Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೈಸೂರು ಕೆಫೆ ಮಾಲೀಕರ ಕಾಲಿಗೆ ಬಿದ್ದ ಅಂಬಾನಿ ಜೋಡಿ!! ಯಾರು ಈ ಮಹಿಳೆ ಗೊತ್ತಾ?
ದೇಶದಲ್ಲೀಗ ಅಂಬಾನಿ ಕುಟುಂಬದ ವಿವಾಹ ಮಹೋತ್ಸವವೇ ಸದ್ದು ಮಾಡುತ್ತಿದೆ. ದೇಶದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಕಳೆದ ಶುಕ್ರವಾರದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಧಿಕಾ ಮರ್ಚೆಂಟ್ ಕೈ ಹಿಡಿದಿರುವ ಅವರು ಅದ್ದೂರಿ ಮದುವೆಯಲ್ಲಿ ಮಿಂಚಿದ್ದಾರೆ.
ಈ ಮದುವೆ ಸಮಾರಂಭದಲ್ಲಿ ಇಡೀ ಬಾಲಿವುಡ್ ಗಣ್ಯರು ಸೇರಿ ವಿಶ್ವದ ಪ್ರಮುಖ ಉದ್ಯಮಿಗಳು, ಕ್ರೀಡಾಪಟುಗಳು, ರಾಜಕಾರಣಿಗಳು ಸಹ ಭಾಗಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಸಹ ಈ ಮದುವೆ ಭೇಟಿ ನೀಡಿ ನವ ವಧು ವರರಿಗೆ ಆಶೀರ್ವಾದ ಮಾಡಿದ್ದಾರೆ.

ಅಲ್ಲದೆ ಅಂಬಾನಿ ಮಗನ ವಿವಾಹಕ್ಕೆ ಬಂದಿದ್ದ ಅತಿಥಿಗಳಿಗೆ ರಾಜರ ಸತ್ಕಾರವೇ ಸಿಕ್ಕಿದೆ. ದುಬಾರಿ ಉಡುಗೊರೆ ಸೇರಿ ಅಲ್ಲಿ ಭರ್ಜರಿ ಭೋಜನದ ವ್ಯವಸ್ಥೆಯೂ ಮಾಡಲಾಗಿತ್ತು. ಜೊತೆಗೆ ಅವರ ವಿವಾಹ ಮಹೋತ್ಸವದಲ್ಲಿ ಭಾಗಿಯಾಗಿದ್ದವರೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಹೆಸರು, ಖ್ಯಾತಿ ಗಳಿಸಿದ್ದವರೇ ಆಗಿದ್ದರು.
ಅದ್ರಲ್ಲೂ ಹಾಲಿವುಡ್ ನಟರು, ಸಿಂಗರ್‌ಗಳಿಗೆ ಕೋಟಿ ಕೋಟಿ ನೀಡಿ ಕರೆಸಲಾಗಿತ್ತು, ಇದೆಲ್ಲಕ್ಕಿಂತ ಅಚ್ಚರಿಯಾಗಿ ಕಂಡಿದ್ದು ಓರ್ವ ಮಹಿಳೆ. ಹೌದು ಮೈಸೂರು ಕೆಫೆ ಸಂಸ್ಥಾಪಕಿ ಸಹ ಈ ಮದುವೆಯಲ್ಲಿ ಭಾಗಿಯಾಗಿದ್ದರು. ಆದರೆ ಅಲ್ಲಿದ್ದವರಿಗೆ ಈ ಮಹಿಳೆ ಯಾರು ಎಂಬುದೇ ದೊಡ್ಡ ಪ್ರಶ್ನೆಯಾಗಿತ್ತು. ಒಬ್ಬ ಸಾಮಾನ್ಯ ಮಹಿಳೆಯಂತೆ ಯಾವುದೇ ಆಡಂಬರವಿಲ್ಲದೆ ಮದುವೆಯಲ್ಲಿ ಭಾಗಿಯಾಗಿದ್ದ ಅವರು ಎಲ್ಲರ ಗಮನ ತಮ್ಮತ್ತ ಸೆಳೆದಿದ್ದರು.
ಮೈಸೂರು ಕೆಫೆ ಮಾಲಿಕರಾದ ಶಾಂತೇರಿ ನಾಯಕ್ ಇಡೀ ಮದುವೆಯಲ್ಲಿ ಗಮನ ಸೆಳೆದ ಮಹಿಳೆಯಾಗಿದ್ದಾರೆ. ಸಾಮಾನ್ಯ ಮಹಿಳೆಯಂತೆ ಸೀರೆ ಉಟ್ಟು ಅಲಂಕಾರ, ಆಭರಣ ಇಲ್ಲದೆ ಕಾಣಿಸಿಕೊಂಡ ಅವರು ಕೇಂದ್ರ ಬಿಂದು ಆಗಿದ್ದರು.
ಇವರನ್ನು ಕಂಡೊಡನೆ ಅನಂತ್ ಅಂಬಾನಿ ತನ್ನ ಪತ್ನಿ ರಾಧಿಕಾ ಮರ್ಚೆಂಟ್ ಅವರನ್ನು ಕರೆದು ಪರಿಚಯ ಮಾಡಿಕೊಟ್ಟರು. ಅಲ್ಲದೆ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಸಹ ಪಡೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಜನರು ಸಹ ಅಚ್ಚರಿಯಿಂದ ಅಂಬಾನಿ ಕುಟುಂಬ ಅವರನ್ನು ಗುರುತಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೈಸೂರು ಕೆಫೆಯ ಮಾಲೀಕರಾದ ನರೇಶ್ ನಾಯಕ್ ಅವರ ತಾಯಿ ಶಾಂತೇರಿ ನಾಯಕ್, ರಾಜ್ಯದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಶಾಂತೇರಿಯವರು ಕೆಫೆಯನ್ನು ನರೇಶ್‌ಗೆ ಹಸ್ತಾಂತರಿಸುವ ಮೊದಲು ಕೆಫೆ ಮಾಲಿಕತ್ವ ಹೊಂದಿದ್ದರಲ್ಲದೆ ಅದರ ನಿರ್ವಹಣೆ ಅವರೇ ಮಾಡುತ್ತಿದ್ದರು.
ಮೈಸೂರು ಕೆಫೆ ರಾಜ್ಯದಲ್ಲಿ ಮಾತ್ರವಲ್ಲ ಇತರೆ ರಾಜ್ಯದಲ್ಲೂ ಶಾಖೆಗಳ ಹೊಂದಿದೆ. ಹೀಗಾಗಿ ಅನಂತ್ ಅಂಬಾನಿ ಅವರಿಗೆ ಈ ಕೆಫೆಯ ತಿಂಡಿ ಬಹಳ ಅಚ್ಚುಮೆಚ್ಚಂತೆ. ಮದುವೆಯಲ್ಲಿ ಭೇಟಿಯಾದಾಗಲು ಸಹ ಪ್ರತಿ ಭಾನುವಾರ, ನಾವು ನಿಮ್ಮ ಆಹಾರವನ್ನು ನಮ್ಮ ಮನೆಯಲ್ಲಿ ತಿನ್ನುತ್ತೇವೆ ಎಂದು ಹೇಳುತ್ತಿದ್ದಾರೆ.
ಈ ವಿಡಿಯೋ ನೋಡಿದ ಮಂದಿ ಇಷ್ಟೊಂದು ಐಷಾರಾಮಿ ಬದುಕು, ಆಸ್ತಿ ಇದ್ದರೂ ಅಂಬಾನಿ ಕುಟುಂಬ ಸಂಸ್ಕಾರ ಮಾತ್ರ ಮರೆತಿಲ್ಲ ಹಿರಿಯರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ಅರಿತಿದ್ದಾರೆ. ಹೀಗಾಗಿಯೇ ಅವರ ಸಂಪತ್ತು ಬೆಳೆಯುತ್ತಲೇ ಇದೆ ಎಂದು ಕಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಮೈಸೂರು ಮಸಾಲೆ ದೋಸೆ ಎಂದರೆ ಅಂಬಾನಿಗೆ ಬಲು ಇಷ್ಟ. ಅವರು ಹಲವು ಬಾರಿ ಈ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಮೈಸೂರು ಕೆಫೆ ಓನರ್‌ನನ್ನು ಮದುವೆಗೆ ಆಹ್ವಾನಿಸಲು ಮರೆಯಲಿಲ್ಲ. ಅಲ್ಲದೆ ಶಾಂತೇರಿ ನಾಯಕ್ ಅವರಿಗೆ ವಿಶೇಷ ಗೌರವ ಸಹ ನೀಡಿದ್ದಾರೆ.



Click it and Unblock the Notifications
