Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ರಾಜೀವ್ ಗಾಂಧಿ ಹತ್ಯೆ ಅಪರಾಧಿ ಸಂತನ್ ಸಾವು..! ಯಾರು ಈ ಸಂತನ್..! ರಾಜೀವ್ ಗಾಂಧಿ ಹತ್ಯೆಯಾಗಿದ್ದು ಏಕೆ..?
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ನಡೆದಿರುವುದು ಹೇಗೆ ಎಂಬುದು ನಿಮಗೆಲ್ಲಾ ಗೊತ್ತೆ ಇದೆ. ಆದರೆ ಅವರ ಹತ್ತೆಯಲ್ಲಿ ಆಪರಾಧಿಗಳಾಗಿದ್ದ 6 ಮಂದಿ ಜೈಲಿನಿಂದ ಬಿಡುಗಡೆಯಾಗಿದ್ದು ಸುಪ್ರೀಂಕೋರ್ಟ್ ಅವರ ಜೀವಾವಧಿ ಶಿಕ್ಷೆ ಕಡಿತ ಮಾಡಿ ಬಿಡುಗಡೆಯ ತೀರ್ಪು ನೀಡಿತ್ತು. ಇದೀಗ 6 ಮಂದಿ ಆರೋಪಿಗಳ ಪೈಕಿ ಓರ್ವ ಚೆನ್ನೈ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಸಂತನ್ ಎಂಬ ಅಪರಾಧಿಗೆ ಸುದೀರ್ಘ 30 ವರ್ಷಗಳ ಶಿಕ್ಷೆಯ ಬಳಿಕ ಹೊರಬಂದಿದ್ದ, ಆದರೆ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಆತ ಆಸ್ಪತ್ರೆಗೆ ಸೇರಿದ್ದ, ಆದರೆ ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಅಚ್ಚರಿ ಎಂದರೆ ಆತ ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗಲೇ ಮೃತಪಟ್ಟಿದ್ದಾನೆ.

ಸಂತನ್ ತಿರುಚ್ಚಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು, ಇಲ್ಲಿಯೇ ಆತನಿಗೆ ಲಿವರ್ ಸಮಸ್ಯೆ ಎದುರಾಗಿತ್ತು. ಆದರೆ ಇಂದು ಅವರು ಮೃತಪಟ್ಟಿದ್ದಾರೆ.
ಯಾರು ಈ ಸಂತನ್?
ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಪ್ರಮುಖ ಅಪರಾಧಿಗಳಲ್ಲಿ ಸಂತನ್ ಸಹ ಒಬ್ಬನಾಗಿದ್ದ ಈತ ಎಲ್‌ಟಿಟಿ ಸೇನೆಯ ಸದಸ್ಯನಾಗಿದ್ದ. ರಾಜೀವ್ ಗಾಂಧಿ ಹತ್ಯೆಯಲ್ಲಿ ಈತ ಮಾಹಿತಿದಾರನಾಗಿ ಕೆಲಸ ಮಾಡಿದ್ದ ಎನ್ನಲಾಗಿದೆ. ಹೀಗಾಗಿ ಈತನೂ ರಾಜೀವ್ ಗಾಂಧಿ ಹತ್ಯೆಗೆ ಪ್ರಮುಖ ಕಾರಣ ಎಂದು ಕೋರ್ಟ್ ತಿಳಿಸಿತ್ತು.
ರಾಜೀವ್ ಗಾಂಧಿ ಹತ್ಯೆಯಾಗಿದ್ದು ಏಕೆ.?
ಇಂದಿರಾ ಗಾಂಧಿ ನಂತರ ಅನಿವಾರ್ಯ ಕಾರಣದಿಂದ ರಾಜಕಾರಣಕ್ಕೆ ಬಂದಿದ್ದ ರಾಜೀವ್ ಗಾಂಧಿ, ಪ್ರಧಾನಿಯೂ ಆದರೂ. ಆದರೆ ಅವರ ಒಂದೇ ಒಂದು ನಿರ್ಧಾರ ಅವರ ಹತ್ಯೆಗೆ ಕಾರಣವಾಗಿತ್ತು. ಶ್ರೀಲಂಕಾದಲ್ಲಿ ನಡೆಯುತ್ತಿದ್ದ ಅಂತರ್ಯುದ್ಧ ತಡೆಯಲು ಅವರು ಮುಂದಾಗಿದ್ದು ಅವರ ಹತ್ಯೆಗೆ ಕಾರಣವಾಯಿತು.
ಶ್ರೀಲಂಕಾದೊಳಗೆ ಭಾರತೀಯ ಸೇನೆ ನುಗ್ಗಿತ್ತು
ಶ್ರೀಲಂಕಾದಲ್ಲಿ ಎಲ್‌ಟಿಟಿ ಸೇನೆಯನ್ನು ನಿಗ್ರಹಿಸುವ ಸಲುವಾಗ ಭಾರತ ಶ್ರೀಲಂಕಕ್ಕೆ ನೆರವು ನೀಡಲು ಮುಂದಾಗಿತ್ತು. ಈ ಕಾರ್ಯಾಚರಣೆಯ ಅಂಗವಾಗಿ ಭಾರತೀಯ ಸೇನೆ ಶ್ರೀಲಂಕಾಗೆ ನುಗ್ಗಿತ್ತು. ಅಲ್ಲಿ ಎಲ್‌ಟಿಟಿ ಸೇನೆಯನ್ನು ಬಗ್ಗುಬಡಿದಿತ್ತು. ಇದು ಎಲ್‌ಟಿಟಿ ಕಣ್ಣು ಕೆಂಪಾಗಿಸಿತ್ತು.
ಹೀಗಾಗಿ ರಾಜೀವ್ ಗಾಂಧಿ ಹತ್ಯೆಗೆ ಅಂದೇ ನಿರ್ಧರಿಸಿದ್ದ ಎಲ್‌ಟಿಟಿ ವರ್ಷಗಳ ಕಾಲ ಇದಕ್ಕಾಗಿ ಯೋಜನೆ ರೂಪಿಸಿತ್ತು. ಇದಕ್ಕಾಗಿ ಮೊಟ್ಟ ಮೊದಲ ಬಾರಿಗೆ ಮಾನವ ಬಾಂಬ್ ಸ್ಪೋಟಿಸಲು ಮುಂದಾಗಿತ್ತು. ಅಲ್ಲದೆ ತರಬೇತಿ ನೀಡಿ ಒಂದು ತಂಡವನ್ನು ಸಿದ್ಧ ಮಾಡಿತ್ತು. ಈ ತಂಡದಲ್ಲಿ ಸಂತನ್, ನಳಿನಿ, ರಾಬರ್ಟ್ ಪಯಾಸ್, ಜಯಕುಮಾರ್, ಎ.ಜಿ ಪೆರಾರಿವಾಲನ್, ರವಿಚಂದ್ರನ್, ಧನು ಅಥವಾ ಕಲೈವಾಣಿ ರಾಜರತ್ನಂ ಎಂಬಾಕೆ ಇದ್ದ ಗುಂಪು ಅದಾಗಿತ್ತು.
ಚುನಾವಣಾ ಪ್ರಚಾರಕ್ಕೆ ಬಂದಾಗ ಬಾಂಬ್ ಸ್ಫೋಟ
ಮೇ 21, 1991ರಂದು ರಾಜೀವ್ ಗಾಂಧಿ ಚುನಾವಣಾ ಪ್ರಚಾರಕ್ಕೆಂದು ತಮಿಳುನಾಡಿನ ಪೆರಂಬರೂರಿನಲ್ಲಿ ಜನ ಸೇರಿದ್ದರು. ಕಾರಿನಿಂದ ಇಳಿದುಬಂದಿದ್ದ ರಾಜೀವ್ ಗಾಂಧಿ ಅವರಿಗೆ ಹೂಮಾಲೆ ಹಾಕಲು ಜನ ಸೇರಿದ್ದರು. ಈ ವೇಳೆ ಗುಂಪಿನಲ್ಲಿ ಬಂದಿದ್ದ ಧನು ಎಂಬಾಕೆ ಮಾನವ ಬಾಂಬ್ ಆಗಿದ್ದಳು. ಹತ್ತಿರ ಬಂದವಳೆ ಬಾಂಬ್ ಸ್ಪೋಟಿಸಿಕೊಂಡಿದ್ದಳು. ಈ ವೇಳೆ ರಾಜೀವ್ ಗಾಂಧಿ ಅವರ ದೇಹ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಘಟನೆಯಲ್ಲಿ ರಾಜೀವ್ ಗಾಂಧಿ ಸೇರಿ 14 ಮಂದಿ ಮೃತಪಟ್ಟರೆ ಸುಮಾರು 47 ಮಂದಿ ಗಾಯಗೊಂಡಿದ್ದರು.
ಇದಾಗಿ ವರ್ಷಗಳ ಬಳಿಕ ತಂಡದ ಎಲ್ಲರನ್ನು ಬಂಧಿಸಲಾಗಿ ಶಿಕ್ಷಯೂ ಆಯಿತು. ಆದರೆ 2022ರಲ್ಲಿ ಸುಪ್ರೀಂಕೋರ್ಟ್ ಈ ಆರೋಪಿಗಳನ್ನು ಬಿಡುಗಡೆ ಮಾಡಿತು. ರಾಬರ್ಟ್, ಜಯಕುಮಾರ್ ಪಜುಲ್ ಜೈಲಿನಿಂದ ಬಿಡುಗಡೆಯಾದರು. ಮುರುಗನ್, ಸಂತನ್ ವೆಲ್ಲೂರು ಜೈಲಿನಿಂದ ಬಿಡುಗಡೆಯಾದರು. ರವಿಚಂದ್ರನ್ ಮಧುರೈ ಜೈನಿಂದ ಬಿಡುಗಡೆಯಾದನು. ಪೆರಾರಿವಾಲನ್ ಸಹ ಇವರ ಜೊತೆ ಬಿಡುಗಡೆಯಾದನು.



Click it and Unblock the Notifications
