Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗುರುವಾರ ರಾಯರ ಈ ಮಂತ್ರ ಪಠಿಸಿ! ಕಷ್ಟಗಳೆಲ್ಲ ದೂರ, ಇಷ್ಟಾರ್ಥ ಸಿದ್ಧಿ
ರಾಯರ ಈ ಮಂತ್ರ ಪಠಣೆ ಮಾಡಿದರೆ ಕಷ್ಟಗಳೆಲ್ಲ ದೂರ, ಇಷ್ಟಾರ್ಥ ಸಿದ್ಧಿ! ಈ ದಿವ್ಯ ಮಂತ್ರದಿಂದ ಜೀವನವೇ ಬದಲಾಗುತ್ತೆ. ಗುರು ರಾಘವೇಂದ್ರ ಸ್ವಾಮಿಯನ್ನು ಶ್ರದ್ಧೆಯಿಂದ ನಂಬುವ ಭಕ್ತರ ಪ್ರಕಾರ, ಸ್ವಾಮಿ ಎಂದಿಗೂ ಕೈ ಬಿಡುವುದಿಲ್ಲ. ಈ ನಂಬಿಕೆಗೆ ಸಾಕ್ಷಿಯಾಗಿ ಹಲವಾರು ಪವಾಡಗಳು ನಡೆದಿವೆ ಎಂದು ಹೇಳಲಾಗುತ್ತದೆ. ಗುರು ರಾಘವೇಂದ್ರ ಸ್ವಾಮಿಗಳ (Guru Raghavendra Swami) ಆರಾಧನೆಗೆ ಗುರುವಾರ ಅತ್ಯಂತ ಶ್ರೇಷ್ಠ ದಿನವೆಂದು ಪರಿಗಣಿಸಲಾಗಿದೆ.
ಯಾವುದೇ ಕಷ್ಟ ಬಂದಾಗ ಮನಸ್ಸಿನಲ್ಲಿ ರಾಯರನ್ನು ನೆನಸಿಕೊಂಡರೆ, ಕಷ್ಟಗಳು ಮಂಜಿನಂತೆ ಕರಗುತ್ತವೆ ಎಂಬುದು ಭಕ್ತರ ದೃಢ ನಂಬಿಕೆ. ರಾಯರನ್ನು ಪೂಜಿಸಲು ಯಾವುದೇ ಕಠಿಣ ನಿಯಮಗಳಿಲ್ಲ. ಶುದ್ಧ ಮನಸ್ಸಿನಿಂದ ಪೂಜಿಸಿದರೆ ಸಾಕು, ಅವರು ಭಕ್ತರ ಎಲ್ಲಾ ಕಷ್ಟಗಳನ್ನು ನಿವಾರಿಸುತ್ತಾರೆ.

ಗುರು ರಾಯರನ್ನು ಮಂತ್ರ (Raghavendra Swamy Mantra) ಪಠಣೆಯ ಮೂಲಕ ಪೂಜಿಸುವುದು ಹೆಚ್ಚು ಮಂಗಳಕರ. ವಿಶೇಷವಾಗಿ ಗುರುವಾರದಂದು ಈ ಮಂತ್ರಗಳನ್ನು ಪಠಿಸುವುದರಿಂದ ಹೆಚ್ಚಿನ ಫಲ ದೊರೆಯುತ್ತದೆ. ಇಲ್ಲಿ ಗುರು ರಾಘವೇಂದ್ರ ಸ್ವಾಮಿಯ ಮೂಲ ಮಂತ್ರ ಮತ್ತು ಗಾಯತ್ರಿ ಮಂತ್ರ, ಅವುಗಳನ್ನು ಪಠಿಸುವ ವಿಧಾನ ಹಾಗೂ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ರಾಘವೇಂದ್ರ ಸ್ವಾಮಿಯ ಮೂಲ ಮಂತ್ರ
• "ಓಂ ಶ್ರೀ ರಾಘವೇಂದ್ರಾಯ ನಮಃ"
ಈ ಮಂತ್ರವನ್ನು ಗುರುವಾರ ಮಾತ್ರವಲ್ಲದೆ ಯಾವುದೇ ಸಮಯದಲ್ಲಿ ಪಠಿಸಬಹುದು. ಇದನ್ನು ಪಠಿಸುವುದರಿಂದ ದೈವಾನುಗ್ರಹ ಲಭಿಸುವುದಲ್ಲದೆ, ಆತ್ಮವಿಶ್ವಾಸ ಹೆಚ್ಚುತ್ತದೆ. ನಕಾರಾತ್ಮಕ ಆಲೋಚನೆಗಳು ದೂರವಾಗಿ ಸಕಾರಾತ್ಮಕ ಚಿಂತನೆಗಳು ವೃದ್ಧಿಸುತ್ತವೆ.
ರಾಘವೇಂದ್ರ ಸ್ವಾಮಿ ಗಾಯತ್ರಿ ಮಂತ್ರ
• "ಓಂ ವೆಂಕಟನಾಥಾಯ ವಿದ್ಮಹೇ ಸಚ್ಚಿದಾನಂದಾಯ ಧೀಮಹೀ ತನ್ನೋ ರಾಘವೇಂದ್ರಃ ಪ್ರಚೋದಯಾತ್"
• "ಓಂ ವೆಂಕಟನಾಥಾಯ ವಿದ್ಮಹೇ ತಿಮ್ಮಣ್ಣ ಪುತ್ರಾಯ ಧೀಮಹಿ ತನ್ನೋ ರಾಘವೇಂದ್ರಃ ಪ್ರಚೋದಯಾತ್"
• "ಓಂ ಪ್ರಹ್ಲಾದಾಯ ವಿದ್ಮಹೇ ವ್ಯಾಸರಾಜಾಯ ಧೀಮಹಿ ತನ್ನೋ ರಾಘವೇಂದ್ರಃ ಪ್ರಚೋದಯಾತ್"
ಈ ಮಂತ್ರವನ್ನು ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗುತ್ತದೆ. ಇದನ್ನು ಪ್ರತಿದಿನ ಬೆಳಗ್ಗೆ ಪಠಿಸುವುದು ಉತ್ತಮ. ಪ್ರತಿದಿನ ಸಾಧ್ಯವಾಗದಿದ್ದರೆ, ಗುರುವಾರ ಮತ್ತು ಶುಕ್ಲಪಕ್ಷದ ದಿನಗಳಲ್ಲಿ ಪಠಿಸುವುದು ಶುಭಕರ.
ರಾಘವೇಂದ್ರ ಸ್ವಾಮಿಗೆ ಸಂಬಂಧಿಸಿದ ಇತರೆ ಮಂತ್ರಗಳು
• ''ಓಂ ಶ್ರೀ ರಾಘವೇಂದ್ರಾಯ ರಾಜಾಯ ನಮಃ''
• ''ಶ್ರೀ ರಾಘವೇಂದ್ರಾಯ ಸತ್ಯವಾದಿ ನಮೋ ನಮಃ''
• ''ಶ್ರೀ ರಾಘವೇಂದ್ರ ಗುರುವೇ ನಮಃ''
• ''ಶ್ರೀ ರಾಘವೇಂದ್ರಾಯ ನಮಃ''
ಮಂತ್ರ ಪಠಣೆ ಮಾಡುವಾಗ ಗಮನಿಸಬೇಕಾದ ಅಂಶಗಳು
ಗಾಯತ್ರಿ ಮಂತ್ರ ಪಠಿಸುವಾಗ ಉಚ್ಚಾರಣಾ ದೋಷವಿರಬಾರದು. ಈ ಮಂತ್ರವನ್ನು ಪ್ರತಿದಿನ ಅಥವಾ ಕೇವಲ ಗುರುವಾರದಂದು ಪಠಿಸಬಹುದು. ದಿನದಲ್ಲಿ ಒಮ್ಮೆ, 3 ಬಾರಿ, 5 ಬಾರಿ, 9 ಬಾರಿ, 21 ಬಾರಿ ಅಥವಾ 1008 ಬಾರಿ ಜಪಿಸುವುದು ಒಳ್ಳೆಯದು.
ಸತತ 48 ದಿನಗಳವರೆಗೆ ಪಠಿಸುವುದರಿಂದ ಉತ್ತಮ ಫಲಿತಾಂಶ ಲಭಿಸುತ್ತದೆ. ಗಾಯತ್ರಿ ಮಂತ್ರವನ್ನು 48 ದಿನಗಳ ಕಾಲ ಪಠಿಸುವುದಾದರೆ, ಗುರುವಾರ ಅಥವಾ ಶುಕ್ಲ ಪಕ್ಷದ ಪುಷ್ಯ ನಕ್ಷತ್ರದಂದು ಪ್ರಾರಂಭಿಸುವುದು ಹೆಚ್ಚು ಸೂಕ್ತ. ಯಾವುದೇ ಸಂಕಲ್ಪ ನೆರವೇರಲು ಈ ಮಂತ್ರವನ್ನು ದಿನಕ್ಕೆ 1008 ಬಾರಿ ಜಪಿಸಬೇಕು.
ಮಂತ್ರ ಪಠಣೆಯಿಂದ ದೊರೆಯುವ ಪ್ರಯೋಜನಗಳು
48 ದಿನಗಳ ಕಾಲ ನಿರಂತರವಾಗಿ ಮಂತ್ರ ಪಠಿಸುವವರಿಗೆ ಗುರು ರಾಘವೇಂದ್ರ ಸ್ವಾಮಿ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಭಕ್ತರು ತಮ್ಮ ವೈಯಕ್ತಿಕ ಅನುಭವಗಳ ಮೂಲಕ ಹೇಳುತ್ತಾರೆ. ಗುರು ರಾಯರ ಭಕ್ತರು ಸ್ವಾಮಿಯ ಶಕ್ತಿಯನ್ನು ಅರಿತಿರುತ್ತಾರೆ. ಕನಸಿನಲ್ಲಿ ಸ್ವಾಮಿ ಕಾಣಿಸಿಕೊಂಡಾಗ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಪ್ರಚಲಿತದಲ್ಲಿದೆ.
ಹಿಂದೂ ಸಂಪ್ರದಾಯದಲ್ಲಿ ಗುರುವಾರವು (Thursday) ವಿಶೇಷ ಮಹತ್ವವನ್ನು ಹೊಂದಿರುವ ದಿನ. ಈ ದಿನದಂದು ಮೂರು ಪ್ರಮುಖ ದೇವತೆಗಳನ್ನು ಪೂಜಿಸಲಾಗುತ್ತದೆ. ಈ ದೇವತೆಗಳಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಸಹ ಒಬ್ಬರು. ಗುರುವಾರ ರಾಘವೇಂದ್ರ ಸ್ವಾಮಿಗಳನ್ನು ಪೂಜಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನ ಅವರ ಮಂತ್ರಗಳನ್ನು ಪಠಿಸುವುದರಿಂದ ವಿಶೇಷ ಫಲಗಳು ದೊರೆಯುತ್ತವೆ.



Click it and Unblock the Notifications
