Latest Updates
-
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ!
ರಕ್ಷಾ ಬಂಧನ 2023: ದಿನಾಂಕ, ಶುಭ ಮುಹೂರ್ತ, ಆಚರಣಾ ವಿಧಿ ಹೇಗಿರಬೇಕು?
ರಕ್ಷಾಬಂಧನ ಹಬ್ಬವನ್ನು ಹಿಂದೂ ಧರ್ಮದಲ್ಲಿ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುತ್ತಾರೆ. ಮತ್ತು ಅವರ ದೀರ್ಘಾಯುಷ್ಯ ಮತ್ತು ಸಂತೋಷಕ್ಕಾಗಿ ಪ್ರಾರ್ಥಿಸುತ್ತಾರೆ.

ಇನ್ನೂ ಸಹೋದರರು ತಮ್ಮ ಸಹೋದರಿಗೆ ಉಡುಗೊರೆ ನೀಡುತ್ತಾ ಯಾವಾಗಲೂ ಅವಳನ್ನು ರಕ್ಷಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾರೆ. ಹಿಂದೂ ಕ್ಯಾಲೆಂಡರ್ ಪ್ರಕಾರ ರಕ್ಷಾ ಬಂಧನವು ಸಹೋದರ-ಸಹೋದರಿಯ ಪ್ರೀತಿಯ ಈ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಶುಕ್ಲ ಪಕ್ಷದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಅಷ್ಟಕ್ಕೂ ಈ ವರ್ಷ ರಕ್ಷಾ ಬಂಧನವನ್ನು ಯಾವ ದಿನ ಆಚರಣೆ ಮಾಡಲಾಗುತ್ತದೆ? ಶುಭ ಮುಹೂರ್ತ ಹಾಗೂ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳೋಣ.
ಭದ್ರ ಕಾಲದಲ್ಲಿ ರಾಕಿ ಕಟ್ಟಬಾರದು ಯಾಕೆ?
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಕ್ಷಾಬಂಧನದ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆಯಂದು ಮಧ್ಯಾಹ್ನ ಆಚರಿಸುವುದು ಶ್ರೇಯಸ್ಕರವಾದರೂ ರಕ್ಷಾಬಂಧನದ ದಿನದಂದು ಭದ್ರ ಕಾಲ ಇರಬಾರದು ಎಂಬುದಕ್ಕೆ ವಿಶೇಷ ಗಮನ ನೀಡಬೇಕು. ರಕ್ಷಾ ಬಂಧನದ ದಿನ ಭದ್ರನ ನೆರಳು ಇದ್ದ ಸಮಯದಲ್ಲಿ ಅಣ್ಣನಿಗೆ ರಾಕಿ ಕಟ್ಟಬಾರದು ಅಂತ ಹೇಳಲಾಗುತ್ತದೆ.
ಹಿಂದೂ ಪಂಚಾಂಗದ ಪ್ರಕಾರ ಈ ವರ್ಷ ಆಗಸ್ಟ್ 30 ರಂದು ಶ್ರಾವಣ ಪೂರ್ಣಿಮಾ ತಿಥಿಯೊಂದಿಗೆ ಭದ್ರಕಾಲ ಆರಂಭವಾಗಲಿದೆ. ಆಗಸ್ಟ್ 30 ರಂದು ಭದ್ರಾ ಕಾಲ 09.02 ವರೆಗೆ ಇರುತ್ತದೆ. ಶಾಸ್ತ್ರಗಳ ಪ್ರಕಾರ ರಕ್ಷಾಬಂಧನದ ಹಬ್ಬವನ್ನು ಭದ್ರಕಾಲದಲ್ಲಿ ಆಚರಿಸುವುದಿಲ್ಲ. ಭದ್ರ ರಹಿತ ಅವಧಿಯಲ್ಲಿ ರಾಖಿ ಕಟ್ಟುವುದು ಯಾವಾಗಲೂ ಮಂಗಳಕರವೆಂದು ಪರಿಗಣಿಸಲಾಗಿದೆ. ಮತ್ತೊಂದೆಡೆ ಶ್ರಾವಣ ಪೂರ್ಣಿಮಾ ದಿನಾಂಕದಂದು ರಾಖಿ ಕಟ್ಟಲು ಮಧ್ಯಾಹ್ನದ ಸಮಯವು ಅತ್ಯಂತ ಮಂಗಳಕರ ಸಮಯವಾಗಿದೆ.
ಆದರೆ ಈ ವರ್ಷದ ಶ್ರಾವಣ ಪೂರ್ಣಿಮಾವು ಆಗಸ್ಟ್ 30 ರಂದು ಪ್ರಾರಂಭವಾಗುತ್ತಿದ್ದು, ಆ ದಿನ ರಾಕಿ ಕಟ್ಟುವ ಶುಭ ದಿನ ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಆವತ್ತು ಇಡೀ ದಿನ ಭದ್ರಾನ ನೆರಳು ಇರುತ್ತದೆ. ಈ ರೀತಿಯಾಗಿ ಆಗಸ್ಟ್ 30 ರಂದು ಹಗಲಿನಲ್ಲಿ ರಕ್ಷಾಬಂಧನಕ್ಕೆ ಶುಭ ಮುಹೂರ್ತ ಇರುವುದಿಲ್ಲ. ಆಗಸ್ಟ್ 30 ರಂದು ಭದ್ರಾ ಕಾಲ 09.02 ನಿಮಿಷಗಳವರೆಗೆ ಇರುತ್ತದೆ. ಹೀಗಾಗಿ ಆಗಸ್ಟ್ 30 ರಂದು 09.02 ನಿಮಿಷಗಳ ನಂತರ ರಾಖಿ ಕಟ್ಟಬಹುದು ಅಂತ ಹೇಳಲಾಗುತ್ತದೆ.
ಹಿಂದೂ ಪಂಚಾಂಗದ ಪ್ರಕಾರ ಆಗಸ್ಟ್ 31 ರಂದು ಭದ್ರನ ನೆರಳು ಇರುವುದಿಲ್ಲ. ಈ ಕಾರಣಕ್ಕಾಗಿ ಆಗಸ್ಟ್ 31 ರಂದು ಮುಂಜಾನೆ ರಾಖಿ ಕಟ್ಟುವುದು ಮಂಗಳಕರ ಎಂದು ಹೇಳಲಾಗುತ್ತದೆ.
ರಕ್ಷಾಬಂಧನ ಶುಭ ಸಮಯ 2023 :
ರಕ್ಷಾಬಂಧನ ಶ್ರಾವಣ ಪೂರ್ಣಿಮಾ ದಿನಾಂಕ: 30 ಆಗಸ್ಟ್ 2023
ರಾಖಿ ಕಟ್ಟುವ ಸಮಯ: 30 ಆಗಸ್ಟ್ 2023 ರಂದು 09.03ರ ನಂತರ
ರಕ್ಷಾಬಂಧನ ಶ್ರಾವಣ ಪೂರ್ಣಿಮಾ ದಿನಾಂಕ ಕೊನೆಗೊಳ್ಳುವುದು- ಆಗಸ್ಟ್ 31 ರಂದು ಬೆಳಿಗ್ಗೆ 07:05 ಕ್ಕೆ
ರಕ್ಷಾಬಂಧನ 2023: ಏನು ಮಾಡಬೇಕು? ಏನು ಮಾಡಬಾರದು?
*ರಕ್ಷಾಬಂಧನದ ಹಬ್ಬವನ್ನು ಭದ್ರಾ ಮುಕ್ತ ಅವಧಿಯಲ್ಲಿ ಮಾತ್ರ ಆಚರಿಸಿ
* ರಕ್ಷಾ ಬಂಧನದ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಇಡೀ ಮನೆಯನ್ನು ಗಂಗಾಜಲದಿಂದ ಸ್ವಚ್ಛಗೊಳಿಸಿ
* ಸ್ನಾನದ ನಂತರ ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ
* ಶುಭ ಸಮಯ ನೋಡಿಕೊಂಡು ತಟ್ಟೆ ಅಲಂಕರಿಸಿ
* ರಾಖಿಯ ತಟ್ಟೆಯಲ್ಲಿ ತಾಮ್ರ ಅಥವಾ ಹಿತ್ತಾಳೆಯ ತಟ್ಟೆಯಲ್ಲಿ ರಾಖಿ, ಅಕ್ಷತೆ, ಸಿಂಧೂರ, ಸಿಹಿತಿಂಡಿಗಳನ್ನು ಇಡಬೇಕು
* ರಕ್ಷಾಬಂಧನದಂದು ನಿಮ್ಮ ಕುಲದೇವತೆಗೆ ರಕ್ಷಾ ಸೂತ್ರವನ್ನು ಅರ್ಪಿಸಿ ಪೂಜೆಯನ್ನು ಪೂರ್ಣಗೊಳಿಸಿ
* ರಾಖಿ ಕಟ್ಟುವಾಗ ಸಹೋದರನ ಮುಖ ಪೂರ್ವ ದಿಕ್ಕಿಗೆ ಇರಬೇಕು
* ಸಹೋದರಿಯರು ಸಹೋದರನ ಬಲಗೈಗೆ ರಾಖಿ ಕಟ್ಟಬೇಕು
* ಸಹೋದರ-ಸಹೋದರಿಯರು ಪರಸ್ಪರ ಸಿಹಿ ತಿನ್ನಿಸಬೇಕು



Click it and Unblock the Notifications