Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ರಾಮ ನವಮಿ: ಈ ದಿನ ಅಯೋಧ್ಯೆಗೆ ಹೋಗಬೇಡಿ, ಬದಲಿಗೆ ಹೀಗೆ ಆಚರಿಸಿ ಎಂದು ಪೇಜಾವರ ಶ್ರೀಗಳ ಸಲಹೆ
ಏಪ್ರಿಲ್ 17ಕ್ಕೆ ರಾಮ ನವಮಿ. ರಾಮ ಮಂದಿರ ನಿರ್ಮಾಣವಾದ ಬಳಿಕ ಮೊದಲ ರಾಮ ನವಮಿ, ಈ ಕಾರಣದಿದಾಗಿ ಈ ವರ್ಷದ ರಾಮ ನವಮಿ ತುಂಬಾನೇ ವಿಶೇಷವಾಗಿದೆ, ಭಕ್ತರಲ್ಲಿ ಸಡಗರ ಈ ಹಿಂದಿಗಿಂತಲೂ ಹೆಚ್ಚಾಗಿದೆ.
ರಾಮ ನವಮಿ ಆಚರಣೆ
ಶ್ರೀರಾಮನ ಜನ್ಮದಿನವನ್ನು ರಾಮ ನವಮಿಯೆಂದು ಆಚರಿಸಲಾಗುವುದು. ಶ್ರೀರಾಮ ಚೈತ್ರಮಾಸದ ನವಮಿಯಂದು ಜನಿಸಿದ ಎಂದು ರಾಮಾಯಣದಲ್ಲಿ ಉಲ್ಲೇಖವಿದೆ. ಶ್ರೀರಾಮನನ್ನು ಶ್ರೀ ವಿಷ್ಣುವಿನ 8ನೇ ಅವತಾರವೆಂದು ಹೇಳಾಗುವುದು.

ರಾಮ ನವಮಿ ಹಿಂದೂಗಳಿಗೆ ಪವಿತ್ರವಾದ ದಿನವಾಗಿದ್ದು ಈ ದಿನ ಉಪವಾಸವಿದ್ದು ಶ್ರೀ ರಾಮನ ಜಪ ಮಾಡುತ್ತಾ ರಾಮ ನವಮಿ ಆಚರಿಸಲಾಗುವುದು. ಮೆರವಣಿಗೆ ಮಾಡುತ್ತಾ ಬಹಳ ಅದ್ಧೂರಿಯಾಗಿ ಆಚರಿಸಲಾಗುವುದು.
ಕೆಲವರು ಒಂದು ತೊಟ್ಟು ನೀರು ಸೇವಿಸದೆ ಉಪವಾಸ ಆಚರಿಸಿದರೆ ಇನ್ನು ಕೆಲವರು ಹಾಲು, ಹಣ್ಣು ಮಾತ್ರ ತಿನ್ನುತ್ತಾರೆ. ಈ ದಿನ ಬೆಳಗ್ಗೆ ಸ್ನಾನ ಮಾಡಿ ರಾಮ ಮಂದಿರಗಳಿಗೆ ಹೋಗಿ ಪೂಜೆ ಸಲ್ಲಿಸಲಾಗುವುದು.
ಪೂಜೆಗೆ ಶುಭ ಮುಹೂರ್ತ
ನವಮಿ ತಿಥಿಯು ಎಪ್ರಿಲ್ 16 ಮಧ್ಯಾಹ್ನ01:23ಕ್ಕೆ ಪ್ರಾರಂಭವಾಗಿ
ಏಪ್ರಿಲ್ 17 ಬುಧವಾರ ಮಧ್ಯಾಹ್ನ 3:14ಕ್ಕೆ ಮುಕ್ತಾಯ
ಪೂಜೆಯ ಸಮಯ ಏಪ್ರಿಲ್ 17 ಬೆಳಗ್ಗೆ 11:05ರಿಂದ ಮಧ್ಯಾಹ್ನ 01:38ರವರೆಗೆ
ಪ್ರತಿ ಊರಲ್ಲಿ ರಾಮನವಮಿ ಉತ್ಸವ
ಈ ವರ್ಷ ರಾಮನವಮಿಯನ್ನು ಮತ್ತಷ್ಟು ಸಡಗರದಿಂದ ಆಚರಿಸಲು ಸಿದ್ಧತೆ ನಡೆಯುತ್ತಿದೆ. ಏಕೆಂದರೆ ಶ್ರೀರಾಮ ಜನಿಸಿದ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ, ಹೀಗಾಗು ದೇಶದ ಮೂಲೆ-ಮೂಲೆಯಲ್ಲಿ ರಾಮ ನವಮಿಯನ್ನು ಆಚರಿಸಲು ಸಿದ್ಧತೆ ನಡೆಯುತ್ತಿದೆ.
ರಾಮ ನವಮಿ ಆಚರಣೆ ಬಗ್ಗೆ ಪೇಜಾವರ ಶ್ರೀಗಳು ರೀತಿ ಹೇಳಿದ್ದಾರೆ...
ಚುನಾವಣೆ ನೀತಿ ಸಂಹಿತೆಗೆ ಧಕ್ಕೆಯಾಗಬಾರದು
ಲೋಕ ಸಭೆ ಚುನಾವಣೆ ಚುನಾವಣೆ ಇರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿದೆ, ಹಾಗಾಗಿ ನೀತಿ ಸಂಹಿತೆಗೆ ತೊಂದರೆಯಾಗದಂತೆ ರಾಮ ನವಮಿ ಆಚರಿಸಲಾಗುವುದು. ಊರಿನಲ್ಲಿರುವ ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು. ಸಾಲುದೀಪ ಹಚ್ಚಿ ರಾಮತಾರಕ ಮಂತ್ರ ಹೇಳಲಾಗುವುದು, ಭಜನೆ ಮಾಡಲಾಗುವುದು. ಈ ಆಚರಣೆಯನ್ನು ಸಾಮೂಹಿಕವಾಗಿ ಮಡಬೇಕು. ಆದರೆ ನೀತಿ ಸಂಹಿತೆ ಇರುವುದರಿಂದ ಬಹಿರಂಗವಾಗಿ ಆಚರಣೆ ಮಾಡಲು ಹಗಬಾರದು.
ಸೇವೆ ಮಾಡಬೇಕು
ಈ ದಿನದಂದು ಬಡವರಿಗೆ ಸಹಾಯ ಮಾಡಲಾಗುವುದು, ಮನೆಯಿಲ್ಲದವರಿಗೆ ಮನೆ ಮಾಡಿಕೊಡುತ್ತೇನೆ ಎಂಬ ಭರವಸೆಯನ್ನು ನೀಡಿ ಅವರಿಗೆ ಮನೆ ಕಟ್ಟಿ ಕೊಡುವುದು, ಬಡವರ ಚಿಕಿತ್ಸೆಗೆ ನೆರವಾಗುವುದು ಈ ಬಗೆಯ ಸೇವೆ ಮಾಡಲಾಗುವುದು. ಈ ದಿನ ಪಾನಕಗಳನ್ನು ಮಾಡಿ ಹಂಚಲಾಗುವುದು.
ಪ್ರಾಣಿಗಳ ಸೇವೆ
ಪ್ರಾಣಿ-ಪಕ್ಷಿಗಳಿಗೆ ನೀರಿನ ವ್ಯವಸ್ಥೆ, ಗೋಶಾಲೆಗಳಿಗೆ ಸಹಾಯ ಮಾಡುವುದು, ಗೋಶಾಲೆಗಳಿಗೆ ಮೇವು ನೀಡುವುದು ಈ ಬಗೆಯ ಸೇವೆಗಳನ್ನು ಮಾಡಲಾಗುವುದು.
ರಾಮ ನವಮಿಯಂದು ಅಯೋಧ್ಯೆಯಲ್ಲಿ ವಿಶೇಷ ಪೂಜೆ
ರಾಮ ನವಮಿಯಂದು ಇಡೀ ಅಯೋಧ್ಯೆ ಸಿಂಗಾರಕೊಳ್ಳಲಿದೆ. ರಾಮ ಮಂದಿರ ಓಪನ್ ಆದಾಗಿನಿಂದ ಪ್ರತಿ ಗಂಟೆಗೆ 15, 000 ಭಕ್ತರು ಅಯೋಧ್ಯೆಗೆ ಹೋಗುತ್ತಿದ್ದಾರೆ, ರಾಮ ನವಮಿಗೆ ಅಯೋಧ್ಯೆಗೆ ಬರುವ ಭಕ್ತರ ಸಂಖ್ಯೆ ಹೆಚ್ಚಿರಲಿದೆ. ಈ ದಿನ ತುಂಬಾ ರಶ್ ಇರುವ ಕಾರಣ ರಾಮನವಮಿಯನ್ನ ಊರುಗಳಲ್ಲಿ ಆಚರಿಸಿ, ಅಯೋಧ್ಯೆಗೆ ಹೋಗಬೇಡಿ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. ಏಕೆಂದರೆ ರಶ್ ತುಂಬಾ ಇದ್ದಾಗ ಅಯೋಧ್ಯೆಗೆ ಹೋದರೆ ಕಷ್ಟವಾಗಬಹುದು.
ಆದ್ದರಿಂದ ಈ ರಾಮನವಮಿಯನ್ನು ಊರಿನಲ್ಲಿಯೇ ಆಚರಿಸಿ, ನಂತರ ಸ್ವಲ್ಪ ರಶ್ ಕಮ್ಮಿಯಾದಾಗ ಅಯೋಧ್ಯೆಗೆ ಹೋದರೆ ಅಯೋಧ್ಯೆ, ಅಲ್ಲಿರುವ ಶ್ರೀರಾಮನನ್ನು ಕಣ್ತುಂಬಿಕೊಳ್ಳಬಹುದು ಎಂಬ ಉದ್ದೇಶದಿಂದ ಈ ಸಲಹೆ ನೀಡಿದ್ದಾರೆ.



Click it and Unblock the Notifications
