Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಹರಕಲು ಗುಡಿಸಲಿನಿಂದ ಐಷಾರಾಮಿ ಬಂಗಲೆ, ಕಾರು: ಈ ವ್ಯಕ್ತಿಯ ಸ್ಫೂರ್ತಿದಾಯಕ ಕಥೆ ಇದು..!!
ವ್ಯಕ್ತಿಗಳ ಜೀವನದಲ್ಲಿ ಯಾವಾಗ ಯಶಸ್ಸು ಅನ್ನೋದು ಬರುತ್ತೆ ಅನ್ನೋದನ್ನು ಊಹಿಸಲು ಕೂಡ ಸಾಧ್ಯವಿರೋದಿಲ್ಲ. ಕಷ್ಟ ಪಟ್ಟರೆ ಪ್ರತಿಫಲ ಸಿಗುತ್ತೆ ಅನ್ನೋ ಮಾತು ಹಲವರಿಗೆ ನಿಜವಾಗುತ್ತೆ. ಆದ್ರೆ ತಾಳ್ಮೆಯಿಂದ ಕಾಯಬೇಕು ಅನ್ನೋದು ಎಲ್ಲಾ ಸಮಯದಲ್ಲೂ ನಿಜವಾದ ವಿಚಾರವಾಗಿದೆ. ಹೀಗೆ ನಾವಿಂದು ಒಂದು ಕಾಲದಲ್ಲಿ ಗುಡಿಸಲಲ್ಲಿ ವಾಸವಿದ್ದಾತ ಈಗ ದೊಡ್ಡ ಶ್ರೀಮಂತನಾಗಿ ಬೆಳದ ಕಥೆ ನೋಡೋಣ.
ಗಣರಾಜ್ಯೋತ್ಸವದ ದಿನದಂದು ಈ ವ್ಯಕ್ತಿಯ ಸ್ಫೂರ್ತಿದಾಯಕ ಕಥೆಯ ಕುರಿತು ನಾವಿಂದು ತಿಳಿದುಕೊಳ್ಳೋಣ. ಆತ ಯಾರು ಗುಡಿಸಲಿನಿಂದ ದುಬೈನಲ್ಲಿ ಐಷಾರಾಮಿ ಮನೆ, ಕಾರು ಸಂಪಾದಿಸಿದ್ದು ಹೇಗೆ? ಒಡಿಶಾದ ಈ ಹಳ್ಳಿ ಹುಡುಗ ದೊಡ್ಡ ಶ್ರೀಮಂತ ಆಗಿದ್ದೇಕೆ ಎನ್ನುವ ಈ ಸ್ಪೂರ್ತಿದಾಯಕ ಕಥೆಯನ್ನು ನಾವಿಂದು ತಿಳಿದುಕೊಳ್ಳೋಣ.

ಒಡಿಶಾದ ರೂರ್ಕೆಲಾದ ಚಿಕ್ಕ ಗುಡಿಸಲಿನಲ್ಲಿ ವಾಸವಿದ್ದ ಸೌಮೇಂದ್ರ ಚೆನಾ ಎಂಬಾತ ಈಗ ದುಬೈನಲ್ಲಿ ಐಷಾರಾಮಿ ಬಂಗಲೆಯಲ್ಲಿ ನೆಲೆಸಿದ್ದಾರೆ. ಅವರೇ ಎಕ್ಸ್ ಖಾತೆಯಲ್ಲಿ ತಮ್ಮ 17 ವರ್ಷದ ಕಠಿಣ ಪರಿಶ್ರಮದ ಜೀವನದ ಕುರಿತು ಹೇಳಿಕೊಂಡಿದ್ದಾರೆ. ತಮ್ಮ ಹುಟ್ಟೂರಿಗೆ ಕುಟುಂಬದ ಜೊತೆಗೆ ಆಗಮಿಸಿ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಉದ್ಯಮಿ ಸೌಮೇಂದ್ರ ಜೆನಾ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ ಒಂದು ಕಡೆ ತಮ್ಮ ಹುಟ್ಟೂರಿನ ಗುಡಿಸಲಿನಂತಹ ಮನೆ ಇನ್ನೊಂದು ಕಡೆ ಐಷಾರಾಮಿ ಕಾರುಗಳ ಜೊತೆಗೆ ದುಬೈನ ಬಂಗಲೆಯನ್ನು ಅವರು ಹಂಚಿಕೊಂಡಿದ್ದಾರೆ. ರೂರ್ಕೆಲಾದಲ್ಲಿರುವ ಅವರ ಬಾಲ್ಯದ ಮನೆ, ಅವರು ತಮ್ಮ ಬಾಲ್ಯದ ವರ್ಷಗಳನ್ನು ಕಳೆದ ಸಣ್ಣ ಮತ್ತು ಶಿಥಿಲಗೊಂಡ ಮನೆಯಿದ್ದರೆ ಮತ್ತೊಂದು ಕಡೆ ಐಷಾರಾಮಿ ಮನೆ ಐಷಾರಾಮಿ ಕಾರುಗಳ ನೋಡಬಹುದು. ಅಲ್ಲಿ ಪೋರ್ಷೆ ಟೇಕನ್, ಜೀವ್ಯಾಗನ್ ಬ್ರಾಬಸ್ 800 ಕಾರುಗಳ ನಾವು ನೋಡಬಹುದು. ಇವುಗಳ ಬೆಲೆ ಕೋಟಿ ದಾಟಬಹುದು.
ಇದು ಆಗ ನನ್ನ ಮನೆಯಾಗಿತ್ತು - ಒಡಿಶಾದ ಸಣ್ಣ ಪಟ್ಟಣ, ರೂರ್ಕೆಲಾ ಅಲ್ಲಿ ನಾನು ಹುಟ್ಟಿ, ಬೆಳೆದು 12 ನೇ ತರಗತಿಯವರೆಗೆ (1988-2006) ಅಧ್ಯಯನ ಮಾಡಿದೆ. ನೆನಪುಗಳಿಗಾಗಿ 2021 ರಲ್ಲಿ ಮತ್ತೆ ಭೇಟಿ ನೀಡಿದ್ದೆ! ಇಂದು, ದುಬೈನಲ್ಲಿರುವ ನನ್ನ ಮನೆ 17 ವರ್ಷಗಳ ನಿರಂತರ ಕಠಿಣ ಪರಿಶ್ರಮ, ನಿದ್ದೆಯಿಲ್ಲದ ರಾತ್ರಿಗಳು ಮತ್ತು ಯಾವುದೇ ಶಾರ್ಟ್‌ಕಟ್ ಇಲ್ಲದ ಕಥೆಯನ್ನು ಹೇಳುತ್ತದೆ. ಯಶಸ್ಸಿಗೆ ಸಮಯ ಬೇಕಾಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಹಲವರ ಗಮನ ಸೆಳೆದಿದೆ. ಹಾಗಾದ್ರೆ ಅವರು ದುಬೈನಲ್ಲಿ ಯಾವ ಕೆಲಸ ಮಾಡುತ್ತಿರಬಹುದು ಎಂಬ ಕುತೂಹಲ ಎಲ್ಲರಿಗೂ ಮೂಡಿದೆ. ಹೀಗಾಗಿ ಅವರ ಕುರಿತು ಇನ್ನಷ್ಟು ಹುಡುಕಲು ಮುಂದಾಗಿದ್ದಾರೆ. ಸೌಮೇಂದ್ರ ಚೆನಾ ದುಬೈನಲ್ಲಿ ತಮ್ಮದೇ ಸ್ವಂತ ಉದ್ಯಮ ಸ್ಥಾಪಿಸಿದ್ದಾರೆ. ಜೆನಾ ದುಬೈನಲ್ಲಿ ವೆಬ್ ಮತ್ತು ಐಟಿ ಕಂಪನಿಯ ತೆರೆದಿದ್ದಾರೆ. ಪ್ರೀಮಿಯಂ ಐಟಿ ಸಲ್ಯೂಷನ್ಸ್‌ಗಳ ಸೇವೆ ನೀಡುವ ಕಂಪನಿ ಅವರದ್ದಾಗಿದೆ. ಹೀಗಾಗಿ ಇಷ್ಟೊಂದು ಪ್ರಮಾಣದ ಆಸ್ತಿ ಹೊಂದಿದ್ದಾರೆ.
ಈ ಹಂತ ತಲುಪಬೇಕಾದರೆ ಅವರು 17 ವರ್ಷಗಳ ನಿರಂತರ ಪರಿಶ್ರಮ ಹಾಕಿದ್ದಾರೆ. ಹೀಗಾಗಿ ದುಬೈನಲ್ಲಿಯೇ ಯಶಸ್ವಿ ಕಂಪನಿ ತೆರೆಯಲು ಸಾಧ್ಯವಾಗಿದೆ. ಇನ್ನು ಅವರ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದು ಅಭಿನಂದನೆಯ ಜೊತೆಗೆ ಅವರ ಸಾಧನೆಯನ್ನು ಹಾಡಿ ಹೊಗಳಿದ್ದಾರೆ. ಆದ್ರೆ ಕೆಲವರ ಪ್ರಕಾರ ಕಠಿಣ ಪರಿಶ್ರಮದ ಜೊತೆಗೆ ಅದೃಷ್ಟವೂ ಜೊತೆಗಿರಬೇಕು ಎಂಬ ಅಭಿಪ್ರಾಯ ಹೊರಹಾಕಿದ್ದಾರೆ.



Click it and Unblock the Notifications
