Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಚರಂಡಿ ನೀರಲ್ಲಿ ಜ್ಯೂಸ್: ಕೊಳಚೆ ಗೋಲ್‌ಗಪ್ಪ..! ಜನಪ್ರಿಯತೆಗೆ ಈತನ ಹುಚ್ಚಾಟ..!
ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಬೇಕು ಅಂದ್ರೆ ಜನ ಯಾವ ಕೆಲಸಕ್ಕೆ ಬೇಕಾದರು ಮುಂದಾಗುತ್ತಾರೆ. ಕೆಲವರು ಜೀವದ ಹಂಗು ತೊರೆದು ಸಾಹಸಗಳ ಮಾಡುತ್ತಾರೆ. ಹೆಚ್ಚು ಲೈಕ್ಸ್ ಹೆಚ್ಚು ವೀವ್ಸ್ ಬರಬೇಕು ಎಂಬ ಕಾರಣಕ್ಕೆ ಯುವ ಸಮುದಾಯ ಈಗ ಎಂತಹ ಹುಚ್ಚಾಟಕ್ಕೆ ಬೇಕಾದರು ಇಳಿಯುತ್ತಿದೆ. ಕೆಲವರು ತಮ್ಮ ಇತಿ ಮಿತಿಗಳ ಮೀರಿ ವಿಡಿಯೋಗಳ ಮಾಡಿ ಸುದ್ದಿಯಾಗುತ್ತಾರೆ.
ಹಾಗೆ ಇಲ್ಲೊಬ್ಬ ಕೂಡ ಇಂತಹ ಇತಿ ಮಿತಿ ಇಲ್ಲದ ವಿಡಿಯೋಗಳ ಮಾಡಿಯೇ ಸುದ್ದಿಯಾಗಿದ್ದಾನೆ. ಬಿಗ್ ಬಾಸ್ ಒಟಿಟಿಯ ಸ್ಪರ್ಧಿಯಾಗಿದ್ದ ಪುನಿತ್ ಸೂಪರ್ ಸ್ಟಾರ್ ಈಗ ಮತ್ತೊಂದು ವಿಡಿಯೋ ಮೂಲಕ ಸುದ್ದಿಯಾಗಿದ್ದಾನೆ. ಆತ ಚರಂಡಿ ನೀರಿಗೆ ನಿಂಬೆ ಹಣ್ಣು ಹಿಂಡಿಕೊಂಡು ಕುಡಿಯುತ್ತಿರುವ ವಿಡಿಯೋ ಫುಲ್ ವೈರಲ್ ಆಗಿದೆ.

ಕೆಲವೇ ದಿನಗಳ ಹಿಂದೆಯಷ್ಟೇ ಪುನಿತ್ ಸೂಪರ್‌ಸ್ಟಾರ್ ಎಮ್ಮೆ ಉಚ್ಚೆಯನ್ನು ಕುಡಿದು ಸಗಣಿಯನ್ನು ಮುಖಕ್ಕೆ ಹಚ್ಚಿಕೊಂಡು ವಿಡಿಯೋ ಮಾಡಿ ಸುದ್ದಿಯಾಗಿದ್ದ ಈ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಈಗ ಕೊಳಚೆ ನೀರು ಕುಡಿದು ಆತ ಸುದ್ದಿಯಾಗಿದ್ದಾನೆ.
ಆತ ಕೊಳಚೆ ನೀರು ಹರಿಯುತ್ತಿರುವ ಚರಂಡಿ ಬಳಿ ಕುಳಿತು ಒಂದು ತಟ್ಟೆಯಲ್ಲಿ ಲಿಂಬು, ಗ್ಲಾಸ್ ತಂದಿದ್ದಾನೆ. ಬಳಿಕ ಲಿಂಬು ಕತ್ತರಿಸಿಕೊಂಡು ಗ್ಲಾಸ್‌ನಲ್ಲಿ ಚರಂಡಿ ನೀರು ಹಿಡಿದು ಅದಕ್ಕೆ ನಿಂಬು ಹಿಂಡಿದ್ದಾನೆ. ಬಳಿಕ ಗಟ ಗಟ ಎಂದು ಆ ನೀರು ಕುಡಿದಿದ್ದಾನೆ. ಈ ವಿಡಿಯೋ ನೋಡಿದ ಮಂದಿ ಅಕ್ಷರಶಃ ಆಘಾತಕ್ಕೆ ಒಳಗಾಗಿದ್ದಾರೆ.
ಹಾಗೆ ಇನ್ನೊಂದು ವಿಡಿಯೋದಲ್ಲಿ ಆತ ಕೆಸರು ಹಾಗೂ ಕೊಳಚೆ ನೀರಿನಲ್ಲಿ ಗೋಲ್‌ಗಪ್ಪ ಸವಿಯುತ್ತಿದ್ದಾನೆ. ರಸ್ತೆ ಬದಿಯ ಹೊಂಡವೊಂದರಲ್ಲಿ ನಿಂತ ಕೊಳಚೆ ನೀರಿನಲ್ಲಿ ಆತ ಗೋಲ್ ಗಪ್ಪವನ್ನು ತಿನ್ನುತ್ತಿದ್ದಾನೆ. ಪುರಿಯ ಒಳಗೆ ಆ ಕೆಸರು ಮಣ್ಣು ಹಾಗೂ ನೀರು ಹಾಕಿಕೊಂಡು ಆತ ತಿನ್ನುತ್ತಿರುವುದು ವಿಡಿಯೋದಲ್ಲಿ ನೋಡಬಹುದು.
ಈ ರೀತಿ ಆತ ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್ ಹಾಗೂ ಹೆಚ್ಚು ಕಮೆಂಟ್‌ಗಳ ಪಡೆಯಲು ಮುಂದಾಗುತ್ತಲೇ ಇದ್ದಾನೆ. ಇದು ನೆಟ್ಟಿಗರಿಗೆ ಆಘಾತ ಉಂಟು ಮಾಡಿದೆ. ಕೇವಲ ವಿಡಿಯೋಗಾಗಿ ಜನರು ಯಾವ ಮಟ್ಟಕ್ಕೆ ಇಳಿಯುತ್ತಾರೆ ಎಂಬುದನ್ನು ಕಂಡು ಶಾಕ್ ಆಗಿದ್ದಾರೆ. ಅದರಲ್ಲೂ ಯಾರು ಕೂಡ ಕನಸಿನಲ್ಲಿ ಊಹಿಸಿದ ಮಟ್ಟಕ್ಕೆ ಆತ ಇಳಿದಿರುವು ಕೆಲವರ ಆಕ್ರೋಶಕ್ಕೂ ಕಾರಣವಾಗಿದೆ.
ಈ ವಿಡಿಯೋಗಳ ನೋಡಿ ಪುನಿತ್ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ. ಸೋಶಿಯಲ್ ಮೀಡಿಯಾ ಈತನನ್ನು ಬ್ಯಾನ್ ಮಾಡಬೇಕು. ಇಂತಹ ಅಪಾಯಕಾರಿ ವಿಡಿಯೋಗಳಿಂದ ಇನ್ನೊಂದಿಷ್ಟು ಜನ ಇದನ್ನೇ ಫಾಲೋ ಮಾಡುತ್ತಾರೆ. ಇದರಿಂದ ಜೀವಕ್ಕೆ ಹಾನಿಯಾಗುತ್ತದೆ. ಇಂತವರನ್ನು ಮೊದಲು ಬ್ಯಾನ್ ಮಾಡಬೇಕಿದೆ ಎಂದು ಟೀಕಿಸಿದ್ದಾರೆ.
ಆತನ ಮಾನಸಿಕ ಆರೋಗ್ಯ ಸಂಪೂರ್ಣ ಹದಗೆಟ್ಟಂತೆ ಕಾಣುತ್ತಿದೆ. ಆತನಿಗೆ ಚಿಕಿತ್ಸೆ ಅಗತ್ಯತೆ ಎದ್ದು ಕಾಣುತ್ತಿದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಆತನ ಖಾತೆಯಲ್ಲಿ ಇಂತಹ ಹಲವು ವಿಡಿಯೋಗಳಿವೆ. ಯಾವುದೇ ಸಾಮಾಜಿಕ ಜಾಲತಾಣಗಳು ಆತನ ವಿರುದ್ಧ ಒಂದು ಸಣ್ಣ ಮುನ್ನೆಚ್ಚರಿಕಾ ಸೂಚನೆಯನ್ನು ನೀಡಿಲ್ಲ. ಆತ ಇದನ್ನೇ ಮುಂದುವರೆಸುತ್ತಾನೆ. ಇದರಿಂದ ಯುವ ಪೀಳಿಗೆಯ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಮೂರನೇ ವ್ಯಕ್ತಿಯೊಬ್ಬರು ಬರೆದಿದ್ದಾರೆ.
ಈ ರೀತಿಯ ವಿಡಿಯೋಗಳು ಆತನ ಜೀವಕ್ಕೆ ಹಾನಿ ಮಾಡಬಹುದು. ಖಂಡಿತ ಕಲುಷಿತ ನೀರು ಆತನ ಉದರಕ್ಕೆ ಇನ್ನಿಲ್ಲದ ಅಪಾಯ ತರಲಿದೆ. ನಾನು ಸದ್ಯದಲ್ಲೇ ಆತನನ್ನು ಆದ್ಪತ್ರೆಯ ಬೆಡ್ ಮೇಲೆ ಮಲಗಿರುವ ಫೋಟೋ ಮೂಲಕ ನೋಡುತ್ತೇನೆ ಎಂದು ಒಬ್ಬರು ಬರೆದಿದ್ದಾರೆ.



Click it and Unblock the Notifications
