Latest Updates
-
ಬಿಸಿಲಿನ ಬೇಗೆಗೆ ಈ ಪಾನೀಯಗಳೇ ಮದ್ದು, ತಂಪಾಗಿರಿ ಹೀಗೆ! -
ಬೈಸಾಕಿ ಮತ್ತು ವಿಷು ಹಬ್ಬದ ಲುಕ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ತೆಲಂಗಾಣ ಬಿಸಿಲ ಬೇಗೆ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ -
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ -
ಹಬ್ಬದ ಫ್ಯಾಷನ್ ಟ್ರೆಂಡ್ಸ್: ಈ ಲುಕ್ ಟ್ರೈ ಮಾಡಿ ಮಿಂಚಿ -
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ
ಜ್ಯೋತಿಷ್ಯ: ಕೇತು ಗ್ರಹ ದೋಷ ಎಂದರೇನು? ಇದಕ್ಕಿರುವ ಪರಿಹಾರಗಳೇನು?
ಜ್ಯೋತಿಷ್ಯಶಾಸ್ತ್ರ ನಮ್ಮ ಬದುಕಿನ ಭವಿಷ್ಯವನ್ನು ಹೇಳುವ ಮೂಲಕ ನಮಗೆ ಮುನ್ನೆಚ್ಚರಿಕೆಗಳನ್ನು ನೀಡುತ್ತಾ, ನಾವು ಪಾಲಿಸಬೇಕಾದ ದೈವಕರ್ಮಗಳ ಬಗ್ಗೆ ನಮಗೆ ತಿಳಿಸಿಕೊಡುತ್ತದೆ. ಅದರಂತೆ ಒಂಬತ್ತು ಗ್ರಹಗಳ ಸ್ಥಾನವು ನಮ್ಮ ಜಾತಕದಲ್ಲಿ ಹೇಗಿದೆ ಎನ್ನುವುದು ಶುಭ ಅಶುಭಗಳನ್ನು ತೋರಿಸುತ್ತದೆ.

ನಾವಿಂದು ಈ ಲೇಖನದಲ್ಲಿ ಕೇತು ಗ್ರಹದ ಲಕ್ಷಣಗಳು, ಇದು ಅಶುಭ ಸ್ಥಾನದಲ್ಲಿದ್ದರೆ ಮಾಡಬೇಕಾದ ಪರಿಹಾರಗಳ ಬಗ್ಗೆ ತಿಳಿಸಿಕೊಡಲಿದ್ದೇವೆ:

1. ಕೇತುವಿನ ಅಂತರದಶ ಮತ್ತು ಮಹಾದಶ ಎಂದರೇನು?
ಈ ನವಗ್ರಹಗಳ ಎಲ್ಲರ ಜಾತಕದಲ್ಲೂ ಅಂತರದಶ ಮತ್ತು ಮಹಾದಶಗಳು ನಡೆಯುತ್ತವೆ. ಶನಿಯು ರಾಹುವಿನ ಮಹಾದಶಾ ಇದ್ದಂತೆ. ಹಾಗೆಯೇ ಕೇತು ಗ್ರಹಕ್ಕೂ ಮಹಾದಶಾ ಇದೆ. ಕೇತುವನ್ನು ನೆರಳು ಗ್ರಹ ಹಾಗೂ ಪಾಪ ಗ್ರಹ ಎಂದು ಸಹ ಹೇಳಲಾಗುತ್ತದೆ. ಕೇತು ಗ್ರಹದ ಸ್ಥಾನವು 12 ರಾಶಿಚಕ್ರಗಳ ಜೀವನದ ಮೇಲೆ ಖಂಡಿತ ಪರಿಣಾಮ ಬೀರುತ್ತದೆ. ಕೇತುವು ಸರಿಯಾದ ಸ್ಥಾನದಲ್ಲಿದ್ದರೆ ಶುಭ ಫಲಿತಾಂಶಗಳನ್ನು ಮತ್ತು ಕೆಟ್ಟ ಸ್ಥಾನದಲ್ಲಿದ್ದರೆ ಅಶುಭ ಫಲಿತಾಂಶಗಳನ್ನು ನೀಡುತ್ತದೆ. ಕೇತುವಿನ ಮಹಾದಶಾ, ಲಕ್ಷಣಗಳು ಮತ್ತು ಪರಿಹಾರಗಳನ್ನು ಮುಂದೆ ತಿಳಿಯಿರಿ.

2. ಕೇತುವಿನ ಮಹಾದಶಾ ಎಂದರೇನು, ಇದು ಎಷ್ಟು ವರ್ಷ ಇರುತ್ತದೆ?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೇತುವಿನ ಮಹಾದಶಾ 7 ವರ್ಷಗಳವರೆಗೆ ಇರುತ್ತದೆ. ಈ ಸಮಯದಲ್ಲಿ ಶುಭ ಅಥವಾ ಅಶುಭ ಫಲಿತಾಂಶಗಳನ್ನು ಪಡೆಯಲಾಗುತ್ತದೆ. ಅಂತರದಶಾ 11 ತಿಂಗಳಿಂದ 1.25 ವರ್ಷಗಳವರೆಗೆ ಇರುತ್ತದೆ. ಕೇತುವಿನ ಮಹಾದಶಾ ಬುಧ ಮತ್ತು ಶುಕ್ರನ ನಡುವೆ ಬರುತ್ತದೆ. ಅಂದರೆ ಮೊದಲು ಬುಧದ ಮಹಾದಶಾ ಬರುತ್ತದೆ, ನಂತರ ಕೇತುವಿನ ಮಹಾದಶಾ ಏಳು ವರ್ಷಗಳು ಮತ್ತು ನಂತರ ಶುಕ್ರನ ಮಹಾದಶಾ 20 ವರ್ಷಗಳು.

3. ಕೇತುವಿನ ಅಶುಭದ ಲಕ್ಷಣಗಳು
ಜಾತಕದಲ್ಲಿ ಕೇತುವಿನ ಸ್ಥಾನವು ಕೆಟ್ಟದಾಗಿದ್ದರೆ, ಅದರ ಪರಿಣಾಮಗಳು ದೈನಂದಿನ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇಂಥಾ ಯಾವುದೇ ಒಂದು ಲಕ್ಷಣಗಳು ಅಥವಾ ಸಮಸ್ಯೆಗಳನ್ನು ಗುರುತಿಸುವ ಮೂಲಕ ಸಕಾಲಿಕ ಕ್ರಮಗಳನ್ನು ತೆಗೆದುಕೊಳ್ಳಬಹುದು.
ಜಾತಕದಲ್ಲಿ ಕೇತು ಗ್ರಹದ ಕೆಟ್ಟ ಸ್ಥಾನ ಇದ್ದರೆ ಅದರ ಲಕ್ಷಣಗಳನ್ನು ಹೀಗಿರುತ್ತದೆ:
ಕೇತುವಿನ ಕೆಟ್ಟ ಸ್ಥಾನದಿಂದ ಚರ್ಮ ಸಂಬಂಧಿ ರೋಗಗಳು
ಕೀಲು ನೋವಿನ ಸಮಸ್ಯೆ
ಕಿವು ಕೇಳಿಸದೆ ಇರುವುದು
ಬಂಜೆತನ
ಅತಿಯಾದ ಕೆಮ್ಮಿನ ಸಮಸ್ಯೆ
ಮಕ್ಕಳು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ
ಹೆಚ್ಚಾಗಿ ಕೂದಲು ಉದುರುತ್ತಿದ್ದರೆ
ದೇಹದ ನರಗಳಲ್ಲಿ ದೌರ್ಬಲ್ಯ

4. ಕೇತುವಿನ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಪರಿಹಾರಗಳು
* ನೀವು ಜಾತಕದಲ್ಲಿ ಕೇತುವಿನ ಸ್ಥಾನವನ್ನು ಬಲಪಡಿಸಲು ಬಯಸಿದರೆ, ಈ ಮಂತ್ರವನ್ನು ಪ್ರತಿದಿನ 108 ಬಾರಿ ಪಠಿಸಿ - ಓಂ ಶ್ರಾಂ ಶ್ರೀಂ ಶ್ರೌಂ ಸಃ: ಕೇತವೇ ನಮಃ:
* ಕೇತು ಗ್ರಹವನ್ನು ಶಾಂತಗೊಳಿಸಲು, ಶನಿವಾರದಂದು ಅರಳೀ ಮರಕ್ಕೆ ನೀರನ್ನು ಅರ್ಪಿಸಿ. ನೀರಿಗೆ ಸ್ವಲ್ಪ ಗರಿಕೆಯನ್ನು ಹಾಕಿ. ಇದರೊಂದಿಗೆ ಸಂಜೆ ತುಪ್ಪದ ದೀಪವನ್ನು ಹಚ್ಚಿ.
* ಕೇತುವಿನ ಕೋಪವನ್ನು ತಪ್ಪಿಸಲು, ಭಾನುವಾರದಂದು ಹೆಣ್ಣು ಮಕ್ಕಳಿಗೆ ಕಡುಬು ಮತ್ತು ಸಿಹಿ ಮೊಸರು ತಿನ್ನಿಸಿ. ಇದರಿಂದ ನಿಮಗೆ ಲಾಭವಾಗಲಿದೆ.
* ಜಾತಕದಲ್ಲಿ ಕೇತು ಗ್ರಹದ ಸ್ಥಾನವನ್ನು ಸರಿಪಡಿಸಲು, ಬೆಳ್ಳುಳ್ಳಿ ಕಲ್ಲು (ಲೆಹ್ಸುನಿಯಾ) ಧರಿಸುವುದು ಮಂಗಳಕರ.
* ಕೇತು ಗ್ರಹದ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು, ಬೇಯಿಸಿದ ಅನ್ನಕ್ಕೆ ಸ್ವಲ್ಪ ಮೊಸರು, ಕಪ್ಪು ಎಳ್ಳು ಸೇರಿಸಿ ಮಿಶ್ರಣ ಮಾಡಿ ಅದನ್ನು ಅರಳೀ ಮರದ ಕೆಳಗೆ ಇಟ್ಟು ಕೇತುವನ್ನು ಪ್ರಾರ್ಥಿಸಿ.
* ಕೇತುವಿನ ದುಷ್ಪರಿಣಾಮಗಳನ್ನು ತಪ್ಪಿಸಲು, ನಾಯಿಗಳಿಗೆ ಬ್ರೆಡ್ ತಿನ್ನಿಸಿ.

5. ಕೇತು ಬೀಜ ಮಂತ್ರ ಪಠಿಸಿ
ಕೇತು ಬೀಜ ಮಂತ್ರ
ಓಂ ಶ್ರಾಂ ಶ್ರೀಂ ಶ್ರೌಂ ಸಃ: ಕೇತವೇ ನಮಃ:
ಕೇತು ಬೀಜ ಮಂತ್ರದ ಪಠಿಸುವುದರ ಪ್ರಯೋಜನಗಳು
* ಕೇತು ಬೀಜ ಮಂತ್ರವನ್ನು ಪಠಿಸಲು ಉತ್ತಮ ಸಮಯ ಶುಕ್ಲ ಪಕ್ಷದ ಮಂಗಳವಾರದಂದು ಪ್ರಾರಂಭಿಸಿ
* ಹೆಚ್ಚು ಆಧ್ಯಾತ್ಮಿಕವಾಗಿ ಮಾಡುತ್ತದೆ.
* ನಿಗೂಢ ಜ್ಞಾನ ಲಭಿಸುತ್ತದೆ.
* ಕೇತು ಬೀಜ ಮಂತ್ರ ನಮ್ಮನ್ನು ಖ್ಯಾತಿ ಗೊಳಿಸಬಹುದು.
* ಕೇತು ಮಂತ್ರ ಬುದ್ಧಿವಂತಿಕೆ, ಆಧ್ಯಾತ್ಮಿಕ ಜ್ಞಾನ ತರುತ್ತದೆ.
* ಕೇತುವಿನ ಮಂಗಳಕರ ಪರಿಣಾಮ ಪಡೆಯಲು, ಪ್ರತಿದಿನ 108 ಬಾರಿ ಮಂತ್ರ ಪಠಿಸಿ.
ಕೇತು ಗಾಯತ್ರಿ ಮಂತ್ರ
ಓಂ ಚಿತ್ರವರ್ಣಯ ವಿದ್ಮಾಹೇ, ಸರಪರೂಪಾಯ ಧಿಮಹಿ, ತನ್ನೋ ಕೇತು ಪ್ರಚೋದಯಾತ್॥
ಓಂ ಪದ್ಮ-ಪುತ್ರಾಯ ವಿದಮಹೇ ಅಮೃತೇಶಾಯ ಧೀಮಹಿ ತನ್ನೋ ಕೇತುಃ ಪ್ರಚೋದಯಾತ್॥
ಓಂ ಗದ್ದಾಹ್ಸ್ತಾಯ ವಿದ್ಮಹೇ ಅಮೃತೇಶಾಯ ಧೀಮಹಿ ತನ್ನ: ಕೇತು: ಪ್ರಚೋದಯಾತ್॥
ಓಂ ಅಶ್ವಾಧ್ವಜಾಯ ವಿದ್ಮಹೇ ಶೂಲಾಹಸ್ತಾಯ ಧೀಮಹಿ ತನ್ನೋ ಕೇತು: ಪ್ರಚೋದಯಾತ॥



Click it and Unblock the Notifications











