Latest Updates
-
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು
ಜ.2 ವೈಕುಂಠ ಏಕಾದಶಿ 2023: ವಿಷ್ಣುವಿನ ಕೃಪೆಗೆ ಪಾತ್ರರಾಗಲು ಹೀಗೆ ಮಾಡಿ
ವಿಷ್ಣುವಿನ ಆರಾಧನೆ ಹಾಗೂ ಉಪವಾಸಕ್ಕೆ ಪ್ರಸಿದ್ಧಿಯಾಗಿರುವ ವೈಕುಂಠ ಏಕಾದಶಿಯು ಹೊಸ ವರ್ಷದ ಆರಂಭದಲ್ಲೇ ಬಂದಿದೆ. ಅಂದರೆ, ಜನವರಿ, 2, 2023ರಂದು ವೈಕುಂಠ ಏಕಾದಶಿ ಆಚರಣೆ ಬಂದಿದ್ದು, ಈ ದಿನ ವಿಷ್ಣುವನ್ನು ಬಹಳ ಶ್ರದ್ಧೆ ಹಾಗೂ ಭಕ್ತಿಯಿಂದ ನೆರವೇರಿಸಿದರೆ, ಮನಸ್ಸಿನ ಇಷ್ಟಾರ್ಥಗಳೆಲ್ಲವೂ ಈಡೇರುತ್ತದೆ ಎಂಬ ನಂಬಿಕೆಯಿದೆ. ಹಾಗಾದ್ರೆ ಈ ದಿನ ವಿಷ್ಣುವಿನ ಕೃಪೆಗೆ ಪಾತ್ರರಾಗಲು ಮಾಡಲೇಬೇಕಾದ ಹಾಗೂ ಮಾಡಲೇಬಾರದ ವಿಚಾರಗಳು ಯಾವುವು ಎಂಬುದನ್ನ ನೋಡೋಣ.
ವೈಕುಂಠ ಏಕಾದಶಿಯಂದು ಮಾಡಬೇಕಾದ ವಿಚಾರಗಳನ್ನು ಈ ಕೆಳಗೆ ನೀಡಲಾಗಿದೆ:

1) ವಿಷ್ಣುವಿನ ದೇವಾಲಯಕ್ಕೆ ಭೇಟಿ ನೀಡಿ:
ನಿಮ್ಮ ನೆರೆಹೊರೆಯಲ್ಲಿರುವ ವಿಷ್ಣುವಿನ ಅಥವಾ ಅವನ ಯಾವುದೇ ಅವತಾರಗಳ ದೇವಾಲಯಕ್ಕೆ ಭೇಟಿ ನೀಡಿ, ವೈಕುಂಠ ಏಕಾದಶಿ ಆಚರಣೆಗಳಲ್ಲಿ ಭಾಗವಹಿಸಿ. ಹೆಚ್ಚಿನ ವಿಷ್ಣು ದೇವಾಲಯಗಳಲ್ಲಿ ವೈಕುಂಠ ದ್ವಾರ ಎಂಬ ವಿಶೇಷ ಪ್ರವೇಶವನ್ನು ಈ ದಿನದಂದು ನಿರ್ಮಿಸಲಾಗುತ್ತದೆ. ಈ ಮಂಗಳಕರ ದಿನದಂದು ಈ ದ್ವಾರವನ್ನು ಹಾದು ಹೋಗುವವರು ವೈಕುಂಠವನ್ನು ತಲುಪುತ್ತಾರೆ ಎಂದು ಹೇಳಲಾಗುತ್ತದೆ.
ಒಂದು ವೇಳೆ, ನೀವು ದೇವಸ್ಥಾನಕ್ಕೆ ಭೇಟಿ ನೀಡಲು ಸಾಧ್ಯವಾಗದಿದ್ದರೆ, ನಿಮ್ಮ ಮನೆಯಲ್ಲಿ ವಿಷ್ಣು, ಶ್ರೀಕೃಷ್ಣ ಅಥವಾ ಅವರ ಯಾವುದೇ ಅವತಾರಗಳ ದೇವರುಗಳಿದ್ದರೆ, ಅವುಗಳನ್ನು ಸಹ ಅಲಂಕರಿಸಿ, ವಿಶೇಷ ಪೂಜೆಯನ್ನು ಮಾಡಬಹುದು.

2) ವಿಷ್ಣು ಸಹಸ್ರನಾಮ ಪಠಿಸಿ:
ವೈಕುಂಠ ಏಕಾದಶಿಯ ದಿನದಂದು ದೇವಸ್ಥಾನಕ್ಕೆ ತೆರಳಿ ಅಥವಾ ಮನೆಯಲ್ಲಿಯೇ ವಿಷ್ಣು ಸಹಸ್ರನಾಮ ಪಠಿಸಿ. ಜೊತೆಗೆ ಹರೇ ಕೃಷ್ಣ ಮಹಾಮಂತ್ರವನ್ನು ಪಠಿಸಬಹುದು. ಇವುಗಳನ್ನು ಪಠಿಸುವುದರಿಂದ ನಮ್ಮ ಹೃದಯ ಶುದ್ಧೀಕರವಾಗಿ, ನಮ್ಮ ಜೀವನದಲ್ಲಿನ ಎಲ್ಲಾ ದುಃಖಗಳು ನಿವಾರಣೆಯಾಗುತ್ತದೆ.

3) ಭಗವದ್ಗೀತೆಯನ್ನು ಓದಿ:
ಗೀತಾ ಜಯಂತಿಯು ಸಾಮಾನ್ಯವಾಗಿ ವೈಕುಂಠ ಏಕಾದಶಿಯ ಮಾಸದಲ್ಲಿ ಬರುತ್ತದೆ. ಶ್ರೀಕೃಷ್ಣನು ಅರ್ಜುನನಿಗೆ ಆಧ್ಯಾತ್ಮಿಕ ಜ್ಞಾನದ ಸಾರವನ್ನು ಬೋಧಿಸಿದ ದಿನವೇ ಗೀತಾ ಜಯಂತಿ. ಆದ್ದರಿಂದ, ಭಗವದ್ಗೀತೆಯನ್ನು ಓದುವುದು ಈ ದಿನದಂದು ಹೆಚ್ಚು ಶಿಫಾರಸು ಮಾಡಲಾದ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಒಂದಾಗಿದೆ. ಭಗವದ್ಘೀತೆಯ ಶ್ಲೋಕಗಳನ್ನು ಪಠಿಸಲು ಮತ್ತು ಅವುಗಳ ಅರ್ಥವನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯವನ್ನು ಕಳೆಯಿರಿ.

4) ಉಪವಾಸ ಮಾಡಿ:
ಇದು ಏಕಾದಶಿ ದಿನವಾಗಿರುವುದರಿಂದ ಉಪವಾಸವನ್ನು ಆಚರಿಸಲು ಪ್ರಯತ್ನಿಸಿ. ಉಪವಾಸವು ನಮ್ಮ ದೇಹ ಮತ್ತು ಮನಸ್ಸಿಗೆ ಮಾತ್ರ ಪ್ರಯೋಜನಕಾರಿಯಲ್ಲ, ಇದು ಬಹಳಷ್ಟು ಆಧ್ಯಾತ್ಮಿಕ ಪ್ರಯೋಜನಗಳನ್ನು ಹೊಂದಿದೆ. ಉಪವಾಸವನ್ನು ಆಚರಿಸಲು ವಿವಿಧ ಹಂತಗಳಿದ್ದು, ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಆಯ್ಕೆ ಮಾಡಬಹುದು. ಯಾವುದೇ ಆಹಾರ ಸೇವಿಸದೇ,ಉಪವಾಸವಿದ್ದು, ಮರುದಿನ ದ್ವಾದಶಿಯಂದು ತುಳಸಿ ನೀರನ್ನು ಸೇವಿಸುವ ಮೂಲಕ ಉಪವಾಸವನ್ನು ಕೈಬಿಡಬೇಕು. ಉಪವಾಸ ತ್ಯಜಿಸಿದ ನಂತರ ಉದ್ದಿನ ಬೇಳೆ, ಅಗಸೆ ಸೊಪ್ಪು, ನೆಲ್ಲಿಕಾಯಿ, ಮೊಸರು ಬೆರೆಸಿ ಮಾಡಿದಂತಹ ರಾಯತವನ್ನು ಸೇವಿಸಬೇಕು. ಕೆಲವರು ಏಕಾದಶಿಯಂದು ಮೌನವ್ರತವನ್ನೂ ಆಚರಿಸುತ್ತಾರೆ.

5) ವಿಷ್ಣುವಿನ ಹೆಸರಲ್ಲಿ ದಾನ ಮತ್ತು ಸೇವೆ ಮಾಡಿ:
ಈ ಮಂಗಳಕರ ದಿನದಂದು ದೇವಸ್ಥಾನಕ್ಕೆ ಹೋಗಿ, ಈ ಕೆಳಗಿನ ಸೇವೆಗಳನ್ನು ಸಲ್ಲಿಸಬಹುದು. ಇದರಿಂದ ಗೋವಿಂದನ ಆಶೀರ್ವಾದವನ್ನು ಪಡೆಯಬಹುದು.
ಪ್ರಸಾದವನ್ನು ವಿತರಿಸುವುದು, ಪುಸ್ತಕಗಳನ್ನು ವಿತರಿಸುವುದು, ಸಂದರ್ಶಕರಿಗೆ ಮಾರ್ಗದರ್ಶನ ನೀಡುವುದು ಮುಂತಾದ ವಿವಿಧ ಸೇವೆಗಳಿಗೆ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುವುದು. ಜೊತೆಗೆ ನಿರ್ಗತಿಕರಿಗೆ, ಬಡವರಿಗೆ ದಾನವನ್ನೂ ನೀಡಬಹುದು.

6) ಹಳದಿ ಬಣ್ಣದ ಬಟ್ಟೆ ಧರಿಸಿ:
ವೈಕುಂಠ ಏಕಾದಶಿಯಂದು ಮುಂಜಾನೆ ಸ್ನಾನದ ಬಳಿಕ ಹಳದಿ ಬಣ್ಣದ ಬಟ್ಟೆಯನ್ನು ಧರಿಸಬೇಕೆಂದು ಹೇಳಲಾಗುತ್ತದೆ. ಏಕೆಂದರೆ ವಿಷ್ಣುವಿನ ನೆಚ್ಚಿನ ಬಣ್ಣ ಹಳದಿ. ಹೀಗಾಗಿ ಹಳದಿ ಬಟ್ಟೆ ತೊಟ್ಟು ಹಳದಿ ಹೂವುಗಳು, ಹಣ್ಣುಗಳನ್ನು ಅರ್ಪಿಸಬೇಕು. ಜೊತೆಗೆ ಈ ದಿನ ಭಗವಾನ್ ವಿಷ್ಣುವಿಗೆ ಪಂಚಾಮೃತದಿಂದ ಅಭಿಷೇಕ ಮಾಡಿ ತುಳಸಿ ಎಲೆಗಳನ್ನು ಅರ್ಪಿಸಬೇಕು. ಶಾಸ್ತ್ರಗಳ ಪ್ರಕಾರ ಏಕಾದಶಿಯಂದು ವಿಷ್ಣು ಮಂತ್ರಗಳನ್ನು ಪಠಿಸುವುದು ಮಂಗಳಕರ. ಇದರಿಂದ ಶ್ರೀಹರಿಯ ಕೃಪೆಗೆ ಪಾತ್ರರಾಗಿ ಭಕ್ತರ ಇಷ್ಟಾರ್ಥಗಳು ನೆರವೇರುತ್ತದೆ ಎನ್ನುವ ನಂಬಿಕೆಯಿದೆ.

7) ಅರಳಿ ಮರ ಪೂಜೆ:
ವೈಕುಂಠ ಏಕಾದಶಿಯಂದು ಅರಳಿ ಮರದ ಬೇರಿಗೆ ನೀರನ್ನು ಅರ್ಪಿಸಿಬೇಕು. ಈ ರೀತಿ ಮಾಡುವುದರಿಂದ ವಿಷ್ಣುವಿನ ಆಶೀರ್ವಾದ ಸಿಗುತ್ತದೆ. ಏಕೆಂದರೆ ಶ್ರೀಹರಿಯು ಅರಳಿ ಮರದ ಮೂಲದಲ್ಲಿ ನೆಲೆಸಿದ್ದಾನೆ ಎನ್ನುವ ನಂಬಿಕೆ ಇದೆ. ಜೊತೆಗೆ ಈ ದಿನ ಭಗವಾನ್ ವಿಷ್ಣುವಿನ ಜೊತೆಗೆ ಲಕ್ಷ್ಮೀ ದೇವಿಯನ್ನೂ ಸಹ ಪೂಜಿಸಬಹುದು. ಹೀಗೆ ಮಾಡುವುದರಿಂದ ಇಬ್ಬರ ಕೃಪೆಗೂ ಪಾತ್ರರಾಗುತ್ತಿರಿ.
ವೈಕುಂಠ ಏಕಾದಶಿಯಂದು ಮಾಡಬಾರದ ಕೆಲಸಗಳು ಹೀಗಿವೆ:
ಉಪವಾಸವಿದ್ದರೆ, ಯಾವುದೇ ಆಹಾರವನ್ನೂ ಸೇವಿಸಬಾರದು.
ಧೂಮಪಾನ, ಮಧ್ಯಪಾನ ಮಾಡುವಂತಿಲ್ಲ.
ಮನಸ್ಸಲ್ಲಿ ಕೆಟ್ಟ ಯೋಚನೆ ಮಾಡಬಾರದು.
ಮಾಂಸಾಹಾರಗಳಿಂದ ದೂರವಿರಿ.



Click it and Unblock the Notifications











