Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಯುಗಾದಿ ರಾಶಿ ಭವಿಷ್ಯ 2023 : ಮಿಥುನ ರಾಶಿಯವರಿಗೆ ಈ ವರ್ಷ ಶುಭವೋ? ಅಶುಭವೋ?
ಹಿಂದೂ ಪಂಚಾಗದ ಪ್ರಕಾರ ಯುಗಾದಿ ಭಾರತೀಯರಿಗೆ ಹೊಸ ವರ್ಷದ ಖುಷಿಯನ್ನು ಹಂಚುತ್ತದೆ. ಈ ಯುಗಾದಿಯನ್ನು ಬರ ಮಾಡಿಕೊಳ್ಳುವ ಸಂತಸದ ಸಮಯದಲ್ಲಿ ನಮ್ಮ ರಾಶಿ ಭವಿಷ್ಯ ಬಗ್ಗೆ ತಿಳಿದು ಕೊಳ್ಳುವುದು ಕೂಡ ತುಂಬಾನೇ ಮುಖ್ಯವಾಗುತ್ತದೆ.

ಈ ಯುಗಾದಿಯ ನಂತರ ಮಿಥುನ ರಾಶಿಯವರ ರಾಶಿ ಫಲ ಹೇಗಿದೆ? ಶುಭ ಕಾರ್ಯಗಳನ್ನು ಮಾಡಲು ಈ ವರ್ಷ ಪ್ರಾಶಸ್ತವಾಗಿದ್ಯಾ? ಯುಗಾದಿಯ ನಂತರದ ಒಂದು ವರ್ಷ ಮಿಥುನ ರಾಶಿಯವರಿಗೆ ಶುಭವೋ? ಅಶುಭವೋ ಅನ್ನೋದನ್ನ ತಿಳಿದುಕೊಳ್ಳೋಣ.

ಮಿಥುನ ರಾಶಿ ಫಲ
ಏಪ್ರಿಲ್ 22 ಕ್ಕೆ ಗುರು ಮಿಥುನ ರಾಶಿಗೆ ಪ್ರವೇಶ ಮಾಡುತ್ತಾನೆ. ಈ ವರ್ಷಪೂರ್ತಿ ಅಲ್ಲೇ ಇರುತ್ತಾನೆ. ರಾಹು ಅಕ್ಟೋಬರ್ 29 ಕ್ಕೆ ಮೀನಾ ರಾಶಿಗೆ ಪ್ರವೇಶ ಮಾಡುತ್ತಾನೆ. ಆದರೆ ಪರಿಪೂರ್ಣವಾಗಿ ಮೀನಾ ರಾಶಿಗೆ ರಾಹುವಿನ ಪ್ರವೇಶವಾಗುವುದು ನವೆಂಬರ್ 29 ರ ನಂತರ. ಕೇತು ನವೆಂಬರ್ 29 ರವರೆಗೆ ತುಲಾ ರಾಶಿಯಲ್ಲಿ ಸ್ಥಿತನಾದ ಫಲವನ್ನೇ ಕೊಡುತ್ತಾನೆ. ಶನಿ ಈಗಾಗಲೇ ಭಾಗ್ಯ ಸ್ಥಿತಿಗೆ ಬಂದಿದ್ದಾನೆ. ಇನ್ನೂ ಈ ನಾಲ್ಕು ಗ್ರಹಗಳ ಗೋಚರ ಫಲ ಮಿಥುನ ರಾಶಿಯ ಮೇಲೆ ಹೇಗಿದೆ ಅನ್ನೋದನ್ನ ತಿಳಿದುಕೊಳ್ಳೋಣ.

ಆರ್ಥಿಕ ಅಭಿವೃದ್ಧಿಯಾಗುತ್ತದೆ
ಲಾಭದಲ್ಲಿ ಗುರು ಹಾಗೂ ರಾಹು ಇದ್ದಾರೆ. ಹೀಗಾಗಿ ಚಾಂಡಾಲ ಯೋಗ ಅಂತ ಹೇಳ್ತೀವಿ. ಗುರು ಮತ್ತು ರಾಹು ಇಬ್ಬರು ಲಾಭದಲ್ಲಿದ್ದಾರೆ. ಹೀಗಾಗಿ ಲಾಭದಲ್ಲಿ ಯಾವುದೇ ಗ್ರಹವಿದ್ದರೂ ಅದು ಶುಭ. ಹೀಗಾಗಿ ಈ ಯುಗಾದಿ ಕಳೆದ ಮೇಲೆ ಮಿಥುನ ರಾಶಿಯವರಿಗೆ ಆರ್ಥಿಕ ಅಭಿವೃದ್ಧಿಯಾಗುತ್ತದೆ. ರಾಹು ಲಾಭದಲ್ಲಿ ಇರೋದ್ರಿಂದ ನಿಮಗೆ ವ್ಯಾಪಾರದಲ್ಲಿ ಲಾಭವಾಗುವ ಸಾಧ್ಯತೆ ಇದೆ.

ಸಾಲದ ಭಾದೆ ನಿವಾರಣೆ
ಮಿಥುನ ರಾಶಿಯವರಿಗೆ ಮುಖ್ಯವಾಗಿ ಯಾರಿಗೆ ಸಾಲದ ಹೊರೆ ಇದೆ. ಈ ಯುಗಾದಿ ಕಳೆದ ಮೇಲೆ ಖಂಡಿತ ನಿಮ್ಮ ಸಾಲಗಳಿಗೆ ಮುಕ್ತಿ ಸಿಗಲಿದೆ.
ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ
ಮಿಥುನ ರಾಶಿಯ ವಿದ್ಯಾರ್ಥಿಗಳಿಗೆ ಈ ವರ್ಷ ತುಂಬಾ ಚೆನ್ನಾಗಿದೆ. ಗುರು ದೃಷ್ಟಿ ಮಿಥುನ ರಾಶಿಯ ಮೇಲೆ ಬಿದ್ದಿರೋದ್ರಿಂದ ನಿಮ್ಮ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಲಾಭ ಪಡೆಯುತ್ತೀರಾ. ಶಿಕ್ಷಣದಲ್ಲಿ ನಿಮಗೆ ಉತ್ತಮ ಅವಕಾಶಗಳು ಈ ವರ್ಷ ಲಭ್ಯವಾಗಲಿದೆ.

ವಿವಾಹ ಭಾಗ್ಯ
ಮಿಥುನ ರಾಶಿಯವರು ಯಾರೆಲ್ಲಾ ಮದುವೆಯಾಗುತ್ತಿಲ್ಲ ಎಂದು ನೊಂದುಕೊಳ್ಳುತ್ತಿದ್ದೀರೋ ಅವರಿಗೆಲ್ಲಾ ವಿವಾಹ ಯೋಗವಿದೆ. ಗುರು ಬಲವಿರೋದ್ರಿಂದ ಈ ವರ್ಷ ಕಂಕಣ ಭಾಗ್ಯವಿದೆ. ಇನ್ನೂ ಸಂತಾನವಿಲ್ಲದವರಿಗೆ ಸಂತಾನ ಪ್ರಾಪ್ತಿ ಕೂಡ ಆಗಲಿದೆ. ನಿಮ್ಮಲ್ಲಿ ದೈವ ಭಕ್ತಿ ಜಾಸ್ತಿಯಾಗಲಿದೆ. ಪುಣ್ಯ ಸ್ಥಳಗಳಿಗೆ ಹೋಗುವ ಅವಕಾಶ ಸಿಗಲಿದೆ.

ಉದ್ಯೋಗಿಗಳಿಗೆ ಒಳ್ಳೆಯ ಕಾಲ
ಮಿಥುನ ರಾಶಿಯ ಉದ್ಯೋಗಿಗಳು ನಿರೀಕ್ಷಿಸಿದಕ್ಕಿಂತ ಹೆಚ್ಚಿನದ್ದು ಈ ವರ್ಷ ನಿಮಗೆ ಸಿಗಲಿದೆ. ಉದ್ಯೋಗದಲ್ಲಿ ಪ್ರಮೋಚನ್ ಸಿಗುವ ಸಾಧ್ಯತೆ ಹೆಚ್ಚಿದೆ. ಬೇರೆಕಡೆಗೆ ವರ್ಗಾವಣೆಗೆ ಪ್ರಯತ್ನಿಸುತ್ತಿರುವವರಿಗೂ ಕೂಡ ಶುಭ ಸುದ್ದಿ ಕಾದಿದೆ. ಸಂಭಳ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನೂ ಭಾಗ್ಯದಲ್ಲಿ ಭಾಗ್ಯಾಧಿಪತಿ ಇರೋದ್ರಿಂದ ಅದೃಷ್ಟ ಒಲಿದು ಬರಲಿದೆ.

ಮನಃಶಾಂತಿ ಕದಡಲಿದೆ
ತೃತಿಯ ಭಾವಕ್ಕೆ ಶನಿ ದೃಷ್ಟಿ ಇರೋದ್ರಿಂದ ಮಿಥುನ ರಾಶಿಯವರಿಗೆ ಈ ವರ್ಷ ನಿಮ್ಮ ಬಂಧು-ಮಿತ್ರರು, ಸ್ನೇಹಿತರ ಜೊತೆಗೆ ಮನಸ್ಥಾಪಗಳಾಗುವ ಸಾಧ್ಯತೆಗಳಿದೆ. ಈ ಕಾರಣಕ್ಕಾಗಿ ಕೊಂಚಮಟ್ಟಿಗೆ ನಿಮ್ಮ ಮನಃಶಾಂತಿ ಕದಡುವ ಸಾಧ್ಯತೆ ಹೆಚ್ಚಾಗಿದೆ. ಹನುಮಾನ್‌ಚಾಲಿಸ್ ಮಂತ್ರ ಪಠಿಸುವುದರಿಂದ ಕೊಂಚ ಮಟ್ಟಿಗೆ ಸದೃಢರಾಗಿರ್ತಿರಾ.
ಪರಿಹಾರ
ಮಿಥುನ ರಾಶಿಯವರು ಸಂಕಷ್ಟ ಪರಿಹಾರಕ್ಕಾಗಿ ಕಪ್ಪು ಎಳ್ಳನ್ನು ಪ್ರತಿ ಶನಿವಾರ ದೇವಾಸ್ಥಾನಕ್ಕೆ ಅರ್ಪಿಸಿ. ಹೀಗೆ ನಿರಂತರವಾಗಿ ಹದಿನಾರು ಶನಿವಾರಗಳ ಕಾಲ ಇದನ್ನು ಮುಂದುವರಿಸಿ.
ಒಟ್ಟಿನಲ್ಲಿ ಈ ಬಾರಿ ಮಿಥುನ ರಾಶಿಯವರಿಗೆ ಎಲ್ಲವೂ ಒಳ್ಳೆಯದಾಗಲಿದೆ. ಅಂದುಕೊಂಡ ಕೆಲಸಗಳೆಲ್ಲಾ ಸುಗಮವಾಗಿ ನೆರವೇರಲಿದೆ.



Click it and Unblock the Notifications
