Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಯುಗಾದಿ ರಾಶಿ ಭವಿಷ್ಯ 2023 : ಕರ್ಕಾಟಕ ರಾಶಿಯವರಿಗೆ ಈ ವರ್ಷ ಶುಭವೋ? ಅಶುಭವೋ?
ಯುಗಾದಿ ಇನ್ನೇನು ಹತ್ತಿರದಲ್ಲಿದೆ. ಈ ಹೊಸ ವರುಷದಲ್ಲಿ ಅನೇಕ ಜನ ತಮ್ಮ ಬಾಳಲ್ಲಿ ಎಲ್ಲವೂ ಒಳ್ಳೆಯದಾಗಲಿದೆ ಎಂಬ ಭರವಸೆಯಲ್ಲಿದ್ದಾರೆ. ಯುಗಾದಿಯ ನಂತರ ಸಂಕಷ್ಟಗಳೆಲ್ಲಾ ಪರಿಹಾರವಾಗುವ ನಿರೀಕ್ಷೆಯಂತೂ ಖಂಡಿತ ಇದೆ. ಆದರೆ ನಮ್ಮ ರಾಶಿಫಲಗಳು ಹೇಗಿದೆ ಎಂಬುದರ ಮೇಲೆ ಎಲ್ಲವೂ ನಿರ್ಧಾರವಾಗಲಿದೆ.

ಕರ್ಕಾಟಕ ರಾಶಿಯವರಿಗೆ ಈ ಯುಗಾದಿ ಕಳೆದ ನಂತರ ಮಹತ್ವದ ಬದಲಾವಣೆ ಆಗಲಿದೆ. ಅಷ್ಟಕ್ಕು ಕರ್ಕಾಟಕ ರಾಶಿಯವರ ಭವಿಷ್ಯ ಹೇಗಿದೆ? ಯುಗಾದಿಯ ನಂತರ ಅವರ ಬಾಳಲ್ಲಿ ಶುಭವೋ? ಅಶುಭವೋ ಅನ್ನೋದನ್ನ ತಿಳಿಯೋಣ.

ಗ್ರಹಗಳ ಸಂಚಾರ
ಕರ್ಕಾಟಕ ರಾಶಿಯವರಿಗೆ ಈ ಏಪ್ರಿಲ್ 22 ರ ನಂತರ ಗುರು ಮೇಷ ರಾಶಿಗೆ ಬರ್ತಿದ್ದಾನೆ. ಕರ್ಕಾಟಕ ರಾಶಿಗೆ ಮೇಷ ರಾಶಿ ದಶಮ ಸ್ಥಾನವಾಗಲಿದೆ. ಗುರು ವರ್ಷ ಪೂರ್ತಿ ದಶಮದಲ್ಲಿ ಸ್ಥಿತನಾಗಿರುತ್ತಾನೆ. ಅಷ್ಟಮದಲ್ಲಿ ಶನಿ ಇರ್ತಾನೆ. ರಾಹು ಕೂಡ ದಶಮದಲ್ಲಿ ಸ್ಥಿತನಾಗಿರುತ್ತಾನೆ. ಕೇತು ಕೂಡ ತುಲಾ ರಾಶಿಯಲ್ಲಿ ನಾಲ್ಕನೇ ಮನೆಯಲ್ಲಿ ಕೂತಿರುತ್ತಾನೆ. ಕರ್ಕಾಟಕ ರಾಶಿಯವರಿಗೆ ಈ ಬಾರಿ ಕೆಲವು ವಿಚಾರದಲ್ಲಿ ಶುಭವಾದ್ರು ಕೂಡ ಕೆಲವೊಂದು ವಿಚಾರದಲ್ಲಿ ಅಶುಭ ಫಲಗಳೇ ಈ ಬಾರಿ ಹೆಚ್ಚಾಗಿದೆ.

ವೃತ್ತಿಯಲ್ಲಿ ಅಭಿವೃದ್ಧಿ
ಈ ಬಾರಿಯ ಯುಗಾದಿಯ ನಂತರ ಗುರು ಕರ್ಕಾಟಕ ರಾಶಿಯವರಿಗೆ ಶುಭ ಫಲವನ್ನೇ ಕೊಡುತ್ತಾರೆ. ಸರ್ಕಾರಿ ಅಥವಾ ಖಾಸಗಿ ಉದ್ಯೋಗವಾಗಲಿ ನಿಮ್ಮ ವೃತ್ತಿ ಅಥವಾ ಕೆಲಸದಲ್ಲಿ ಅಭಿವೃದ್ಧಿಯಾಗಲಿದೆ. ಕೆಲಸದ ಜಾಗದಲ್ಲಿ ಗೌರವ ಸಿಗಲಿದೆ. ಈ ವರ್ಷ ನಿಮಗೆ ಯಾವುದೇ ರೀತಿಯ ತೊಂದರೆಗಳು ಕೆಲಸಕ್ಕೆ ಸಂಬಂಧಿಸಿದಂತೆ ಎದುರಾಗೋದಿಲ್ಲ. ಅಷ್ಟಮದಲ್ಲಿರುವ ಶನಿಯ ದೃಷ್ಟಿ ಕರ್ಮ ಸ್ಥಾನಕ್ಕೆ ಇರೋದ್ರಿಂದ ಕೆಲಸದಲ್ಲಿ ಒತ್ತಡ, ಜವಾಬ್ದಾರಿ ಹೆಚ್ಚಾಗಲಿದೆ. ಇನ್ನೂ ಸ್ವಂತ ಉದ್ಯೋಗ ಮಾಡುವವರಾದರೆ ಹೆಚ್ಚಿನ ಶ್ರಮ ಹಾಕುವ ಅವಶ್ಯಕತೆ ಖಂಡಿತ ಇದೆ. ಆರ್ಥಿಕವಾಗಿ ತಕ್ಕ ಮಟ್ಟಿಗೆ ನಿಮಗೆ ಒಳ್ಳೆಯ ಫಲಿತಾಂಶ ಸಿಗಲಿದೆ.

ಕುಟುಂಬದ ಬಗ್ಗೆ ಗಮನ ಕೊಡಿ
ಕುಟುಂಬದಲ್ಲಿ ಸಾಕಷ್ಟು ನೋವು, ಸಂಕಷ್ಟಗಳನ್ನು ಕರ್ಕಾಟಕ ರಾಶಿಯವರು ಎದುರಿಸಬೇಕಾಗುತ್ತದೆ. ಶನಿ ಅಷ್ಟಮದಲ್ಲಿರೋದ್ರಿಂದ ನಿಮ್ಮ ಆಯುಷ್ಯ ಗಟ್ಟಿಯಾಗುತ್ತದೆ. ಆದ್ರೆ ನಿಮ್ಮ ಕುಟುಂಬದವರ ಜೊತೆಗೆ ಮನಸ್ಥಾಪಗಳು ಹೆಚ್ಚಾಗಲಿದೆ. ನಿಮ್ಮ ಮಾತಿನಿಂದ ಕೆಲವೊಂದು ಎಡವಟ್ಟುಗಳು ಆಗುವ ಸಾಧ್ಯತೆ ಇದೆ. ಮಾತು ಹಿಡಿತದಲ್ಲಿರಲಿ. ಮಾತಾನಾಡುವಾಗ ಹುಷಾರಾಗಿದ್ದರೆ ಒಳ್ಳೆಯದು. ಕುಟುಂಬದವರನ್ನು ದೂರ ಮಾಡಿಕೊಳ್ಳಬೇಡಿ. ಯುಗಾದಿಯ ನಂತರ ನಿಮ್ಮ ಮನಃಶಾಂತಿ ಹಾಳಾಗುವ ಸಾಧ್ಯತೆ ಇದೆ.

ದುಡ್ಡಿನ ವಿಚಾರದಲ್ಲಿ ಕೊಂಚ ಜಾಗರೂಕರಾಗಿರಿ
ನಿಮ್ಮ ಸ್ವಪ್ರಯತ್ನದಿಂದ ಆರ್ಥಿಕ ಅಭಿವೃದ್ಧಿಯಾಗಲಿದೆ. ಆದರೆ ಬಂದ ಹಣವನ್ನು ಎಲ್ಲೋ ಒಂದು ಕಡೆ ವ್ಯಯ ಮಾಡುತ್ತೀರಿ. ಇದಕ್ಕೆ ಕಾರಣ ಶನಿ ಆಗುತ್ತಾನೆ. ಅಂದರೆ ಎಲ್ಲೋ ಒಂದು ಕಡೆ ಹಣ ವಿನಿಯೋಗಿಸಿ ಅದನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಅಥವಾ ಯಾರಿಂದಲೋ ಮೋಸ ಆಗುವ ಸಾಧ್ಯತೆ ಇದೆ. ಹೀಗಾಗಿ ಈ ಬಾರಿ ಎಲ್ಲೂ ಹಣವನ್ನು ಇನ್ವೆಸ್ಟ್ ಮಾಡಬೇಡಿ ಹಾಗೂ ಯಾರಿಗೂ ದುಡ್ಡು ಸಾಲವಾಗಿ ನೀಡಬೇಡಿ. ಹಣಕಾಸಿನ ವಿಚಾರದಲ್ಲಿ ಮೋಸ ಆಗುವ ಸಾಧ್ಯತೆ ಇರೋದ್ರಿಂದ ಹಣವನ್ನು ಜೋಪಾನ ಮಾಡಿಕೊಳ್ಳಿ.
ಮನೆಕಟ್ಟಲು ಅಡೆತಡೆ ಉಂಟಾಗಬಹುದು
ಮನೆ ಕಟ್ಟುವ, ಸೈಟ್, ಕಾರ್ ತೆಗೆದುಕೊಳ್ಳುವ ಆಸೆ ನಿಮಗೆ ಇದ್ದರೂ ಕೂಡ ನಿಮಗೆ ಕೆಲವೊಂದು ಅಡೆತಡೆ ಉಂಟಾಗುವ ಸಾಧ್ಯತೆ ಇದೆ. ಶುಭ ಕಾರ್ಯಗಳನ್ನು ಮಾಡಲು ವಿಘ್ನಗಳು ಅಡ್ಡಿಯಾಗುವ ಸಾಧ್ಯತೆ ಇದೆ. ಒಂದು ವೇಳೆ ಸಾಲ ಮಾಡಿ ನೀವು ಮುನ್ನಡೆದರೆ ಹಣಕಾಸಿನ ಮುಗ್ಗಟ್ಟು ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಕೊಂಚ ಜಾಗರೂಕತೆ ವಹಿಸಿ.
ಆಸ್ತಿ ವ್ಯಾಜ್ಯ ನಿವಾರಣೆ
ನವೆಂಬರ್ ನಂತರ ಪಿರ್ತಾರ್ಜಿತ ಆಸ್ತಿ ಸಮಸ್ಯೆಗಳು ನಿವಾರಣೆಯಾಗಲಿದೆ. ಕೋರ್ಟ್‌ನಲ್ಲಿ ಇಷ್ಟು ವರ್ಷಗಳ ಕಾಲ ಪರಿಹಾರ ಸಿಗದಿರೋ ಸಮಸ್ಯೆಗಳಿಗೆಲ್ಲಾ ಈ ಬಾರಿ ಮುಕ್ತಿ ಸಿಗಲಿದೆ.
ಪರಿಹಾರ :
* ಪ್ರತಿಶನಿವಾರ ಕಪ್ಪು ಎಳ್ಳನ್ನು ದಕ್ಷಿಣೆ ಸಹಿತವಾಗಿ ದೇವರಿಗೆ ಅರ್ಪಿಸಿ
* ಉದ್ದಿನ ಬೇಳೆ ಮತ್ತು ಹುರುಳಿಕಾಳನ್ನು ಕೂಡ ದೇವಸ್ಥಾನಕ್ಕೆ ನೀಡಬೇಕು
* ಪ್ರತಿ ದಿನ ಹನುಮಾನ್ ಚಾಲಿಸ್ ಮಂತ್ರ ಪಠಿಸಬೇಕು.
* ತಿಂಗಳಿಗೊಮ್ಮ ವೃದ್ಧಾಶ್ರಮಕ್ಕೆ ಹೋಗಿ ಸೇವೆ ಸಲ್ಲಿಸಿ
* ವಯಸ್ಸಾಸವರು ಮನೆಯಲ್ಲಿದ್ದರೆ ಅವರ ಸೇವೆ ಮಾಡಿ
* ಕಪ್ಪು ಎಳ್ಳನ್ನು ಬಟ್ಟೆಯಲ್ಲಿ ಗಂಟು ಕಟ್ಟಿ ದೇವರ ಮುಂದಿಡಿ. ಒಂಬತ್ತನೇ ದಿನ ಅದನ್ನು ನೀರಿನಲ್ಲಿ ಬಿಡಿ. ಎರಡು ತಿಂಗಳಿಗೊಮ್ಮೆ ಇದನ್ನು ಮಾಡಿ. ಇದರಿಂದ ಶನಿ ಧೋಷ ನಿವಾರಣೆ
* ದುರ್ಗಾದೇವಿ ಅಷ್ಟೋತ್ರ ಪಠಿಸಿ
ಕರ್ಕಾಟಕ ರಾಶಿಯವರಿಗೆ ಶುಭ ಫಲಕ್ಕಿಂತ ಅಶುಭ ಫಲಗಳೇ ಹೆಚ್ಚಾಗಿರೋದ್ರಿಂದ ಈ ವರ್ಷ ಕರ್ಕಾಟಕ ರಾಶಿಯವರು ತುಂಬಾನೇ ಜಾಗರೂಕತೆಯಿಂದ ಇರಬೇಕು.



Click it and Unblock the Notifications
