Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯುಗಾದಿ ರಾಶಿ ಭವಿಷ್ಯ 2023 : ತುಲಾ ರಾಶಿಯವರಿಗೆ ಈ ವರ್ಷ ಶುಭವೋ? ಅಶುಭವೋ?
ಈ ಯುಗಾದಿಯು ಎಲ್ಲರ ಬಾಳಲ್ಲಿ ಶುಭವನ್ನು ತರಲಿದೆ ಎಂಬ ಆಶಯದಿಂದ ಹೊಸ ವರುಷಕ್ಕೆ ನಾವೆಲ್ಲರೂ ಕಾಲಿಡುತ್ತಿದ್ದೇವೆ. ಯುಗಾದಿಯ ನಂತರ ಗ್ರಹಗಳ ಸಂಚಾರದಲ್ಲಿ ಕೊಂಚ ಬದಲಾವಣೆಯಾಗಿದ್ದು, ಇದರಿಂದಾಗಿ ಕೆಲವು ರಾಶಿಗಳಿಗೆ ಯುಗಾದಿಯ ನಂತರ ಶುಭಫಲವಿದ್ದು, ಇನ್ನೂ ಕೆಲವು ರಾಶಿಯವರಿಗೆ ಅಶುಭ ಫಲವಿದೆ.

ತುಲಾ ರಾಶಿಯವರ ಬಾಳಲ್ಲಿ ಈ ಯುಗಾದಿಯ ನಂತರ ಕೆಲವೊಂದು ಬದಲಾವಣೆಗಳು ಆಗಲಿದೆ. ಅಷ್ಟಕ್ಕು ಮಾರ್ಚ್ 22 ರ ನಂತರ ತುಲಾ ರಾಶಿ ಭವಿಷ್ಯ ಹೇಗಿದೆ ಅನ್ನೋದನ್ನ ತಿಳಿದುಕೊಳ್ಳೋಣ.
ತುಲಾ ರಾಶಿಯಲ್ಲಿ ಗ್ರಹಗಳ ಸಂಚಾರ
ಇಷ್ಟು ದಿನ ತುಲಾರಾಶಿಯಲ್ಲಿ ಕೇತು, ಸಪ್ತಮದಲ್ಲಿ ರಾಹು, ಹಾಗೂ ಚತುರ್ಥ ಭಾವದಲ್ಲಿ ಶನಿ ಸ್ಥಿತನಾಗಿತ್ತು. ಗುರು ಆರನೇ ಮನೆಯಲ್ಲಿ ಸ್ಥಿತನಾಗಿತ್ತು. ಆದರೆ ಈ ವರ್ಷದಲ್ಲಿ ಕೆಲವೊಂದು ಬದಲಾವಣೆಗಳು ಆಗಲಿದೆ. ಶನಿ ಕುಂಭ ರಾಶಿಗೆ ಬಂದಿರೋದ್ರಿಂದ ತುಲಾ ರಾಶಿಯವರಿಗೆ ಪಂಚಮ ಶನಿ ಆರಂಭವಾಗಿದೆ. ರಾಹು ಎಂದಿನಂತೆ ಮೇಷದಲ್ಲಿ ಇರುತ್ತದೆ. ನವೆಂಬರ್‌ನಲ್ಲಿ ಸಂಪೂರ್ಣವಾಗಿ ಮೀನರಾಶಿಗೆ ರಾಹು ತೆರಳುತ್ತಾನೆ. ಪಂಚಮ ಶನಿ ಶುರುವಾಗಿದ್ದರಿಂದ ತುಲಾರಾಶಿಯವರಿಗೆ ಕೊಂಚ ಕಷ್ಟ ಇದೆ. ಆದರೆ ಗುರುವಿನ ದೃಷ್ಟಿ ತುಲಾರಾಶಿಯ ಮೇಲೆ ಇರೋದ್ರರಿಂದ ಋಣಾತ್ಮಕ ಫಲ ಸ್ವಲ್ಪ ಮಟ್ಟಿಗೆ ಕಡಿಮೆ ಅಂತಾನೇ ಹೇಳಬಹುದು.
ಉದ್ಯೋಗದಲ್ಲಿ ಕೊಂಚ ಸಮಸ್ಯೆ ಎದುರಾಗಲಿದೆ
ತುಲಾ ರಾಶಿಯವರಿಗೆ ಕೆಲಸದಲ್ಲಿ ಆಸಕ್ತಿ ಕಡಿಮೆ ಆಗಲಿದೆ. ಉದ್ಯೋಗದಲ್ಲಿ ಕೊಂಚ ಸಮಸ್ಯೆ ಎದುರಾಗಲಿದೆ.
ಆರ್ಥಿಕ ಪರಿಸ್ಥಿತಿ
ಶನಿ ಧನಸ್ಥಾನ ನೋಡುತ್ತಿದ್ದಾನೆ. ಶನಿಯು ನಿಮಗೆ ಅಖಂಡ ರಾಜ ಯೋಗಕಾರಕ. ನಿಮಗೆ ಬರಬೇಕಾಗಿರುವ ಹಣ ಕೊಂಚ ನಿಧಾನವಾಗಬಹುದು. ಇನ್ನು ವ್ಯಾಪಾರದ ವಿಚಾರದಲ್ಲಿ ಲಾಭ ದೊರೆಯುತ್ತದೆ. ಆದರೆ ನೀವು ಅಂದುಕೊಂಡಾಗ ಲಾಭ ಪಡೆಯೋದಿಲ್ಲ. ನಿಮಗೆ ಬರುವ ಹಣ ಬರೋದು ಕೊಂಚ ನಿಧಾನವಾಗಬಹುದು.
ಕುಟುಂಬದ ಸಮಸ್ಯೆ ನಿವಾರಣೆ
ಏಳನೇ ಮನೆಗೆ ಗುರು ಬಂದಿರೋದ್ರಿಂದ ನಿಮ್ಮ ಕೌಟುಂಬಿಕ ಸಮಸ್ಯೆಗಳು ನಿವಾರಣೆಯಾಗಲಿದೆ. ಮನಸ್ಥಾಪಗಳು ನಿವಾರಣೆ ಆಗುತ್ತದೆ. ಚದುರಿ ಹೋದ ಸಂಬಂಧಗಳು ಮತ್ತೆ ಒಂದಾಗುತ್ತದೆ.
ವಿದ್ಯಾರ್ಥಿಗಳಿಗೆ ಉತ್ತಮ ಕಾಲ
ಗುರು ದೃಷ್ಟಿ ನಿಮ್ಮ ಮೇಲೆ ಇರುವುದರಿಂದ ವಿದ್ಯಾರ್ಥಿಗಳಿಗೆ ಓದಿನ ಮೇಲೆ ಆಸಕ್ತಿ ಹೆಚ್ಚಾಗಲಿದೆ. ಶನಿಯಿಂದ ಉಂಟಾಗುವ ಅಶುಭ ಫಲವನ್ನು ಗುರು ನಿವಾರಣೆ ಮಾಡುತ್ತಾನೆ.
ವಯಕ್ತಿಕ ಸಮಸ್ಯೆ ನಿವಾರಣೆ
ನಿಮ್ಮ ಚಾರಿತ್ರ್ಯಕ್ಕೆ ಅಪವಾದ ಬಂತು ಅನ್ನುವಾಗ ಆ ಸಮಸ್ಯೆಗಳೆಲ್ಲಾ ಮಂಜಿನಂತ ಕರಗಿ ಹೋಗಲಿದೆ. ಯಾವುದೇ ಸಮಸ್ಯೆ ನಿಮ್ಮ ಬಾಳಲ್ಲಿ ಎದುರಾದ್ರು ಕೂಡ ನಿಮ್ಮ ರಕ್ಷಣೆಗೆ ಗುರು ನಿಲ್ಲುತ್ತಾನೆ.
ಸ್ವಂತ ಉದ್ಯೋಗ ಮಾಡುತ್ತಿರುವವರಿಗೆ ಮಿಶ್ರ ಫಲ
ಗುರು ದೃಷ್ಟಿ ಲಾಭ ಸ್ಥಾನದಲ್ಲಿ ಇರೋದ್ರಿಂದ ಸ್ವಂತ ಉದ್ಯೋಗ ಮಾಡುವವರಿಗೆ ಆದಾಯ ಹಾಗೂ ಖರ್ಚು ಎರಡು ಕೂಡ ಇರಲಿದೆ. ವಿಶೇಷವಾಗಿ ಉಳಿತಾಯ ಮಾಡೋದು ಸ್ವಲ್ಪ ಕಷ್ಟ.
ಆಪ್ತರಿಂದ ಸಹಾಯ
ಸಂಕಷ್ಟದ ಸಮಯದಲ್ಲಿ ನಿಮ್ಮ ಸಹೋದರ, ಸ್ನೇಹಿತರು ಅಥವಾ ಬಂಧುಗಳಿಂದ ಸಹಾಯ ದೊರೆಯಲಿದೆ.
ಹಣಕಾಸಿನ ವಿಚಾರದಲ್ಲಿ ಕೊಂಚ ಜಾಗೃತೆ
ಗುರುವಿನ ಜೊತೆಗೆ ರಾಹು ಇರೋದ್ರಿಂದ ಯಾರಿಗಾದ್ರು ದುಡ್ಡು ಕೊಟ್ಟಾಗ ಅಥವಾ ನೀವು ಎಲ್ಲಿಯಾದರೂ ಹೂಡಿಕೆ ಮಾಡಿದ ದುಡ್ಡು ವಾಪಾಸ್ಸ್ ಬರೋದು ಕಷ್ಟ. ಹೀಗಾಗಿ ಯಾರಿಗಾದ್ರು ದುಡ್ಡು ಕೊಡುವಾಗ ಅಥವಾ ಎಲ್ಲಾದರೂ ಆ ದುಡ್ಡನ್ನು ಹೂಡಿಕೆ ಮಾಡುತ್ತಿದ್ದೀರಿ ಅನ್ನುವಾಗ ಜಾಗರೂಕರಾಗಿರಿ. ಸೂಕ್ಷ್ಮ ವಿಚಾರಗಳನ್ನು ಗಮನಿಸುತ್ತಿರಿ.
ಆರನೇ ಮನೆಗೆ ರಾಹು ಆಗಮನ
ಆರನೇ ಮನೆಗೆ ರಾಹು ಬರೋದ್ರಿಂದ ನವೆಂಬರ್ ಕಳೆದ ನಂತರ ನಿಮಗೆ ಶುಭ ಫಲಗಳಿದೆ. ಸಮಸ್ಯೆಗಳು ಪರಿಹಾರವಾಗಲಿದೆ. ಉದ್ಯೋಗದಲ್ಲಿ ಅಭಿವೃದ್ಧಿಯಾಗಲಿದೆ. ಶತ್ರುಗಳ ಸಮಸ್ಯೆ ನಿವಾರಣೆ ಆಗುತ್ತದೆ. ಏಕಾಏಕಿ ಯಶಸ್ಸು ಒಲಿದು ಬರಲಿದೆ.
ಪರಿಹಾರ
* ಪ್ರತಿ ಶನಿವಾರ ಉದ್ದಿನ ಬೇಳೆ ಕಾಳು, ಕಪ್ಪು ಎಳ್ಳನ್ನು ದೇವಸ್ಥಾನಕ್ಕೆ ನೀಡಬೇಕು
* ಹನುಮಾನ್ ಚಾಲಿಸ್ ಮಂತ್ರ, ಗಣಪತಿ ಸ್ತೋತ್ರ, ದುರ್ಗಾ ಅಷ್ಟೋತ್ರವನ್ನು ಪ್ರತಿನಿತ್ಯ ಪಠಿಸಬೇಕು
* ತಿಂಗಳಿಗೊಂದು ಸಲ ವೃದ್ಧಾಶ್ರಮಕ್ಕೆ ಹೋಗಿ ಅವರ ಸೇವೆ ಮಾಡಿ
* ನಿರ್ಗತಿಕರಿಗೆ ಹೊಸ ಚಪ್ಪಲಿ ದಾನ ಮಾಡೋದ್ರಿಂದ ಶನಿ ದೋಷ ನಿವಾರಣೆ
* ಪ್ರತಿ ತಿಂಗಳ ಸಂಕಷ್ಟ ಚತುರ್ಥಿ ವ್ರತ ಆಚರಣೆ ಮಾಡಿ
ಒಳ್ಳೆಯದು ಕೆಟ್ಟದ್ದು ಎರಡು ಇರೋದ್ರಿಂದ ತುಲಾ ರಾಶಿಯವರಿಗೆ ಯುಗಾದಿಯ ನಂತರ ಮಿಶ್ರ ಫಲ ಅಂತ ಹೇಳಿದರೆ ತಪ್ಪಾಗೋದಿಲ್ಲ.



Click it and Unblock the Notifications


