Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೊಘಲರ ನಡುವಿನ ಯುದ್ಧಕ್ಕೂ ಮುನ್ನ ಶಿರಚ್ಛೇದಕ್ಕೊಳಗಾದ ರಾಣಿ..! ಈ ಕಥೆ ಗೊತ್ತಾ?
ಭಾರತದ ಇತಿಹಾಸದಲ್ಲಿ ನೂರಾರು ರಾಜಮನೆತನಗಳು, ನೂರಾರು ರಾಜರು ಆಳ್ವಿಕೆ ನಡೆಸಿದ್ದಾರೆ. ತಮ್ಮ ರಾಜ್ಯ ಕಾಪಾಡಿಕೊಳ್ಳಲು ಹಲವು ಯುದ್ಧಗಳಲ್ಲಿ ಹೋರಾಡಿದ್ದಾರೆ. ಹಲವರು ರಾಜ್ಯಕ್ಕಾಗಿ, ತಮ್ಮ ಅಧಿಕಾರಕ್ಕಾಗಿ, ಜನರಿಗಾಗಿ ಹೋರಾಡುತ್ತಲೇ ಪ್ರಾಣವನ್ನೂ ಬಿಟ್ಟಿದ್ದಾರೆ. ತಮ್ಮ ರಾಜ್ಯವನ್ನು ಮತ್ತಷ್ಟು ಶ್ರೀಮಂತವನ್ನಾಗಿ ಮಾಡಲು ಬೇರೆ ರಾಜ್ಯಗಳ ಮೇಲೆ ಯುದ್ಧವನ್ನು ಮಾಡಿದ್ದಾರೆ. ಹಾಗೆ ತಮ್ಮ ರಾಜ್ಯ ಉಳಿಸಿಕೊಳ್ಳಲು ಕೊನೆಯ ಉಸಿರಿರುವವರೆಗೂ ಹೋರಾಡಿದ್ದಾರೆ.
ಇನ್ನು ಮೊಘಲರು ಭಾರತದಲ್ಲಿ ಆಳ್ವಿಕೆ ನಡೆಸುವಾಗ ಸುತ್ತಮುತ್ತಲ ರಾಜ್ಯಗಳ ಮೇಲೆ ಯುದ್ಧ ಸಾರುವುದು ಸಾಮಾನ್ಯವಾಗಿತ್ತು. ಹಾಗೆ ಮೊಘಲರ ಇತಿಹಾಸದಲ್ಲಿ ಹಲವು ಯುದ್ಧಗಳನ್ನು ನಾವು ನೋಡಬಹುದು. ಇನ್ನೊಂದು ಕಡೆ ಭಾರತದ ಹಲವು ರಾಜ್ಯಗಳು ಮೊಘಲರ ಯುದ್ಧಕ್ಕೆ ನರಳಿರುವುದು ಸಹ ನೋಡಬಹುದು. ಹಾಗೆ ಮೊಘಲರಿಗೆ ಶರಣಾಗದೆ ಯುದ್ಧ ಸಾರಿದ ಹಲವು ರಾಜಮನೆತನಗಳಿವೆ.

ಆದ್ರೆ ರಾಜಸ್ಥಾನದ ಭೂಮಿ ಹಲವು ಯುದ್ಧಗಳ ಕಂಡ ಭೂಮಿ. ಅಲ್ಲಿನ ರಾಜ ಮನೆತನಗಳು ಯುದ್ಧದಿಂದ ಹಿಂದೆ ಸರಿದ ಉದಾಹರಣೆಗಳು ನೋಡಲಿ ಸಿಗುವುದಿಲ್ಲ. ಹಾಗೆ ರಜಪೂತ ರಾಣಿಯೊಬ್ಬಳು ಮೊಘಲರ ವಿರುದ್ಧವಾಗಿ ತನ್ನ ಶಿರಚ್ಛೇದ ಮಾಡಿಕೊಂಡ ಈ ಕಥೆ ನಿಮಗೆ ಗೊತ್ತಾ? ಮೊಘಲ್ ದೊರೆ ಔರಂಗಜೇವನ ವಿರುದ್ಧ ಯುದ್ಧ ಮಾಡಲು ತನ್ನ ಪತಿಯನ್ನು ಪ್ರೇರೇಪಿಸುವ ಉದ್ದೇಶದಿಂದ ರಾಣಿ ತನ್ನ ಶಿರಚ್ಛೇದ ಮಾಡಿಕೊಂಡಿದ್ದಳು. ಜೈಪುರದ ವಸ್ತು ಸಂಗ್ರಹಾಲಯದಲ್ಲಿ ಆಕೆಯ ಪ್ರತಿಮೆ ಇರುವುದು ನೋಡಬಹುದು.
ರಾಜಪೂತ ದೊರೆಗಳು ಬಹಳ ಧೈರ್ಯಶಾಲಿಗಳಾಗಿದ್ದರು. ಹಾಗೆ ಮೊಘಲರಿಗೆ ಶರಣಾಗದೆ ರಾಜ್ಯ ಉಳಿಸಲು ರಾಣಿ ತನ್ ಶಿರಚ್ಛೇದ ಮಾಡಿದ ಕಥೆ ಇದು. ಹಾದಿ ಅಥವಾ ಸಹಲ್ ಕನ್ವರ್ ಎಂಬ ರಾಣಿ ಇಂತಹ ಕೆಲಸ ಮಾಡಿ ಇತಿಹಾಸ ಪುಟ ಸೇರಿದವಳು. ಹದಾ ಚೌಹಾಣ್ ರಜಪೂತ್ ಸಂಗ್ರಾಮ್ ಸಿಂಗ್ ಅವರ ಮಗಳಾಗಿದ್ದಳು ಮತ್ತು ಮೇವಾರ್‌ನ ಸಲುಂಬಾರ್‌ನ ಚುಂಡಾವತ್ ಮುಖ್ಯಸ್ಥ ರಾವತ್ ರತನ್ ಸಿಂಗ್ ಆಕೆಯ ಪತಿಯಾಗಿದ್ದ.
ಮೇವಾರ್‌ನ ರಾಜ ಸಿಂಗ್ ಅಜ್ಮೀರ್ ಸುಬಾದ ಮೊಘಲ್ ಗವರ್ನರ್ ವಿರುದ್ಧ ಯುದ್ಧಕ್ಕೆ ಅಣಿಯಾಗಿದ್ದ. ಈ ಯುದ್ಧಕ್ಕೂ ಕೆಲವೇ ದಿನಗಳ ಮೊದಲು ಆತ ಹಾದಿ ರಾನಿಯನ್ನು ವಿವಾಹವಾಗಿದ್ದ. ಆದರೆ ರಾಜ ಪತ್ನಿಯನ್ನು ಒಬ್ಬಳೇ ಬಿಟ್ಟು ಯುದ್ಧ ಭೂಮಿಗೆ ಹೋಗಲು ನಿರಾಕರಿಸಿದನು. ರಾಣಿಯನ್ನು ಅರಮನೆಯಲ್ಲಿ ಬಿಟ್ಟು ಯುದ್ಧಕ್ಕೆ ತೆರಳಿದಾಗ ಮೊಘಲರು ಅರಮನೆ ಮುತ್ತಿಗೆ ಹಾಕಬಹುದು ಎಂಬುದು ಆತನ ಭೀತಿಗೆ ಕಾರಣವಾಗಿತ್ತು.
ರಾಣಿ ತಾನು ಒಬ್ಬಳೆ ಅರಮನೆಯಲ್ಲಿ ಇರುವುದಾಗಿ ಹೇಳಿದರು ಆತ ಒಪ್ಪಿಕೊಳ್ಳಲಿಲ್ಲ. ಆದರೆ ರಾಜ ಯುದ್ಧಕ್ಕೆ ತೆರಳದೇ ಇದ್ದರೆ ರಾಜ್ಯ ಮೊಘಲರ ವಶವಾಗುತ್ತಿತ್ತು. ಹೀಗಾಗಿ ರಾಜ ತನ್ನ ರಾಣಿಯಿಂದ ಯಾವುದಾದರು ವಸ್ತುವೊಂದನ್ನು ತನ್ನೊಡನೆ ಯುದ್ಧ ಭೂಮಿಗೆ ಕಳುಹಿಸಿಕೊಡುವಂತೆ ರಾಣಿಯಲ್ಲಿ ಮನವಿ ಮಾಡಿಕೊಂಡನು. ಬಹಳ ಸಮಯ ಚಿಂತೆಯಲ್ಲಿ ಮುಳುಗಿದ ರಾಣಿ ಕೋಣೆಯೊಳಗೆ ತನ್ನ ಸೇವಕನೊಂದಿಗೆ ತೆರಳಿ ನನ್ನ ತಲೆಯನ್ನೇ ರಾಜನಿಗೆ ನೀಡುವಂತೆ ಹೇಳಿ ಶಿರಚ್ಛೇದನ ಮಾಡಿಕೊಂಡಳು.
ತಲೆಯನ್ನು ಒಂದು ತಟ್ಟೆಯಲ್ಲಿಟ್ಟು ಬಟ್ಟೆಯಿಂದ ಮುಚ್ಚಿ ರಾಜನಿಗೆ ನೀಡಲಾಯಿತು. ರಾಣಿಯ ತಲೆ ನೋಡಿ ರಾಜ ಕುಸಿದು ಬಿದ್ದಿದ್ದ. ಆದ್ರೆ ಯುದ್ಧಭೂಮಿಯಿಂದ ಹಿಂದೆ ಸರಿಯುವ ಮನಸ್ಸು ಮಾಡಲಿಲ್ಲ. ರಾಣಿಯ ತಲೆಯನ್ನು ಆಕೆಯ ಕೂದಲಿನಿಂದ ಸೊಂಟಕ್ಕೆ ಕಟ್ಟಿಕೊಂಡು ಯುದ್ಧಭೂಮಿಗೆ ತೆರಳಿದನು. ಆದರೆ ಯುದ್ಧದಲ್ಲಿ ತೀವ್ರವಾಗಿ ಗಾಯಗೊಂಡಿದ್ದನು. ಇನ್ನೇನು ಮೊಘಲರ ಖಡ್ಗಕ್ಕೆ ತನ್ನ ಪ್ರಾಣ ಒಪ್ಪಿಸುವ ಬದಲಾಗಿ ತಾನೇ ಮೊಣಕಾಲ ಮೇಲೆ ಕುಳಿತು ತನ್ನ ತಲೆಯನ್ನೂ ಆತನೇ ಶಿರಚ್ಛೇದನ ಮಾಡಿಕೊಂಡನು.
ಈ ಘಟನೆ ರಜಪೂತ ದೊರೆಗಳ ಸಾಹಸ, ಧೈರ್ಯದ ಉಲ್ಲೇಖಗಳಲ್ಲಿ ಎಂದಿಗೂ ನೋಡಬಹುದು. ಹಾಗೆ ಆಕೆ ತನ್ನ ರಾಜ್ಯಕ್ಕಾಗಿ ಪ್ರಾಣ ಬಲಿ ಕೊಟ್ಟಳು, ರಾಜ ತಲೆಬಗ್ಗಿಸಿ ಶರಣಾಗುವ ಬದಲಾಗಿ ವೀರಮರಣ ಹೊಂದಿದ.



Click it and Unblock the Notifications