Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ವೃಷಭ ರಾಶಿ ಯುಗಾದಿ ಭವಿಷ್ಯ 2023: ಈ ವರ್ಷ ಸಾಲ ಮಾಡಿದರೆ ಆರ್ಥಿಕ ಸಂಕಟಕ್ಕೆ ಸಿಲುಕುವಿರಿ, ಜಾಗ್ರತೆ!
ಫ್ಲವ ನಾಮ ಸಂವತ್ಸರ ಕಳೆದು ಮಾರ್ಚ್ 22ಕ್ಕೆ ಶೋಭಾಕೃತ ಸಂವತ್ಸರ ಪ್ರಾರಂಭವಾಲಿದೆ. ಈ ಸಂವತ್ಸರ ನಿಮ್ಮ ಬಾಳಲ್ಲಿ ಹೊಸತನ ತುಂಬಲಿ, ಬಾಳಲ್ಲಿ ನೆಮ್ಮದಿ, ಹರ್ಷ, ಸಂಪತ್ತು ತುಂಬಿರಿ. 2023 ಯುಗಾದಿ ಭವಿಷ್ಯ ಪ್ರಕಾರ ವೃಷಭ ರಾಶಿಯವರ ರಾಶಿಫಲ ನೋಡೋಣ:


ವೃಷಭ ರಾಶಿಯಲ್ಲಿ ಗ್ರಹಗಳ ಸ್ಥಾನ
ವೃಷಭ ರಾಶಿಯವರ ಮೇಲೆ ನಾಲ್ಕು ಪ್ರಮುಖ ಗ್ರಹಗಳ ಪ್ರಭಾವ ಬೀರುತ್ತದೆ, ಇನ್ನ ಸೂರ್ಯ, ಬುಧ, ಶುಕ್ರ, ಚಂದ್ರ, ಮಂಗಳ ಇವುಗಳ ಸ್ಥಾನಗಳು ಪ್ರತಿ ತಿಂಗಳು ಬದಲಾಗುತ್ತಿರುತ್ತದೆ. ಇವುಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಿದಾಗ ಅವುಗಳ ಸ್ಥಾನಕ್ಕೆ ತಕ್ಕ ಶುಭ-ಅಶುಭ ಫಲ ನೀಡಲಿದೆ. ಇನ್ನು ಪ್ರಮುಖ ಗ್ರಹಗಳಾದ ಶನಿ, ಗುರು, ರಾಹು, ಕೇತುಗಳ ಬಗ್ಗೆ ಹೇಳುವುದಾದರೆ ಶನಿ ಗ್ರಹವು ಜನವರಿ 17ಕ್ಕೆ ಕುಂಭ ರಾಶಿಯಲ್ಲಿದೆ, ಆದ್ದರಿಂದ ನಿಮ್ಮ ರಾಶಿಯಲ್ಲಿ 10ನೇ ಮನೆಯಲ್ಲಿ ಇರಲಿದೆ. ಇನ್ನು ಗುರು ಕೂಡ ಏಪ್ರಿಲ್ 22ಕ್ಕೆ ಮೇಷ ರಾಶಿಯನ್ನು ಪ್ರವೇಶಿಸಿದಾಗ ನಿಮ್ಮ 12ನೇ ಮನೆಯಲ್ಲಿ ಇರಲಿದೆ. ಗುರು ಕೂಡ ನವೆಂಬರ್ 29ರವರೆಗೆ ನಿಮ್ಮ ರಾಶಿಯಲ್ಲಿ 12ನೇ ಮನೆಯಲ್ಲಿಯೇ ಇರಲಿದೆ. ಕೇತು ನಿಮ್ಮ ರಾಶಿಯಲ್ಲಿ 7ನೇ ಸ್ಥಾನದಲ್ಲಿದೆ.

ಗ್ರಹಗತಿಗಳ ಪ್ರಭಾವ
ಗುರು 12ನೇ ಮನೆಯಲ್ಲಿದೆ. ಗುರು ವ್ಯಯದ ಸ್ಥಾನದಲ್ಲಿ ಇರುವುದರಿಂದ ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ, ಆದರೆ ಈ ಖರ್ಚು ಒಳ್ಳೆಯ ವಿಷಯಕ್ಕೆ ಮಾಡುತ್ತೀರಿ. ನೀವು ಆಸ್ತಿ ಅಥವಾ ಮನೆ ಖರೀದಿಸಲು ಹಣ ಖರ್ಚು ಮಾಡಬಹುದು. ನಿಮ್ಮಲ್ಲಿ ಕೆಲವರು ಈ ವರ್ಷ ವಾಹನವನ್ನು ಕೂಡ ಖರೀದಿ ಮಾಡುತ್ತೀರಿ. ನೀವು ಈ ವರ್ಷ ಹೂಡಿಕೆ ಅಥವಾ ಆಸ್ತಿ ಖರೀದಿ ಮಾಡುವಾಗ ತುಂಬಾ ಸಾಲ ಮಾಡದಂತೆ ಎಚ್ಚರವಹಿಸುವುದು ಒಳ್ಳೆಯದು.
ನೀವು ಈ ವರ್ಷ ಅಂದರೆ ಮುಂದಿನ ಯುಗಾದಿವರೆಗೆ ಷೇರು ಮಾಡುಕಟ್ಟೆಯಲ್ಲಿ ಹೂಡಿಕೆ ಮಾಡುವುದು, ಚೀಟಿ ವ್ಯವಹಾರ, ಯಾರಿಗಾದರೂ ಸಾಲ ಕೊಡುವುದು, ಹೊಸ ಉದ್ಯಮ ಪ್ರಾರಂಭಿಸುವುದು ಮಾಡದಿದ್ದರೆ ಒಳ್ಳೆಯದು. ಏನಾದರೂ ಹೊಸ ಉದ್ಯಮ ಅಥವಾ ವ್ಯವಹಾರ ಮಾಡುವುದಾದರೆ ನಿಮ್ಮ ಜಾತಕ ಪರಿಶೀಲಿಸಿದ ಬಳಿಕವಷ್ಟೇ ಮಾಡಿ, ಇಲ್ಲದಿದ್ದರೆ ಹಣ ನಷ್ಟವಾಗಬಹುದು.

ಆರೋಗ್ಯ ಸ್ಥಿತಿ ಹೇಗಿರಲಿದೆ?
ಗುರು ಮತ್ತು ರಾಹು ನಿಮ್ಮ ಅಷ್ಟಮಸ್ಥಾನ ನೋಡುತ್ತಿರುವುದರಿಂದ ಈ ಸಂವತ್ಸರದಲ್ಲಿ ಆರೋಗ್ಯ ಸಮಸ್ಯೆ ಕಾಣಿಸಬಹುದು. ನೀವು ಈ ವರ್ಷ ತುಂಬಾ ಹೊರಗಡೆ ಓಡಾಡುತ್ತೀರಿ, ಹೀಗೆ ಓಡಾಡುವಾಗ ನಿಮ್ಮ ಆಹಾರಕ್ರಮದ ಕಡೆಗೆ ತುಂಬಾನೇ ಜಾಗ್ರತೆವಹಿಸಬೇಕು. ಅಲ್ಲದೆ ಈಗಾಗಲೇ ಮಧುಮೇಹ, ರಕ್ತದೊತ್ತಡ ಮತ್ತಿತರ ಸಮಸ್ಯೆಯಿದ್ದರೆ ನಿಮ್ಮ ಆರೋಗ್ಯದ ಕಡೆಗೆ ತುಂಬಾನೇ ಗಮನ ಹರಿಸಿ.

ವೃತ್ತಿ ಜೀವನ
ಈ ವರ್ಷ ವೃತ್ತಿ ಜೀವನದ ಬಗ್ಗೆ ನೋಡುವುದಾದರೆ ಕೆಲಸದ ಒತ್ತಡ ಅಧಿಕ ಇರಲಿದೆ. ನಿವು ಕೆಲಸದಲ್ಲಿ ತುಂಬಾ ಕಾರ್ಯನಿರತರಾಗಿರುತ್ತೀರಿ. ಕೆಲಸದ ಒತ್ತಡ ಅಧಿಕವಾಗಿ ನಿಮಗೆ ಕೆಲಸ ಬದಲಾಯಿಸಬೇಕೆಂದು ಮನಸ್ಸಾಗುವುದು, ಆದರೆ ಬದಲಾಯಿಸಲು ಹೋಗಬೇಡಿ ಎಂಬುವುದಾಗಿ ಸಲಹೆ ನೀಡಲಾಗಿದೆ. ಒಂದು ವೇಳೆ ನೀವು ಕೆಲಸ ಬದಲಾಯಿಸುವುದಾದರೆ ಬೇರೆ ಕೆಲಸ ಸಿಕ್ಕ ಬಳಿಕವಷ್ಟೇ ಬಿಡಿ, ಅಲ್ಲದೆ ಅಲ್ಲಿ ಕೂಡ ಕೆಲಸದ ಒತ್ತಡ ಇದ್ದೇ ಇರಲಿದೆ. ನಿಮ್ಮ ಕೆಲಸದ ಒತ್ತಡಕ್ಕೆ ಶನಿಯ ಸ್ಥಾನ ಕಾರಣವಾಗಿದೆ. ನೀವು ಶನಿಗೆ ಪರಿಹಾರ ಮಾಡಿ.
ನೀವು ಆರ್ಥಿಕ ತೊಂದರೆಗೆ ಸಿಲುಕದೇ ಇರಲು ಯಾರ ಬಳಿಯೂ ಸಾಲ ಮಾಡದಿದ್ದರೆ ಒಳ್ಳೆಯದು.

ಪರಿಹಾರ
* ಪ್ರತಿ ಶನಿವಾರ ಶನಿ ದೇವಾಲಯಕ್ಕೆ ಹೋಗಿ ಕಪ್ಪು ಎಳ್ಳು, ಸಾಸಿವೆ ಎಣ್ಣೆ ಅರ್ಪಿಸಿ.
* ಪ್ರತಿದಿನ ಗುರು ಮಂತ್ರ ಪಠಿಸಿ, ಗುರುವಿನ ಬಲ ಸಿಗುವುದು.
* ಪ್ರತಿದಿನ ಹನುಮಾನ್ ಚಾಲೀಸ ಪಠಣೆ ಮಾಡಿ.



Click it and Unblock the Notifications
