Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ರಾಮನವಮಿ ವಿಶೇಷ: ಬಾಲರಾಮನಿಗೆ ಸೂರ್ಯರಶ್ಮಿ ಅಭಿಷೇಕದ ಅದ್ಭುತ ದೃಶ್ಯಾವಳಿ..!
ಇಂದು ದೇಶದಾದ್ಯಂತ ವಿಜೃಂಭಣೆಯ ರಾಮ ನವಮಿ ಆಚರಿಸಲಾಗುತ್ತಿದೆ. ಆದರೆ ಈ ಬಾರಿ ಅಯೋಧ್ಯೆಯಲ್ಲಿ ರಾಮ ನವಮಿ ಆಚರಣೆ ವಿಶೇಷವಾಗಿರಲಿದೆ. ಮಂದಿರ ನಿರ್ಮಾಣವಾದ ಬಳಿಕ ಇದೇ ಮೊದಲ ಬಾರಿಗೆ ರಾಮ ನವಮಿ ಆಚರಿಸಲಾಗುತ್ತಿದ್ದು, ಸೂರ್ಯ ರಶ್ಮಿ ಇಂದು ರಾಮನ ವಿಗ್ರಹ ಸ್ಪರ್ಶಿಸಿದೆ.
ರಾಮನ ಮೂರ್ತಿ ಮೇಲೆ ಸುಮಾರು 3 ನಿಮಿಷಗಳ ಕಾಲ ಸೂರ್ಯ ರಶ್ಮಿ ಸ್ಪರ್ಶಿಸಿದೆ. ಮಂದಿರ ಉದ್ಘಾಟನೆಯ ಬಳಿಕ ಇದೇ ಮೊದಲ ಬಾರಿಗೆ ರಾಮ ನವಮಿ ನಡೆಯುತ್ತಿದ್ದು, ಇಂದು ಸೂರ್ಯ ಕಿರಣಗಳು ವಿಗ್ರಹ ಸ್ಪರ್ಶಿಸಿವೆ. ಸರಿಯಾಗಿ ಮಧ್ಯಾಹ್ನ 12 ಗಂಟೆಯ ಶುಭ ಗಳಿಗೆಯಲ್ಲಿ ಸೂರ್ಯ ಕಿರಣ ರಾಮನ ಸ್ಪರ್ಶಿಸುವಂತೆ ಮಾಡಲಾಗಿದೆ.

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ತಜ್ಞರು ಈ ತಂತ್ರಜ್ಞಾನ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಏಪ್ರಿಲ್ 17ರ ರಾಮನವಮಿಯಂದು ಸಹ ಬಾಲರಾಮನ ಮೂರ್ತಿಯ ಮೇಲೆ ಮೂರು ಕನ್ನಡಿಗಳ ಸಹಾಯದಿಂದ ಎರಡೂವರೆ ನಿಮಿಷಗಳ ಕಾಲ ಸೂರ್ಯರಶ್ಮಿ ಬಿದ್ದಿದೆ. ಅದನ್ನು ದೂರದರ್ಶನ ನೇರ ಪ್ರಸಾರ ಮಾಡಿದ್ದು. ಜಗತ್ತಿನಾದ್ಯಂತ ರಾಮ ಭಕ್ತರು ಈ ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದಾರೆ.
ಅಯೋಧ್ಯೆಯಲ್ಲಿ ಮೊದಲ ಬಾರಿಗೆ ರಾಮನವಮಿ ಆಚರಿಸಲಾಗುತ್ತಿದೆ. ಹೀಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಏಪ್ರಿಲ್ 17ರಂದು ನೈವೇದ್ಯ ಹಾಗೂ ಪ್ರಸಾದವಾಗಿ ವಿತರಿಸಲು 1,11,111 ಕೆಜಿ ತೂಕದ ಲಾಡುಗಳನ್ನು ಅಯೋಧ್ಯೆಗೆ ಕಳುಹಿಸಲಾಗಿದೆ.
ಏನಿದು 'ಸೂರ್ಯ ತಿಲಕ'?
ಎಸ್ ಕೆ ಪಾಣಿಗ್ರಾಹಿ ನೇತೃತ್ವದ ವಿಜ್ಞಾನಿಗಳ ತಂಡವು 'ಸೂರ್ಯ ತಿಲಕ'ವನ್ನು ವಿನ್ಯಾಸಗೊಳಿಸಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಖಗೋಳ ಅವಲೋಕನಗಳ ಆಧಾರದ ಮೇಲೆ ಈ ವಿನ್ಯಾಸ ಮಾಡಲಾಗಿದೆ. ಅಯೋಧ್ಯೆಯ ರಾಮಮಂದಿರದ ಅರ್ಚಕರು ವಿಜ್ಞಾನಿಗಳ ಸಮ್ಮುಖದಲ್ಲಿ 'ಸೂರ್ಯ ತಿಲಕ' ಪ್ರಯೋಗವನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು, ಇಂದು ನೇರವಾಗಿ ಸೂರ್ಯ ರಶ್ಮಿಯು ರಾಮನ ಸ್ಪರ್ಶಿಸಿವೆ.
ಈ ರೀತಿ ಸೂರ್ಯ ರಶ್ಮಿ ವಿಗ್ರಹವನ್ನು ಸ್ಪರ್ಶಿಸುವುದು ನೈಸರ್ಗಿಕ ಪ್ರಕ್ರಿಯೆಯಾಗಿಲ್ಲ. ಬದಲಾಗಿ ದೇವಾಲಯದ ಮೂರನೇ ಮಹಡಿಯಲ್ಲಿ ಆಪ್ಟಿಕಲ್ ಲೆನ್ಸ್ ಅನ್ನು ಇರಿಸಲಾಗಿದೆ. ಇದು ಪೈಪ್‌ಗಳಲ್ಲಿ ಇರಿಸಲಾದ ರಿಫ್ಲೆಕ್ಟರ್‌ಗಳ ಸರಣಿಯ ಮೂಲಕ ಕಿರಣವನ್ನು ನೆಲಮಹಡಿಗೆ ರವಾನಿಸುತ್ತದೆ. ಸೂರ್ಯನ ಬೆಳಕು ನೇರವಾಗಿ ರಾಮನ ಹಣೆ ಮೇಲೆ ಬೀಳುವಂತೆ ಈ ವಿನ್ಯಾಸ ಮಾಡಲಾಗಿದೆ.
ಮೂರನೆ ಮಹಡಿಯಲ್ಲಿ ಪ್ರತಿ ಫಲಿಸುವ ಸೂರ್ಯ ಬೆಳಕು ಮತ್ತೆ 90 ಡಿಗ್ರಿಗಳಲ್ಲಿ ಕನ್ನಡಿಗೆ ಪ್ರತಿಫಲಿಸುತ್ತದೆ. ನಂತರ, ಹಿತ್ತಾಳೆಯ ಪೈಪ್ ಮೂಲಕ ಹೋಗುವಾಗ, ಈ ಕಿರಣವು ಮೂರು ವಿಭಿನ್ನ ಮಸೂರಗಳ ಮೂಲಕ ಹಾದುಹೋಗುತ್ತದೆ ಮತ್ತು ಉದ್ದವಾದ ಪೈಪ್ನ ಗರ್ಭಗುಡಿಯ ಕೊನೆಯಲ್ಲಿ ಸ್ಥಾಪಿಸಲಾದ ಕನ್ನಡಿ ಮೇಲೆ ಬೀಳುತ್ತದೆ. ಗರ್ಭಗುಡಿಯಲ್ಲಿ ಅಳವಡಿಸಲಾಗಿರುವ ಗಾಜಿನ ಮೇಲೆ ಕಿರಣಗಳು ನೇರವಾಗಿ 75 ಎಂಎಂ ವೃತ್ತಾಕಾರದ ತಿಲಕವನ್ನು ರಾಮಲಲ್ಲಾನ ಮೂರ್ತಿ ಮೇಲೆ ಮೂಡುವಂತೆ ಮಾಡಲಾಗಿದೆ.
ಅಯೋಧ್ಯೆಯಲ್ಲಿ ಅದ್ದೂರಿ ರಾಮ ನವಮಿ
ಇದೇ ಮೊದಲ ರಾಮ ನವಮಿ ಹಿನ್ನೆಲೆ ರಾಮ ಮಂದಿರದಲ್ಲಿ ವಿಶೇಷ ಪೂಜೆ ನೆರವೇರಲಿದೆ. ಹೀಗಾಗಿ ದೇವಾಲಯ ವಿಶೇಷವಾಗಿ ಅಲಂಕಾರಗೊಂಡಿದೆ. ಈ ರಾಮ ನವಮಿ ಆಚರಣೆ ಕಣ್ತುಂಬಿಕೊಳ್ಳಲು 100 ಎಲ್‌ಇಡಿ ಪರದೆಗಳ ಪ್ರದರ್ಶನ ಹಾಗೂ ವಿಶೇಷ ದಿನದ ನೇರ ಪ್ರಸಾರವೂ ಇರಲಿದೆಯಂತೆ.
ಏಪ್ರಿಲ್ 19ರವರೆಗೆ ವಿಐಪಿ ದರ್ಶನ ಇರುವುದಿಲ್ಲ
ರಾಮನವಮಿ ಕಾರಣ ತುಂಬಾ ರಶ್ ಇರುವುದರಿಂದ ವಿಐಪಿ ದರ್ಶನ ಇರುವುದಿಲ್ಲ ಎಂದು ದೇವಾಲಯದ ಟ್ರಸ್ಟ್ ಹೇಳಿದೆ. ಏಪ್ರಿಲ್ 19ರ ನಂತರ ವಿಐಪಿ ದರ್ಶನ ಇರಲಿದೆ, ಅದರೊಳಗೆ ಯಾರಾದರೂ ಬಂದರೆ ಅವರು ಕ್ಯೂನಲ್ಲಿ ನಿಂತೇ ದೇವರ ದರ್ಶನ ಮಾಡಬೇಕೆಂದು ಟ್ರಸ್ಟ್ ಹೇಳಿದೆ.
ದೇವಾಲಯದ ಬಾಗಿಲು ಬೆಳಗ್ಗೆ 3.30ಕ್ಕೆ ತೆರೆಯಲಿದೆ. ಇಡೀ ದಿನ ತೆರೆದಿರಲಿದೆ, ಆದರೆ ಪ್ರಸಾದ ನೀಡುವಾಗ, ದೇವರ ವಸ್ತ್ರ ಬದಲಾಯಿಸುವಾಗ ಮಾತ್ರ ಸ್ವಲ್ಪ ಹೊತ್ತು ಮುಚ್ಚಿರಲಿದೆ, ಈ ಸಮಯದಲ್ಲಿ ಲೈವ್ ಇರಲ್ಲ, ಉಳಿದ ಸಮಯದಲ್ಲಿ ದೂರದರ್ಶನದಲ್ಲಿ ಲೈವ್ ಇರಲಿದೆ.
ಏಪ್ರಿಲ್ 16 ಹಾಗೂ ಏಪ್ರಿಲ್ 18ರಂದು ರಾತ್ರಿ 11ರವರೆಗೆ ದೇವರ ದರ್ಶನ ಮಾಡಬಹುದು. ಉಳಿದ ಸಮಯದಲ್ಲಿಯೇ ಗಂಟೆಗೆ 15 ಸಾವಿರ ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಈ ವಿಶೇಷ ದಿನದಲ್ಲಿ ಭಕ್ತರ ಸಂಖ್ಯೆ ಇನ್ನೂ ಅಧಿಕವಿರಲಿದೆ. ರಾಮ ಮಂದಿರ ಡಿಸೆಂಬರ್‌ರಷ್ಟರಲ್ಲಿ ಸಂಪೂರ್ಣವಾಗಿ ಪೂರ್ಣಗೊಳ್ಳಲಿದೆ.



Click it and Unblock the Notifications
