Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಶ್ರೀ ಕೃಷ್ಣನಿಗೆ ರಾಕಿ ಕಟ್ಟಿದ ದ್ರೌಪತಿ! ರಾಕಿ ಹಬ್ಬದ ಹಿಂದಿರೋ ಪೌರಾಣಿಕ ಕಥೆಗಳೇನು?
ರಕ್ಷಾ ಬಂಧನ ಅಣ್ಣಾ-ತಂಗಿಯ ಹಬ್ಬ. ಈ ದಿನ ಅಣ್ಣನಿಗೆ ತಂಗಿಯೂ ಪ್ರೀತಿಯಿಂದ ರಾಕಿಯನ್ನು ಕಟ್ಟುತ್ತಾಳೆ. ಹಾಗೂ ಅಣ್ಣನೂ ಸದಾ ತಂಗಿಯನ್ನು ರಕ್ಷಣೆ ಮಾಡೋದಾಗಿ ಮಾತು ನೀಡುತ್ತಾನೆ. ಅದ್ರಲ್ಲೂ ಭಾರತೀಯರಿಗಂತೂ ಈ ಹಬ್ಬ ತುಂಬಾನೇ ಸ್ಪೆಷಲ್.

ಪ್ರತಿಯೊಂದು ಹಬ್ಬದ ಹಿಂದೆ ಕೂಡ ಒಂದೊಂದು ಕಥೆ ಬೆಸೆದುಕೊಂಡಿದೆ. ಅದೇ ರೀತಿ ರಕ್ಷಾ ಬಂಧನ ಆಚರಣೆಯ ಹಿಂದೆಯೂ ಕೂಡ ಅಂತಹದ್ದೇ ಪೌರಾಣಿಕ ಕಥೆಗಳಿದೆ. ಅಷ್ಟಕ್ಕು ರಕ್ಷಾ ಬಂಧನ ಹಬ್ಬ ಶುರುವಾಗಿದ್ಹೇಗೆ? ಇದರ ಹಿಂದಿರುವ ಕಥೆಗಳ ಬಗ್ಗೆ ಒಂದೊಂದಾಗಿಯೇ ತಿಳಿಯೋಣ.
ದ್ರೌಪತಿಯನ್ನು ರಕ್ಷಣೆ ಮಾಡೋದಾಗಿ ಮಾತುಕೊಟ್ಟ ಶ್ರೀ ಕೃಷ್ಣ!
ಒಂದು ಸಾರಿ ಶ್ರೀ ಕೃಷ್ಣ ಗಾಳಿಪಟ ಹಾರಿಸುತ್ತಿದ್ದ ಸಮಯದಲ್ಲಿ ಆತನ ಬೆರಳಿಗೆ ಗಾಯವಾಗಿ ರಕ್ತ ಸುರಿಯ ತೊಡಗುತ್ತದೆ. ಈ ಸಮಯದಲ್ಲಿ ಅಲ್ಲಿಂದ ದ್ರೌಪತಿ ತನ್ನ ಬಟ್ಟೆಯ ಸೆರಗನ್ನು ಹರಿದು ಶ್ರೀ ಕೃಷ್ಣನ ಬೆರಳಿಗೆ ಕಟ್ಟಿ ರಕ್ತ ಸೋರುವುದನ್ನು ತಡೆಗಟ್ಟುತ್ತಾಳೆ. ಆಗ ಶ್ರೀ ಕೃಷ್ಣನು ದ್ರೌಪತಿಯ ಕಾಳಜಿಗೆ ಸೋತು ಹೋಗುತ್ತಾನೆ. ಮತ್ತು ಯಾವ ಸಂದರ್ಭದಲ್ಲಾದರೂ ನಿನ್ನ ರಕ್ಷಣೆಗೆ ಸಿದ್ಧನಾಗಿ ಇರುತ್ತಾನೆ ಎಂದು ಹೇಳುತ್ತಾನೆ.
ಅದರಂತೆ ಕೌರವರೊಂದಿಗೆ ಪಾಂಡವರು ಪಗಡೆ ಆಟದಲ್ಲಿ ಸೋತ ಸಂದರ್ಭದಲ್ಲಿ ದುಷ್ಯಾಸನ ದ್ರೌಪತಿಯ ಸೆರಗಿಗೆ ಕೈ ಹಾಕುತ್ತಾನೆ. ಈ ಸಂದರ್ಭದಲ್ಲಿ ಶ್ರೀ ಕೃಷ್ಣನು ಆಕೆಯನ್ನು ರಕ್ಷಣೆ ಮಾಡುತ್ತಾನೆ.
12 ವರ್ಷದ ನಂತರ ಯಮನಿಗೆ ರಾಕಿ ಕಟ್ಟಿದ ಯಮುನಾ!
ಯಮ ಮತ್ತು ಯಮುನಾ ಸಹೋದರ ಸಹೋದರಿಯರಾಗಿದ್ದು 12 ವರ್ಷಗಳಿಂದ ಅವರಿಬ್ಬರೂ ಪರಸ್ಪರ ಭೇಟಿಯಾಗಿರಲಿಲ್ಲ. ಇದು ಯಮುನಾ ದೇವಿಗೆ ಬಹಳಷ್ಟು ದುಃಖವನ್ನುಂಟು ಮಾಡಿತ್ತು. ಆದ್ದರಿಂದ ಗಂಗಾ ದೇವಿಯು ತನ್ನ ಸಹೋದರಿಯನ್ನು ಭೇಟಿ ಮಾಡಿ ಅವಳನ್ನು ಸಂತೋಷಪಡಿಸುವಂತೆ ಯಮನಿಗೆ ಸಲಹೆ ನೀಡುತ್ತಾಳೆ.
ಇತ್ತ ತನ್ನ ಸಹೋದರನ ಆಗಮನದ ವಿಷಯ ಕೇಳಿ ಸಂತೋಷಗೊಂಡ ಯಮುನಾ ಆಕರ್ಷಕ ಭಕ್ಷ್ಯಗಳನ್ನು ತಯಾರಿಸಿ ಆತನಿಗಾಗಿ ಕಾದು ಕುಳಿತಿರುತ್ತಾಳೆ. ನಂತರ ಸಹೋದರ ಮನೆಗೆ ಬಂದ ತಕ್ಷಣ ಆತನಿಗೆ ರಾಕಿ ಕಟ್ಟಿ ಖುಷಿ ಪಡುತ್ತಾಳೆ. ವೈದಿಕ ಗ್ರಂಥಗಳಲ್ಲಿ ಯಮ ಎಂದರೆ ಆತ್ಮವನ್ನು ಒಯ್ಯುವವನು ಎಂಬ ಉಲ್ಲೇಖವಿದೆ.
ಮಾತೆ ಲಕ್ಷ್ಮೀ ಹಾಗೂ ಬಲಿಯ ರಕ್ಷಾ ಬಂಧ!
ಬಲಿಯು ವಿಷ್ಣುವಿನ ಪರಮ ಭಕ್ತ. ತಪಸ್ಸು ಮಾಡಿ ವಿಷ್ಣುವನ್ನು ಒಲಿಸಿಕೊಂಡಿದ್ದ ಬಲಿ ಮಹಾರಾಜನು ವಿಷ್ಣುವಿನಲ್ಲಿ ನೀನು ನನ್ನ ರಾಜ್ಯವನ್ನು ರಕ್ಷಿಸಬೇಕು. ಹಾಗೂ ಅತ್ಯುತ್ತಮ ರೀತಿಯಲ್ಲಿ ಪ್ರಜಾಪಾಲನೆ ಮಾಡಬೇಕೆಂದು ಕೇಳಿಕೊಂಡಿದ್ದ. ಬಲಿಯ ನಿಸ್ವಾರ್ಥ ಗುಣಕ್ಕೆ ಮೆಚ್ಚಿದ್ದ ವಿಷ್ಣುವು ವೈಕುಂಠ ತೊರೆದು ಬಲಿ ಮಹಾರಾಜನ ರಾಜ್ಯ ಕಾಯಲು ನಿಲ್ಲುತ್ತಾನೆ.
ಇತ್ತ ಪತಿ ವೈಕುಂಠ ತೊರೆದು ಭೂಮಿಯಲ್ಲೇ ಉಳಿದುಬಿಟ್ಟಿದ್ದು ಲಕ್ಷ್ಮೀಯ ಚಿಂತೆಯನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡುತ್ತದೆ. ಲಕ್ಷ್ಮೀಯು ವಿಷ್ಣುವನ್ನು ವಾಪಾಸ್ಸ್ ಬರುವಂತೆ ಪರಿಪರಿಯಾಗಿ ಕೇಳಿಕೊಳ್ಳುತ್ತಾಳೆ. ಆದರೆ ವಿಷ್ಣುವು ಬಲಿಗೆ ಮಾತು ಕೊಟ್ಟಿರೋದ್ರಿಂದ ವಾಪಾಸ್ಸ್ ಬರೋದಿಲ್ಲ ಅಂತ ಹೇಳುತ್ತಾನೆ.
ಕೊನೆಗೆ ಲಕ್ಷ್ಮಿ ಒಂದು ಉಪಾಯ ಮಾಡುತ್ತಾಳೆ. ಲಕ್ಷ್ಮೀಯು ಸಾಮಾನ್ಯ ಸ್ತ್ರೀಯಂತೆ ವೇಷ ಮರೆಸಿಕೊಂಡು ಬಲಿಯ ಅಂತಃಪುರ ಸೇರಿಕೊಳ್ಳುತ್ತಾಳೆ. ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುತ್ತಾ ಬಲಿಯ ಮೆಚ್ಚುಗೆಗೆ ಪಾತ್ರಳಾಗುತ್ತಾಳೆ. ಒಂದು ಶ್ರಾವಣದ ದಿನ ಲಕ್ಷ್ಮೀಯೂ ಬಲಿಗೆ ಮಂಗಳಕರ ರಾಕಿಯನ್ನು ಕಟ್ಟುತ್ತಾಳೆ. ಲಕ್ಷ್ಮೀಯನ್ನು ಸಹೋದರಿಯಾಗಿ ಸ್ವೀಕರಿಸಿದ ಬಲಿಯೂ ನಿನಗೇನು ಬೇಕು ಎಂದು ಕೇಳುತ್ತಾನೆ.
ಆಗ ಲಕ್ಷ್ಮೀ ತನ್ನ ನಿಜ ರೂಪದಲ್ಲಿ ಅವತರಿಸಿ ವಿಷ್ಣವನ್ನು ಮತ್ತೆ ವೈಕುಂಟಕ್ಕೆ ಕಳುಹಿಸಿ ಕೊಡುವಂತೆ ಬಲಿಯಲ್ಲಿ ಕೇಳಿಕೊಳ್ಳುತ್ತಾಳೆ. ಈ ಸಂದರ್ಭದಲ್ಲಿ ತ್ರಿಮೂರ್ತಿಗಳು ತಲಾ ನಾಲ್ಕು ತಿಂಗಳ ಕಾಲ ಬಲಿಯ ಸಾಮ್ರಾಜ್ಯ ಕಾಯುವುದು ಅನ್ನುವ ಕರಾರಿನ ಮೇಲೆ ವಿಷ್ಣುವನ್ನು ಲಕ್ಷ್ಮಿಯೊಡನೆ ವೈಕುಂಠಕ್ಕೆ ಮರಳಿ ಬರುತ್ತಾನೆ.
ಅಲ್ಲಿಂದ ಮುಂದೆ ಪ್ರತಿ ಶ್ರಾವಣ ಹುಣ್ಣಿಮೆಯಂದು ಅಣ್ಣ-ತಂಗಿಯ ಹಬ್ಬವಾದ ರಕ್ಷಾಬಂಧನವನ್ನು ಆಚರಿಸಿಕೊಂಡು ಬರಲಾಗ್ತಿದೆ.
ಇಂದ್ರನ ರಕ್ಷಣೆಗೆ ಇಂದ್ರಾಣಿ ಮಾಡಿದ್ದೇನು?
ಇಂದ್ರಾಣಿಯೂ ಕೂಡ ತನ್ನ ಪತಿಯ ರಕ್ಷಣೆಗೆ ಒಂದು ದಾರವನ್ನು ಕಟ್ಟಿದ್ದಳಂತೆ. ರಾಕ್ಷಸರು ಮತ್ತು ದೇವತೆಗಳ ನಡುವಿನ ಯುದ್ಧದ ಸಮಯದಲ್ಲಿ ಇಂದ್ರಾಣಿ ತನ್ನ ಪತಿಯ ರಕ್ಷಣೆ ಕೋರಿ ಶ್ರೀಕೃಷ್ಣನ ಬಳಿಗೆ ಹೋಗುತ್ತಾಳೆ.
ಮೊದಲ ರಾಖಿಯನ್ನು ಇಂದ್ರಾಣಿ ತನ್ನ ಪತಿ ಇಂದ್ರನಿಗೆ ಕಟ್ಟಿದ್ದು ಗೊತ್ತಾ? ರಾಕ್ಷಸರು ಮತ್ತು ದೇವತೆಗಳ ನಡುವಿನ ಯುದ್ಧದ ಸಮಯದಲ್ಲಿ, ಇಂದ್ರಾಣಿ (ಶಚಿ) ತನ್ನ ಪತಿಗೆ ರಕ್ಷಣೆ ಕೋರಿ ಶ್ರೀಕೃಷ್ಣನ ಬಳಿಗೆ ಹೋದಳು.
ಶ್ರೀಕೃಷ್ಣನು ಅವಳಿಗೆ ಇಂದ್ರನ ಮಣಿಕಟ್ಟಿಗೆ ಕಟ್ಟಲು ಪವಿತ್ರ ದಾರವನ್ನು ಕೊಟ್ಟನು. ಈ ಕಥೆಯು ಪವಿತ್ರ ದಾರದ ಮಹತ್ವ ಏನು ಅನ್ನೋದನ್ನು ತಿಳಿಸಿಕೊಡುತ್ತದೆ. ಈ ಕಥೆಯು ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯದ ಬಗ್ಗೆ ಹೇಳುವುದಿಲ್ಲ. ಆದರೆ ಪವಿತ್ರ ದಾರದ ಶಕ್ತಿ ಮತ್ತು ಮಹತ್ವದ ಬಗ್ಗೆ ತಿಳಿಸಿಕೊಡುತ್ತದೆ.



Click it and Unblock the Notifications