Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಯೋಧ್ಯೆಯಲ್ಲಿ ಉರಿಯಲಿದೆ 108 ಅಡಿಯ ಅಗರಬತ್ತಿ..! ಇದರ ವಿಶೇಷತೆ ಏನು ಗೊತ್ತಾ.?
22 ಜನವರಿ 2024 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಈ ಭವ್ಯವಾದ ಮೂರು ಅಂತಸ್ತಿನ ರಾಮ ಜನ್ಮಭೂಮಿ ದೇವಾಲಯದ ಗರ್ಭಗುಡಿಯಲ್ಲಿ ಭಗವಾನ್ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಇದಕ್ಕಾಗಿ ಇಡೀ ಅಯೋಧ್ಯೆ ಸಿದ್ಧಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮ ದೇಗುವ ಉದ್ಘಾಟಿಸುವುದನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ.
ದೇಗುಲ ನಿರ್ಮಾಣದ ಸಂದರ್ಭದಲ್ಲೂ ಶ್ರೀರಾಮನನ್ನು ಸಂತುಷ್ಟಗೊಳಿಸಲು ಭಕ್ತರು ಕೈ ಜೋಡಿಸಿದ್ದಾರೆ. ಜೋಧ್‌ಪುರದ ದೇಸಿ ತುಪ್ಪದಿಂದ ಥೈಲ್ಯಾಂಡ್‌ನ ಅರಿಶಿನದವರೆಗೆ ಹಲವಾರು ದೇಣಿಗೆಗಳು ಮತ್ತು ದತ್ತಿ ಕಾರ್ಯಗಳನ್ನು ಮಾಡಲಾಗಿದೆ. ಇತ್ತೀಚಿನ ಸುದ್ದಿಯೆಂದರೆ ಗುಜರಾತಿನ ರಾಮನ ಭಕ್ತರು ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ರಾಮಲಾಲಾಗೆ 108 ಅಡಿ ಉದ್ದದ ಧೂಪ ಮತ್ತು ಅಗರಬತ್ತಿಯನ್ನು ತಯಾರು ಮಾಡಿದ್ದಾರೆ.

ರಾಮ್ ಲಲ್ಲಾಗೆ ಧೂಪದ್ರವ್ಯವನ್ನು ಎಷ್ಟು ಸಮಯ ಸಮರ್ಪಿಸಲಾಗಿದೆ?
ಈ ಅಗರಬತ್ತಿ (ಧೂಪದ ಕಡ್ಡಿ) ತಯಾರಿಸಲು ಸುಮಾರು 3-4 ತಿಂಗಳು ಬೇಕಾಯಿತು. ಈ ಅಗರಬತ್ತಿ ತಯಾರಿಸುವ ಕುಶಲಕರ್ಮಿಗಳ ಪ್ರಕಾರ, ಇದನ್ನು ನಿರಂತರವಾಗಿ 45 ದಿನಗಳವರೆಗೆ ಸುಡಬಹುದು. ಅಲ್ಲದೆ ಸುಗಂಧ 15-20 ಕಿ.ಮೀ ಪ್ರದೇಶದಲ್ಲಿ ಇದರ ಸುಗಂಧ ಹರಡುತ್ತದೆ ಎನ್ನಲಾಗಿದೆ. ಇದರರ್ಥ ರಾಮಮಂದಿರದ ಸಂಪೂರ್ಣ ಆವರಣವನ್ನು ಪರಿಮಳಯುಕ್ತವಾಗಿಸುವುದು ಮಾತ್ರವಲ್ಲದೆ, ಭಕ್ತರು ಸುಮಾರು 20 ಕಿ.ಮೀ ದೂರದಿಂದ ಪರಿಮಳವನ್ನು ಆನಂದಿಸಲು ಸಾಧ್ಯವಾಗುತ್ತದೆ.
ವರದಿಯ ಪ್ರಕಾರ, ಗುಜರಾತ್‌ನ ಕುಶಲಕರ್ಮಿ ಬಿಹಾ ಬಾಯಿ 108 ಅಡಿ ಉದ್ದ, ಮೂರೂವರೆ ಅಡಿ ದಪ್ಪದ ಅಗರಬತ್ತಿಗಳನ್ನು ತಯಾರಿಸಿದ್ದೇವೆ. ಅಲ್ಲದೆ, ಅದರೊಳಗೆ ಆರೊಮ್ಯಾಟಿಕ್ ಪದಾರ್ಥಗಳನ್ನು ಮಿಶ್ರಣ ಮಾಡಲಾಗಿದೆ. ಇವನನ್ನು ರಥದ ಮೂಲಕ ಅಯೋಧ್ಯೆಗೆ ತರುತ್ತೇವೆ. ಬಳಿಕ ರಾಮಮಂದಿರ ಉದ್ಘಾನೆಯಾದಾಗ ಇದನ್ನು ಹಚ್ಚಲಾಗುತ್ತದೆ ಎಂದಿದ್ದಾರೆ.
ಚಿಕ್ಕ ವಯಸ್ಸಿನ ಅರ್ಚಕ ನೇಮಕ
ಉತ್ತರ ಪ್ರದೇಶದ ಗಾಜಿಯಾಬಾದ್‌ನ ನಿವಾಸಿಯಾಗಿರುವ ಮೋಹಿತ್ ಪಾಂಡೆ 22 ವರ್ಷದ ದೂಧೇಶ್ವರ ವೇದ ವಿದ್ಯಾಲಯದ ವೇದ ವಿದ್ವಾಂಸರಾಗಿದ್ದು, ಅಯೋಧ್ಯೆಯ ಬಹು ನಿರೀಕ್ಷಿತ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಲು 29 ಪುರೋಹಿತರ ಪೈಕಿ ಒಬ್ಬರಾಗಿ ಆಯ್ಕೆಯಾಗಿದ್ದಾರೆ.
ಈ ಗೌರವಾನ್ವಿತ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿರುವ 3,000 ಅರ್ಜಿದಾರರಲ್ಲಿ ಮೋಹಿತ್ ಅವರನ್ನು ಆಯ್ಕೆ ಮಾಡಲಾಗಿದೆ. ಮೋಹಿತ್ ತನ್ನ 9ನೇ ವಯಸ್ಸಿನಲ್ಲಿಯೇ ವೈದಿಕ ಅಧ್ಯಯನ ಮುಗಿಸಿದ್ದರು. ಜೊತೆಗೆ ತಿರುಮಲ ತಿರುಪತಿ ದೇವಸ್ಥಾನಮ್ (SVVU) ನಡೆಸುತ್ತಿರುವ ಶ್ರೀ ವೆಂಕಟೇಶ್ವರ ವೇದಿಕ್ ವಿಶ್ವವಿದ್ಯಾಲಯಕ್ಕೆ (SVVU) ಪ್ರವೇಶ ಪಡೆದಿದ್ದರು.
ಅರ್ಜಿ ಸಲ್ಲಿಸಿದ ಸಾವಿರಾರು ಅಭ್ಯರ್ಥಿಗಳ ಪೈಕಿ ಕೇವಲ 200 ಅಭ್ಯರ್ಥಿಗಳನ್ನು ತೀವ್ರ ಲಿಖಿತ ಪರೀಕ್ಷೆಗಳ ನಂತರ ಶಾರ್ಟ್‌ಲಿಸ್ಟ್ ಮಾಡಲಾಗಿತ್ತು. ಇದರ ನಂತರ, ಅಂತಿಮ 29 ರವರೆಗೆ ಫಿಲ್ಟರ್ ಮಾಡಲು ಸಂದರ್ಶನಗಳನ್ನು ನಡೆಸಲಾಯಿತು, ಅವರಲ್ಲಿ ಮೋಹಿತ್ ಅವರ ಸ್ಥಾನವನ್ನು ಗಳಿಸಿದರು. ಈ ಆಯ್ಕೆಯಾದ ಅರ್ಚಕರು ಪ್ರಸ್ತುತ ಅಯೋಧ್ಯೆಯಲ್ಲಿ ಆರು ತಿಂಗಳ ತೀವ್ರ ತರಬೇತಿಯನ್ನು ಪಡೆಯುತ್ತಿದ್ದಾರೆ, ನಂತರ ಅವರನ್ನು ಅಧಿಕೃತವಾಗಿ ದೇವಾಲಯದ ಅರ್ಚಕರ ಸಮಿತಿಗೆ ಸೇರಿಸಲಾಗುತ್ತದೆ.
ಪ್ರಧಾನ ಅರ್ಚಕರು ಯಾರು?
ದೇಗುಲದ ಪ್ರಧಾನ ಅರ್ಚಕರ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. 83 ವರ್ಷದ ಆಚಾರ್ಯ ಸತ್ಯೇಂದ್ರ ದಾಸ್ ಅವರು ರಾಮ ಮಂದಿರದ ಪ್ರಧಾನ ಅರ್ಚಕರಾಗಿದ್ದಾರೆ. ಸತ್ಯೇಂದ್ರ ದಾಸ್ ಕಳೆದ 32 ವರ್ಷಗಳಿಂದ ರಾಮಜನ್ಮಭೂಮಿ ದೇವಸ್ಥಾನದ ಮುಖ್ಯ ಅರ್ಚಕರಾಗಿದ್ದಾರೆ. 1992ರಲ್ಲಿ ಬಾಬರಿ ಧ್ವಂಸಕ್ಕೂ ಮುನ್ನ ಅವರು ಸುಮಾರು ಒಂಬತ್ತು ತಿಂಗಳ ಕಾಲ ರಾಮನನ್ನು ಅರ್ಚಕರಾಗಿ ಅವರು ಪೂಜೆ ಸಲ್ಲಿಸುತ್ತಿದ್ದರು. 1992 ರಲ್ಲಿ, ಅವರು ರಾಮಜನ್ಮಭೂಮಿ ದೇವಸ್ಥಾನಕ್ಕೆ ನೇಮಕಗೊಂಡರು. ಆಗಿನ ಕಾಲದಲ್ಲಿ ಸೇವೆ, ಪೂಜೆ ಮಾಡಿ ಪ್ರತಿಯಾಗಿ ತಿಂಗಳಿಗೆ 100 ರೂಪಾಯಿ ಪಡೆಯುತ್ತಿದ್ದರು.
ಜನವರಿ 16ರಿಂದ ಧಾರ್ಮಿಕ ಕಾರ್ಯ ಆರಂಭ
ಜನವರಿ 16ರಿಂದ 'ಮಹಾಪೂಜನ' ನಡೆಸಲಾಗುತ್ತದೆ. ಇಂದಿನಿಂದ ಅಧಿಕೃತವಾಗಿ ರಾಮಮಂದಿರ ಉದ್ಘಾಟನಾ ಕಾರ್ಯಗಳು ಆರಂಭವಾಗುತ್ತದೆ. ಲಕ್ಷ್ಮೀಕಾಂತ್ ನೇತೃತ್ವದ ವೈದಿಕ ವಿದ್ವಾಂಸರು ಧಾರ್ಮಿಕ ವಿಧಿಗಳನ್ನು ನಡೆಸುತ್ತಾರೆ ಮತ್ತು ಅವುಗಳು ಸೇರಿವೆ- ಸರ್ವ ಪ್ರಾಯಶ್ಚಿತ್ ಹೋಮಮ್, ದಶವಿದ್ ಸ್ನಾನ (ಸರಯು ನದಿಯಲ್ಲಿ ಸ್ನಾನ), ಯಜಮಾನ್ (ಯಜ್ಞ ಮಾಡುವ ವ್ಯಕ್ತಿ) ಅವರ ಸ್ಥಾನವನ್ನು ಪಡೆದುಕೊಳ್ಳುವುದು. ಇದಾದ ಬಳಿಕ ಜನವರಿ 22ರ ವರೆಗೂ ವಿವಿಧ ಧಾರ್ಮಿಕ ಕಾರ್ಯಗಳು ನಡೆಯುತ್ತವೆ.



Click it and Unblock the Notifications


