Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ರಾಮ ಮಂದಿರದಲ್ಲಿ ಮೊದಲ ದಿನವೇ ಸಂಗ್ರಹವಾದ ಕಾಣಿಕೆ ಎಷ್ಟು ಕೋಟಿ ಗೊತ್ತಾ?
ಜೈ ಜೈ ರಾಮ, ಜೈ ಶ್ರೀ ರಾಮ ದೇಶದ ಎಲ್ಲಡೆ ಕೇಳಿಬರುತ್ತಿದೆ ಶ್ರೀರಾಮ ನಾಮ. ಅಯೋಧ್ಯೆಯಲ್ಲಿ ರಾಮನ ಪ್ರಾಣಪ್ರತಿಷ್ಠಾಪನೆಯಾಗಿ ಕೋಟಿ ಕೋಟಿ ಶ್ರೀರಾಮ ಭಕರ ಕನಸು ಇಡೇರಿದೆ. ಅಯೋಧ್ಯೆ ಇನ್ನು ದೇಶದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಲಿದೆ. ಪ್ರತಿನಿತ್ಯ ಸಾವಿರಾರು ಭಕ್ತರು ಬಂದು ಶ್ರೀರಾಮನ ದರ್ಶನ ಪಡೆದು ಹೋಗಲಿದ್ದಾರೆ. ಅಯೋಧ್ಯೆ ಭಕ್ತಿಯ ಕ್ಷೇತ್ರವಾಗಿದೆ, ಶ್ರೀರಾಮ ಅಯೋಧ್ಯೆಗೆ ಮತ್ತೆ ಮರಳಿದ್ದಾನೆ.
ಅಯೋಧ್ಯೆಯ ಮಂದಿರದಲ್ಲಿ ವಿರಾಜಮಾನವಾಗಿರುವ ಶ್ರೀರಾಮನನ್ನು ನೋಡಲು ಭಕ್ತ ಸಾಗರ ಹರಿದು ಬರುತ್ತಿದೆ. ಉದ್ಘಾಟನೆಯ ದಿನ ಎಲ್ಲರಿಗೂ ದರ್ಶನ ಭಾಗ್ಯ ಇಲ್ಲದೆ ಇದ್ದಿದ್ದರಿಂದ ಕಡಿಮೆ ಜನರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಆದರೆ ಜನವರಿ 23ರಿಂದ ಅಯೋಧ್ಯೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ.
ಪ್ರತಿ ದಿನ ರಾಮನ ದರ್ಶನಕ್ಕಾಗಿ ಭಕ್ತರು ಸಾಲು ಗಟ್ಟಿ ನಿಲ್ಲುತ್ತಿದ್ದಾರೆ. ಮಂದಿರದ ಸುತ್ತ ಭಕ್ತರ ದಂಡೇ ನೆರೆದಿರುತ್ತದೆ. ಅದರಲ್ಲೂ ಅಲಂಕೃತಗೊಂಡು ಮನೋಹರವಾಗಿ ಕಾಣುತ್ತಿರುವ ರಾಮಲಲ್ಲಾನ ಕಣ್ತುಂಬಿಕೊಳ್ಳಲೆಂದೇ ದೂರದಿಂದಲೂ ಭಕ್ತರು ಆಗಮಿಸುತ್ತಿದ್ದಾರೆ.

ಒಂದೇ ದಿನ ಕೋಟಿ ಕೋಟಿ ಆದಾಯ
ಇನ್ನು ರಾಮ ಮಂದಿರ ಉದ್ಘಾಟನೆಗೊಂಡ ಮೊದಲ ದಿನದಲ್ಲೇ ದಾಖಲೆಯ ಕಾಣಿಕೆ ಹರಿದುಬಂದಿದೆ. ದೇವಾಲಯದ ಮೂಲಗಳ ಪ್ರಕಾರ ಒಂದೇ ದಿನ ಬರೋಬ್ಬರಿ 3 ಕೋಟಿ ರೂಪಾಯಿ ಕಾಣಿಕೆ ರೂಪದಲ್ಲಿ ರಾಮನ ದೇವಾಲಯ ಸೇರಿದೆ. ಈ ಕುರಿತು ದೇವಾಲಯದ ಟ್ರಸ್ಟಿ ಅನಿಲ್ ಮಿಶ್ರಾ ಮಾಹಿತಿ ಹಂಚಿಕೊಂಡಿದ್ದಾರೆ.
ರಾಮ ಪ್ರತಿಷ್ಠಾಪನೆಯ ಬಳಿಕ ದೇವಾಲಯದ ಆವರಣದಲ್ಲಿ ಬರೋಬ್ಬರಿ 10 ದೇಣಿಗೆ ಸ್ವೀಕರಿಸುವ ಕೌಂಟರ್‌ಗಳ ನಿರ್ಮಿಸಲಾಗಿದೆ. ಮಂಗಳವಾರ ಒಂದೇ ದಿನ ಈ ಕೌಂಟರ್‌ಗಳ ಮೂಲಕ ಮತ್ತು ಆನ್‌ಲೈನ್ ಮೂಲಕ ಭಕ್ತರಿಂದ ಕಾಣಿಕೆಯಾಗಿ 3.17 ಕೋಟಿ ರೂಪಾಯಿ ಹರಿದು ಬಂದಿದೆ ಎಂದಿದ್ದಾರೆ.
ಆ ದಿನ ಸುಮಾರು 5ಲಕ್ಷಕ್ಕೂ ಹೆಚ್ಚು ರಾಮ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು, ಜೊತೆಗೆ ಮಾರನೆ ದಿನವೂ ಸಹ ಅಷ್ಟೇ ಪ್ರಮಾಣದ ಭಕ್ತರು ರಾಮನ ದರ್ಶನ ಪಡೆಯಲು ಆಗಮಿಸಿದ್ದರು ಎಂದಿದ್ದಾರೆ. ಹೀಗಾಗಿ ಎಲ್ಲರಿಗೂ ದರ್ಶನ ಸಿಗುವಂತೆ ಮಾಡಲು ಆಡಳಿತ ಮಂಡಳಿ ಹಾಗೂ ಅಲ್ಲಿನ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಆನ್‌ಲೈನ್‌ನಲ್ಲಿ ರಾಮನ ಆರತಿ ಪಾಸ್ ಪಡೆಯುವುದು ಹೇಗೆ?
ಅಯೋಧ್ಯಾ ಶ್ರೀ ರಾಮ ಮಂದಿರ ಟ್ರಸ್ಟ್ ನೀಡಿರುವ ಮಾಹಿತಿಯಂತೆ ಪ್ರತಿನಿತ್ಯ ಮೂರು ಬಗೆಯ ಆರತಿಗಳು ನಡೆಯಲಿವೆ. ಅಂದರೆ ಪ್ರತಿನಿತ್ಯ ಮುಂಜಾನೆ 06:30 AMಗೆ ಶೃಂಗಾರ ಆರತಿ, ಮಧ್ಯಾಹ್ನ 12:00PM ಗೆ ಭೋಗ್ ಆರತಿ ಹಾಗೂ 07:30 PMಕ್ಕೆ ಸಂಧ್ಯಾ ಆರತಿಯನ್ನು ನಡೆಸಲಾಗುತ್ತದೆ. ರಾಮ ಭಕ್ತರು ಈ ಪಟ್ಟಿಯಲ್ಲಿರುವ ಯಾವುದೇ ಆರತಿಯ ಹೆಸರನ್ನು ಆಯ್ಕೆ ಮಾಡುವುದಕ್ಕೆ ಮತ್ತು ಆರತಿ ಪಾಸ್‌ಗಳನ್ನು ಪಡೆದುಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ.
- ಮೊದಲಿಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧಿಕೃತ ವೆಬ್‌ಸೈಟ್ srjbtkshetra.org.ಗೆ ಭೇಟಿ ನೀಡಿ
- ನಂತರ ತೆರೆಯುವ ಪೇಜ್‌ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು
- ಇದೀಗ ನಿಮ್ಮ ಮೊಬೈಲ್ ನಂಬರ್‌ಗೆ ಬರುವ OTP ಬಳಸಿಕೊಂಡು ಲಾಗ್ ಇನ್ ಆಗಿರಿ
- ನಂತರ ಮುಖಪುಟದಲ್ಲಿ, ಆರತಿ ವಿಭಾಗದ ಮೇಲೆ ಕ್ಲಿಕ್ ಮಾಡಿ.
- ಇದೀಗ ನೀವು ಹಾಜರಾಗಲು ಬಯಸುವ ದಿನಾಂಕ ಮತ್ತು ಆರತಿಯ ಪ್ರಕಾರವನ್ನು ಆಯ್ಕೆಮಾಡಿ.
- ಭಕ್ತರ ಹೆಸರು, ವಿಳಾಸ, ಫೋಟೋ, ಮೊಬೈಲ್ ಸಂಖ್ಯೆ ಇತ್ಯಾದಿ ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿ
- ದೇವಸ್ಥಾನಕ್ಕೆ ನಿಮ್ಮ ಭೇಟಿಯ ಸಂದರ್ಭದಲ್ಲಿ, ಕೌಂಟರ್‌ನಿಂದ ಪಾಸ್‌ಗಳನ್ನು ಸಂಗ್ರಹಿಸಿ ಮತ್ತು 'ಆರತಿ'ಗೆ ಹಾಜರಾಗಬಹುದು.



Click it and Unblock the Notifications
