Latest Updates
-
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ!
ವಿಶ್ವ ಪರಿಸರ ದಿನಾಚರಣೆ 2023: ಉತ್ತಮ ಸಂದೇಶ ಸಹಿತ ವಾಟ್ಸಾಪ್, ಫೇಸ್ಬುಕ್ ಶುಭಾಶಯಗಳು
ಮನುಷ್ಯ ಸಂಕುಲ ಬದುಕಲು ಇರುವುದೊಂದೇ ಭೂಮಿ. ಎಲ್ಲವೂ ಸೊಂಪಾಗಿ ಇದ್ದ ಭೂಮಿ ಇದೀಗ ಅಕಾಲಿಕ ಮಳೆಯಿಂದ ಬೆಳೆಗಳು ನಾಶವಾಗುತ್ತಿವೆ. ಉರಿ ಬಿಸಿಲು ಮನುಷ್ಯನ ನೆತ್ತಿ ಸುಡುತ್ತಿದೆ. ಕಾಡುಪ್ರಾಣಿಗಳು ಹೊಲ ಗದ್ದೆಗಳಿಗೆ ನುಗ್ಗುತ್ತಿವೆ, ನಗರ ಪ್ರವೇಶಿಸುತ್ತಿದೆ, ಹಳ್ಳಿಗಳ ಮೇಲೆ ದಾಳಿ ಮಾಡುತ್ತಿವೆ. ಹೊಸ ಹೊಸ ರೋಗರುಜಿನಗಳು ಜೀವ ಹಿಂಡುತ್ತಿವೆ. ಋತುಗಳು ಕಾಲತಪ್ಪುತ್ತಿವೆ. ಭೂಗೋಳ ಬಿಸಿಯೇರುತ್ತಿದೆ. ಇದೇಕೆ ಹೀಗೇ? ಇದಕ್ಕೆಲ್ಲಾ ಕಾರಣ ಯಾರು? ಪ್ರಶ್ನೆಗಳೆಷ್ಟಿದ್ದರೂ ಉತ್ತರ ಒಂದೇ....ನಾವೇ, ನಮ್ಮ ದುರಾಸೆಯ ಜೀವನ!
ನಮ್ಮ ಮನುಷ್ಯ ಸಂಕುಲಕ್ಕೆ ಪರಿಸರದ ಪಪ್ರಾಮುಖ್ಯತೆ ಅರ್ಥ ಮಾಡಿಸುವ ಉದ್ದೇಶದಿಂದ ಪ್ರತಿ ವರ್ಷದ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ.

ಹೌದು, ವನಮಹೋತ್ಸವ ಎಂದೂ ಕರೆಯುವ ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಜೂನ್ 5ರಂದು ವಿಶ್ವಾದ್ಯಂತ ಆಚರಿಸಲಾಗುತ್ತದೆ. 1974ರಿಂದ ಆಚರಿಸಲ್ಪಡುತ್ತಿರುವ ಪರಿಸರ ದಿನದಂದು ಪರಿಸರ ಕುರಿತು ಜಾಗೃತಿ ಮೂಡಿಸುವುದು, ಪರಿಸರವನ್ನು ಸಂರಕ್ಷಿಸುವ ಕಾರ್ಯಗಳಿಗೆ ಉತ್ತೇಜನ ನೀಡುವ ಉದ್ದೇಶವನ್ನು ವಿಶ್ವಸಂಸ್ಥೆ ಹೊಂದಿದೆ.
ವಿಶ್ವ ಪರಿಸರ ದಿನವನ್ನು ಪ್ರತಿವರ್ಷ ಒಂದು ಸದುದ್ದೇಶದಿಂದ, ಉತ್ತಮ ಥೀಮ್ನೊಂದಿಗೆ ಆಚರಿಸಲಾಗುತ್ತದೆ. 2023 ರಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಚಾರದ ಸ್ಲೋಗನ್ #BeatPlasticPollution, 'Ecosystem Restoration'(ಪ್ಲಾಸ್ಟಿಕ್ ಮುಕ್ತಗೊಳಿಸಿ) ಥೀಮ್ನಡಿ ಆಚರಿಸಲಾಗುತ್ತಿದೆ.
ವಿಶ್ವ ಪರಿಸರ ದಿನದ ಹಿನ್ನೆಲೆ ಪರಿಸರ ಕುರಿತ ಉತ್ತಮ ಸಂದೇಶಗಳು, ವಾಟ್ಸಾಪ್, ಫೇಸ್ಬುಕ್ ಶುಭಾಶಯಗಳನ್ನು ನಾವಿಲ್ಲಿ ನಿಮಗೆ ಹೇಳಲಿದ್ದೇವೆ:
1. ಯಾವ ವಸ್ತುವನ್ನು ಪುನರ್ಬಳಕೆ ಮಾಡಲು ಸಾಧ್ಯವಿಲ್ಲವೋ ಆ ವಸ್ತುವನ್ನು ಬಳಸಲೇಬೇಡಿ
ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು
2. ಹಸಿರನ್ನೇ ಉಸಿರಾಡಿ, ಹಸಿರಿನ ಜತೆಗೆ ಜೀವಿಸಿ, ಹಸಿರಿನ ಜತೆಗೆ ಮುಂದಿನ ಜೀವನ ಪಯಣ ಸಾಗಿಸೋಣ
ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು
3. ಪ್ರಕೃತಿಯನ್ನು ನಮ್ಮ ಹಿರಿಯರು ನಮಗಾಗಿ ಬಿಟ್ಟುಕೊಟ್ಟಿದ್ದಾರೆ, ನಾವೂ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಉಳಿಸೋಣ
ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು
4. ಇಷ್ಟು ದಿನ ಮಾನವ ಪರಿಸರದ ವಿರುದ್ಧವೇ ವರ್ತಿಸಿದ್ದಾನೆ, ಆದರೆ ಇನ್ನು ಮುಂದೆ ಪರಿಸರಕ್ಕಾಗಿ ತನ್ನ ವರ್ತನೆಯ ವಿರುದ್ಧವೇ ವರ್ತಿಸಬೇಕಿದೆ.
ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು
5. ಮನೆಗೊಂದು ಮರ, ಮನಸ್ಸಿಗೊಂದು ನೆಮ್ಮದಿ
ಗಿಡ ನೆಟ್ಟು ಧರೆಯ ಗಟ್ಟಿತನವನ್ನು ಸಾರೋಣ
ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು
6. ಪರಿಸರದ ಸಮಸ್ಯೆಗಳನ್ನು ನಾವು ಪರಿಹರಿಸಿದರೆ, ನಮ್ಮ ನೂರಾರು ಸಮಸ್ಯೆಗಳು ಪರಿಹಾರವಾದಂತೆ.
ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು
7. ಪರಿಸರದಲ್ಲಿ ಸಾಕಷ್ಟು ವಾಯುಮಾಲಿನ್ಯವಿದೆ, ಅದಕ್ಕೆ ನಮ್ಮ ಶ್ವಾಸಕೋಶದ ಹೊರತು ಬೇರೆ ಎಲ್ಲೂ ಇರಲು ಜಾಗವಿಲ್ಲ.
ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು
8. ಇಡೀ ಗ್ರಹಗಳಲ್ಲೇ ಅತ್ಯದ್ಭುತವಾದ ಗ್ರಹ ಭೂಮಿ, ಅದನ್ನು ನಮ್ಮ ಮಕ್ಕಳಿಗಾಗಿ ಸಂರಕ್ಷಿಸೋಣ.
ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು
9. ನೀವು ಆಯ್ಕೆ ಮಾಡುವ ಪ್ರತಿಯೊಂದು ವಸ್ತುವಿನ ಮೂಲಕ ಈ ಪರಿಸರವನ್ನು ನೀವು ರಕ್ಷಿಸಬಹುದು ನೆನಪಿರಲಿ.
ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು
10. ಜನರ ಪ್ರಾಣಕ್ಕಾಗಿ ಪ್ರಾಣವಾಯು ಬೇಕು, ಪ್ರಾಣವಾಯುವಿಗಾಗಿ ಪ್ರತಿಯೊಬ್ಬರು ಒಂದು ಗಿಡ ನೆಡಬೇಕು.
ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು
11. ಈ ಭೂಮಿಗಿಂತ ಅತ್ಯುತ್ತಮವಾದ ಸ್ಥಳ ಬೇರೊಂದಿಲ್ಲ, ಆದ್ದರಿಂದ ಶ್ರಮವಾದರೂ ಸರಿಯೇ ನಮ್ಮ ಭೂಮಿಯನ್ನು ರಕ್ಷಿಸೋಣ.
ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು
12. ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ, ನಾವು ಪ್ರಕೃತಿಯ ಒಂದು ಭಾಗವಷ್ಟೇ.
ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು



Click it and Unblock the Notifications























