Just In
Don't Miss
- Finance
ಎಸಿ ಬಳಸಿದರೂ ವಿದ್ಯುತ್ ಬಿಲ್ ಕಡಿತ ಮಾಡುವುದು ಹೇಗೆ?
- News
ತೆಲಂಗಾಣ ಬಂಡವಾಳ ಹೂಡಿಕೆಗೆ ಮಾಡಲು ವಿದೇಶಿ ಕಂಪನಿಗಳಿಗೆ ಕರೆ ಕೊಟ್ಟ ಕೆಟಿಆರ್
- Movies
ಜೇನುಗೂಡು: ದಿಯಾ ಶಶಾಂಕ್ ಮಧ್ಯೆ ಬಂದು ಹುಳಿ ಹಿಂಡುತ್ತಿರೊ ಮಾಯಾಗೆ ಖಡಕ್ ಉತ್ತರ ಸಿಗುತ್ತಾ?
- Sports
RCB vs GT: ಮ್ಯಾಥ್ಯೂ ವೇಡ್ ವಿವಾದಾತ್ಮಕ ಔಟ್ ಬಗ್ಗೆ ಹಾರ್ದಿಕ್ ಪಾಂಡ್ಯ ಶಾಕಿಂಗ್ ಹೇಳಿಕೆ!
- Technology
ವಾಟ್ಸಾಪ್ನಿಂದ ಹೊಸ ಕ್ಲೌಡ್ ಎಪಿಐ ಘೋಷಣೆ! ಇದರ ಉಪಯೋಗ ಏನು?
- Automobiles
ಮಾಡಿಫೈ ಮಾಡಿದ ಮಹೀಂದ್ರಾ ಥಾರ್ ಎಸ್ಯುವಿ ಮಾಲೀಕನಿಗೆ ದಂಡ ವಿಧಿಸಿದ ನ್ಯಾಯಾಲಯ
- Education
KSEEB Recruitment 2022 : 5 ವಕೀಲ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಾಸ್ತು ಸಲಹೆ: ಹಣದ ಸಮಸ್ಯೆಯಿಂದ ಮುಕ್ತಿ ಪಡೆಯಲು ಬುಧವಾರ ಹೀಗೆ ಮಾಡಿ
ಬುಧವಾರ ಗಣೇಶನಿಗೆ ಸಮರ್ಪಿಸಲಾಗಿದೆ ಅಲ್ಲದೇ ಬುಧ ಗ್ರಹದ ಆಡಳಿತ ದಿನ. ಬುಧ ಗ್ರಹವು ಬುದ್ಧಿವಂತಿಕೆ ಮತ್ತು ವಿವೇಚನೆಯ ಅಧಿಪತಿ ಎಂದು ಹೇಳಲಾಗುತ್ತದೆ. ಈ ದಿನದಂದು ಗಣಪತಿಯನ್ನು ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಗಣೇಶ ಎಲ್ಲಿ ನೆಲೆಸುತ್ತಾನೆಯೋ ಅಲ್ಲಿ ಎಲ್ಲವೂ ಶುಭ ಎಂದು ಹೇಳಲಾಗುತ್ತದೆ. ಇದಲ್ಲದೇ ಬುಧ ಗ್ರಹವನ್ನು ಶಾಂತಗೊಳಿಸಲು ಪೂಜೆಯನ್ನು ಮಾಡಲಾಗುತ್ತದೆ.
ಜಾತಕದಲ್ಲಿ ಬುಧ ಗ್ರಹವನ್ನು ಶಾಂತಗೊಳಿಸಲು ಅನೇಕ ಜನರು ವಿವಿಧ ರೀತಿಯ ಪೂಜಾ ಕ್ರಮಗಳನ್ನು ಮಾಡುತ್ತಾರೆ. ಇದೆಲ್ಲದರ ಹೊರತಾಗಿ ಬುಧವಾರ ಕೆಲವು ಕೆಲಸಗಳನ್ನು ಮಾಡಬಾರದು ಹಾಗೂ ಮಾಡಿದರೆ ಅಶುಭ ಎಂದು ನಂಬಲಾಗಿದೆ. ನೀವೂ ಸಹ ಹಣಕಾಸಿನ ತೊಂದರೆಯಿಂದ ಬಳಲುತ್ತಿದ್ದರೆ, ಕೌಟುಂಬಿಕ ಸಮಸ್ಯೆ ಹೆಚ್ಚಾಗಿದ್ದರೆ, ಮಾನಸಿಕ ನೆಮ್ಮದಿ ಇಲ್ಲವಾಗಿದ್ದರೆ ಬುಧವಾರದಂದು ಇಂಥಾ ಕೆಲಸಗಳನ್ನು ಮಾಡಬೇಡಿ. ಅಲ್ಲದೆ ಇದನ್ನು ಮಾಡುವುದರಿಂದ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ.

ಹೂಡಿಕೆ ಮಾಡಬೇಡಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧವಾರ ಹಣಕಾಸು ಹೂಡಿಕೆಗೆ ಒಳ್ಳೆಯ ದಿನವಲ್ಲ. ಈ ದಿನ ಹೂಡಿಕೆ ಮಾಡಬಾರದು. ನೀವು ಬುಧವಾರದ ಬದಲು ಶುಕ್ರವಾರ ಹೂಡಿಕೆ ಮಾಡಿ, ಶುಕ್ರವಾರ ಲಕ್ಷ್ಮಿಯ ದಿನ, ಈ ದಿನ ಹೂಡಿಗೆಯು ಹಣವನ್ನು ದುಪ್ಪಟ್ಟು ಮಾಡುತ್ತದೆ.

ಸಾಲ ಮಾಡಬೇಡಿ
ಬುಧವಾರದಂದು ಸಾಲ ಮಾಡುವುದನ್ನು ತಪ್ಪಿಸಬೇಕು. ಆದರೆ ಈ ದಿನ ಹಣ ನಿಮ್ಮ ಕೈಗೆ ಬಂದರೆ ಅದು ಶುಭದ ಸಂಕೇತ. ಆದರೆ ನೀವು ಯಾರಿಗಾದರೂ ಹಣವನ್ನು ಕೊಡುವುದು, ಇತರ ಹಣದ ವಹಿವಾಟು ಹಾನಿಕಾರಕವಾಗಿದೆ. ಆದ್ದರಿಂದ ಬುಧವಾರ ಸಾಲವನ್ನು ತೆಗೆದುಕೊಳ್ಳಬೇಡಿ.

ಕಪ್ಪು ಬಟ್ಟೆಗಳನ್ನು ಧರಿಸಬೇಡಿ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ದಂಪತಿಗಳ ನಡುವೆ ಸಮಸ್ಯೆ ಇದ್ದರೆ, ಆಗಾಗ್ಗೆ ಜಗಳ ಆಗುತ್ತಿದ್ದರೆ ಬುಧವಾರದಂದು ಮಹಿಳೆಯರು ಕಪ್ಪು ಬಟ್ಟೆಗಳನ್ನು ಧರಿಸಬಾರದು. ಇದು ನಿಮ್ಮ ವೈವಾಹಿಕ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು.

ಪಶ್ಚಿಮಕ್ಕೆ ಪ್ರಯಾಣಿಸಬೇಡಿ
ಬುಧವಾರದಂದು ಪಶ್ಚಿಮ ದಿಕ್ಕಿನಲ್ಲಿ ಪ್ರಯಾಣ ಮಾಡುವುದು ಅಶುಭವೆಂದು ಜ್ಯೋತಿಷಿಗಳು ನಂಬುತ್ತಾರೆ. ಈ ದಿನದ ಪ್ರಯಾಣವು ನಿಮ್ಮ ಕೆಲಸವನ್ನು ಹಾಳು ಮಾಡುತ್ತದೆ. ಮುಂದಿನ ಬಾರಿ ಬುಧವಾರದಂದು ಪ್ರಯಾಣ ಮಾಡುವ ಮುನ್ನ ಎಚ್ಚರವಹಿಸಿ.

ಕಠಿಣ ಪದಗಳನ್ನು ಆಡಬೇಡಿ
ಬುಧ ಗ್ರಹವನ್ನು ಮಾತು ಮತ್ತು ಸಂವಹನದ ಅಂಶವೆಂದು ಪರಿಗಣಿಸಲಾಗುತ್ತದೆ. ಈ ದಿನ ಕಹಿ ಮಾತುಗಳನ್ನಾಡಬಾರದು. ಈ ದಿನ ಕಹಿ ವಿಷಯಗಳನ್ನು ಮಾತನಾಡುವುದು ಮನೆಯಲ್ಲಿ ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಇದಲ್ಲದೇ ಮನೆಯಲ್ಲಿ ಜಗಳವಾಗಬಹುದು.