Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸ್ವಾತಿ ನಕ್ಷತ್ರ ಮಳೆ ನೀರಿನಲ್ಲಿದೆ ಔಷಧೀಯ ಗುಣಗಳು, ನಕ್ಷತ್ರ ಪ್ರಕಾರ ಮಳೆಯ ಲೆಕ್ಕಾಚಾರ
ನಮ್ಮ ಹಿರಿಯರು ನಕ್ಷತ್ರ ಹೇಳಿ ಮಳೆ ಬಗ್ಗೆ ಹೇಳುವುದನ್ನು ಕೇಳಿದ್ದೇವೆ. ಒಂದೊಂದು ಮಳೆಗೆ ಒಂದೊಂದು ವಿಶೇಷವಿದೆ ಎಂಬುವುದಾಗಿ ಹೇಳುತ್ತಾರೆ, ಯಾವ ನಕ್ಷತ್ರದಲ್ಲಿ ಮಳೆ ಬಂದರೆ ಈ ವರ್ಷ ಮಳೆ ಬರಲ್ಲ ಎಂದು ಗೊತ್ತಿರುತ್ತದೆ, ಯಾವ ಮಳೆಯಲ್ಲಿ ಎಂಥ ಶಕ್ತಿಯಿದೆ ಎಂಬುವುದು ಗೊತ್ತಿರುತ್ತದೆ.
ಆದರೆ ಅಂಥ ಅದ್ಭುತ ಜ್ಞಾನ ಈಗೀನ ಪೀಳಿಗೆಯಲ್ಲಿ ಕಡಿಮೆಯಾಗುತ್ತಿದೆ, ನಾವೆಲ್ಲಾ 100ಕ್ಕೆ 99, 100 ಅಂಕ ಗಳಿಸುವುದರಲ್ಲಿ ನಮ್ಮ ಗಮನಹರಿಸುತ್ತಿದ್ದೇವೆ, ದೊಡ್ಡ-ದೊಡ್ಡ ಕೆಲಸದ ಕಡೆಗೆ ಗಮನಹರಿಸುತ್ತಿದ್ದೇವೆ, ಆದರೆ ಈ ಮಳೆ, ಬೆಳೆ ಇವುಗಳ ಬಗ್ಗೆ ನಮಗೆ ಅಷ್ಟಾಗಿ ಗೊತ್ತಾಗುತ್ತಿಲ್ಲ, ಆದರೆ ಇಂಥ ಜ್ಞಾನ ಗಳಿಸುವುದು ಕೂಡ ಮುಖ್ಯ ನೋಡಿ.

ಈಗ ಮಳೆ ಸುರಿಯುವಾಗ ಅಯ್ಯೋ ಏಕೆ ಈ ಮಳೆ ಬರ್ತಾ ಇದೆ ಎಂದು ಹೇಳುವವರು ಇದ್ದಾರೆ, ಆದರೆ ಈಗ ಸುರಿದಿದ್ದು ಸ್ವಾತಿ ಮಳೆಯಂತೆ, ಈ ಸ್ವಾತಿ ಮಳೆಗೆ ಮೊದಲೆಲ್ಲಾ ಹಿರಿಯರು ಕಾಯುತ್ತಿದ್ದರು, ಏಕೆಂದರೆ ಈ ಸ್ವಾತಿ ಮಳೆಗೆ ಅಂಥ ಶಕ್ತಿ ಇದೆಯಂತೆ. ಈ ಮಳೆ ನೀರನ್ನು ಸಂಗ್ರಹಿಸಿ ಆ ನೀರು ಕುಡಿಯುವುದರಿಂದ ರೋಗ ರುಜಿನಗಳು ದೂರಾಗುವುದು ಎಂದು ಹೇಳಲಾಗುತ್ತದೆ. ಈ ಸ್ವಾತಿ ಮಳೆ ನೀರು ಸಮುದ್ರ ಚಿಪ್ಪುವಿನೊಳಗಡೆ ಬಿದ್ದರೆ ಅದು ಮುತ್ತಾಗುವುದು, ಗಿಡಗಳಿಗೆ ಬಿದ್ದರೆ ತುಂಬಾ ಒಳ್ಳೆಯದು ಹಾಗಾಗಿ ಈ ಸ್ವಾತಿ ಮಳೆಯನ್ನು ನಿರೀಕ್ಷೆ ಮಾಡುತ್ತಾರೆ.
ಸ್ವಾತಿ ಮಳೆ ಬಿದ್ದರೆ ಆ ವರ್ಷ ನೀರಿಗೆ ಅಭಾವವಿರಲ್ಲ ಎಂದು ಹೇಳಲಾಗುವುದು. ನೀರಿನ ಅಭಾವ ಉಂಟಾದರೆ ಬರಗಾಲ ಎಂಥ ದುಃಸ್ಥಿತಿ ಉಂಟು ಮಾಡುತ್ತದೆ ಎಂಬ ಅರಿವು ನಮಗೆಲ್ಲಾ ಇದೆ, ಆದರೆ ಈ ಸ್ವಾತಿ ಮಳೆ ಬಂದರೆ ನೀರಿನ ಅಭಾವ ಇರಲ್ಲ ಎಂದು ಹೇಳಲಾಗುವುದು.
ಈ ಸ್ವಾತಿ ಮಳೆ ಬಗ್ಗೆ ಅಜಯ್ ಕುಮಾರ್ ಶತ್ಮಾ ಎಂಬುವವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಮಳೆಯ ವಿಶೇಷತೆ ಬಗ್ಗೆ ಒಬ್ಬ ಮಹಿಳೆ ವಿವರಿಸುತ್ತಿರುವ ಅದ್ಭುತವಾದ ವೀಡಿಯೋ ಶೇರ್ ಮಾಡಿದ್ದಾರೆ.
ಮಲೆನಾಡಿನಲ್ಲಿ ಸ್ವಾತಿ ಮಳೆ ನೀರು ಸಂಗ್ರಹಿಸಿ ಹಾಲಿಗೆ ಹೆಪ್ಪು ಹಾಕಲಾಗುವುದು
ಮಲೆನಾಡಿನಲ್ಲಿ ಇದನ್ನು ಒಂದು ಸಂಪ್ರದಾಯದ ರೀತಿ ಮಾಡುತ್ತಾರೆ. ಇದರಿಂದ ಹಾಲು ಹಾಲು ಮೊಸರಾಗುವ ಜೈವಿಕ ಕ್ರಿಯೆಯನ್ನು ಹೊಸದಾಗಿ ಪ್ರಾರಂಭಿಸಿ ಗುಣಮಟ್ಟದ ಮೊಸರನ್ನು ತಯಾರಿಸಲಾಗುವುದು. ಇಲ್ಲದಿದ್ದರೆ ಹಾಲಿಗೆ ಸ್ವಲ್ಪ ಮೊಸರು ಅಥವಾ ಮಜ್ಜಿಗೆ ಹಾಕಿ ಹೆಪ್ಪು ಮಾಡುತ್ತಾರೆ. ಆದರೆ ಸ್ವಾತಿ ನಕ್ಷತ್ರ ಮಳೆ ಬಿದ್ದಾಗ ಹಾಲಿಗೆ ಈ ಸ್ವಾತಿ ಮಳೆ ನೀರು ಹಾಕಿ ಹೆಪ್ಪು ಹಾಕಲಾಗುವುದು.
ಇದೇ ಸಮಯದಲ್ಲಿ ಬೀರುವಿನಲ್ಲಿ ಮಡಚಿಟ್ಟ ದುಬಾರಿ ಬಟ್ಟೆ ಬಿಸಿಲಿಗೆ ಹಾಕುತ್ತಾರೆ
ಸ್ವಾತ ನಕ್ಷತ್ರ ಬಿಸಿಲಿಗೂ ಅಷ್ಟು ಶಕ್ತಿಯಿದೆ ಎಂದು ಹೇಳಲಾಗುವುದು. ಈ ಸಮಯದಲ್ಲಿ ರೇಷ್ಮೆ ಸೀರೆಗಳನ್ನು ಬಿಸಿಲಿಗೆ ಒಣ ಹಾಕಿ ತೆಗೆದು ಇಡುವುದರಿಂದ ಆ ಸೀರೆಗಳು ನೂಲು ಬಿಡುವುದು, ಹುಳಗಳು ತಿಂದು ಹಾಳಾಗುವುದು ಆಗಲ್ಲ ಅಂತಾರೆ.
ನಕ್ಷತ್ರ ಹೇಳಿ ಮಳೆಗಾಲ ಹೇಳಲಾಗುವುದು
ಅಶ್ವನಿ ನಕ್ಷತ್ರದಿಂದ ವಿಶಾಖ ನಕ್ಷತ್ರದವರೆಗೆ ಮಳೆಗಾಲ ಎಂದು ಹೇಳಲಾಗುವುದು, ಏಪ್ರಿಲ್ 13ಕ್ಕೆ ಅಶ್ವಿನಿ ನಕ್ಷತ್ರಕ್ಕೆ ಮಳೆ ಬರುತ್ತದೆ, ಈ ಸಮಯದಲ್ಲಿ ಸಾಮಾನ್ಯವಾಗಿ ಮಳೆ ಬರುತ್ತದೆ, ಕೃಷಿ ಚಟುವಟಿಕೆಗಳಿಗೆ ಈ ಸಮಯದಿಂದ ಶುರು ಮಾಡುತ್ತಾರೆ. ಭರಣಿ ನಕ್ಷತ್ರ ಏಪ್ರಿಲ್ 27ಕ್ಕೆ, ಈ ಸಮಯದಿಂದ ಮಳೆ ಶುರುವಾಗುವುದು, ಕೃತಿಕಾ ನಕ್ಷತ್ರಮೇ 11ಕ್ಕೆ ಅದಾದ ಬಳಿಕ ರೋಹಿಣಿ ನಕ್ಷತ್ರ ಮೇ 24ಕ್ಕೆ ಶುರುವಾಗುವುದು. ಜೂನ್ 21ರಿಂದ ಆರ್ಧ್ರಾ ನಕ್ಷತ್ರ, ಜುಲೈ ಪುನರ್ವಸು ನಕ್ಷತ್ರ, ಜುಲೈ 19 ಪುಷ್ಯಾ ನಕ್ಷತ್ರ, ಆಗಸ್ಟ್ 2ಕ್ಕೆ ಅಶ್ಲೇಷಾ ನಕ್ಷತ್ರ ಶುರು, ಜುಲೈ 16ರಿಂದ ಮಘಾ ನಕ್ಷತ್ರ ಪ್ರಾರಂಭ, ಜುಲೈ 30 ಹಸ್ತಾ , ಅಕ್ಟೋಬರ್ 10ರಿಂದ ಚಿತ್ರಾ, ಅಕ್ಟೋಬರ್ 23ರಿಂದ ಸ್ವಾತಿ ನಕ್ಷತ್ರ ನವೆಂಬರ್ 1ರಿಂದ ವಿಶಾಖ ನಕ್ಷತ್ರ ಇಲ್ಲಿಗೆ ಮಳೆಗಾಲ ಮುಗಿದು ಚಳಿಗಾಲ ಶುರು ಎಂಬ ಲೆಕ್ಕಾಚಾರ.



Click it and Unblock the Notifications
