Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಶುಕ್ರ ಗೋಚಾರ ಫಲ: ಈ 5 ರಾಶಿಯವರಿಗೆ ಲಕ್ಷ್ಮಿ ಕೃಪೆಯಿಂದಾಗಿ ಅದೃಷ್ಟವೇ ಅದೃಷ್ಟ
ಮೇ 23 ರಂದು ಶುಕ್ರವು ಮೇಷ ರಾಶಿಗೆ ಪ್ರವೇಶಿಸಿದೆ. ಜ್ಯೋತಿಷ್ಯದಲ್ಲಿ ಶುಕ್ರನಿಗೆ ವಿಶೇಷ ಸ್ಥಾನವಿದೆ. ಶುಕ್ರದೇವನು ಮಂಗಳಕರ ಸ್ಥಾನದಲ್ಲಿದ್ದಾಗ ಆ ರಾಶಿಯ ವ್ಯಕ್ತಿಗೆ ಶುಕ್ರದೆಸೆ ಪ್ರಾರಂಭವಾಗುವುದು.
ಈ ಸಮಯದಲ್ಲಿ ಲಕ್ಷ್ಮಿಯ ವಿಶೇಷವಾದ ಕೃಪೆ ಇರುತ್ತದೆ. ಈ ಸಮಯದಲ್ಲಿ ಮುಟ್ಟಿದ್ದೆಲ್ಲಾ ಚಿನ್ನವಾಗುವುದು. ಏನಾದರೂ ಖರೀದಿಗೆ, ಹೂಡಿಕೆಗೆ ಸೂಕ್ತವಾದ ಸಮಯವಾಗಿರುತ್ತದೆ.

ಇದೀಗ ಶುಕ್ರನು ಮೇಷ ರಾಶಿಯಲ್ಲಿ ಇದೆ. ಶುಕ್ರನು ಈ ರಾಶಿಯಲ್ಲಿ ಇರುವಾಗ ಕೆಲವು ರಾಶಿಗಳಿಗೆ ಒಳ್ಳೆಯ ದಿನಗಳಾಗಿರುತ್ತದೆ. ಈ ಸಮಯದಲ್ಲಿ ಆ ರಾಶಿಯವರ ಅದೃಷ್ಟವೇ ಬದಲಾಗುವುದು.
ಈ ಶುಕ್ರ ಸಂಚಾರದಲ್ಲಿ ಈ ರಾಶಿಯವರ ಮೇಲೆ ವಿಶೇಷವಾದ ಲಕ್ಷ್ಮಿ ಕೃಪೆ ಇರುತ್ತದೆ:

ಮೇಷ ರಾಶಿ
ಮೇಷ ರಾಶಿಯವರ ಆರ್ಥಿಕ ಭಾಗವು ಬಲವಾಗಿರುತ್ತದೆ. ನಿಮಗೆ ಈ ಅವಧಿಯಲ್ಲಿ ಹೂಡಿಕೆಯಿಂದ ಲಾಭವಾಗಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.
ಲಕ್ಷ್ಮಿಯ ಕೃಪೆಯಿಂದ ಜೀವನ ಸುಖಮಯವಾಗುತ್ತದೆ. ಈ ಸಮಯದಲ್ಲಿ ಖರ್ಚು ಕಡಿಮೆಯಾಗಲಿದೆ. ವಹಿವಾಟುಗಳಿಗೆ ಈ ತಿಂಗಳು ತುಂಬಾ ಅನುಕೂಲಕರವಾಗಿರುತ್ತದೆ.

ಮಿಥುನ ರಾಶಿ
ಈ ಸಮಯದಲ್ಲಿ ನೀವು ಹೊಸ ಮನೆ ಅಥವಾ ಆಸ್ತಿ ಖರೀದಿಸಲು ಬಯಸುವುದಾದರೆ ಅದು ಸಾಧ್ಯವಾಗುವುದು, ಏಕೆಂದರೆ ಲಕ್ಷ್ಮಿಯ ವಿಶೇಷ ಕೃಪೆ ನಿಮ್ಮ ಮೇಲಿರುತ್ತದೆ. ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.ಯಾವುದಾದರೂ ಹೊಸ ಕಾರ್ಯಕ್ಕೆ ಕೈ ಹಾಕುವುದಾದರೆ ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ಸಮಯ.
ವ್ಯಾಪಾರ-ವಹಿವಾಟುಗಳಿಗೆ ಸಮಯವು ಮಂಗಳಕರವಾಗಿದೆ, ಆದರೆ ವ್ಯವಹಾರಗಳನ್ನು ಮಾಡುವ ಮೊದಲು, ಎಚ್ಚರಿಕೆಯಿಂದ ಮಾಡಿ. ಹಣಕಾಸಿನ ಪರಿಸ್ಥಿತಿ ತುಂಬಾ ಚೆನ್ನಾಗಿರುತ್ತದೆ.

ವೃಶ್ಚಿಕ ರಾಶಿ
ಲಕ್ಷ್ಮಿಯ ಕೃಪೆಯಿಂದ ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ನೀವು ಹೊಸ ಮನೆ ಅಥವಾ ವಾಹನವನ್ನು ಖರೀದಿಸಬಹುದು. ವ್ಯಾಪಾರಕ್ಕೆ ಈ ಸಮಯವು ತುಂಬಾ ಅನುಕೂಲಕರವಾಗಿದೆ. ವ್ಯವಹಾರದಲ್ಲಿ ಲಾಭ ಸಿಗುವುದು. ವ್ಯಾಪಾರಸ್ಥರಿಗೆ ಅನುಕೂಲಕರವಾದ ಸಮಯವಾಗಿದೆ.

ಧನು ರಾಶಿ
ಶುಕ್ರನ ಕೃಪೆಯಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹೂಡಿಕೆ ಮಾಡಲು ಈ ಸಮಯ ಉತ್ತಮವಾಗಿದೆ. ಹೊಸ ವಾಹನ ಖರೀದಿಸಬಹುದು.
ವ್ಯಾಪಾರ-ವಹಿವಾಟುಗಳಿಗೂ ಸಮಯ ಉತ್ತಮವಾಗಿದೆ. ಲಕ್ಷ್ಮಿಯ ಕೃಪೆಯಿಂದಾಗಿ ಆದಾಯದ ಮೂಲಗಳು ಹೆಚ್ಚಾಗುತ್ತವೆ.

ಕುಂಭ ರಾಶಿ
ಈ ಸಮಯದಲ್ಲಿ ಮಾಡುವ ಹೂಡಿಕೆಯಿಂದ ಆಭ ಗಳಿಸುವಿರಿ. ಈ ಸಮಯದಲ್ಲಿ ಖರ್ಚುಗಳು ಕಡಿಮೆಯಾಗಲಿದೆ. ವ್ಯಾಪಾರ ವರ್ಗದವರಿಗೆ ಈ ಸಮಯ ಒಳ್ಳೆಯದಿದೆ. ಲಕ್ಷ್ಮಿಯ ವಿಶೇಷ ಕೃಪೆ ಇರುವುದರಿಂದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ನೀವು ವಾಹನ ಅಥವಾ ಆಸ್ತಿ ಖರೀದಿಗೆ ಪ್ರಯತ್ನಿಸುತ್ತಿದ್ದರೆ ಈ ಸಮಯದಲ್ಲಿ ಸಾಧ್ಯವಾಗುವುದು.



Click it and Unblock the Notifications
