Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Raksha Bandhan Special: ಹಿಂದೂ ಪುರಾಣಗಳಲ್ಲಿವೆ ನೀವೆಂದೂ ಕೇಳಿರದ ಅಣ್ಣ-ತಂಗಿಯ ಮನಮುಟ್ಟುವ ಕಥೆಗಳು!
Raksha Bandhan Special: ಶ್ರಾವಣ ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಹಿಂದೂ ಹಬ್ಬಗಳಲ್ಲಿ ರಕ್ಷಾ ಬಂಧನ ಅಥವಾ ರಾಖಿ ಹಬ್ಬ ಕೂಡ ಒಂದು. ಈ ವರ್ಷ ರಾಖಿ ಹಬ್ಬವು ಆಗಸ್ಟ್ 9ರಂದು ಹುಣ್ಣಿಮೆ ದಿನ ಆಚರಿಸಲಾಗುತ್ತದೆ. ಹಾಗೆ ಈ ಹಬ್ಬವು ಯಾವಾಗ ಆರಂಭಗೊಂಡಿತು ಎಂಬ ಪ್ರಶ್ನೆ ಹಾಕಿಕೊಂಡು ಹುಡುಕುತ್ತಾ ಹೋದರೆ ಇತಿಹಾಸದ ಪುಟಗಳು ತೆರೆದುಕೊಳ್ಳುತ್ತವೆ. ಹಾಗೆ 5 ಸಾವಿರ ವರ್ಷಗಳ ಹಿಂದಿನ ಕಾಲಕ್ಕೆ ತೆರಳಬೇಕಾಗುತ್ತದೆ.
ರಕ್ಷಾ ಬಂಧನದ ದಿನದಂದು ಸಹೋದರಿ ತನ್ನ ಸಹೋದರನಿಗೆ ರಾಖಿ ಕಟ್ಟುವ ಮೂಲಕ ರಕ್ಷಣೆಯನ್ನು ಬೇಡುವುದು ಈ ಹಬ್ಬದ ಮೂಲ ಉದ್ದೇಶ ಹಾಗೂ ಆಚರಣೆ ಎನ್ನಬಹುದು, ಇನ್ನು ಈ ಹಬ್ಬದಲ್ಲಿ ಮನೆ ಮನೆಯಲ್ಲೂ ರಾಖಿ ಸಂಭ್ರಮ ಮನೆ ಮಾಡಿರಲಿದೆ. ಇನ್ನು ಹಬ್ಬವು ಹೇಗೆ ಆರಂಭಗೊಂಡಿತ್ತು ಎಂದು ನೋಡೋಣ.

ಈ ಹಬ್ಬ ರಾಮನ ಸಹೋದರಿಯಿಂದ ಆರಂಭಗೊಂಡಿತ್ತು ಎಂದು ಹೇಳಲಾಗಿದೆ. ಆದ್ರೆ ನೀವೆಲ್ಲಿಯೂ ರಾಮನ ಸಹೋದರಿ ಕುರಿತಾಗಿ ಓದುವುದಿಲ್ಲ. ಕೆಲವೇ ಕೆಲವು ರಾಮಾಯಣದಲ್ಲಿ ಮಾತ್ರವೇ ಆಕೆಯ ಕುರಿತಾಗಿ ಹೇಳಲಾಗಿದೆ. ಇನ್ನು ಆಕೆಯಿಂದ ಮೊದಲ ಬಾರಿಗೆ ರಾಖಿ ಹಬ್ಬದ ಉಲ್ಲೇಖ ನೋಡಬಹುದು. ಹಾಗಾದ್ರೆ ಇತಿಹಾಸದ ಪುಟ ಸೇರಿದ ಹಿಂದೂ ಪುರಾಣಗಳಲ್ಲಿ ದಾಖಲಾಗಿರುವ ಕೆಲವು ಅಪರೂಪದ ಸಹೋದರ-ಸಹೋದರಿಯರು ಯಾರು ಅವರ ಕಥೆಗಳೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರಾಮ ಮತ್ತು ಶಾಂತ
ನಾವು ಈ ಮೊದಲೇ ಹೇಳಿದಂತೆ ಶ್ರೀರಾಮನಿದ್ದ ಸಹೋದರಿ ಹೆಸರು ಶಾಂತ. ಶಾಂತಾ ದೇವಿ ಶ್ರೀರಾಮ ಹುಟ್ಟುವ ಮೊದಲೇ ದಶರಥ ಮಹಾರಾಜ ಮತ್ತು ಕೌಸಲ್ಯೆಯ ಪುತ್ರಿಯಾಗಿ ಜನಿಸಿದಳು. ಕೌಸಲ್ಯೆಯ ಸಹೋದರಿ ವರ್ಷಿಣಿಗೆ ಮಕ್ಕಳಿಲ್ಲದಿದ್ದ ಕಾರಣ, ಶಾಂತಾ ದೇವಿಯನ್ನು ಅವರಿಗೆ ದತ್ತು ನೀಡಲಾಯಿತು ಎಂದು ತಿಳಿದುಬರುತ್ತದೆ. ನಂತರ ಆಕೆ ವಿಭಾಂಡಕ ಋಷಿಯ ಮಗ ಋಷ್ಯಶೃಂಗನನ್ನು ಮದುವೆಯಾದಳು, ಅವನು ರಾಜ ದಶರಥನಿಗೆ ತನ್ನ ಪರಂಪರೆಯನ್ನು ಮುಂದುವರಿಸಲು ಗಂಡು ಮಕ್ಕಳನ್ನು ಹೊಂದಲು ಒಂದು ಪೂಜೆ ಮಾಡಿದನು. ಈ ಕಾರಣದಿಂದಾಗಿ ರಾಮ, ಲಕ್ಷ್ಮಣ, ಭರತ, ಶತ್ರುಘ್ನರು ಜನಿಸಿದರು. ಶಾಂತ ಈ ಎಲ್ಲಾ ಸಹೋದರರಿಗೆ ರಾಖಿ ಕಟ್ಟಿದ್ದಳಂತೆ ಇದೇ ಮೊದಲ ರಾಖಿ ಹಬ್ಬವೆಂದು ಕರೆಯಲಾಗಿದೆ. ಇಂದಿಗೂ ಶ್ರೀರಾಮನಿಗೆ ಮಹಿಳಾ ಭಕ್ತರು ರಾಖಿ ಕಳುಹಿಸುವ ಸಂಪ್ರದಾಯವಿದೆ. ಹಾಗೆ ಅಯೋಧ್ಯೆಯಲ್ಲಿನ ಶಾಂತ ಮಂದಿರದಲ್ಲಿ ರಾಖಿ ಹಬ್ಬದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.

Photo Credit: AI
ರಾವಣ ಮತ್ತು ಶೂರ್ಪನಖ
ರಾಮಾಯಣದ ರಾವಣನ ಕುರಿತು ಯಾರಿಗೆ ತಿಳಿದಿಲ್ಲ ಹೇಳಿ. ಲಂಕಾದ ದೊರೆ ರಾವಣೇಶ್ವರ ಮಹಾನ್ ಶಿವ ಭಕ್ತ. ಹಾಗೆ ಆತ ತನ್ನ ಸಹೋದರಿಯನ್ನು ಅತ್ಯಂತ ಹೆಚ್ಚಾಗಿ ಪ್ರೀತಿಸುತ್ತಿದ್ದವನು. ಅತ್ಯಂರ ಕಾಳಜಿಯಿಂದ ಆಕೆಯನ್ನು ಸಾಕಿ ಸಲಹಿದ್ದ. ಆದ್ರೆ ಶೂರ್ಪನಖ ರಾಮನ ಮದುವೆಯಾಗಲು ಬಯಸಿದಳು, ಆದ್ರೆ ಆತನಿಗೆ ಮೊಲದೇ ಮದುವೆಯಾಗಿತ್ತು, ಆದರೂ ವನವಾಸದಲ್ಲಿದ್ದ ರಾಮನ ನೋಡಲು ಶೂರ್ಪನಖ ಬಂದಾಗ ಲಕ್ಷಣ ತಡೆದು ಆಕೆಯ ಮೂಗು ಕತ್ತರಿಸಿದಾಗ ರಾವಣ ಕ್ಷುದ್ರಗೊಂಡಿರುತ್ತಾನೆ. ಹೀಗಾಗಿಯೇ ಸೀತೆಯ ಅಪಹರಣವೂ ನಡೆಯುತ್ತದೆ.

ದ್ರೌಪದಿ ಮತ್ತು ಕೃಷ್ಣ
ದ್ರೌಪದಿ ಮತ್ತು ಕೃಷ್ಣನ ನಡುವಿನ ವಿಶೇಷ ಸಂಬಂಧವೇ ನಾವು ರಕ್ಷಾಬಂಧನವನ್ನು ಆಚರಿಸಲು ಕಾರಣ ಎಂದು ಕೂಡ ಹೇಳಲಾಗುತ್ತದೆ. ಕೃಷ್ಣನ ಮಣಿಕಟ್ಟಿಗೆ ಗಾಯವಾದಾಗ ದ್ರೌಪದಿ ತನ್ನ ಸೀರೆಯ ತುದಿಯನ್ನು ಹರಿದು ಅದನ್ನು ಗಾಯದ ಮೇಲೆ ಕಟ್ಟಿ ರಕ್ತಸ್ರಾವ ನಿಲ್ಲಿಸಿದಳಂತೆ. ದ್ರೌಪದಿಯ ಈ ಸಹಾಯ ನೋಡಿದ ಕೃಷ್ಣ ಆಕೆಯ ಕಷ್ಟದಲ್ಲಿ ರಕ್ಷಣೆ ಮಾಡುವುದಾಗಿ ಪ್ರತಿಜ್ಞೆ ಮಾಡಿದನಂತೆ. ಹೀಗಾಗಿ ಕೌರವರು ಪಾಂಡವರ ವಿಚಾರದಲ್ಲಿ ಕೌರವರು ದ್ರೌಪದಿ ಸೀರೆ ಎಳೆಯುವಾಗ ದ್ರೌಪದಿ ಕೃಷ್ಣನ ಮೊರೆ ಹೋದಳು. ದುಶ್ಶಾಸನನು ದ್ರೌಪದಿಯ ಸೀರೆಯನ್ನು ಎಷ್ಟೇ ಎಳೆದರು ಅದು ಮುಗಿಯದೆ ಹೋಯಿತು. ದ್ರೌಪದಿ ಕೃಷ್ಣನನ್ನು ಬೇರೆಯವರಿಗಿಂತ ಹೆಚ್ಚು ನಂಬಿದ್ದಳು. ಆದರೆ ದ್ರೌಪದಿಯ ತಂದೆ ದ್ರುಪದನು ಆರಂಭದಲ್ಲಿ ತನ್ನ ಮಗಳನ್ನು ಕೃಷ್ಣನಿಗೆ ಮದುವೆ ಮಾಡಲು ಬಯಸಿದ್ದನು. ಆದರೆ ಕೃಷ್ಣನು ಅರ್ಜುನನನ್ನು ಆಕೆಯ ಸಂಭಾವ್ಯ ವರ ಎಂದು ಸೂಚಿಸಿದ ಎಂದು ಹೇಳಲಾಗಿದೆ.

ಯಮುನಾ ಮತ್ತು ಯಮರಾಜ
ನರಕವಾಸಿ ಯಮರಾಜನ ಸಹೋದರಿ ಯಮುನೆಯ ಕಥೆ ನೀವು ಅಲ್ಲಲ್ಲಿ ಕೇಳಿರಬಹುದು. ಇಬ್ಬರ ಹಬ್ಬವನ್ನು ಉತ್ತರ ಭಾರತದಲ್ಲಿ ಭಾಯ್ ದೂಜ್ ಎಂಬ ಹಬ್ಬವಾಗಿ ಆಚರಿಸಲಾಗುತ್ತದೆ. ಸೂರ್ಯನ ಮಕ್ಕಳೆಂದು ಹೇಳಲಾಗುವ ಇವರಿಬ್ಬರ ತಾಯಿ ಸೂರ್ಯನಿಂದ ದೂರಾದರಂತೆ. ಹಾಗೆ ಯಮನು ನರಕದ ರಾಜನಾದ ಆದರೆ ತನ್ನ ಸಹೋದರಿಯನ್ನು ಆತ ವರ್ಷಗಳ ಕಾಲ ನೋಡಲು ಆಗಿರಲಿಲ್ಲವಂತೆ. ಆದರೆ ಒಂದು ದಿನ ಎದುರಿಗೆ ಬಂದಾಗ ಯುಮನಾ ಆತನ ಹಣೆಗೆ ತಿಲಕ ಇಟ್ಟು, ಆತನಿಗೆ ಇಷ್ಟವಾದ ಭಕ್ಷ್ಯ ಭೋಜನಗಳ ಮಾಡಿ ಬಡಿಸಿದಳಂತೆ. ಹೀಗಾಗಿ ಈ ದಿನದಲ್ಲಿ ಸಹೋದರನಿಗೆ ಸಹೋದರಿ ಊಟ ಬಡಿಸುವುದು ನೋಡಬಹುದು.
ವಿಷ್ಣು ಮತ್ತು ಪಾರ್ವತಿ
ಶಿವನ ಪತ್ನಿ ಪಾರ್ವತಿ ಕೈಲಾಸವಾಸಿ, ಹಾಗೆ ಪಾರ್ವತಿ ದೇವಿ ಹಿಂದು ಪುರಾಣಗಳ ಪ್ರಕಾರ ಪರ್ವತ ರಾಜ ಹಿಮವಂತನ ಮಗಳು ಎಂದು ಹೇಳಲಾಗಿದೆ. ಹಾಗೆ ಆಕೆ ವಿಷ್ಣುವಿನ ಸಹೋದರಿಯಾಗಿಯೂ ಹಲವು ಕಡೆ ಉಲ್ಲೇಖವಿದೆ. ಶಿವ ಪಾರ್ವತಿಯ ವಿವಾಹ ಕಾರ್ಯದಲ್ಲಿ ವಿಷ್ಣು ಹಾಗೂ ಆತನ ಪತ್ನಿ ಲಕ್ಷ್ಮಿ ದೇವಿ ಭಾಗಿಯಾಗಿದ್ದರು ಎಂದು ಹೇಳಲಾಗುತ್ತದೆ. ಪ್ರಸಿದ್ಧ ಎಲ್ಲೋರಾ ಗುಹೆಗಳಲ್ಲಿನ ಕಲ್ಯಾಣಸುಂದರ ದೃಶ್ಯವು ವಿಷ್ಣು ಮತ್ತು ಅವನ ಪತ್ನಿ ಲಕ್ಷ್ಮಿ ಪಾರ್ವತಿಯನ್ನು ಶಿವನಿಗೆ ಮದುವೆ ಮಾಡಿ ಕೊಡುವುದನ್ನು ತೋರಿಸುತ್ತದೆ. ಹೀಗಾಗಿ ಪಾರ್ವತಿಯು ವಿಷ್ಣುವಿನ ಸಹೋದರಿ ಎಂದು ವಿವರಿಸಲಾಗುತ್ತದೆ.
ಕೃಪ ಮತ್ತು ಕೃಪಿ
ಮಹಾಭಾರತದಲ್ಲಿ ಕೃಪ ಕುರು ರಾಜ್ಯದ ಪರಿಷತ್ ಸದಸ್ಯನಾಗಿದ್ದನು ಮತ್ತು ಕೌರವ ಮತ್ತು ಪಾಂಡವರಿಗೆ ವಿದ್ಯಾರ್ಜನೆ ಮಾಡಿದ ಗುರು ಎಂದು ಹೇಳಲಾಗಿದೆ. ಕೃಪ ಮತ್ತು ಅವನ ಅವಳಿ ಸಹೋದರಿ ಕೃಪಿ ಇಬ್ಬರನ್ನೂ ಕುರು ರಾಜ್ಯದ ರಾಜ ಶಂತನು ದತ್ತು ಪಡೆದರು. ಇವರಿಬ್ಬರನ್ನು ಮಹಾಭಾರತದಲ್ಲಿ ಕೇಳಿಬರುವ ಮೊದಲ ಅವಳಿಗಳು ಎಂದು ಹೇಳಲಾಗಿದೆ. ಕೃಪ ಕಲಿಯುಗದ ಕೊನೆಯವರೆಗೂ ಬದುಕುಳಿದಿದ್ದ ಅಮರ ಜೀವಿ ಎಂದು ಹೇಳಲಾಗಿದೆ. ಆತನಿಗೆ ತನ್ನ ಸಹೋಧರಿಯ ಆಯಸ್ಸು ಕೂಡ ವರವಾಗಿ ಬಂದಿತ್ತು ಎಂದು ಹೇಳಲಾಗುತ್ತದೆ.



Click it and Unblock the Notifications