Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
Mesha Rashi Ugadi Bhavishya 2022 : ಯುಗಾದಿ ಪಂಚಾಂಗ 2022-23: ಹೇಗಿದೆ ಮೇಷ ರಾಶಿಯ ಭವಿಷ್ಯ?
ಹಿಂದೂಗಳಿಗೆ ಹೊಸ ವರ್ಷವೆಂದರೆ ಅದು ಯುಗಾದಿ, ಈ ದಿನದಿಂದ ಹೊಸ ಸಂವತ್ಸರ ಪ್ರಾರಂಭವಾಗುವುದು, ಹೊಸ ಸಂವತ್ಸರವನ್ನು ಬೇವು-ಬೆಲ್ಲ ಸವಿಯುತ್ತಾ ಸಡಗರ-ಸಂಭ್ರಮದಿಂದ ಸ್ವಾಗತಿಸುವುದೇ ಯುಗಾದಿ. ಈ ವರ್ಷ ಶ್ರೀ ಶುಭಕೃತ ನಾಮ ಸಂವತ್ಸರ.
ಈ ಹೊಸ ವರ್ಷದಲ್ಲಿ ಯುಗಾದಿ ಪಂಚಾಂಗ ಪ್ರಕಾರ ನಿಮ್ಮ ರಾಶಿ ಭವಿಷ್ಯ ಹೇಳಲಾಗುವುದು. ನಾವಿಲ್ಲಿ ಈ ಶುಭಕೃತ ನಾಮ ಸಂವತ್ಸರದಲ್ಲಿ ಮೇಷ ರಾಶಿಯ ಭವಿಷ್ಯ ಹೇಗಿರಲಿದೆ ಎಂದು ವಿವರವಾಗಿ ನೀಡಲಾಗಿದೆ ನೋಡಿ:

ಮೇಷ ರಾಶಿ
ಮೇಷ ರಾಶಿಯವರ ಅಧಿಪತಿ ಕುಜನಾಗಿದ್ದಾನೆ. ಈ ಸಂವತ್ಸರದಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿಯನ್ನು ನೋಡುವುದಾದರೆ ಆದಯ 14 ಹಾಗೂ ವ್ಯಯ 14 ಇದೆ. ಅಂದರೆ ಎಷ್ಟು ಗಳಿಸುತ್ತಾರೋ ಅಷ್ಟೇ ಖರ್ಚಾಗುವುದು.
ಇವರ ರಾಜಭೋಗ 3 ಇದೆ, ಅವಮಾನ 6 ಇದೆ. ಹಾಗೆಯೇ ಅಶ್ವಿನಿ ನಾಲ್ಕು ಪಾದ, ಭರಣಿ ನಾಲ್ಕು ಪಾದ, ಕೃತಿಕಾ 1 ಪಾದ ಹೊಂದಿದೆ. ಇದರಿಂದಾಗಿ ಜೀವನ ಸಕಾರಾತ್ಮವಾಗಿರುತ್ತದೆ. ಅಲ್ಲದೆ ಏಪ್ರಿಲ್ 13ಕ್ಕೆ ಗುರು ಗ್ರಹದ ಸಂಚಾರವಿರುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಹೆಚ್ಚುವುದು.
ಅಲ್ಲದೆ ಶನಿಯ ಕೃಪೆ ಇರುವುದರಿಂದ ಈ ರಾಶಿಯವರು ತಮ್ಮ ವೃತ್ತಿಯಲ್ಲಿ ಯಶಸ್ಸು ಪಡೆಯುತ್ತಾರೆ. ಅಲ್ಲದೆ ಹೊಸ ಅವಕಾಶಗಳು ಕೂಡ ಹೆಚ್ಚಾಗಿ ಬರುವುದು.. 2022ರ ಮಧ್ಯಭಾಗದಲ್ಲಿ ಕೆಲವೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ವ್ಯಾಪಾರಸ್ಥರಿಗೆ ಅನುಕೂಲಕರವಾಗಿದೆ. ಉದ್ಯೋಗದಲ್ಲಿರುವವರೂ ಪ್ರಗತಿಯನ್ನು ಕಾಣುತ್ತಾರೆ.
ಮೇ ಮಧ್ಯ ಭಾಗದಿಂದ ಅಕ್ಟೋಬರ್‌ವರೆಗಿನ ಕಾಲಾವಧಿ ತುಂಬಾನೇ ಚೆನ್ನಾಗಿರುತ್ತದೆ. ನವೆಂಬರ್-ಡಿಸೆಂಬರ್ ನಿಮ್ಮ ವೇಗ ಸ್ವಲ್ಪಕಡಿಮೆಯಾದರೂ ನಂತರ ಸರಿ ಹೋಗುವುದು. ಯಾವುದೇ ಸಾಲ ವ್ಯವಹಾರ ಮಾಡಬೇಡಿ.
ವಿದ್ಯಾರ್ಥಿಗಳ ಪ್ರಾರಂಭದಲ್ಲಿ ಸ್ವಲ್ಪ ಅಡೆತಡೆ ಉಂಟಾದರೂ ನಂತರ ಒಳ್ಳೆಯ ಫಲ ಸಿಗಲಿದೆ. ವ್ಯಯ ಹೆಚ್ಚಾಗಿದ್ದರೂ ಆರ್ಥಿಕತೆಯಲ್ಲಿ ಸ್ಥಿರತೆ ಇರುತ್ತದೆ. ಏಪ್ರಿಲ್‌ನಲ್ಲಿ ಅನಿರೀಕ್ಷಿತ ಲಾಭ ಪಡೆಯಬಹುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಪಡೆಯುವಿರಿ.
ಕೌಟಂಬಿಕ ಜೀವನದಲ್ಲಿ ಖುಷಿ-ಸಂತೋಷ ಇರುತ್ತದೆ. ಸಂತಾನ ಅಪೇಕ್ಷಿತ ದಂಪತಿ ಶುಭ ಸುದ್ದಿ ಪಡೆಯುವಿರಿ. ಯುವಕ-ಯುವತಿಯರಿಗೆ ಕಂಕಣ ಬಲ ಕೂಡಿ ಬರುವುದು. ಸಾಮಾಜಿಕವಲಯದಲ್ಲೂ ಒಳ್ಳೆಯ ಸ್ಥಾನಮಾನ ಪಡೆಯುತ್ತೀರಿ.
ಆರೋಗ್ಯ 1 ಅನಾರೋಗ್ಯ 6 ತೋರಿಸುತ್ತಿರುವುದರಿಂದ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ. ಯೋಗ, ಪ್ರಾಣಯಾಮ ನಿಮ್ಮ ದಿನಚರಿಯಲ್ಲಿದ್ದರೆ ಒಳ್ಳೆಯದು.
ನಿಮ್ಮ ಅದೃಷ್ಟದ ಬಣ್ಣ: ಕೆಂಪು
ಪರಿಹಾರ
ಶುಕ್ರ ಮೀನದಲ್ಲಿರುವಾಗ ಲಕ್ಷ್ಮಿ ಪೂಜೆ ಮಾಡಿದರೆ ಒಳ್ಳೆಯು.
ಪ್ರತಿನಿತ್ಯ ದಾಳಿಂಬೆ ಸೇವಿಸಿ
ಶನೇಶ್ವರ ಶಾಂತಿ, ಗುರು ಶಾಂತಿ ಮಾಡಿಸಿದರೆ ಒಳ್ಳೆಯದು.
ಈ ವರ್ಷ ವಾಹನ ಖರೀದಿಸುವ ಯೋಗವಿದೆ.



Click it and Unblock the Notifications
