Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಸೌದಿಯಲ್ಲಿ ಮಳೆ, ಪ್ರವಾಹ...ಮರುಭೂಮಿ ಮರೆಯಾಗಿ ನಳನಳಿಸುವ ಹಸಿರು...! ಇದು ಹೇಗೆ ಸಾಧ್ಯ ಗೊತ್ತಾ?
ಇಂದು ನಮ್ಮ ವಿಶ್ವದ ಎದುರಿಸುತ್ತಿರುವ ಸಮಸ್ಯೆಗಳ ಪೈಕಿ ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ವೈಪರಿತ್ಯಗಳು ಸಹ ಒಂದಾಗಿವೆ. ವಿಶ್ವದ ಹಲವು ಭಾಗದಲ್ಲಿ ತಾಪಮಾನ ಏರಿಕೆಯಿಂದ ಜನ ಹೈರಾಣಾಗಿದ್ದಾರೆ. ಇಲ್ಲವೆ ಅತಿವೃಷ್ಟಿ ಅನಾವೃಷ್ಟಿಗೆ ಒಳಗಾಗುವುದನ್ನು ನಾವು ನೋಡುತ್ತಿದ್ದೇವೆ. ನೈಸರ್ಗಿಕ ಸವಾಲುಗಳಿಂದು ಎಷ್ಟು ಪ್ರಮಾಣದಲ್ಲಿ ಪರಿಸರ ಸೇರಿದಂತೆ ಪ್ರಾಣಿ ಸಂಕುಲ ಹಾಗೂ ಮಾನವರಿಗೂ ಹಾನಿಯುಂಟು ಮಾಡುತ್ತಿದೆ.
ಮಳೆಯಾಗಬೇಕಿದ್ದ ಕಡೆ ಮಳೆಯಾಗುವುದಿಲ್ಲ, ಹಿಮಪಾತ ಸಂಭವಿಸುತ್ತಿದ್ದ ಕಡೆಗಳಲ್ಲಿ ಹಿಮವೇ ಮಾಯವಾಗಿದೆ, ಹಿಮಗಳಿಂದ ತುಂಬಿರುವ ಅಟ್ಲಾಂಟಿಕದಲ್ಲಿ ಹಿಮ ಕರಗಿ ನೀರಾಗಿ ಹರಿಯುತ್ತಿದೆ. ಇದು ಸಮುದ್ರದ ನೀರಿನ ಮಟ್ಟ ಏರಿಕೆಯಾಗಿ ಮಹಾ ನಗರಗಳು ಮುಳುಗುವ ಭೀತಿಯಲ್ಲಿವೆ. ಅಷ್ಟೇ ಅಲ್ಲ ಬಿಸಿಲಿನಿಂದ ಮರಳುಭೂಮಿಯಾಗಿದ್ದ ಜಾಗದಲ್ಲಿ ಮಳೆಯಾಗುತ್ತಿದೆ, ಪ್ರವಾಹ ಸಂಭವಿಸುತ್ತಿವೆ. ಹೀಗೆ ಹೇಳುತ್ತಾ ಹೋದರೆ ಪ್ರಕೃತಿಯ ವಿಚಿತ್ರಗಳು ಕಣ್ಣ ಮುಂದೆಯೇ ಬರುತ್ತವೆ.

ಕೆಲ ತಿಂಗಳ ಹಿಂದೆ ಸಾಮಾನ್ಯವಾಗಿ ಆರಂಭವಾಗಬೇಕಿದ್ದ ಮಂಜು ಜಮ್ಮು ಕಾಶ್ಮೀರದಿಂದ ಮಾಯವಾಗಿತ್ತು. ಹಿಮ ಬೀಳದೆ ಅಲ್ಲಿನ ಭೂಮಿ ಬರಡಂತೆ ಕಂಡುಬಂದಿತ್ತು. ಆದರೆ ಈಗ ಅಲ್ಲಿ ಮಂಜು ಬೀಳಲು ಆರಂಭವಾಗಿದೆ. ಆದರೆ ಮರುಭೂಮಿ ನಾಡು ಸೌದಿ ಅರೇಬಿಯಾದಲ್ಲಿ ಬಂಜರು ಭೂಮಿ ಈಗ ದಟ್ಟ ಹುಲ್ಲುಗಾವಲು ಆಗುತ್ತಿರುವುದನ್ನು ನಾವು ನೋಡಬಹುದು.
ಹಾಗಾದ್ರೆ ಈ ಮರುಭೂಮಿಯಲ್ಲಿ ಹಸಿರ ಸಿರಿ ಅರಳಿಸಲು ಸೌದಿ ಅರೇಬಿಯಾ ಮಾಡಿದ್ದೇನು?
ಸೌದಿ ಅರೇಬಿಯಾ ಕೇವಲ ಮರಳುಗಾಡು ಹೊಂದಿರುವ ಪ್ರದೇಶ. ಅಲ್ಲಿ ತೈಲ ಹೊರತುಪಡಿಸಿ ಬೇರೇನು ಸಿಗುವುದಿಲ್ಲ. ಬೆಳೆಗಳು, ಬೇಳೆ ಕಾಳು, ಮಸಾಲ ಸೇರಿ ಪ್ರತಿಯೊಂದು ವಸ್ತುವನ್ನೂ ಆಮದು ಮಾಡಿಕೊಳ್ಳುವ ದೇಶ. ಆದ್ರೆ ಅದೇ ದೇಶ ಇಡೀ ಮರಳುಗಾಡನ್ನು ದಟ್ಟ ಅರಣ್ಯವನ್ನಾಗಿ ಮಾಡಲು ಪಣತೊಟ್ಟಿದೆ.
2030ರ ವೇಳೆಗೆ ಸೌದಿ ಸರ್ಕಾರವು ಬರೋಬ್ಬರಿ 450 ಮಿಲಿಯನ್ ಮರಗಳನ್ನು ನೆಡುವ ಗುರಿಯನ್ನು ಹೊಂದಿದೆ. 2021ರ ಅಂತ್ಯದ ವೇಳೆಗೆ, ಸುಮಾರು 10 ಮಿಲಿಯನ್ ಮರಗಳನ್ನು ಈಗಾಗಲೇ ನೆಡಲಾಗಿದೆ ಎಂದು ವರದಿಗಳು ಹೇಳುತ್ತವೆ. ಇನ್ನು ಸ್ಯಾಟಲೈಟ್ ಮೂಲಕ ತೆಗೆದ ಚಿತ್ರಗಳು ಸಹ ಮೊದಲಿಗಿಂತ ಸೌದಿ ಅರೇಬಿಯಾ ಹಸಿರಾಗುತ್ತಿರುವುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಅಚ್ಚರಿ ಎಂದರೆ ಸೌದಿ ಒಟ್ಟಾರೆ 2.7 ಮಿಲಿಯನ್ ಹೆಕ್ಟೇರ್ ಕಾಡು ಪ್ರದೇಶ ಹೊಂದಿದೆ.
ಇಷ್ಟೇ ಅಲ್ಲ ಸ್ವಯಂಸೇವಕರ ಸಹಾಯದಿಂದಾಗಿ ಒಟ್ಟು 1 ಲಕ್ಷಕ್ಕೂ ಅಧಿಕ ಹಣ್ಣಿನ ಬೀಜಗಳು ಹಾಗೂ ವಿವಿಧ ರೀತಿಯ ಬೀಜಗಳನ್ನು ಹಾಕಿ ಅವುಗಳ ಪಾಲನೆಗೆ ಮುಂದಾಗಿದೆ. ಹೀಗಾಗಿ ಇತ್ತೀಚಿಗೆ ಸೌದಿ ಅರೇಬಿಯಾದಲ್ಲಿ ಆಲಿಕಲ್ಲು ಸಹಿತ ಮಳೆಯಾಗುತ್ತಿದೆ. ಈ ಮಳೆ ಇತ್ತೀಚಿನ ದಿನಗಳಲ್ಲಿ ಪ್ರವಾಹಕ್ಕೆ ಕಾರಣವಾಗಿದೆ. ಇದು ಮರಳುಗಾಡನ್ನು ಹುಲ್ಲುಗಾವಲಾಗಿ ಈಗಾಗಲೇ ಪರಿವರ್ತಿಸಿದೆ.
ಕಳೆದ ಏಪ್ರಿಲ್ 14ರಂದು ಸೌದಿಯಲ್ಲಿ ಭಾರೀ ಮಳೆ ಸುರಿದಿದೆ. ಆಲಿಕಲ್ಲು ಸಹಿತ ಭೀಕರ ಮಳೆಯಾಗಿದ್ದು, ರಸ್ತೆಗಳು, ಬೀದಿಗಳು ಮರಳು ಕಾಣದಿರುಷ್ಟು ಆಲಿಕಲ್ಲುಗಳಿಂದ ತುಂಬಿಹೋಗಿತ್ತು. ಭೀಕರ ಬೇಸಿಗೆಯಲ್ಲಿ ಅಲ್ಲಿ ಮಳೆಯಾಗುತ್ತಿರುವುದು ಅಲ್ಲಿನ ನಿವಾಸಿಗಳಲ್ಲಿ ಹೊಸ ಹುರುಪು ತಂದಿದೆ.
ಈಗ ಸೌದಿ ಅರೇಬಿಯಾದಲ್ಲಿ ಸುರಿದ ಭಾರೀ ಮಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಣ್ಣು ಹಾಯಿಸಿದ ದೂರವೂ ಆಲಿಕಲ್ಲು ಸಹಿತ ಮಳೆಯಾಗುತ್ತಿರುವುದು ನೋಡಬಹುದು. ರಸ್ತೆಯಲ್ಲಿ ನೀರಿನಂತೆ ಆಲಿಕಲ್ಲು ತೇಳಿ ಬರುತ್ತಿವೆ. ಎಲ್ಲಾ ಕಡೆಗಳಲ್ಲಿ ಮರಳು ಇರುವ ಕಾರಣ ನೀರು ಹೀರಿಕೊಳ್ಳಲು ಸಹಾಯಕವಾಗಿದೆ. ಹೀಗಾಗಿ ಅಲ್ಲಿನ ನೆಲದಲ್ಲಿ ಈಗ ಹಸಿರು ಚಿಗುರು ಒಡೆಯುತ್ತಿದೆ. ಮರುಳುಗಾಡು ಮರೆಯಾಗಿ ಹಸಿರು ಕಂಗೊಳಿಸುವ ಕಾಲ ಸನ್ನಿಹಿತವಾಗಿದೆ.



Click it and Unblock the Notifications
