ಉತ್ತರವೂ ಸಿಕ್ಕಿದೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಅವರು ಪುನೀತ್ ರಾಜ್‌ಕುಮಾರ್ ಆತ್ಮಕ್ಕೆ ನಿಮ್ಮ ಸಾವಿನ ಬಗ್ಗೆ ಇರುವ ಊಹಾಪೋಹಾ ನಿಜಾನಾ ಎಂದು ಕೇಳಿದ್ದಕ್ಕೆ ಇಲ್ಲ ಹೃದಯ ಸಂಬಂಧಿ ಸಮಸ್ಯೆಯಿಂದ ಸತ್ತಿದ್ದೇನೆ ಎಂದರಂತೆ, ಈಗ ಎಲ್ಲಿದ್ದೀರಿ ಎಂಬ ಪ್ರಶ್ನೆಗೆ ನನ್ನ ತಂದೆ-ತಾಯಿಯ ಹುಡುಕಾಟದಲ್ಲಿ ಇದ್ದೀನಿ ಎಂಬ ಉತ್ತರ ಬಂತೆಂತೆ.
ನೀವು ಮತ್ತೆ ಹುಟ್ಟಿ ಬರುತ್ತೀರಾ ಎಂಬ ಪ್ರಶ್ನೆಗೆ ಆ ಬಗ್ಗೆ ಯೋಚನೆ ಮಾಡಿಲ್ಲ, ಬರುವುದಾದರೆ ಮಗಳ ಹೊಟ್ಟೆಯಲ್ಲಿ ಹುಟ್ಟಿ ಬರುವೆ ಎಂದಿದ್ದಾರೆ ಎಂದು ಶ್ರೀ ರಾಮಚಂದ್ರ ಗುರೂಜಿ ಹೇಳಿದ್ದಾರೆ.
ಈ ಗುರೂಜಿ ಹೇಳಿರುವುದು ನಿಜವೇ?
ಅವರು ಹೇಳುವುದನ್ನು ಕೇಳಿದಾಗ ಸ್ವಲ್ಪ ಆಶ್ಚರ್ಯವಾಗುತ್ತೆ, ನಿಜವಾಗಲೂ ಇವರು ಪುನೀತ್ ಆತ್ಮದ ಜೊತೆ ಮಾತನಾಡಿದ್ದಾರಾ? ಅದಕ್ಕೆ ಅವರು ಆ ರೀತಿಯೆಲ್ಲಾ ಉತ್ತರಿಸಿದರಾ ಎಂಬ ಪ್ರಶ್ನೆ ಮೂಡುವುದು. ಆದರೆ ಇದು ಸುಳ್ಳು ಅಂತ ಹೇಳಲು ಆಗಲಿ ಅಥವಾ ಸತ್ಯ ಅಂತ ಹೇಳಲು ನಮಗೆ ಸಾಧ್ಯವಿಲ್ಲ, ಏಕೆಂದರೆ ಅದರ ಅನುಭವ ನಮಗೆ ಆಗಿಲ್ಲ, ಇಂಥ ಕತೆ ಕೇಳಿದ್ದೇವೆ ಅಷ್ಟೇ. ಇವರು ಖಾಸಗಿ ಚಾನಲ್‌ನಲ್ಲಿ ಜನ್ಮಾಂತರ ಎಂಬ ಕಾರ್ಯಕ್ರಮ ನಡೆಸಿ ಯಶಸ್ವಿಯಾಗಿದ್ದರು.
ಇವರು ಪುನೀತ್ ರಾಜ್‌ಕುಮಾರ್ ತೀರಿ ಹೋದ ಕೆಲವೇ ದಿನಗಳಲ್ಲಿ ಆತ್ಮದ ಜೊತೆ ಸಂಭಾಷಣೆ ನಡೆಸಿದ್ದೆ ಆದರೆ ಇದರ ಬಗ್ಗೆ ಎಲ್ಲಿಯೂ ಹೇಳಿರಲಿಲ್ಲ ಎಂದು ಹೇಳಿದ್ದಾರೆ. ನಟ ಸುಶಾಂತ್ ಸಿಂಗ್ ಮರಣವೊಂದಿದ ಬಳಿಕ ಅವರ ಪ್ರೇತಾತ್ಮದ ಜೊತೆ ಮಾತುಕತೆ ನಡೆಸಿದ್ದೇನೆ ಎಂದು ಪ್ಯಾರಾ ನಾರ್ಮಲ್ ಎಕ್ಸ್ಪರ್ಟ್ ಹೇಳಿದ್ದರು. ಅವರ ಹೆಸರು ಸ್ಟೀವ್ ಹಫ್ ಅವರು ಆತ್ಮದ ಜೊತೆ ಮಾತನಾಡಿರುವುದಾಗಿ ಹೇಳಿ ವೀಡಿಯೋ ಬಿಟ್ಟಿದ್ದರು. ಅದು ಕೂಡ ವೈರಲ್ ಆಗಿತ್ತು.



Click it and Unblock the Notifications
