Ugadi Horoscope 2023: ಯುಗಾದಿ ಭವಿಷ್ಯ: ಶೋಭಾಕೃತ ಸಂವತ್ಸರ 5 ರಾಶಿಗಳಿಗೆ ಶುಭಫಲ, ಈ 7 ರಾಶಿಗಳಿಗೆ ಮಿಶ್ರಫಲ ನೀಡಲಿದೆ

ಯುಗ ಯುಗಾದಿ ಕಳೆದರೂ ಯುಗಾದಿ ಮರುಳಿ ಬರುತ್ತಿದೆ, ಹೊಸ ಹರುಷವ ತರುತ್ತಿದೆ. ಈ ಮಾರ್ಚ್‌ 22ಕ್ಕೆ ಯುಗಾದಿ ಆಚರಿಸಲಾಗುವುದು. ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷ ಪ್ರಾರಂಭವಾಗುವುದು ಯುಗಾದಿಯಿಂದ. ಮಾರ್ಚ್ 22ರಿಂದ ಶೋಭಕೃತ ಸಂವತ್ಸರ ಶುರುವಾಗಲಿದೆ. ಈ ಶೋಭಾಕೃತ ಸಂವತ್ಸರ ನಿಮ್ಮೆಲ್ಲರ ಬದುಕಿನಲ್ಲಿ ಸುಖ ಸಂತೋಷ, ನೆಮ್ಮದಿ ಹೊತ್ತು ತರಲಿ.

Ugadi Varsha Bhavishya 2023

2023ರ ಯುಗಾದಿ ಭವಿಷ್ಯ ದ್ವಾದಶ ರಾಶಿಗಳಿಗೆ ಯಾವ ರೀತಿ ಇದೆ ಎಂದು ನೋಡೋಣ:

ಮೇಷ ರಾಶಿ: ಶುಭಫಲ

ಮೇಷ ರಾಶಿ: ಶುಭಫಲ

ಮೇಷ ರಾಶಿಯವರ 2023ರ ಯುಗಾದಿ ಭವಿಷ್ಯ ನೋಡುವುದಾದರೆ ಏಪ್ರಿಲ್‌ 22ಕ್ಕೆ ನಿಮ್ಮ ರಾಶಿಗೆ ಗುರು ಬರಲಿದೆ, ಆದ್ದರಿಂದ ಈ ವರ್ಷ ಗುರು ನಿಮ್ಮ ರಾಶಿಯಲ್ಲಿಯೇ ಇರಲಿದೆ. ಇನ್ನು ರಾಹು ಕೂಡ ಮೇಷ ರಾಶಿಯಲ್ಲಿ ಸ್ಥಿತನಾಗಿದ್ದಾನೆ. ನವೆಂಬರ್ 29ರವರೆಗೆ ರಾಹು ಪ್ರಭಾವ ಇರಲಿದೆ. ಇನ್ನು ಕೇತು ಪ್ರಭಾವ ಕೂಡ ನವೆಂಬರ್‌ 29ರವರೆಗೆ ಇರಲಿದೆ. ಇನ್ನು ಶನಿ ಮೇಷ ರಾಶಿಯವರ 11ನೇ ಮನೆಯಲ್ಲಿದೆ.

ಮೇಷ ರಾಶಿಯಲ್ಲಿ ಗುರು ಹಾಗೂ ರಾಹು ಇರುವುದರಿಂದ ಗುರು ಚಂಡಾಲ ಯೋಗವಿದೆ. ಮೇಷ ರಾಶಿಗೆ ಗುರು ಬರುವುದರಿಂದ ನಿಮಗೆ ಶುಭ ಫಲ ನೀಡಲಿದೆ. 2022ಕ್ಕಿಂತ 2023 ನಿಮಗೆ ಉತ್ತಮವಾಗಿರಲಿದೆ. 2022ರಲ್ಲಿದ್ದ ಆರ್ಥಿಕ ತೊಂದರೆಗಳು ದೂರಾಗುವುದು. ಈ ವರ್ಷ ನಿಮಗೆ ಗುರುವಿನ ಬಲದಿಂದ ಅದೃಷ್ಟದ ಬೆಂಬಲ ಸಿಗಲಿದೆ. ನಿಮ್ಮ ಶ್ರಮಕ್ಕೆ ಒಳ್ಳೆಯ ಪ್ರತಿಫಲ ಪಡೆಯುವಿರಿ. ಸ್ವಂತ ಉದ್ಯೋಗ ಮಾಡುವವರಿಗೆ ಯುಗಾದಿ ನಂತರ ತುಂಬಾನೇ ಶುಭಫಲ ಉಂಟಾಗಲಿದೆ. ನೀವು ಮಾಡಿದ ಹೂಡಿಕೆಯಿಂದ ಲಾಭ ಪಡೆಯುವಿರಿ. ನಿಮಗೆ ಬರಬೇಕಾಗಿದ್ದ ಹಣ ಕೈ ಸೇರಲಿದೆ. ಈ ವರ್ಷ ಶನಿ ಕೂಡ ಲಾಭ ಸ್ಥಾನದಲ್ಲಿರುವುದರಿಂದ ಈ ವರ್ಷ ನಿಮಗೆ ತುಂಬಾ ಶುಭವಾಗಿರಲಿದೆ.

ಉದ್ಯೋಗಿಗಳು ಬಡ್ತಿಯನ್ನು ಪಡೆಯುವಿರಿ. ಕೆಲಸದ ಒತ್ತಡ ಕಡಿಮೆಯಾಗಲಿದೆ. ರಾಹು ಇರುವುದರಿಂದ ಗುರುವಿಗೆ ಸಂಪೂರ್ಣ ಫಲ ಕೊಡಲು ಸಾಧ್ಯವಾಗದಿದ್ದರೂ ನಿಮಗೆ ನೆಮ್ಮದಿ ಅಂತು ಸಿಗಲಿದೆ.

ವಿವಾಹವಾಗಲು ಬಯಸುವವರಿಗೆ, ಅಂತಾನ ಅಪೇಕ್ಷಿತ ದಂಪತಿಗಳಿಗೆ ಶುಭ ಸುದ್ದಿ ಸಿಗಲಿದೆ. ಅಕ್ಟೋಬರ್‌ 29ರ ನಂತರ ಗುರು ಸಂಪೂರ್ಣ ಶುಭ ಫಲ ನೀಡುವುದರಿಂದ ಈ ಅವಧಿಯಲ್ಲಿ ನೀವು ಕೈಗೊಂಡ ಕಾರ್ಯಗಳು ಸಂಪೂರ್ಣವಾಗಿ ನೆರವೇರಲಿದೆ.

ಈ ವರ್ಷ ಗುರು ಧರ್ಮ ಸ್ಥಾನ ನೋಡುತ್ತಿರುವುದರಿಂದ ದೈವಿಕ ಕಾರ್ಯದಲ್ಲಿದ್ದ ವಿಘ್ನಗಳು ದೂರಾಗಲಿದೆ.

ವಿದ್ಯಾರ್ಥಿಗಳಿಗೂ ಈ ವರ್ಷ ತುಂಬಾ ಚೆನ್ನಾಗಿರಲಿದೆ. ನಿಮಗೆ ಒಳ್ಳೆಯ ಉದ್ಯೋಗ ಅವಕಾಶಗಳು ದೊರೆಯಲಿದೆ. ವಿದೇಶಕ್ಕೆ ಹೋಗ ಬಯಸುವವರಿಗೆ ಕೂಡ ಈ ವರ್ಷ ತುಂಬಾ ಚೆನ್ನಾಗಿರಲಿದೆ, ನಿಮ್ಮ ಆಸೆ ನೆರವೇರಲಿದೆ.

ಒಟ್ಟಿನಲ್ಲಿ ನೋಡುವುದಾದರೆ ಈ ವರ್ಷ ತುಂಬಾ ಚೆನ್ನಾಗಿರಲಿದೆ. ಈ ಯುಗಾದಿ ನಿಮಗೆ ಸಿಹಿ ಅಧಿಕ ನೀಡಿದೆ.

 ವೃಷಭ ರಾಶಿ: ಮಿಶ್ರಫಲ

ವೃಷಭ ರಾಶಿ: ಮಿಶ್ರಫಲ

ವೃಷಭ ರಾಶಿಯವರ 2023ರ ಯುಗಾದಿ ಭವಿಷ್ಯ ನೋಡುವುದಾದರೆ ರಾಹು ಮತ್ತು ಗುರು ನಿಮ್ಮ 12ನೇ ಮನೆಯಲ್ಲಿ ಇರಲಿದೆ. ಶನಿ ನಿಮ್ಮ 10ನೇ ಮನೆಯಲ್ಲಿಯೇ ಇರಲಿದೆ. ಕೇತು ನಿಮ್ಮ 7ನೇ ಮನೆಯಲ್ಲಿ ಇರಲಿದೆ. ಈ ನಾಲ್ಕು ಗ್ರಹಗಳು ನಿಮ್ಮ ರಾಶಿಯ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂದು ನೊಡುವುದಾದರೆ ಗುರು ವ್ಯಯದ ಸ್ಥಾನದಲ್ಲಿ ಇರುವುದರಿಂದ ನೀವು ಹೂಡಿಕೆಗೆ ಹೆಚ್ಚು ಹಣ ಖರ್ಚು ಮಾಡುವಿರಿ. ಗುರು ನಿಮ್ಮ ನಾಲ್ಕನೇ ಮನೆಯನ್ನು ನೋಡುವುದರಿಂದ ನೀವು, ಮನೆ, ಆಸ್ತಿ, ವ್ಯವಹಾರ, ವಾಹನ ಇವುಗಳನ್ನು ಖರೀದಿಸಲು ಖರ್ಚು ಮಾಡುವಿರಿ. ಆದರೆ ನೀವು ಸಾಲ ಮಾಡದೆ ಮಾಡಿದರೆ ಒಳ್ಳೆಯದು. ಸಾಲ ಮಾಡಲೇಬೇಕಾದ ಪರಿಸ್ಥಿತಿ ಬಂದರೆ ಸ್ವಲ್ಪ ಸಾಲ ಮಾತ್ರ ಮಾಡಿ. ಈ ವರ್ಷ ಹಣವನ್ನು ನೋಡಿಕೊಂಡು ಖರ್ಚು ಮಾಡಿ.

ಅಲ್ಲದೆ ಗುರುವು ನಿಮ್ಮ 6ನೇ ಮನೆಯನ್ನು ನೋಡುವುದರಿಂದ ಈ ಅವಧಿಯಲ್ಲಿ, ಸಾಲದ ಮನೆ ನೋಡುತ್ತಿರುತ್ತಾನೆ. ಆದರೆ ಸಾಲವನ್ನು ತುಂಬಾ ಮಾಡಿ. ಆದರೆ ಬೇರೆಯವರಿಗೆ ಹಣ ಸಾಲ ಕೊಡುವುದು, ಚೀಟಿ ಕಟ್ಟುವುದು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು, ಹೊಸ ವ್ಯವಹಾರ ಪ್ರಾರಂಭಿಸುವುದು ಮಾಡಬೇಡಿ, ಇದರಿಂದ ನಷ್ಟ ಉಂಟಾಗುವುದು.

ಗುರು ಮತ್ತು ರಾಹು ನಿಮ್ಮ ಅಷ್ಟಮಸ್ಥಾನ ನೋಡುತ್ತಿರುವುದರಿಂದ ನಿಮಗೆ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಎಚ್ಚರವಹಿಸಿ. ಅಲ್ಲದೆ ಈ ವರ್ಷ ತುಂಬಾ ಸುತ್ತಾಟ ಮಾಡುವುದರಿಂದ ನೀರು ಹಾಗೂ ಆಹಾರಕ್ರಮದ ಕಡೆ ಗಮನ ಹರಿಸಿ. ಈಗಾಗಲೇ ಮಧುಮೇಹ ಹಾಗೂ ಮತ್ತಿತರ ಆರೋಗ್ಯ ಸಮಸ್ಯೆ ಹೊಂದಿದ್ದರೆ ತುಂಬಾ ಎಚ್ಚರಿಕೆವಹಿಸಬೇಕು. ಈ ಅವಧಿಯಲ್ಲಿ ನಿಮ್ಮ ಕನಸು ನನಸಾಗಬಹುದು.

ಈ ವರ್ಷ ಕೆಲಸದಲ್ಲಿ ತುಂಬಾ ಕಾರ್ಯನಿರತರಾಗಿರುತ್ತೀರಿ. ಬೇರೆ ಕೆಲಸ ಸಿಗದೆ ಕೆಲಸ ಬದಲಾಯಿಸಲು ಹೋಗಬೇಡಿ, ಇಲ್ಲದಿದ್ದರೆ ಆರ್ಥಿಕ ನಷ್ಟವಾಗಬಹುದು. ಪ್ರತಿಶನಿವಾರ ಕಪ್ಪು ಎಳ್ಳು, ಸಾಸಿವೆ ಎಣ್ಣೆ ಶನಿ ದೇವಾಲಯಕ್ಕೆ ನೀಡಿ.

ಪ್ರತಿದಿನ ಗುರು ಮಂತ್ರ ಪಠಿಸಿ.. ಹನುಮಾನ್ ಚಾಲೀಸ ಪಠನೆ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು.

ಒಟ್ಟಿನಲ್ಲಿ ಈ ವರ್ಷ ನಿಮಗೆ ಮಿಶ್ರಫಲ, ಸಾಲ ಮಾಡದಂತೆ ಎಚ್ಚರವಹಿಸಿ.

 ಮಿಥುನ ರಾಶಿ: ಶುಭಫಲ

ಮಿಥುನ ರಾಶಿ: ಶುಭಫಲ

ಮಿಥುನ ರಾಶಿಯವರ 2023ರ ಯುಗಾದಿ ಭವಿಷ್ಯ ನೋಡುವುದಾದರೆ ರಾಹು ಮತ್ತು ಗುರು ನಿಮ್ಮ 11ನೇ ಮನೆಯಲ್ಲಿ ಇರಲಿದೆ. ಶನಿ ನಿಮ್ಮ 9ನೇ ಮನೆಯಲ್ಲಿ, ಕೇತು ನಿಮ್ಮ 6ನೇ ಮನೆಯಲ್ಲಿ ಇರಲಿದೆ. ಗುರು ಹಾಗೂ ರಾಹು ನಿಮಗೆ ಲಾಭದಲ್ಲಿದೆ. ಆದ್ದರಿಂದ ಈ ವರ್ಷ ನಿಮಗೆ ತುಂಬಾ ಶುಭ ಫಲ ನೀಡಲಿದೆ. ಈ ಅವಧಿಯಲ್ಲಿ ಐಶ್ವರ್ಯ ಹೆಚ್ಚಲಿದೆ. ನಿಮ್ಮ ಉದ್ಯೋಗ, ವ್ಯವಹಾರದಲ್ಲಿ ಲಾಭವನ್ನು ನೀಡಲಿದೆ. ಅಲ್ಲದೆ ನಿಮಗೆ ಸಾಲವಿದ್ದರೆ ಈ ವರ್ಷ ನೀವು ಸಾಲದ ಹೊರೆ ಕಡಿಮೆಯಾಗಲಿದೆ.

ಇನ್ನು ವಿದ್ಯಾರ್ಥಿಗಳಿಗೆ ಈ ವರ್ಷ ತುಂಬಾನೇ ಅನುಕೂಲಕರವಾಗಿದೆ. ನೀವು ಉನ್ನತ ವಿದ್ಯಾಭ್ಯಾಸಕ್ಕೆ ಪ್ರಯತ್ನಿಸುತ್ತಿದ್ದಾರೆ ನಿಮ್ಮ ಕನಸು ನೆರವೇರಲಿದೆ. ವಿವಾಹ ತಡವಾಗಿದ್ದರೆ ಈ ವರ್ಷ ಕಂಕಣ ಭಾಗ್ಯ ಕೂಡಿ ಬರಲಿದೆ. ಸಂತಾನ ಅಪೇಕ್ಷಿತ ದಂಪತಿಗಳಿಗೆ ಸಿಹಿ ಸುದ್ದಿ ದೊರೆಯಲಿದೆ. ಮನೆಯಲ್ಲಿ ಶುಭ ಕಾರ್ಯಗಳು ಹೆಚ್ಚಾಗಿ ನಡೆಯಲಿದೆ. ಕಳೆದ ವರ್ಷದಂತೆ ಈ ವರ್ಷ ಯಾವುದೇ ಕೆಲಸದ ಒತ್ತಡವಿರಲ್ಲ. ನಿಮ್ಮ ಎಲ್ಲಾ ಕೆಲಸಗಳು ಸುಗಮವಾಗಿ ನಡೆಯಲಿದೆ. ನಿಮ್ಮ ಕೆಲಸಕ್ಕೆ ತಕ್ಕ ಫಲ ನೀಡಲಿದೆ.

ಕುಟುಂಬದಲ್ಲಿ ಚಿಕ್ಕ ಪುಟ್ಟ ಮನಸ್ತಾಪಗಳಿರಬಹುದು. ನಿಮ್ಮ ತಪ್ಪುಗಳನ್ನು ಎತ್ತಿ ತೋರಿಸಬಹುದು ಆದರೆ ಅವುಗಳ ಬಗ್ಗೆ ತಲೆಕೆಡಿಸದಿರುವುದು ಒಳ್ಳೆಯದು.

ನೀವು ಪ್ರತಿದಿನ ಹನುಮಾನ್‌ ಚಾಲೀಸ ಮಂತ್ರ ಪಠಿಸಿ, 16 ವಾರ ಕಪ್ಪು ಎಳ್ಳನ್ನು ಶನಿ ದೇವರಿಗೆ ಅರ್ಪಿಸಿ.

ಕರ್ಕ ರಾಶಿ: ಸಾಧಾರಣವಾಗಿರಲಿದೆ

ಕರ್ಕ ರಾಶಿ: ಸಾಧಾರಣವಾಗಿರಲಿದೆ

ಕರ್ಕ ರಾಶಿಯವರ 2023ರ ಯುಗಾದಿ ಭವಿಷ್ಯ ನೊಡುವುದಾದರೆ ರಾಹು(ನವೆಂಬರ್‌ 29ರವರೆಗೆ) ಮತ್ತು ಗುರು ನಿಮ್ಮ 10ನೇ ಮನೆಯಲ್ಲಿ ಇರಲಿದೆ. ಶನಿ ನಿಮ್ಮ 8ನೇ ಮನೆಯಲ್ಲಿ ಕೇತು 5ನೇ ಮನೆಯಲ್ಲಿ ಇರಲಿದೆ. ಈ ವರ್ಷ ಕರ್ಕ ರಾಶಿಯವರಿಗೆ ಮಿಶ್ರಫಲ. ಈ ವರ್ಷ ನೀವು ಪರಿಹಾರ ಮಾಡಿದರೆ ಒಳ್ಳೆಯದು. ಆರ್ಥಿಕವಾಗಿ ಈ ಸಮಯ ಒಳ್ಳೆಯದಿದೆ. ಅಲ್ಲದೆ ಉದ್ಯೋಗಿಗಳಿಗೂ ಈ ಅವಧಿ ಅನುಕೂಲಕರವಾಗಿದೆ.

ಈ ವರ್ಷ ಕೆಲಸದಲ್ಲಿ ಒತ್ತಡ ಅಧಿಕವಿರಲಿದೆ. ಅಷ್ಟಮ ಶನಿ ಇರುವುದರಿಂದ ಕುಟುಂಬದ ವಿಷಯದಲ್ಲಿ ಸಾಕಷ್ಟು ನೋವು , ದುಃಖಗಳು ಇರಲಿದೆ. ಮನೆಯ ವಾತಾವರಣ ಅಷ್ಟು ಸರಿಯಿರಲ್ಲ. ಇನ್ನು ನೀವಾಡುವ ಮಾತುಗಳ ಬಗ್ಗೆ ಎಚ್ಚರಿಕೆವಹಿಸಬೇಕು, ಇಲ್ಲದಿದ್ದರೆ ನಿಮ್ಮ ಮಾತುಗಳೇ ನಿಮಗೆ ತೊಂದರೆ ಉಂಟಾಗಬಹುದು. ಈ ವರ್ಷ ಆರ್ಥಿಕ ಲಾಭವಾಗಲಿದೆ, ಆದರೆ ಖರ್ಚು ಕೂಡ ಹೆಚ್ಚಾಗಲಿದೆ. ಈ ಅವಧಿಯಲ್ಲಿ ಹೂಡಿಕೆ ಮಾಡಿದರೆ ನಷ್ಟ ಅನುಭವಿಸಬಹುದು. ಹಣಕಾಸಿನ ವಿಷಯದಲ್ಲಿ ಮೋಸವಾಗುವುದರಿಂದ ಎಚ್ಚರವಹಿಸಿ.

ಕುಟುಂಬದವರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಬಹುದು. ನೀವು ಆರೋಗ್ಯ ವಿಮೆ ಮಾಡಿಸುವುದು ಒಳ್ಳೆಯದು. ಗುರು 4 ಹಾಗೂ 6ನೇ ಮನೆಯನ್ನು ನೋಡುವುದರಿಂದ ನಿಮಗೆ ಮನೆ, ಆಸ್ತಿಯ ಆಸೆ ಹುಟ್ಟಿಸುತ್ತದೆ, ಆದರೆ ಸಾಲ ಕೂಡ ಮಾಡಬೇಕಾಗಬಹುದು. ಆದರೆ ಸಾಲ ಮಾಡದೇ ಇದ್ದರೆ ಒಳ್ಳೆಯದು. ಸಾಲ ಮಾಡಿ ಮನೆ ಕಟ್ಟುವ ಬದಲಿಗೆ ಶನಿ ಮೀನ ರಾಶಿಗೆ ಹೋಗುವವರೆಗೆ ಕಾಯುವುದು ಒಳ್ಳೆಯದು.

ಪಿತ್ರಾರ್ಜಿತ ಆಸ್ತಿ ವಿವಾದವಿದ್ದರೆ ಈ ವರ್ಷ ಬಗೆಹರಿಯಲಿದೆ. ಉದ್ಯೋಗ ಸ್ಥಳಗಳಲ್ಲಿ ಬೇರೆಯವರ ಬಗ್ಗೆ ಹೇಳಲು ಹೋಗಬೇಡಿ.

ಪ್ರತಿ ಶನಿವಾರ ಉದ್ದಿನ ಬೇಳೆ, ಹುರುಳಿಕಾಳು ದೇವಾಲಯಕ್ಕೆ ದಾನ ಮಾಡಿ. ತಿಂಗಳಿಗೊಮ್ಮೆ ವೃದ್ಧಾಶ್ರಮಕ್ಕೆ ಹೋಗಿ ಅವರಿಗೆ ಆಹಾರ ದಾನ ಮಾಡಿ. , ಶುಕ್ರವಾರ ಕಪ್ಪು ಎಳ್ಳನ್ನು ಬಟ್ಟೆಯಲ್ಲಿ ಕಟ್ಟಿ ದೇವರ ಕೋಣೆಯಲ್ಲಿಟ್ಟು 9 ದಿನ ಪೂಜೆ ಮಾಡಿ ಶನಿವಾರ ಶನಿ ದೇವಾಲಯಕ್ಕೆ ಅರ್ಪಿಸಿ.ದುರ್ಗಾ ಕವಚ ಮಂತ್ರ ಪಠಿಸಿ.

ಸಿಂಹ ರಾಶಿ: ಶುಭವಾಗಿದೆ

ಸಿಂಹ ರಾಶಿ: ಶುಭವಾಗಿದೆ

ಸಿಂಹ ರಾಶಿಯವರ ಯುಗಾದಿ ಭವಿಷ್ಯ ನೋಡುವುದಾದರೆ ನವೆಂಬರ್‌ 29ರವರೆಗೆ ರಾಹು 9ನೇ ಮನೆಯಲ್ಲಿ ಹಾಗೂ ಗುರು 9ನೇ ಮನೆಯಲ್ಲಿ ಇರಲಿದೆ. ಶನಿ ನಿಮ್ಮ 7ನೇ ಮನೆಯಲ್ಲಿ ಕೇತು ನಿಮ್ಮ 4ನೇ ಮನೆಯಲ್ಲಿ ಇರಲಿದೆ. ರಾಹು ಹಾಗೂ ಗುರು ಲಾಭದ ಮನೆಯಲ್ಲಿ ಇರಲಿದೆ. ಕಳೆದ ವರ್ಷ ಉದ್ಯೋಗದಲ್ಲಿ ಸಾಕಷ್ಟು ಪರಿಶ್ರಮ, ಹಣಕಾಸಿನ ತೊಂದರೆ ಎಲ್ಲಾ ಅನುಭವಿಸಿರುತ್ತೀರಿ. ಆದರೆ ಈ ವರ್ಷ ನಿಮಗೆ ಶನಿ ಹಾಗೂ ತುಂಬಾನೇ ಶುಭ ಫಲ ಇರಲಿದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರಿಗೆ ಒಳ್ಳೆಯ ಲಾಭ ಉಂಟಾಗಲಿದೆ. ಗುರು ಅದೃಷ್ಟ ಮನೆಯಲ್ಲಿ ಕುಳಿತಿರುವುದರಿಂದ ನೀವು ಒಳ್ಳೆಯ ಲಾಭ ಗಳಿಸುತ್ತೀರಿ. ನೀವು ಹಣಕಾಸಿನ ಸಮಸ್ಯೆಯಿಂದ ಮುಕ್ತರಾಗುತ್ತೀರಿ. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ.

ಪಿತ್ರಾರ್ಜಿತ ಆಸ್ತಿ ಸಮಸ್ಯೆಯಿದ್ದರೆ ಅದು ಈ ವರ್ಷ ಬಗೆಹರಿಯಲಿದೆ. ಮನೆಯಲ್ಲಿ ಪೂಜೆ ಕಾರ್ಯಗಳು ನಡೆಯಲಿದೆ. ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ. ಮದುವೆಗೆ ಯೋಗ್ಯವಿರುವವರಿಗೆ ಮದುವೆ ಕೂಡ ಕೂಡಿ ಬರಲಿದೆ. ಗುರು ಶಾಪದಿಂದ ಉಕ್ತಿ ಪಡೆಯುವಿರಿ. ಮಕ್ಕಳ ವಿಷಯದಲ್ಲಿ ಸಂತೋಷ ಸುದ್ದಿ ಪಡೆಯುವಿರಿ. ಈ ಅವಧಿಯಲ್ಲಿ ವಿಶೇಷ ಜ್ಞಾನ ಕೂಡ ಪಡೆಯುವಿರಿ. ಆಧ್ಯಾತ್ಮದ ಕಡೆಗೆ ಒಲವು ಹೆಚ್ಚುವುದು. ಕೆಲಸದಲ್ಲಿ ಬದಲಾವಣೆ ಮಾಡಿಕೊಳ್ಳುತ್ತೀರಿ. ನೀವು ಬೇರೆಯವರಿಗೆ ಸಹಾಯ ಮಾಡಲು ಹೋಗಿ ಕಷ್ಟಕ್ಕೆ ಸಿಲುಕಬಹುದು, ಆದ್ದರಿಂದ ನಿಮ್ಮ ಕೈಯಲ್ಲಾದ ಸಹಾಯ ಮಾಡಿ. ಹಣವನ್ನು ದಾನ ಅಂತ ಕೊಡಿ ಅಥವಾ ಸಾಲ ಕೊಡಬೇಡಿ. ಈ ಅವಧಿ ಸಿಂಹ ರಾಶಿಯ ವಿದ್ಯಾರ್ಥಿಗಳಿಗೆ ತುಂಬಾ ಚೆನ್ನಾಗಿರಲಿದೆ, ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸುತ್ತೀರಿ.

ಸಿಂಹ ರಾಶಿಯವರಿಗೆ ಗುರು ಚಾಂಡಾಲ ಯೋಗವಿರುವುದರಿಂದ ನವೆಂಬರ್‌ವರೆಗೆ ಸ್ವಲ್ಪ ಅಡೆತಡೆ ಇರುತ್ತದೆ, ಆದರೆ ನವೆಂಬರ್‌ ನಂತರ ಸಂಪೂರ್ಣ ಫಲ ಪಡೆಯುತ್ತೀರಿ. ಅರ್ಧಕ್ಕೆ ನಿಂತ ಕೆಲಸ ಕಾರ್ಯಗಳು ಪೂರ್ಣವಾಗುವುದು.

ಪ್ರತಿದಿನ ಹನುಮಾನ್‌ ಚಾಲೀಸ ಪಠಿಸಿ. ಪ್ರತಿದಿನ ಬೆಳಗ್ಗೆ ಸೂರ್ಯನ ಮಂತ್ರ ಪಠಿಸಿ. ಶನಿವಾರ ದೇವಾಲಯಕ್ಕೆ ಕಪ್ಪು ಎಳ್ಳು ಹಾಗೂ ಉದ್ದಿನ ಬೇಳೆ ಅರ್ಪಿಸುತ್ತಾ ಬನ್ನಿ. ಒಟ್ಟಿನಲ್ಲಿ ನೋಡುವುದಾದರೆ ಈ ವರ್ಷ ನಿಮಗೆ ಶುಭವಾಗಿದೆ.

 ಕನ್ಯಾ ರಾಶಿ: ಮಿಶ್ರಫಲ

ಕನ್ಯಾ ರಾಶಿ: ಮಿಶ್ರಫಲ

ಕನ್ಯಾ ರಾಶಿಯವರ ಯುಗಾದಿ ಭವಿಷ್ಯ ನೋಡುವುದಾದರೆ ನವೆಂಬರ್‌ 29ರವರೆಗೆ ರಾಹು 8ನೇ ಮನೆಯಲ್ಲಿ ಹಾಗೂ ಗುರು8ನೇ ಮನೆಯಲ್ಲಿ ಇರಲಿದೆ. ಶನಿ ನಿಮ್ಮ 6ನೇ ಮನೆಯಲ್ಲಿ ಕೇತು ನಿಮ್ಮ 3ನೇ ಮನೆಯಲ್ಲಿ ಇರಲಿದೆ. ಈ ಅವಧಿ ನಿನಗೆ ಮಿಶ್ರಫಲ. ರಾಹು-ಗುರು ಅಶುಭ ಫಲ ನೀಡಲಿದೆ, ಶನಿ ಶುಭ ಫಲ ನೀಡಿದೆ. ಈ ವರ್ಷ ಉದ್ಯೋಗ ಕ್ಷೇತ್ರದಲ್ಲಿ ಅಭಿವೃದ್ಧಿ, ಕೆಲಸದಲ್ಲಿ ಬದಲಾವಣೆ ಬಯಸುವವರಿಗೆ ಒಳ್ಳೆಯ ಅವಕಾಶ ದೊರೆಯಲಿದೆ. ನಿಮ್ಮ ಪ್ರತಿಭೆಗೆ ತಕ್ಕ ಗೌರವ ಸಿಗಲಿದೆ. ಪಂಚಮ ಶನಿ ಬಿಡುಗಡೆಯಾಗಿರುವುದರಿಂದ ನಿಮಗೆ ನೆಮ್ಮದಿ ಸಿಗಲಿದೆ. ಶನಿಯು ಮೂರನೇ ಮನೆ ನೋಡುತ್ತಿರುವುದರಿಂದ ಸ್ನೇಹಿತರಿಂದ ಸಂಪೂರ್ಣ ಬೆಂಬಲ ಸಿಗಲಿದೆ.

ಅಷ್ಟಮದಲ್ಲಿ ಗುರು ಚಂಡಾಲ ಯೋಗವಿರುವುದರಿಂದ ಸಂಗಾತಿ ಕುರಿತು ತಪ್ಪು ಕಲ್ಪನೆ ಬರಬಹುದು. ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುತ್ತಿದ್ದರೆ ಪಾಲುದಾರರು ಮೋಸ ಮಾಡಬಾರದು. ಸ್ವಂತ ಉದ್ಯೋಗ ಮಾಡುವವರು ತುಂಬಾ ಹೂಡಿಕೆ ಮಾಡದಿರುವುದು ಒಳ್ಳೆಯದು. ಅಲ್ಲದೆ ನೀವು ಯಾರಿಗೂ ಸಾಲ ನೀಡದಿದ್ದರೆ ಒಳ್ಳೆಯದು. ಹಣ ನೀಡಿದರೆ ಖಂಡಿತ ವಾಪಾಸು ಬರಲ್ಲ. ಹೂಡಿಕೆ, ಆನ್‌ಲೈನ್‌ ವ್ಯವಹಾರಗಳಲ್ಲಿ ತುಂಬಾ ಎಚ್ಚರಿಕೆವಹಿಸಬೇಕಾಗಿದೆ. ಯಾರೋ ಹೇಳಿದರು ಅಂತ ಹಣ ಹೂಡಿಕೆ ಮಾಡುವುದು ಮಾಡಿದರೆ ಮೋಸ ಹೋಗುವಿರಿ. ಅಲ್ಲದೆ ಬೇರೆಯವರ ಸಾಲಕ್ಕೆ ಶ್ಯೂರಿಟಿ ಹಾಕಬೇಡಿ. ನಿಮ್ಮ ಬೆಲೆ ಬಾಲುವ ವಸ್ತುಗಳು ಕಳೆದು ಹೋಗದಂತೆ ಜಾಗ್ರತೆವಹಿಸಿ. ನಿಮ್ಮ ಆರೋಗ್ಯದ ಕಡೆ ಕೂಡ ಗಮನ ಹರಿಸಿ.

ಶನಿವಾರ ಶನಿ ದೇವಾಲಯಕ್ಕೆ ಸಾಸಿವೆ ಎಣ್ಣೆ ಹಾಗೂ ಎಳ್ಳು ಅರ್ಪಿಸಿ.

 ತುಲಾ ರಾಶಿ: ಮಿಶ್ರಫಲ

ತುಲಾ ರಾಶಿ: ಮಿಶ್ರಫಲ

ತುಲಾ ರಾಶಿಯವರ ಯುಗಾದಿ ಭವಿಷ್ಯ ನೋಡುವುದಾದರೆ ನವೆಂಬರ್‌ 29ರವರೆಗೆ ರಾಹು 7ನೇ ಮನೆಯಲ್ಲಿ ಹಾಗೂ ಗುರು 7ನೇ ಮನೆಯಲ್ಲಿ ಇರಲಿದೆ. ಶನಿ ನಿಮ್ಮ5ನೇ ಮನೆಯಲ್ಲಿ ಕೇತು ನಿಮ್ಮ2ನೇ ಮನೆಯಲ್ಲಿ ಇರಲಿದೆ. ತುಲಾ ರಾಶಿಯವರಿಗೆ ಪಂಚಮಿ ಶನಿ ಶುರುವಾಗಿದೆ. ಆದರೆ ಗುರುವಿನ ಸ್ಥಾನ ನಿಮ್ಮ ಸಮಸ್ಯೆ ಕಡಿಮೆ ಮಾಡಲಿದೆ. ಪಂಚಮಿ ಶನಿಯಿಂದ ಲಾಭ ಬಂದರೂ ಬೇಗನೆ ಖರ್ಚಾಗುವುದು. ನಿಮಗೆ ಬರಬೇಕಾಗಿದ್ದ ಹಣ ಸರಿಯಾದ ಸಮಯದಲ್ಲಿ ಕೈ ಸೇರದಂತೆ ಶನಿ ತಡೆಯುತ್ತಾನೆ. ನಿಮ್ಮ ಆದಾಯದಲ್ಲಿ ವ್ಯತ್ಯಾಯವಾಗುವುದು.

ರಾಹು-ಕೇತುವಿನಿಂದಾಗಿ ಕುಟುಂಬದಲ್ಲಿ ಮನಸ್ತಾಪ, ಆರೋಗ್ಯ ಸಮಸ್ಯೆ ಈಗಾಗಲೇ ಉಂಟಾಗಿರುತ್ತದೆ. ಅದರೆ ಗುರು 7ನೇ ಸ್ಥಾನದಲ್ಲಿ ಇರುವುದರಿಂದ ನಿಮಗೆ ಕಷ್ಟದಿಂದ ಹೊರಬರಲು ಗುರು ಸಹಾಯ ಮಾಡುತ್ತಾನೆ. ನಿಮಗೆ ಹಣ ನೀವು ಊಹಿಸಿದಂತ ಬಾರದೇ ಇದ್ದಾಗ ಗುರು ಬೇರೆ ರೂಪದಲ್ಲಿ ನಿಮಗೆ ಅನುಕೂಲಕರ ಮಾಡುತ್ತಾರೆ. ಶನಿ ವಿದ್ಯಾರ್ಥಿಗಳು ಸೋಮಾರಿಗಳಾಗುವಂತೆ ಮಾಡಿದರೆ ಗುರು ವಿದ್ಯಾರ್ಥಿಗಳಿಗೆ ಓದುವಂತೆ ಮನಸ್ಸು ಮಾಡುತ್ತಾನೆ. ಶನಿ ನೀಡುವ ಕಷ್ಟವನ್ನು ಗುರು ಬಗೆಹರಿಸುತ್ತಾನೆ. ಆದ್ದರಿಂದ ಸಮಸ್ಯೆ ಬಂದರೂ ಗುರು ಬಲದಿಂದ ಬಗೆಹರಿಸಲು ಸಾಧ್ಯವಾಗುವುದು.

ತುಂಬಾ ಕಷ್ಟದ ಸಂದರ್ಭಗಳಲ್ಲಿ ಸ್ನೇಹಿತರು, ಸಹೋದರರು ಸಹಾಯ ಮಾಡಿ. ಪಂಚಮ ಶನಿ ಶುರುವಾಗಿರುವುದರಿಂದ ಹಣಕಾಸಿನ ಹೂಡಿಕೆ ಮಾಡದೇ ಇರುವುದು ಒಳ್ಳೆಯದು. ಈ ವರ್ಷ ನಿಮಗೆ ಮಿಶ್ರಫಲವಾಗಲಿದೆ. ನವೆಂಬರ್‌ನಲ್ಲಿ 6ನೇ ಮನೆಗೆ ರಾಹು ಬರುತ್ತಾನೆ, ಆವಾಗ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಾಗಲಿದೆ. ಈ ಶನಿವಾರ ಉದ್ದಿನಬೇಳೆ, ಕಪ್ಪು ಎಳ್ಳು ಪ್ರತಿ ಶನಿವಾರ ನೀಡಿ. ಪ್ರತಿದಿನ ಹನುಮಾನ್ ಚಾಲೀಸ ಮಂತ್ರ ಪಠಿಸಿ. ನಿರ್ಗತಿಕರಿಗೆ ಹೊಸ ಚಪ್ಪಲಿ ನೀಡಿ. ಪ್ರತಿ ತಿಂಗಳು ಸಂಕಷ್ಠಿ ಚತುರ್ಥಿ ಆಚರಿಸಿ.

 ವೃಶ್ಚಿಕ ರಾಶಿ: ಮಿಶ್ರಫಲ

ವೃಶ್ಚಿಕ ರಾಶಿ: ಮಿಶ್ರಫಲ

ವೃಶ್ಚಿಕ ರಾಶಿಯವರ ಯುಗಾದಿ ಭವಿಷ್ಯ ನೋಡುವುದಾದರೆ ನವೆಂಬರ್‌ 29ರವರೆಗೆ ರಾಹು 6ನೇ ಮನೆಯಲ್ಲಿ ಹಾಗೂ ಗುರು 6ನೇ ಮನೆಯಲ್ಲಿ ಇರಲಿದೆ. ಶನಿ ನಿಮ್ಮ4ನೇ ಮನೆಯಲ್ಲಿ ಕೇತು ನಿಮ್ಮ ಲಗ್ನ ಮನೆಯಲ್ಲಿ ಇರಲಿದೆ. ಶನಿ ನಾಲ್ಕನೇ ಮನಯಲ್ಲಿ ಇದ್ದಾಗ ಕೆಲಸದ ವಿಚಾರದಲ್ಲಿ ಆತಂಕ ಶುರುವಾಗುವುದು. ಕೆಲಸದಲ್ಲಿ ಅಭದ್ರತೆ ಉಂಟಾಗುವುದು. ಕೆಲಸದ ಒತ್ತಡ ಅಧಿಕವಾಗಲಿದೆ. ಗುರು 6ನೇ ಮನೆಯಲ್ಲಿರುವಾಗ ನೀವು ನಿಮ್ಮ ಬಜೆಟ್‌ಗಿಂತ ಅಧಿಕ ಸಾಲ ಮಾಡುತ್ತೀರಿ. ಆದರೆ ಅಧಿಕ ಸಾಲ ಮಾಡದಂತೆ ನೋಡಿಕೊಳ್ಳುವುದು ಒಳ್ಳೆಯದು. ಈ ವರ್ಷ ನೀವು ಮನೆ, ವಾಹನ, ಗಾಡಿ ತೆಗೆದುಕೊಳ್ಳುವ ನಿರ್ಧಾರ ಮಾಡುತ್ತೀರಿ.

ಈ ವರ್ಷ ಜವಾಬ್ದಾರಿಗಳು ಹೆಚ್ಚಾಗಲಿದೆ. ಇದರಿಂದ ಮನಸ್ಸಿನ ನೆಮ್ಮದಿ ಹಾಳಾಗುವುದು, ಅಧಿಕ ಕೆಲಸದ ಒತ್ತಡದಿಂದಾಗಿ ಕೆಲಸ ಬಿಡಲು ಹೋಗಬೇಡಿ. ಒಂದು ಕಡೆ ಕೆಲಸ ಬಿಟ್ಟು ಬೇರೆ ಕಡೆ ಕೆಲಸ ಮಾಡಿದರೆ ಅಲ್ಲಿಯೂ ಕೆಲಸದ ಒತ್ತಡ ಅಧಿಕವಿರುತ್ತದೆ. ಆದ್ದರಿಂದ ಅವಸರದಿಂದ ಕೆಲಸ ಬಿಡಲು ಹೋಗಬೇಡಿ. ನೀವು ಷೇರುಗಳಲ್ಲಿ ಹೂಡಿಕೆ ಮಾಡಲು ಹೋಗಬೇಡಿ. ಈ ವರ್ಷ ನೀವು ಯಾರಿಗೂ ಸಾಲ ಕೊಡಲು ಹೋಗಬೇಡಿ. ಆಸ್ತಿಯಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು.

ಈ ಅವಧಿಯಲ್ಲಿ ಆರೋಗ್ಯ ಸಮಸ್ಯೆಗಳಿರುತ್ತದೆ. ಆರೋಗ್ಯದ ಕಡೆಗೆ ಗಮನ ಹರಿಸಿ.

ಶನಿ ದೋಷದಿಂದ ಪಾರಾಗಲು ಪ್ರತಿ ಶನಿವಾರ ಶನಿ ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ ಎಳ್ಳೆಣ್ಣೆ ಹಾಗೂ ಕಪ್ಪು ಎಳ್ಳು ಅರ್ಪಿಸಿ, ನಿರ್ಗತಿಕರಿಗೆ ದಾನ ಮಾಡಿ. ಪ್ರತಿದಿನ ಸೂರ್ಯನಿಗೆ ಆರ್ಘ್ಯ ಅರ್ಪಿಸಿ.

ಧನು ರಾಶಿ: ಶುಭ ಫಲ

ಧನು ರಾಶಿ: ಶುಭ ಫಲ

ಧನು ರಾಶಿಯವರ ಯುಗಾದಿ ಭವಿಷ್ಯ ನೋಡುವುದಾದರೆ ನವೆಂಬರ್‌ 29ರವರೆಗೆ ರಾಹು 5ನೇ ಮನೆಯಲ್ಲಿ ಹಾಗೂ ಗುರು 5ನೇ ಮನೆಯಲ್ಲಿ ಇರಲಿದೆ. ಶನಿ ನಿಮ್ಮ3ನೇ ಮನೆಯಲ್ಲಿ ಕೇತು ನಿಮ್ಮ 12ನೇ ಮನೆಯಲ್ಲಿ ಇರಲಿದೆ. ಈ ಎಲ್ಲಾ ರಾಶಿಗಳು ನಿಮಗೆ ಶುಭ ಫಲ ನೀಡಲಿದೆ. ಅದರಲ್ಲೂ ನೀವು ಸಾಡೇಸಾತಿಯಿಂದ ಮುಕ್ತರಾಗಿರುವುದರಿಂದ ಈ ಅವಧಿ ಅನುಕೂಲಕರವಾಗಿದೆ. ಈ ವರ್ಷ ಉಳಿದಾಯದತ್ತ ಗಮನ ಹರಿಸುತ್ತೀರಿ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತೀರಿ. ಈ ವರ್ಷ ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳುತ್ತೀರಿ. ಕುಟುಂಬದಲ್ಲಿರುವ ಸಮಸ್ಯೆಗಳು ಪರಿಹಾರವಾಗಲಿದೆ.

ನೀವು ತಂದೆಯ ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಈ ವರ್ಷ ಖರ್ಚು ಕಮ್ಮಿಯಾಗಲಿದೆ. ಪಂಚಮ ಸ್ಥಾನದಲ್ಲಿ ಗುರು ಇರುವುದರಿಂದ ನಿಮಗೆ ಒಳ್ಳೆಯದಾಗುತ್ತದೆ. ಆಸ್ತಿಗೆ ಸಂಬಂಧಿಸಿದ ಸಮಸ್ಯೆಯಿದ್ದರೆ ಅದು ಬಗೆಹರಿಯಲಿದೆ. ಶನಿ ಸಾಡೇಸಾತಿ ಇರುವಾಗ ಅನುಭವಿಸಿದ ಕಷ್ಟಗಳಿಂದ ಹೊರಬರುವಿರಿ. ಗುರುದೆಸೆ ಇರುವುದರಿಂದ ಈ ವರ್ಷ ನಿಮಗೆ ತುಂಬಾನೇ ಒಳ್ಳೆಯದಾಗಲಿದೆ.

ವಿದ್ಯಾರ್ಥಿಗಳಿಗೆ ಈ ಸಮಯ ಅನುಕೂಲರವಾಗಿದೆ, ನೀವು ಬಯಸಿದ್ದು ನೆರವೇರಲಿದೆ. ನೀವು ಹೊರದೇಶಕ್ಕೆ ಹೋಗಿ ವಿದ್ಯಾಭ್ಯಾಸ ಅಥವಾ ಸಂಶೋಧನೆ ಮಾಡಲು ಬಯಸಿದರೆ ನಿಮ್ಮ ಆಸೆ ಈಡೇರಲಿದೆ. ವೃತ್ತಿಯಲ್ಲಿ ಪ್ರಗತಿ ಕಾಣುವಿರಿ. ನಿಮ್ಮ ಕೆಲಸ ಕಾರ್ಯಗಳು ನವೆಂಬರ್‌ ನಂತರ ತುಂಬಾನೇ ಶುಭವಾಗಲಿದೆ. ನವೆಂಬರ್‌ವರೆಗೆ ದೇವಾಲಯಕ್ಕೆ ಉದ್ದಿನ ಬೇಳೆ ದಾನ ಮಾಡುತ್ತಾ ಬನ್ನಿ. ಒಟ್ಟಿನಲ್ಲಿ ಈ ವರ್ಷ ನೀವು ತುಂಬಾ ಶುಭ ಫಲ ಕಾಣುವಿರಿ.

ಮಕರ ರಾಶಿ: ಮಿಶ್ರಫಲ

ಮಕರ ರಾಶಿ: ಮಿಶ್ರಫಲ

ಧನು ರಾಶಿಯವರ ಯುಗಾದಿ ಭವಿಷ್ಯ ನೋಡುವುದಾದರೆ ನವೆಂಬರ್‌ 29ರವರೆಗೆ ರಾಹು 4ನೇ ಮನೆಯಲ್ಲಿ ಹಾಗೂ ಗುರು 4ನೇ ಮನೆಯಲ್ಲಿ ಇರಲಿದೆ. ಶನಿ ನಿಮ್ಮ2ನೇ ಮನೆಯಲ್ಲಿ ಕೇತು ನಿಮ್ಮ 11ನೇ ಮನೆಯಲ್ಲಿ ಇರಲಿದೆ. ಗುರು ಚತುರ್ಥಿ ಭಾಗದಲ್ಲಿ ಇರುವುದರಿಂದ ಗುರುಬಲ ಇರುವುದಿಲ್ಲ, ಆದರೆ ಗುರುವಿನ ಸಹಾಯವಿರುತ್ತದೆ. ಈ ವರ್ಷ ನಿಮಗೆ ನೆಮ್ಮದಿ ತರಲಿದೆ. ಕುಟುಂಬ ಜೀವನದಲ್ಲಿ ಮನಸ್ತಾಪಗಳು ಉಂಟಾಗಬಹುದು. ನೀವಾಡುವ ಮಾತಿನ ಬಗ್ಗೆ ಎಚ್ಚರವಹಿಸಿ. ನೀವು ಉಳಿದಾಯದತ್ತ ಗಮನ ಹರಿಸಿ. ಈ ವರ್ಷ ಹಣ ನಿಧಾನಕ್ಕೆ ಬರಬಹುದು, ಉಳಿತಾಯದ ಹಣವಿದ್ದರೆ ತೊಂದರೆಯಿಲ್ಲ. ಗುರುವಿನ ಬಲದಿಂದ ನಿಮಗೆ ಸ್ವಲ್ಪ ನೆಮ್ಮದಿ ಸಿಗಲಿದೆ. ಏನಾದರೂ ಆಸ್ತಿ ವ್ಯಾಜ್ಯಯಿದ್ದರೆ ನವೆಂಬರ್ ನಂತರ ಸಮಸ್ಯೆ ಬಗೆಹರಿಯಲಿದೆ. ಉದ್ಯೋಗಿಗಳಿಗೆ ಯಾವುದೇ ದೊಡ್ಡ ತೊಂದರೆಯಿಲ್ಲ, ಸ್ವಲ್ಪ ಬದಲಾವಣೆಗಳಾಗಬಹುದು ಅಷ್ಟೆ. ಆರ್ಥಿಕವಾಗಿ ನೋಡುವುದಾದರೆ ದೊಡ್ಡ ಹೂಡಿಕೆ ಮಾಡದಿರುವುದು ಒಳ್ಳೆಯದು. ಇರುವ ಕೆಲಸ ಮುಂದುವರೆಸಿಕೊಂಡು ಹೋಗಿ. ಈ ವರ್ಷ ತುಂಬಾ ಹಣ ಖರ್ಚು ಮಾಡಿ ಹೊಸ ಉದ್ಯಮ ಮಾಡುವುದು ಮಾಡಬೇಡಿ. ನೀವು ಶನಿ ಹಾಗೂ ಗುರುವಿಗೆ ಪರಿಹಾರ ಮಾಡಿ.

ಪ್ರತಿ ಶನಿವಾರ ಉದ್ದಿನ ಬೇಳೆ, ಕಪ್ಪು ಎಳ್ಳು ದೇವಾಲಯದಲ್ಲಿ ದಾನ ಮಾಡಿ. ನಿರ್ಗತಿಕರಿಗೆ ಸಹಾಯ ಮಾಡಿ.

ಕುಂಭ ರಾಶಿ: ಸಾಧಾರಣ ಫಲ

ಕುಂಭ ರಾಶಿ: ಸಾಧಾರಣ ಫಲ

ಧನು ರಾಶಿಯವರ ಯುಗಾದಿ ಭವಿಷ್ಯ ನೋಡುವುದಾದರೆ ನವೆಂಬರ್‌ 29ರವರೆಗೆ ರಾಹು 3ನೇ ಮನೆಯಲ್ಲಿ ಹಾಗೂ ಗುರು3ನೇ ಮನೆಯಲ್ಲಿ ಇರಲಿದೆ. ಶನಿ ನಿಮ್ಮಲಗ್ನ ಮನೆಯಲ್ಲಿ ಕೇತು ನಿಮ್ಮ 10ನೇ ಮನೆಯಲ್ಲಿ ಇರಲಿದೆ.

ಕುಂಭ ರಾಶಿಯಲ್ಲಿ ಶನಿ ಇದೆ. ಸಾಡೇಸಾತಿಯ 2ನೇ ಹಂತದಲ್ಲಿ ಇದ್ದಾರೆ. ಶನಿ ಶುಭದ ಜೊತೆಗೆ ಅಶುಭ ಫಲವನ್ನು ನೀಡುತ್ತಾನೆ. ಗುರು ಮೇಷ ರಾಶಿಯನ್ನು ಪ್ರವೇಶಿಸಿದಾಗ ಗುರು 3ನೇ ಮನೆಯಲ್ಲಿ ಇರುವುದರಿಂದ ಗುರುವಿನ ಅನುಕೂಲ ತುಂಬಾ ಕಡಿಮೆ ಇರಲಿದೆ. ಈ ಅವಧಿಯಲ್ಲಿ ಹಣಕಾಸಿನ ಸಮಸ್ಯೆ ಬರಬಹುದು. ಉದ್ಯೋಗದ ಬಗ್ಗೆ ಹೇಳುವುದಾದರೆ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗದೇ ಇರಬಹುದು. ದುಡ್ಡಿನ ವಿಷಯದಲ್ಲಿ ಮೋಸಹೋಗಬಹುದು ಎಚ್ಚರವಹಿಸಿ. ಯಾರಿಗೂ ಶ್ಯೂರಿಟಿ ಹಾಕಲು ಹೋಗಬೇಡಿ. ಅಲ್ಲದೆ ಹಣಕಾಸಿನ ವಿಷಯದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಡಿ. ದೊಡ್ಡ ಹೂಡಿಕೆ ಮಾಡದೇ ಹೋಗಬಾರದು.

ಮೂರನೇ ಮನೆಯಲ್ಲಿ ಇರುವುದರಿಂದ ಅವನು ಸ್ವಲ್ಪ ಶುಭ ಫಲ ನೀಡಲಿದ್ದಾನೆ. ನಿಮ್ಮ ಮನಸ್ಸು ಬೇಡ ಎಂದು ಹೇಳುತ್ತಿದ್ದರೆ ಆ ಕಾರ್ಯ ಮಾಡಲು ಹೋಗಬೇಡಿ. ಕೆಲಸದ ವಿಚಾರದಲ್ಲಿ ಬೇರೆಯವರು ಬಿಟ್ಟಿ ಸಲಹೆ ನೀಡುವುದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಕೆಲಸದ ಒತ್ತಡ ಅಧಿಕ ಇರುತ್ತದೆ. ಕೆಲಸದಲ್ಲಿ ಒತ್ತಡವಿದೆ ಎಂದು ನೀವು ಕೆಲಸ ಬದಲಾಯಿಸಲು ಬಯಸುವುದಾದರೆ ಬೇರೆ ಕೆಲಸದಲ್ಲೂ ಕೆಲಸದ ಒತ್ತಡ ಅಧಿಕವಿರುತ್ತದೆ. ಆದ್ದರಿಂದ ಶನಿಗೆ ಪರಿಹಾರ ಮಾಡಿ.

ಶನಿ ಕೃಪೆಗೆ ಪಾತ್ರರಾಗಲು ಪ್ರತಿಶನಿವಾರ ಶನಿ ದೇವಾಲಯಕ್ಕೆ ಸಾಸಿವೆಯೆಣ್ಣೆ ಹಾಗೂ ಹಾಗೂ ಕಪ್ಪು ಎಳ್ಳು ದಾನ ಮಾಡಿ. ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.

ಮೀನ ರಾಶಿ: ಮಿಶ್ರಫಲ

ಮೀನ ರಾಶಿ: ಮಿಶ್ರಫಲ

ಧನು ರಾಶಿಯವರ ಯುಗಾದಿ ಭವಿಷ್ಯ ನೋಡುವುದಾದರೆ ನವೆಂಬರ್‌ 29ರವರೆಗೆ ರಾಹು 2ನೇ ಮನೆಯಲ್ಲಿ ಹಾಗೂ ಗುರು 12ನೇ ಮನೆಯಲ್ಲಿ ಇರಲಿದೆ. ಶನಿ ನಿಮ್ಮ 12ನೇ ಮನೆಯಲ್ಲಿ ಕೇತು ನಿಮ್ಮ 9ನೇ ಮನೆಯಲ್ಲಿ ಇರಲಿದೆ. 12ನೇ ಮನೆಯಲ್ಲಿ ಶನಿ ಇರುವುದರಿಂದ ನಿಮಗೆ ಕೆಲಸದ ಒತ್ತಡ ಅಧಿಕವಿರುತ್ತದೆ, ನಿಮ್ಮ ಪರಿಶ್ರಮಕ್ಕೆ ಫಲ ಸಿಗುವುದು. ಶನಿ ಕಷ್ಟಗಳನ್ನು ನೀಡಿದರೆ ಗುರುವಿನ ಸಹಾಯದಿಂದ ಸಮಸ್ಯೆ ಕಡಿಮೆ ಮಾಡಬಹುದು. ಮೀನರಾಶಿಗೆ ಸಾಡೇಸಾತಿಯಿದ್ದರೂ ಗುರು ಧನಸ್ಥಾನದಲ್ಲಿರುವುದರಿಂದ ಏಪ್ರಿಲ್‌ನಿಂದ ಹಣದ ತೊಂದರೆ ಸ್ವಲ್ಪ ಕಡಿಮೆಯಾಗುವುದು.

ಕುಟುಂಬದಲ್ಲಿರುವ ಮನಸ್ತಾಪ, ಕಲಹಗಳು ಕಡಿಮೆಯಾಗಲಿದೆ. ಗುರು ಮೇಷ ರಾಶಿಗೆ ಬಂದಾಗ ಇವೆಲ್ಲಾ ಬಗೆಹರಿಯಲಿದೆ. ಕುಟುಂಬದಲ್ಲಿ ನೆಮ್ಮದಿ ನೆಲೆಸುವಂತೆ ಮಾಡುತ್ತಾನೆ. ಗುರು 10ನ ಮನೆ ನೋಡುತ್ತಿರುವುದರಿಂದ ಕೆಲಸದಲ್ಲಿರುವ ಸಮಸ್ಯೆಗಳು ಬಗೆಹರಿಯಲಿದೆ. ವಿದ್ಯಾರ್ಥಿಗಳಿಗೆ ಈ ಸಮಯ ಅನುಕೂಲಕರವಾಗಿದೆ.

ಗುರು ಚಾಂಡಾಲ ಯೋಗ ಇರುವುದರಿಂದ ಅಕ್ಟೋಬರ್‌ವರೆಗೆ ಸ್ವಲ್ಪ ತೊಂದರೆಗಳಿದ್ದರೂ ಅಕ್ಟೋಬರ್‌ ನಂತರ ಸಮಸ್ಯೆ ಬಗೆಹರಿಯಲಿದೆ. ನೀವಾಡುವ ಮಾತಿನ ಕಡೆಗೆ ಗಮನ ಹರಿಸುವುದು ಒಳ್ಳೆಯದು.

ಶನಿ ಕೃಪೆಗೆ ಪಾತ್ರರಾಗಲು ಪ್ರತಿಶನಿವಾರ ಶನಿ ದೇವಾಲಯಕ್ಕೆ ಸಾಸಿವೆಯೆಣ್ಣೆ ಹಾಗೂ ಹಾಗೂ ಕಪ್ಪು ಎಳ್ಳು ದಾನ ಮಾಡಿ. ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ. ಗುರುವಾರ ಕಡ್ಲೆಬೇಳೆ ದೇವಾಲಯಕ್ಕೆ ಕೊಡಿ.

English summary

Ugadi Horoscope 2023 in Kannada: Shobhakruti Nama Samvatsara Ugadi Rashi Bhavishya in Kannada

Ugadi Varsha Bhavishya 2023 : Here is the Shobhakruti Nama Samvatsara Ugadi Horoscope predictions for 2023-24 in kannada. Read on.
X
Desktop Bottom Promotion