Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಅಯೋಧ್ಯೆ ರಾಮನಿಗೂ ತಟ್ಟಿದ ಬೇಸಿಗೆ ಬಿಸಿ.! ವಿಗ್ರಹಕ್ಕೆ ಹತ್ತಿ ಬಟ್ಟೆ ಅಲಂಕಾರ..!
ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೊಂಡು ಈಗ ಲಕ್ಷ ಲಕ್ಷ ಭಕ್ತರ ಆಗಮನದಿಂದಾಗಿ ಇಡೀ ದೇವಾಲಯ ಪ್ರಮುಖ ಯಾತ್ರಾ ಸ್ಥಳವಾಗಿ ಮಾರ್ಪಟ್ಟಿದೆ. ದೇವಾಲಯದಲ್ಲಿ ಜರುಗುವ ರಾಮ ಆರತಿ ಕಣ್ತುಂಬಿಕೊಳ್ಳಲೆಂದು ದೇಶದ ಮೂಲೆ ಮೂಲೆಯಿಂದಲೂ ಭಕ್ತರು ಆಗಮಿಸುತ್ತಿದ್ದಾರೆ.
ಈ ನಡುವೆ ದೇಶದೆಲ್ಲೆಡೆ ತಾಪಮಾನ ಏರಿಕೆಯಿಂದ ಜನ ಹೈರಾಣಾಗಿದ್ದಾರೆ. ಅದರಲ್ಲೂ ಉತ್ತರ ಭಾಗದಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಾಗಿದೆ. ಹೀಗಾಗಿ ಜನ ಮನೆಯಿಂದ ಆಚೆ ಬರುವುದು ಸಹ ಕಷ್ಟವಾಗಿದೆ. ಇನ್ನು ಅಯೋಧ್ಯೆಯಲ್ಲೂ ಇದೇ ರೀತಿಯ ಪರಿಸ್ಥಿತಿಯಿದ್ದು, ತಾಪಮಾನ ಏರಿಕೆ ಕೇವಲ ರಾಮನ ಭಕ್ತರಿಗಷ್ಟೇ ಅಲ್ಲ ಸ್ವತಃ ರಾಮನಿಗೂ ತಟ್ಟಿದೆ.

ಹೌದು ಅಯೋಧ್ಯೆಯಲ್ಲಿ ಬಿಸಿಲಿನ ತಾಪ ಹೆಚ್ಚಳವಾಗಿರುವ ಹಿನ್ನೆಲೆ ಬಾಲ ರಾಮನಿಗೆ ಬಟ್ಟೆ ತೊಡಿಸಲಾಗಿದೆ. ಬೇಸಿಗೆಯಲ್ಲಿ ತಾಪಮಾನ ಏರಿಕೆಯಾಗಿರುವ ಹಿನ್ನೆಲೆ ದೇವಾಲಯ ಆಡಳಿರ ಮಂಡಳಿ ರಾಮನಿಗೆ ಬಟ್ಟೆ ಧರಿಸುವ ನಿರ್ಧಾರ ಮಾಡಿದೆ. ರಾಮನಿಗೆ ಮೃದುವಾದ ಹತ್ತಿ ಬಟ್ಟೆಯನ್ನು ತೊಡಿಸಲಾಗಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ "ಪ್ರಭು ಇಂದು ಧರಿಸಿರುವ ವಸ್ತ್ರವು ಕೈಮಗ್ಗದ ಹತ್ತಿಯಿಂದ ಮಾಡಲ್ಪಟ್ಟಿದೆ, ನೈಸರ್ಗಿಕ ಇಂಡಿಗೋ ಬಣ್ಣಬಣ್ಣದ ಮತ್ತು ಹೂವುಗಳಿಂದ ಅಲಂಕರಿಸಲ್ಪಟ್ಟಿದೆ ಎಂದಿದೆ. ಈ ಬಟ್ಟೆ ತುಂಬಾ ಹಗುರ ಮತ್ತು ತಾಪಮಾನದಿಂದ ರಾಮನಿಗೆ ತಂಪಾಗಲಿದೆ ಎಂದಿದೆ.
ಈ ಮೊದಲು ಅಯೋಧ್ಯೆಯ ರಾಮ ಇನ್ನೂ ಬಾಲಕ ಹೀಗಾಗಿ ಆತನಿಗೂ ವಿಶ್ರಾಂತಿಯ ಅಗತ್ಯವಿದೆ ಎಂದು ಆಡಳಿತ ಮಂಡಳಿ ಮಧ್ಯಾಹ್ನ 1 ಗಂಟೆ ಕಾಲ ಗರ್ಭ ಗುಡಿ ಮುಚ್ಚುವ ನಿರ್ಧಾರ ಮಾಡಿತ್ತು. 'ಶ್ರೀ ರಾಮ್ ಲಲ್ಲಾ 5 ವರ್ಷದ ಮಗುವಾಗಿದ್ದು, ಇಷ್ಟು ಗಂಟೆಗಳ ಕಾಲ ಎಚ್ಚರವಾಗಿರಲು ಆತನು ಒತ್ತಡವನ್ನು ಹೊಂದಲು ಸಾಧ್ಯವಿಲ್ಲ. ಆದ್ದರಿಂದ ಬಾಲ ದೇವರಿಗೆ ಸ್ವಲ್ಪ ವಿಶ್ರಾಂತಿ ನೀಡಲು, ದೇವಾಲಯದ ಬಾಗಿಲುಗಳನ್ನು ಮುಚ್ಚಲು ಟ್ರಸ್ಟ್ ನಿರ್ಧರಿಸಿದೆ. ಮಧ್ಯಾಹ್ನ 12:30 ರಿಂದ 1:30 ರವರೆಗೆ, ದೇವರು ವಿಶ್ರಾಂತಿ ಪಡೆಯಲಿ' ಎಂದು ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ. ಈಗ ರಾಮನಿಗೆ ವಸ್ತ್ರ ಧರಿಸಿ ಅಲಂಕಾರ ಮಾಡಿದೆ.
ಅದ್ದೂರಿ ರಾಮನವಮಿಗೆ ಭರದ ಸಿದ್ಧತೆ
ಇದೇ ವರ್ಷ ಜನವರಿಯಲ್ಲಿ ಈ ರಾಮಮಂದಿರ ಲೋಕಾರ್ಪಣೆಗೊಂಡಿತ್ತು. ಮುಂಬರುವ ರಾಮನವಮಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಮಾಡಲು ಆಡಳಿತ ಮಂಡಳಿ ನಿರ್ಧರಿಸಿದ್ದು ಇದಕ್ಕಾಗಿ ಸಭೆ ಕರೆದಿದೆ. ಹನುಮಾನ್‌ಗರ್ಹಿ ದೇವಸ್ಥಾನದ ಆಡಳಿತ ಮಂಡಳಿಯು ಭಕ್ತರಿಗೆ ವ್ಯವಸ್ಥೆ ಮಾಡುವ ಕುರಿತು ಚರ್ಚಿಸಲು ಶುಕ್ರವಾರ ಸಭೆ ನಡೆಸಿದೆ ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.
ಬೇಸಿಗೆಯ ಬೇಗೆಯಲ್ಲಿ ಭಕ್ತರ ಪಾದಗಳು ಸುಡದಂತೆ ನೋಡಿಕೊಳ್ಳಲು ವಿಶೇಷ ಗಮನಹರಿಸಿ ಶೌಚಾಲಯಗಳ ವ್ಯವಸ್ಥೆಗೆ ವಿಶೇಷ ಗಮನ ಹರಿಸುವ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮತ್ತು ವ್ಯವಸ್ಥೆಗಳ ಕುರಿತು ಅಧಿಕಾರಿಗಳು ಚರ್ಚಿಸಿದ್ದಾರಂತೆ.
ರಾಮಮಂದಿರಕ್ಕೆ ಹೆಚ್ಚಾದ ಭಕ್ತರ ಸಂಖ್ಯೆ
ರಾಮಮಂದಿರ ಉದ್ಘಾಟನೆಗೊಂಡ ದಿನದಿಂದಲೇ ಭಕ್ತರ ದಂಡು ಹೆಚ್ಚಾಗಿದೆ. ಅದರಲ್ಲೂ ವಿಶೇಷ ರೈಲು ಸೇವೆ ನೀಡದ ಬಳಿಕ ಭಕ್ತರ ಸಂಖ್ಯೆ ದುಪ್ಪಟ್ಟಾಗಿದೆ. ಹೀಗಾಗಿ ಈ ಜನದಟ್ಟಣೆ ತಡೆಯಲು ದೇವಾಲಯ ಟ್ರಸ್ಟ್ ತಿರುಮಲದ ಟ್ರಸ್ಟ್‌ನ ನೆರವು ಕೇಳಿದೆ.
ದೇಶಾದ್ಯಂತ ವಿಶೇಷ ರೈಲುಗಳ ಪ್ರಾರಂಭವು ದೇವಾಲಯದ ಪಟ್ಟಣದಲ್ಲಿ ಭಕ್ತರ ಸಂಖ್ಯೆ ಹೆಚ್ಚಿದೆ. ಪ್ರತಿದಿನ ಸರಾಸರಿ 80,000 ಭಕ್ತರು ರಾಮನ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ, ಇದು ದೇಶದ ಅತಿ ಹೆಚ್ಚು ಭೇಟಿ ನೀಡುವ ಯಾತ್ರಾ ಕೇಂದ್ರಗಳಲ್ಲಿ ಒಂದಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.



Click it and Unblock the Notifications
