Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
Mithuna Rashi Ugadi Bhavishya 2022 :ಯುಗಾದಿ ಪಂಚಾಂಗ 2022-23: ಹೇಗಿದೆ ಮಿಥುನ ರಾಶಿಯ ಭವಿಷ್ಯ?
ಯುಗಾದಿ ಎಂದರೆ ಹೊಸ ಸಂವತ್ಸರ, ಯುಗಾದಿ ಪಂಚಾಂಗ ಪ್ರಕಾರ ದ್ವಾದಶಗಳ ರಾಶಿಫಲ ಹೇಳಲಾಗುವುದು. ನಾವು ಪ್ರತೀ ರಾಶಿಯ ವಾರ್ಷಿಕ ರಾಶಿಫಲ ವಿವರವಾಗಿ ನೀಡಿದ್ದೇವೆ. ಇಲ್ಲಿ ಮಿಥುನ ರಾಶಿಯವರ ಉದ್ಯೋಗ, ವ್ಯಾಪಾರ, ಕುಟುಂಬ, ಶಿಕ್ಷಣ, ಆರೋಗ್ಯ ಯುಗಾದಿ ಪಂಚಾಂಗ ಪ್ರಕಾರ ಹೇಗಿರಲಿದೆ ಎಂದು ಹೇಳಲಾಗಿದೆ ನೋಡಿ:
ಮಿಥುನ ರಾಶಿಯವರ ಅಧಿಪತಿ ಬುಧ. ಮೃಗಶಿರಾ ನಕ್ಷತ್ರ 3 ಮತ್ತು 4ನೇ ಪಾದ, ಆರಿದ್ರಾ ಹಾಗೂ ಪುನರ್ವಸು ನಕ್ಷತ್ರ1 ಮತ್ತು 2ನೇ ಪಾದ ಹೊಂದಿರುವವರು, ಇವರಿಗೆ ಆದಾಯ 11 ವ್ಯಯ 5 ಇದೆ. ಆದ್ದರಿಂದ ಆದಾಯ ನಿಮಗೆ ಈ ವರ್ಷ ತುಂಬಾ ಒಳ್ಳೆಯದಿದೆ. ಯೋಗ 2 ಹಾಗೂ ಅವಮಾನ 2 ಇದೆ.

ಯುಗಾದಿ ಪಂಚಾಂಗ ಪ್ರಕಾರ ಈ ವರ್ಷ ಮಿಶ್ರಫಲ. ಈ ವರ್ಷ ಸ್ಪರ್ಧಿಗಳಿಂದ ಪ್ರಬಲ ಸ್ಪರ್ಧೆ ಎದುರಿಸುವಿರಿ.ಆದರೆ ಕಠಿಣ ಪರಿಶ್ರಮಕ್ಕೆ ಫಲ ಸಿಗುವುದು. ವ್ಯಾಪಾರ, ವಾಣಿಜ್ಯ, ಸಮುದ್ರಕ್ಕೆ ಸಂಬಂಧಿಸಿದ ವ್ಯಾಪಾರ ಹೊಂದಿರುವವರೆಗೆ ಒಳ್ಳೆಯದಾಗಲಿದೆ. ಚಿನ್ನ, ಬೆಳ್ಳಿ, ಕಬ್ಬಿಣ ವ್ಯಾಪಾರಿಗಳಿಗೆ ಒಳ್ಳೆಯದಾಗಲಿದೆ. ದ್ವಿತೀಯಾರ್ಧದಲ್ಲಿ ಒಳ್ಳೆಯದಾಗಲಿದೆ. ಆಸ್ತಿತಕರಾರು ಅನುಭವಿಸಬಹುದು. ವ್ಯವಸಾಯಿಗಳಿಗೆ ಲಾಭವಾಗಲಿದೆ.
ಈ ವರ್ಷ ವಿದ್ಯಾರ್ಥಿಗಳಿಗೆ ಶುಭವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಏಪ್ರಿಲ್ 2ನೇ ವಾರದಿಂದ ಫಲ ಸಿಗುವುದು.
ಕೌಟಂಬಿಕ ಜೀವನ ಚೆನ್ನಾಗಿರುತ್ತದೆ. ಮನೆಗೆ ಹೊಸ ವಸ್ತುಗಳನ್ನು ಖರೀದಿಸುವಿರಿ, ಮನೆಯಲ್ಲಿ ಶುಭ ಕಾರ್ಯ ನಡೆಯುವುದು.
ಇನ್ನು ವ್ಯಾಪಾರ ಜೀವನದ ಬಗ್ಗೆ ನೋಡುವುದಾದರೆ ವ್ಯಾಪಾರಿಗಳಿಗೆ ಒಳ್ಳೆಯದಿದೆ. ಹೊಸ ವ್ಯಾಪಾರ ಪ್ರಾರಂಭಿಸಬಹುದು. ಯಾವುಾದರೂ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಅದರ ಬಗ್ಗೆ ಸಂಪೂರ್ಣ ತಿಳಿದುಕೊಂಡು ಹಾಕಿ. ವ್ಯಾಪಾರಿಗಳು ನಿರೀಕ್ಷಿತಗಿಂತ ಅಧಿಕ ಲಾಭ ಪಡೆಯಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಈ ವರ್ಷ ಗುರು ಬೆಂಬಲ ಚೆನ್ನಾಗಿದೆ.
ಉದ್ಯೋಗಿಗಳೂ ಪ್ರಗತಿಯನ್ನು ಕಾಣುತ್ತಾರೆ. ಈ ವರ್ಷ ಆಸ್ತಿ ಖರೀದಿಸುವ ಸಾಧ್ಯತೆ ಇದೆ.
ನವವಿವಾಹಿತರಿಗೆ ಸಂತಾನ ಭಾಗ್ಯವಿದೆ, ಮದುವೆ ವಯಸ್ಸಿನವರಿಗೆ ಕಂಕಣ ಬಲವಿದೆ.
ಈ ವರ್ಷ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳಿರಬಹುದು, ಒಳ್ಳೆಯ ಆಹಾರ ಸೇವಿಸಿ.
ಅದೃಷ್ಟದ ಬಣ್ಣ
ಮಾಣಿಕ್ಯ, ಪಚ್ಚೆ ಶುಭ ಹರಳುಗಳು,
ತಿಳಿ ಪಚ್ಚೆ ಶುಭ ಬಣ್ಣ
ಪರಿಹಾರ
ಶನೇಶ್ವರನ ಪೂಜಿಸಿ. ರಾಹು ಮತ್ತು ಕೇತು ದೋಷವಿರುವುದರಿಂದ ಬುಧವಾರದಂದು ರಾಹುಕಾಲದಲ್ಲಿ ಶಾಂತಿಯನ್ನು ಮಾಡಿಸಿ. ಅನಂತ ಪದ್ಮನಾಭನನ್ನು ಪೂಜಿಸಿ.



Click it and Unblock the Notifications
