Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ರಾಹು ಗೋಚಾರ ಫಲ 2023: ಅಕ್ಟೋಬರ್‌ನಿಂದ ದ್ವಾದಶ ರಾಶಿಗಳಲ್ಲಿ ಈ ಬದಲಾವಣೆಯಾಗಲಿದೆ
ಶನಿಯ ಬಳಿಕ ನಿಧಾನವಾಗಿ ಚಲಿಸುವ ಗ್ರಹವಾದ ರಾಹು ಇದೀಗ ಮೇಷ ರಾಶಿಯಲ್ಲಿದೆ, ಅಕ್ಟೋಬರ್ 30ಕ್ಕೆ ಮೇಷ ರಾಶಿಯನ್ನು ಬಿಟ್ಟು ಮೀನ ರಾಶಿಯನ್ನು ಪ್ರವೇಶ ಮಾಡುತ್ತದೆ, ಏಕೆಂದರೆ ರಾಹು ಹಿಮ್ಮುಖವಾಗಿ ಚಲಿಸುವ ಗ್ರಹವಾಗಿದೆ. ರಾಹು ಮೀನ ರಾಶಿಗೆ ಬಂದಾಗ ಅದರ ಪ್ರಭಾವ 12 ರಾಶಿಗಳ ಮೇಲೆ ಹೇಗಿರಲಿದೆ ಎಂದು ನೋಡೋಣ ಬನ್ನಿ:

ಮೇಷ ರಾಶಿ
ರಾಹು ಸಂಕ್ರಮಣ 2023 ರ ಪ್ರಕಾರ, ಅಕ್ಟೋಬರ್ 30 ರಂದು, ರಾಹು ನಿಮ್ಮ ಹನ್ನೆರಡನೇ ಮನೆಗೆ ಪ್ರವೇಶಿಸುತ್ತಾನೆ , ರಾಹು ನಿಮಗೆ ವಿದೇಶ ಪ್ರಯಾಣದ ಅವಕಾಶಗಳನ್ನು ಸೃಷ್ಟಿಸುತ್ತಾನೆ. ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸುವಿರಿ. ನಿಮ್ಮ ಖರ್ಚುಗಳು ಹೆಚ್ಚಾಗಲಿದೆ, ಆದರೆ ಈ ಸಮಯವು ನಿಮಗೆ ಅನುಕೂಲಕರವಾಗಿರುತ್ತದೆ.
ಪರಿಹಾರ: ನೀವು ಶನಿವಾರದಂದು ಕಪ್ಪು ಎಳ್ಳನ್ನು ದಾನ ಮಾಡಬೇಕು.
ವೃಷಭ ರಾಶಿ
ಅಕ್ಟೋಬರ್ 30 ರಂದು ರಾಹುವಿನ ಸಂಕ್ರಮಣವು ನಿಮ್ಮ ರಾಶಿಚಕ್ರದ ಹನ್ನೊಂದನೇ ಮನೆಯಲ್ಲಿ ನಡೆಯಲಿದೆ. ಇದು ನಿಮಗೆ ತುಂಬಾ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಈ ಅವಧಿಯಲ್ಲಿನಿಮ್ಮ ಮಹತ್ವಾಕಾಂಕ್ಷೆಗಳು ಈಡೇರುತ್ತವೆ. ತುಂಬಾ ಸಮಯದಿಂದ ಬಯಸುತ್ತಿರುವ ಆಸೆಗಳು ಈಡೇರುತ್ತವೆ. ನಿಮ್ಮ ಯೋಜನೆಗಳಲ್ಲಿ ಯಶಸ್ಸು ಸಾಧಿಸುತ್ತೀರಿ. ಆರ್ಥಿಕವಾಗಿ ಉತ್ತಮವಾಗಿದೆ. ನೀವು ರಾಜಕೀಯ ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯುತ್ತೀರಿ.
ಪರಿಹಾರ: ರಾಹು ಗ್ರಹದ ಅನುಗ್ರಹವನ್ನು ಪಡೆಯಲು ನೀವು ರಾಹು ಮಂತ್ರಗಳನ್ನು ಪಠಿಸಬೇಕು.
ಮಿಥುನ ರಾಶಿ
ಅಕ್ಟೋಬರ್ 30 ರಂದು, ರಾಹು ನಿಮ್ಮ ಹತ್ತನೇ ಮನೆಗೆ ಸಾಗಲಿದೆ. ನಿಮ್ಮ ಕೆಲಸದ ಸ್ಥಳದಲ್ಲಿ ಕೆಲವು ಬದಲಾವಣೆಗಳ ಸಾಧ್ಯತೆಗಳಿವೆ ಆದರೆ ನಿಮ್ಮ ಕಠಿಣ ಪರಿಶ್ರಮದಿಂದಾಗಿ ನೂವು ಉನ್ನತ ಸ್ಥಾನ ಪಡೆಯುತ್ತೀರಿ, ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ನೀವು ಮೆಚ್ಚುಗೆ ಪಡೆಯುತ್ತೀರಿ. ಕೌಟುಂಬಿಕ ಜೀವನದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಏಕೆಂದರೆ ನಿಮ್ಮ ಎಲ್ಲಾ ಗಮನವು ನಿಮ್ಮ ಕೆಲಸದ ಮೇಲೆ ಇರುತ್ತದೆ , ಕುಟುಂಬದ ಕಡೆಗೂ ಗಮನಹರಿಸಿ.
ಪರಿಹಾರ: ಬುಧವಾರದಂದು ಹಸುವಿಗೆ ಮೇವು ತಿನ್ನಿಸಿ.
ಕರ್ಕ ರಾಶಿ
ಅಕ್ಟೋಬರ್ 30 ರಂದು, ರಾಹು ನಿಮ್ಮ ರಾಶಿಯ ಒಂಬತ್ತನೇ ಮನೆಗೆ ಬರಲಿದೆ. ರಾಹು ಕೃಪೆಯಿಂದ ದೂರ ಪ್ರಯಾಣದ ಅವಕಾಶವಿರುತ್ತದೆ. ನೀವು ವಿದೇಶಕ್ಕೆ ಹೋಗುವ ಸಾಧ್ಯತೆಗಳು ಅಧಿಕವಿದೆ, ನೀವು ಈ ದಿಕ್ಕಿನಲ್ಲಿ ಪ್ರಯತ್ನಗಳನ್ನು ಮಾಡಿದ್ದರೆ, ಅದು ನಿಮಗೆ ಯಶಸ್ಸನ್ನು ತರುತ್ತದೆ, ಆದರೆ ಈ ಸಮಯದಲ್ಲಿ ನಿಮ್ಮ ತಂದೆಯೊಂದಿಗಿನ ನಿಮ್ಮ ಸಂಬಂಧವು ಹದಗೆಡಬಹುದು, ಅವರ ಆರೋಗ್ಯವೂ ಹದಗೆಡಬಹುದು. ಅವರ ಆರೋಗ್ಯದ ಕಡೆಗೆ ಗಮನಹರಿಸಿ.
ಪರಿಹಾರ: ಬೀದಿ ನಾಯಿಗಳಿಗೆ ಆಹಾರ ನೀಡಿ
ಸಿಂಹ ರಾಶಿ
ಅಕ್ಟೋಬರ್ 30 ರಂದು, ರಾಹು ಸಿಂಹ ರಾಶಿಯಲ್ಲಿ ಎಂಟನೇ ಮನೆಗೆ ಪ್ರವೇಶಿಸುತ್ತಾನೆ. ಈ ಸಮಯವು ನಿಮಗೆ ಆರೋಗ್ಯ ಸಮಸ್ಯೆ ಉಂಟು ಮಾಡಬಹುದು. ನಿಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ. ಬೇರೆಯವರ ವಾಹನ ಓಡಿಸಬೇಡಿ. ಚಾಲನೆ ಮಾಡುವಾಗ ಜಾಗರೂಕರಾಗಿರಿ, ಹಣವನ್ನು ಹೂಡಿಕೆ ಮಾಡುವ ಮೊದಲು ಎರಡು ಬಾರಿ ಯೋಚಿಸಿ, ಈ ಅವಧಿಯಲ್ಲಿ ಹಣ ಹೂಡಿಕೆ ಮಾಡಿದರೆ ನಷ್ಟವಾಗಬಹುದು. ಈ ಅವಧಿಯಲ್ಲಿ ಯಾರಿಗೂ ಹಣವನ್ನು ಸಾಲ ನೀಡಬೇಡಿ.
ಪರಿಹಾರ: ನಿಮ್ಮ ಜೀವನದಲ್ಲಿ ನೀವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಭಾನುವಾರದಂದು ರುದ್ರಾಭಿಷೇಕ ಮಾಡಿ.
ಕನ್ಯಾ ರಾಶಿ
ರಾಹು ಸಂಕ್ರಮಣ 2023 ರ ಪ್ರಕಾರ, ಅಕ್ಟೋಬರ್ 30 ರಂದು, ರಾಹು ಕನ್ಯಾ ರಾಶಿಯ ಏಳನೇ ಮನೆಗೆ ಪ್ರವೇಶಿಸುತ್ತಾನೆ, ರಾಹು ನಿಮ್ಮ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ನೀವು ಎಲ್ಲಾ ವಿಷಯಕ್ಕೆ ತರ್ಕ ಮಾಡುವ ಸ್ವಭಾವ ಬೆಳೆಸಿಕೊಳ್ಳುತ್ತೀರಿ.
ಪರಿಹಾರ: ಬುಧವಾರ ಬುಧ ಬೀಜ ಮಂತ್ರ ಪಠಿಸಿ.
ತುಲಾ ರಾಶಿ
ಅಕ್ಟೋಬರ್ 30 ರ ನಂತರ, ರಾಹು ನಿಮ್ಮ ಆರನೇ ಮನೆಯಲ್ಲಿ ಇರಲಿದೆ. ಈ ಸಂಚಾರ ನಿಮಗೆ ಅನುಕೂಲಕರವಾಗಿದೆ. ಕೆಲಸದಲ್ಲಿ ಒಳ್ಳೆಯ ಫಲಿತಾಂಶ ಸಿಗುತ್ತದೆ. ನಿಮ್ಮ ವಿರೋಧಿಗಳ ಮೇಲೆ ನೀವು ಮೇಲುಗೈ ಸಾಧಿಸುವಿರಿ. ನ್ಯಾಯಾಲಯದಲ್ಲಿ ಏನಾದರೂ ಪ್ರಕರಣವಿದ್ದರೆ ತೀರ್ಪು ನಿಮ್ಮ ಪರವಾಗಿ ಬರಲಿದೆ.
ಪರಿಹಾರ: ಶುಕ್ರವಾರದಂದು ಹೆಣ್ಮಕ್ಕಳಿಗೆ ಸೌಂದರ್ಯವರ್ಧಕಗಳನ್ನು ನೀಡಿ.
ವೃಶ್ಚಿಕ ರಾಶಿ
ರಾಹು ಸಂಕ್ರಮಣ 2023 ರ ಪ್ರಕಾರ, ಅಕ್ಟೋಬರ್ 30 ರಂದು ರಾಹು ನಿಮ್ಮ ಐದನೇ ಮನೆಯಲ್ಲಿ ಇರಲಿದೆ, ನಿಮ್ಮ ಬುದ್ಧಿವಂತಿಕೆಯು ಅಭಿವೃದ್ಧಿಗೊಳ್ಳುತ್ತದೆ. ನೀವು ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಪ್ರೇಮ ಸಂಬಂಧಗಳಿಗೆ ಈ ಸಮಯವು ತುಂಬಾ ಒಳ್ಳೆಯದು. ವಿದ್ಯಾರ್ಥಿಗಳಿಗೆ ಈ ಸಮಯ ಸವಾಲಿನಿಂದ ಕೂಡಿರಲಿದೆ, ಆದರೆ ಶ್ರಮವಹಿಸಿದರೆ ಶಿಕ್ಷಣದಲ್ಲಿ ಪ್ರಯೋಜನಗಳನ್ನು ಪಡೆಯಬಹುದು.
ಪರಿಹಾರ: ಶ್ರೀ ದುರ್ಗಾ ಚಾಲೀಸಾವನ್ನು ನಿಯಮಿತವಾಗಿ ಪಠಿಸಿ.
ಧನು ರಾಶಿ
ರಾಹು ಸಂಕ್ರಮಣ 2023 ರ ಪ್ರಕಾರ, ಅಕ್ಟೋಬರ್ 30 ರಂದು, ರಾಹು ನಿಮ್ಮ ನಾಲ್ಕನೇ ಮನೆಗೆ ಸಾಗಲಿದೆ. ಈ ಅವಧಿಯಲ್ಲಿ ಕುಟುಂಬದಲ್ಲಿ ಪರಿಸ್ಥಿತಿ ಅಷ್ಟು ಚೆನ್ನಾಗಿರಲ್ಲ, ಕೆಲಸದಲ್ಲಿ ಒತ್ತಡ ಅಧಿಕವಿರಲಿದೆ, ಆದರೂ ಕೆಲಸದಲ್ಲಿ ತೃಪ್ತಿ ಇರಲಿದೆ.
ಪರಿಹಾರ: ಸಪ್ತ ಬಗೆಯ ಧಾನ್ಯಗಳನ್ನು ಹಕ್ಕಿಗಳಿಗೆ ಹಾಕಿ.
ಮಕರ ರಾಶಿ
ರಾಹು ಸಂಕ್ರಮಣ 2023 ರ ಪ್ರಕಾರ, ಅಕ್ಟೋಬರ್ 30 ರ ನಂತರ, ರಾಹು ನಿಮ್ಮ ಮೂರನೇ ಮನೆಗೆ ಪ್ರವೇಶಿಸುತ್ತಾನೆ. ಇಲ್ಲಿ ರಾಹು ನಿಮಗೆ ಧೈರ್ಯವನ್ನು ನೀಡುತ್ತಾನೆ. ವ್ಯವಹಾರದಲ್ಲಿ ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ, ಆಟಗಾರರಿಗೆ ಈ ಅವಧಿ ಒಳ್ಳೆಯದು. ನೀವು ಗೌರವವನ್ನು ಪಡೆಯುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಮೂರನೇ ಮನೆಯಲ್ಲಿ ರಾಹುವಿನ ಈ ಸಂಚಾರವು ನಿಮಗೆ ಉತ್ತಮ ಯಶಸ್ಸನ್ನು ನೀಡುತ್ತದೆ.
ಪರಿಹಾರ: ನೀವು ಶನಿವಾರದಂದು ಶನಿ ದೇವಾಲಯಕ್ಕೆ ಕಪ್ಪು ಎಳ್ಳನ್ನು ದಾನ ಮಾಡಬೇಕು.
ಕುಂಭ ರಾಶಿ
ರಾಹು ಸಂಕ್ರಮಣ 2023 ರ ಪ್ರಕಾರ, ಅಕ್ಟೋಬರ್ 30 ರ ನಂತರ, ರಾಹು ನಿಮ್ಮ ಎರಡನೇ ಮನೆಗೆ ಸಾಗಲಿದೆ. ಈ ಅವಧಿ ಆರ್ಥಿಕವಾಗಿ ಒಳ್ಳೆಯದು, ಆರ್ಥಿಕ ಲಾಭ ಪಡೆಯುತ್ತೀರಿ, ಕುಟುಂಬದಲ್ಲಿ ಕೆಲ ಸಮಸ್ಯೆಗಳಿರಬಹುದು, ತಾಳ್ಮೆಯಿಂದ ಎಲ್ಲವನ್ನು ನಿಭಾಯಿಸಲು ಪ್ರಯತ್ನಿಸಿ.
ಪರಿಹಾರ: ರಾಹುಮಂತ್ರ ಪಠಿಸಿ
ಮೀನ ರಾಶಿ
ರಾಹು ಸಂಕ್ರಮಣ 2023 ರ ಪ್ರಕಾರ, ಅಕ್ಟೋಬರ್ 30 ರಂದು, ರಾಹು ನಿಮ್ಮ ಮೊದಲ ಮನೆಗೆ ಬರಲಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಈ ರಾಹು ಸಂಚಾರವು ನಿಮಗೆ ಎಲ್ಲವನ್ನೂ ಒದಗಿಸುತ್ತದೆ.
ಪರಿಹಾರ: ಶನಿವಾರ ಕಪ್ಪು ಎಳ್ಳನ್ನು ದಾನ ಮಾಡಿ.



Click it and Unblock the Notifications
