Latest Updates
-
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ! -
ಬಿಸಿಲ ಧಗೆಯಿಂದ ಪಾರಾಗಲು ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸಿ
ಯುಗಾದಿ ರಾಶಿ ಭವಿಷ್ಯ 2023 : ಸಿಂಹ ರಾಶಿಯವರಿಗೆ ಈ ವರ್ಷ ಶುಭವೋ? ಅಶುಭವೋ?
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಎಂಬ ಹಾಡಿನ ಸಾಲಿನಂತೆ ಪ್ರತಿ ಯುಗಾದಿ ಬಂದಾಗಲೂ ಅದೇನೋ ಒಂಥರಾ ಖುಷಿ. ಯಾಕಂದರೆ ಹೊಸ ವರ್ಷದಲ್ಲಿ ನಮ್ಮ ಬಾಳಲ್ಲಿ ಹೊಸತು ಸಂತೋಷ ಆವರಿಸುತ್ತೆ ಎಂಬ ಭರವಸೆಯಿಂದ ಕಾಯುತ್ತಿರುತ್ತೇವೆ. ಈ ಬಾರಿಯ ಶೋಭಕೃತಿ ನಾಮ ಸಂವತ್ಸರದಲ್ಲಿ ಸಿಂಹ ರಾಶಿಯವರ ರಾಶಿ ಭವಿಷ್ಯದ ಬಗ್ಗೆ ನೋಡೋಣ.

ಈ ಯುಗಾದಿಯ ನಂತರ ಸಿಂಹ ರಾಶಿಯವರಿಗೆ ರಾಶಿಫಲ ಯಾವ ರೀತಿ ಇರಲಿದೆ? ಈ ಯುಗಾದಿ ಸಿಂಹರಾಶಿಯವರ ಬಾಳಿಯನ್ನೇ ಖುಷಿಯ ಸುಗ್ಗಿಯನ್ನೇ ಹಂಚಲಿದ್ಯಾ ಅಥವಾ ಸಂಕಷ್ಟಗಳು ಎದುರಾಗಲಿದ್ಯಾ ಅನ್ನೋದನ್ನ ಒಂದೊಂದಾಗಿ ನೋಡೋಣ.
ಗ್ರಹಗಳ ಸಂಚಾರ
ಸಿಂಹ ರಾಶಿಗೆ ಏಪ್ರಿಲ್ 22ಕ್ಕೆ ಭಾಗ್ಯ ಸ್ಥಾನಕ್ಕೆ ಗುರು ಬರುತ್ತಾನೆ. ಮುಂದಿನ ವರ್ಷ ಯುಗಾದಿಯವರೆಗೂ ಗುರು ಮೇಷದಲ್ಲಿ ನೆಲೆಸುತ್ತಾನೆ. ಭಾಗ್ಯಸ್ಥಾನದಲ್ಲಿ ಸ್ಥಿತನಾಗಿದ್ದರಿಂದ ಈ ವರ್ಷಪೂರ್ತಿ ಶುಭ ಫಲವನ್ನೇ ಕೊಡುತ್ತಾನೆ. ರಾಹುವು ಕೂಡ ಭಾಗ್ಯಸ್ಥಾನದಲ್ಲಿರುವುದರಿಂದ ನವೆಂಬರ್ 29 ತನಕ ರಾಹು ಕೂಡ ಶುಭ ಫಲವನ್ನೇ ನೀಡಲಿದ್ದಾನೆ. ಕೇತು ಕೂಡ ತುಲಾರಾಶಿಯಲ್ಲಿರುವ ಫಲವನ್ನೇ ನೀಡುತ್ತಾನೆ. ಇನ್ನೂ ಶನಿ ಸಪ್ತಮಭಾವದಲ್ಲಿ ಈ ವರ್ಷಪೂರ್ತಿ ಸಂಚಾರ ಮಾಡುತ್ತಿರುತ್ತಾನೆ.
ದುಃಖ ನಿವಾರಣೆ
ಸಿಂಹ ರಾಶಿಯವರಿಗೆ ಈ ಯುಗಾದಿಯ ನಂತರ ಗುರು ಹಾಗೂ ಶನಿ ಶುಭ ಫಲವನ್ನೇ ನೀಡಲಿದ್ದಾರೆ. ನಿಮ್ಮ ಎಲ್ಲಾ ತರಹದ ದುಃಖ ಈ ಬಾರಿ ನಿವಾರಣೆ ಆಗಲಿದೆ. ಇಷ್ಟು ದಿನ ಪಟ್ಟ ಕಷ್ಟಗಳೆಲ್ಲಾ ಕಳೆದು ಹೋಗಲಿದೆ.
ವ್ಯಾಪಾರದಲ್ಲಿ ಶುಭಫಲ
ಮುಖ್ಯವಾಗಿ ಜಂಟಿಯಾಗಿ ವ್ಯಾಪಾರ ಮಾಡುತ್ತಿರುವವರಿಗೆ ಎಲ್ಲವೂ ಒಳ್ಳೆಯದಾಗಲಿದೆ. ಚಿಕ್ಕದಲ್ಲಿ ಶುರು ಮಾಡಿದ ವ್ಯಾಪಾರ ದೊಡ್ಡ ಮಟ್ಟಕ್ಕೆ ಹೋಗಲಿದೆ. ನಿಮ್ಮ ವ್ಯಾಪಾರದ ಜೊತೆಗೆ ಇತರ ಕೆಲಸಗಳನ್ನು ಶುರು ಮಾಡುತ್ತೀರಾ. ಈ ವರ್ಷ ನೀವು ಏನೇ ಕೆಲಸ ಮಾಡಿದರೂ ಕೂಡ ಅದರಿಂದ ಖಂಡಿತ ಲಾಭ ಪಡೆಯುತ್ತೀರಾ.
ಆರ್ಥಿಕ ಪರಿಸ್ಥಿತಿ ಸುಧಾರಣೆ
ಧನಕಾರಕನಾದ ಗುರುವಿನ ಆಶೀರ್ವಾದ ನಿಮ್ಮ ಮೇಲಿದೆ. ಹೀಗಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತೀರಿ. ಹಣಕಾಸಿನ ಮುಗ್ಗಟ್ಟು, ಸಾಲಭಾದೆ ಎಲ್ಲವೂ ಈ ವರ್ಷ ಪರಿಹಾರವಾಗಲಿದೆ. ಸಾಲದ ಹೊರೆ ಕಡಿಮೆಯಾಗಲಿದೆ.
ಪಿರ್ತಾರ್ಜಿತ ಆಸ್ತಿ ಸಮಸ್ಯೆ ನಿವಾರಣೆ
ಪಿರ್ತಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಏನೆಲ್ಲಾ ಸಮಸ್ಯೆಗಳು ಇತ್ತೋ ಆ ಎಲ್ಲಾ ಸಮಸ್ಯೆಗಳು ಈ ವರ್ಷ ನಿವಾರಣೆ ಆಗಲಿದೆ.
ಧರ್ಮಕಾರ್ಯಗಳು ನಡೆಯುತ್ತದೆ
ಒಂಬತ್ತನೇ ಮನೆಗೆ ಗುರು ಬಂದಿರೋದ್ರಿಂದ ಧರ್ಮ ಕಾರ್ಯಗಳು ನಡೆಯುತ್ತವೆ. ಪೂಜೆ-ಪುನಸ್ಕಾರ, ಹೋಮ-ಹವನಗಳು ನಡೆಯುತ್ತದೆ. ದೇವಾಲಯಕ್ಕೆ ಹೋಗುವ ಭಾಗ್ಯ ಒದಗಿ ಬರಲಿದೆ. ದೂರದ ಪ್ರದೇಶದಲ್ಲಿರುವ ದೇವಸ್ಥಾನಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ.
ಕಂಕಣ ಭಾಗ್ಯ
ಸಿಂಹ ರಾಶಿಯವರಿಗೆ ಈ ಯುಗಾದಿಯ ನಂತರ ಕಂಕಣ ಬಲವಿದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತದೆ. ಜಾತಕದಲ್ಲಿದ್ದ ಧೋಷ ನಿವಾರಣೆಯಾಗಲಿದೆ. ಮದುವೆಗೆ ಇದ್ದ ಅಡ್ಡಿ, ಆತಂಕಗಳೆಲ್ಲಾ ನಿವಾರಣೆ ಆಗಲಿದೆ. ಗುರು ಬಲವಿರೋದ್ರಿಂದ ಸಂತಾನ ಅಪೇಕ್ಷೆ ಇರುವವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗಲಿದೆ. ಒತ್ತಡಗಳೆಲ್ಲಾ ನಿವಾರಣೆ ಆಗಲಿದೆ. ಜ್ಞಾನ ಹಾಗೂ ನೆಮ್ಮದಿ ಪ್ರಾಪ್ತಿಯಾಗಲಿದೆ.
ಉದ್ಯೋಗ
ಉದ್ಯೋಗದ ವಿಚಾರದಲ್ಲಿ ಎಲ್ಲವೂ ಶುಭವಾಗಲಿದೆ. ನಿಮಗೆ ಅಪರಿಚಿತ ವ್ಯಕ್ತಿಗಳಿಂದ ಉದ್ಯೋಗದ ವಿಚಾರದಲ್ಲಿ ಸಹಾಯವಾಗಲಿದೆ. ಇನ್ನೂ ಬೇರೆಯವರಿಗೆ ಸಹಾಯ ಮಾಡಲು ಹೋಗಿ ನೀವು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ನಿಮ್ಮ ಭವಿಷ್ಯವನ್ನು ತ್ಯಾಗ ಮಾಡಿ ಬೇರೆಯವರಿಗೆ ಸಹಾಯ ಮಾಡಲು ಹೋಗಬೇಡಿ.
ವಿದ್ಯಾರ್ಥಿಗಳಿಗೆ ಶುಭ ಫಲ
ಸಿಂಹ ರಾಶಿಯ ವಿದ್ಯಾರ್ಥಿಗಳಿಗೆ ಈ ಯುಗಾದಿ ಕಳೆದ ನಂತರ ಶುಭವಾಗಲಿದೆ. ಗುರು ಭಾಗ್ಯದಲ್ಲಿ ಇರೋದ್ರಿಂದ ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಉನ್ನತ ವ್ಯಾಸಂಗಕ್ಕೆ ಹೆಚ್ಚಿನ ಅವಕಾಶಗಳು ಸಿಗಲಿದೆ. ಓದಿದ್ದನ್ನು ಹೆಚ್ಚು ಕಾಲ ನೆನಪಿನ್ನಲ್ಲಿಡಲು ಸಹಾಯ ಮಾಡುತ್ತಾನೆ.
ಗುರು ಚಾಂಡಾಲ ಯೋಗ
ಗುರು ಚಾಂಡಾಲ ಯೋಗದ ಪ್ರಭಾವ ಹೆಚ್ಚು ಕಮ್ಮಿ ಏಪ್ರಿಲ್‌ನಿಂದ ಶುರುವಾಗಿ ಅಕ್ಟೋಬರ್-ನವೆಂಬರ್‌ವರೆಗೂ ಇರುತ್ತದೆ. ನವೆಂಬರ್‌ವರೆಗೂ ಕೊಂಚ ಕಷ್ಟ ಇದ್ರು ಕೂಡ ನವೆಂಬರ್ ನಂತರ ನೀವು ಅಂದುಕೊಂಡಿದ್ದು ಎಲ್ಲವೂ ಆಗಲಿದೆ. ಪ್ರತಿಯೊಂದರಲ್ಲೂ ಯಶಸ್ಸು ಸಿಗಲಿದೆ.
ಈ ವರ್ಷದ ಯುಗಾದಿಯ ನಂತರ ಸಿಂಹರಾಶಿಯವರಿಗೆ ಶುಭ ಫಲವೇ ಇದೆ. ರಾಹುವಿಗೆ ಸ್ವಲ್ಪ ಪರಿಹಾರ ಮಾಡಿ, ಪ್ರತಿದಿನ ಹನುಮಾನ್ ಚಾಲೀಸ್ ಮಂತ್ರ ಪಠಿಸಿ ಎಲ್ಲವೂ ಒಳ್ಳೆಯದಾಗಲಿದೆ.



Click it and Unblock the Notifications














