Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಈ 4 ರಾಶಿಯ ಹುಡುಗಿಯರು ತಮ್ಮ ಸಂಗಾತಿಯ ಮೇಲೆ ಪ್ರಾಬಲ್ಯ ಸಾಧಿಸುವಲ್ಲಿ ಎತ್ತಿದ ಕೈಯಂತೆ!
ತಾವು ಹೇಳಿದ್ದೇ ನಡೆಯಬೇಕು ಎಂಬುದು ಕೆಲವರ ವ್ಯಕ್ತಿತ್ವ. ಇದು ಅವರ ಜೀವನಶೈಲಿ ಪ್ರೇರಿತವೇ ಆಗಿರಬಹುದು. ಆದರೆ, ಇದಕ್ಕೆ ಗ್ರಹಗತಿಗಳೂ ಸಹ ಕಾರಣವೆಂಬುದನ್ನು ಅಲ್ಲಗಳೆಯುವಂತಿಲ್ಲ. ಏಕೆಂದರೆ, ಪ್ರತಿಯೊಂದು ರಾಶಿಚಕ್ರವು ಕೆಲವು ಗ್ರಹಗಳಿಂದ ಪ್ರಭಾವಿತವಾಗಿರುತ್ತದೆ. ಈ ಗ್ರಹಗಳು ಜನರ ಜೀವನದ ಮೇಲೆ ಪ್ರಭಾವ ಬೀರುತ್ತವೆ.
ಇಲ್ಲಿ ನಾವು 4 ಅಂತಹ ರಾಶಿಗಳ ಬಗ್ಗೆ ಮಾತನಾಡುತ್ತೇವೆ, ಈ ರಾಶಿಯ ಹುಡುಗಿಯರ ಸ್ವಭಾವವು ಇತರರ ಮೇಲೆ ಸಾಕಷ್ಟು ಪ್ರಾಬಲ್ಯ ಸಾಧಿಸುವಂತದ್ದಾಗಿದ್ದು, ಇವರು ತಮ್ಮ ಮಾತನ್ನು ಬಿಟ್ಟು ಬೇರೆ ಯಾರ ಮಾತನ್ನೂ ಕೇಳುವುದಿಲ್ಲ. ತಮ್ಮ ಪ್ರೀತಿಯ ಸಂಗಾತಿ ಮತ್ತು ಗಂಡನ ಮೇಲೂ ಪ್ರಾಬಲ್ಯ ಸಾಧಿಸುತ್ತಾರೆ. ಆ ರಾಶಿಗಳಾವುವು ನೋಡೋಣ.
ಯಾವ ರಾಶಿಚಕ್ರದ ಹುಡುಗಿಯರು ತಮ್ಮ ಸಂಗಾತಿಯ ಮೇಲೆ ಪ್ರಾಬಲ್ಯ ಸಾಧಿಸುತ್ತಾರೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮೇಷ:
ಈ ರಾಶಿಯನ್ನ ಆಳುವ ಗ್ರಹ ಮಂಗಳ. ಮಂಗಳನ ಪ್ರಭಾವದಿಂದಾಗಿ, ಈ ರಾಶಿಚಕ್ರದ ಹುಡುಗಿಯರು ತುಂಬಾ ಶಕ್ತಿಯುತ, ಕೋಪ ಮತ್ತು ಸ್ವಾಭಿಮಾನಿಗಳಾಗಿರುತ್ತಾರೆ. ನಾಯಕತ್ವ ಗುಣ ಅವರಲ್ಲಿ ಹುಟ್ಟಿನಿಂದಲೇ ಇರುತ್ತದೆ. ಇವರು ಯಾರ ಮಾತನ್ನೂ ಕೇಳುವುದಿಲ್ಲ. ಅವರ ಮಾತನ್ನು ಎಲ್ಲರೂ ಕೇಳಬೇಕು ಎಂದು ಆಶಿಸುತ್ತಾರೆ, ಜೊತೆಗೆ ಅದೇ ರೀತಿ ಎಲ್ಲರ ಮೇಲೂ ಹಿಡಿತ ಸಾಧಿಸುತ್ತಾರೆ. ಅವರು ಎಲ್ಲವನ್ನೂ ತಮ್ಮದೇ ಆದ ರೀತಿಯಲ್ಲಿ ಮಾಡಲು ಇಷ್ಟಪಡುತ್ತಾರೆ.

ಸಿಂಹ:
ಈ ರಾಶಿಯ ಆಡಳಿತ ಗ್ರಹ ಸೂರ್ಯ ದೇವರು. ಆದ್ದರಿಂದ ಈ ರಾಶಿಚಕ್ರದ ಹುಡುಗಿಯರು ಬಲಶಾಲಿಗಳು. ಅವರು ಯಾರದ್ದೋ ಸೆರೆಯಲ್ಲಿರಲು ಇಷ್ಟಪಡುವುದಿಲ್ಲ. ಅವರು ತಮ್ಮದೇ ಆದ ರೀತಿಯಲ್ಲಿ ತಮ್ಮ ಜೀವನವನ್ನು ನಡೆಸುತ್ತಾರೆ. ಇವರು ತುಂಬಾ ಪ್ರಾಯೋಗಿಕವಾಗಿದ್ದು, ಎಲ್ಲವನ್ನೂ ತಮ್ಮದೇ ಆದ ರೀತಿಯಲ್ಲಿ ಮಾಡಲು ಇಷ್ಟಪಡುತ್ತಾರೆ. ಸಮಾಜದಲ್ಲಿ ತಮ್ಮದೇ ಆದ ಗುರುತನ್ನು ರೂಪಿಸುವಲ್ಲಿ ಯಶಸ್ವಿಯಾಗುತ್ತಾರೆ. ಅವರ ಸ್ವಭಾವವು ಸಾಕಷ್ಟು ಪ್ರಾಬಲ್ಯವೆಂದು ಪರಿಗಣಿಸಲಾಗಿದೆ.

ವೃಶ್ಚಿಕ:
ಮಂಗಳ ಗ್ರಹದ ಪ್ರಭಾವ ಈ ರಾಶಿಯ ಹುಡುಗಿಯರ ಮೇಲೆ ಇರುತ್ತದೆ. ಇವಳು ತನ್ನ ಗಂಡನನ್ನು ತುಂಬಾ ಪ್ರೀತಿಸುತ್ತಾಳೆ, ಜೊತೆಗೆ ಅವನ ಮೇಲೆ ಪ್ರಾಬಲ್ಯವೂ ಸಾಧಿಸುತ್ತಾಳೆ. ಯಾರ ಮಾತು ಇವರು ಮುಂದೆ ನಡೆಯುವುದಿಲ್ಲ. ಇವರು ತಮ್ಮ ತಪ್ಪುಗಳನ್ನು ಬೇಗ ಒಪ್ಪಿಕೊಳ್ಳುವುದಿಲ್ಲ. ಅವರ ಸ್ವಭಾವವು ಬಹಳ ಪ್ರಾಬಲ್ಯ ಹೊಂದಿರುವುದರಿಂದ ಇವರು ತಮ್ಮ ಸಂಗಾತಿಯೊಂದಿಗೆ ಹೆಚ್ಚು ಜಗಳವಾಡುತ್ತಾರೆ.

ಕುಂಭ:
ಈ ರಾಶಿಯ ಹುಡುಗಿಯರ ಮೇಲೆ ಶನಿದೇವನ ಪ್ರಭಾವ ಇರುತ್ತದೆ. ಕುಂಭ ರಾಶಿಯ ಹುಡುಗಿಯರು ಆತ್ಮವಿಶ್ವಾಸದಿಂದ ಕೂಡಿದ್ದು, ಇವರು ಶಿಸ್ತಿನಲ್ಲಿ ಇರಲು ಇಷ್ಟಪಡುತ್ತಾರೆ. ಇವಳು ಕೆಲಸವನ್ನು ಮಾಡಲು ನಿರ್ಧರಿಸಿದ ನಂತರ, ಅದನ್ನು ಪೂರ್ಣಗೊಳಿಸಿದ ನಂತರವೇ ಸಮಾಧಾನ ಪಡುತ್ತಾಳೆ. ಅವರು ತಮ್ಮ ಜೀವನದಲ್ಲಿ ಯಾವುದೇ ಹಸ್ತಕ್ಷೇಪವನ್ನು ಇಷ್ಟಪಡುವುದಿಲ್ಲ. ತಮ್ಮ ಜೀವನದ ನಿರ್ಧಾರವನ್ನು ತಾವೇ ತೆಗೆದುಕೊಳ್ಳುತ್ತಾರೆ. ಅವರು ಯಾವಾಗಲೂ ಇತರರ ಮೇಲೆ ಪ್ರಾಬಲ್ಯ ಸಾಧಿಸುತ್ತಾರೆ.



Click it and Unblock the Notifications