Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಈ 5 ಸಂಗತಿ ತಿಳಿದರೆ ಯುಗಾದಿ ಮತ್ತಷ್ಟು ಸ್ಪೆಷಲ್ ಅನಿಸುವುದು
ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ಎಂದರೆ ನವ ವರ್ಷ. ಹಿಂದೂ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ ಪ್ರಾರಂಭವಾಗುವುದೇ ಯುಗಾದಿಯಿಂದ. ಯುಗ-ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ..... ಈ ಸಾಲಿನಲ್ಲಿ ಮಾರ್ಚ್ 22ಕ್ಕೆ ಯುಗಾದಿ ಹಬ್ಬವನ್ನು ಆಚರಿಸುತ್ತೇವೆ.

ಯುಗಾದಿ ಹಬ್ಬದ ಬಗ್ಗೆ ಈ 5 ವಿಷಯಗಳು ಗೊತ್ತಿದ್ದರೆ ಯುಗಾದಿ ಮತ್ತಷ್ಟು ಸ್ಪೆಷಲ್ ಆಗುವುದು ನೋಡಿ:

ಹೊಸ ವರ್ಷದ ಆರಂಭ
ಯುಗಾದಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಬರುತ್ತದೆ. ಈ ವರ್ಷ ಮಾರ್ಚ್‌ನಲ್ಲಿ ಬಂದಿದೆ. ಕರ್ನಾಟಕ, ಆಂಧ್ರಪ್ರದೇಶದಲ್ಲಿಈ ಹಬ್ಬವನ್ನು ತುಂಬಾನೇ ಅದ್ಧೂರಿಯಾಗಿ ಆಚರಿಸಲಾಗುವುದು. ಉತ್ತರ ಭಾರತದ ಕಡೆ ಗುಡಿ ಪರ್ವ ಎಂದು ಈ ದಿನ ಹಬ್ಬವನ್ನು ಆಚರಿಸಲಾಗುವುದು.
ಯುಗಾದಿಯನ್ನು ಹಿಂದೂ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ ಎಂದು ಪರಿಗಣಿಸಲಾಗುವುದು. ಹೊಸ ವರ್ಷದ ಸೂಚನೆಗಳು ಪ್ರಕೃತಿಯಲ್ಲೂ ಕಾಣಸಿಗುವುದು.
ವಸಂತ ಋತುವಿನ ಕಾಲದಲ್ಲಿ ಗಿಡಗಳ ಎಲೆಗಳು ಉದುರಿ ಹೊಸ ಚಿಗುರು ಮೂಡಿರುತ್ತದೆ, ಪ್ರಕೃತ್ತಿಯಲ್ಲಿಯೇ ಹೊಸತನ ಮೂಡಿರುತ್ತದೆ. ಪ್ರಕೃತಿ ಹಚ್ಚ ಹಸಿರಿನಿಂದ ಕಂಗೊಳಿಸುವುದು, ಮಾವುಗಳಲ್ಲಿ ಎಳೆ ತಳಿರು ಮೂಡುವುದು, ಪ್ರಕೃತ್ತಿಯಲ್ಲಿಯೇ ಹೊಸತನ ಕಾಣುತ್ತೇವೆ.

ಯುಗಾದಿಯಂದು ಬ್ರಹ್ಮ ವಿಶ್ವವನ್ನು ಸೃಷ್ಟಿಸಿದ
ಹಿಂದೂ ಧರ್ಮದಲ್ಲಿ ಬ್ರಹ್ಮನನ್ನು ಸೃಷ್ಟಿಕರ್ತವೆಂದು ಹೇಳಲಾಗುವುದು. ಇಡೀ ವಿಶ್ವವನ್ನು ಬ್ರಹ್ಮ ನಿರ್ಮಿಸಿದ್ದಾನೆ ಎಂದು ಹೇಳಲಾಗುವುದು. ಬ್ರಹ್ಮ ಯುಗಾದಿಯಲ್ಲಿ ವಿಶ್ವವನ್ನು ನಿರ್ಮಿಸಿದ ಎಂದು ನಂಬಲಾಗಿದೆ. ಈ ಯುಗಾದಿ ಹಬ್ಬ ನಮ್ಮೆಲ್ಲರ ಬದುಕಿನಲ್ಲಿ ಹೊಸತನ್ನು ಹೊತ್ತು ತರುತ್ತದೆ, ಆದ್ದರಿಂದಲೇ ಯುಗಾದಿ ತುಂಬಾನೇ ಸ್ಪೆಷಲ್ ಅನಿಸುವುದು.

ಯುಗಾದಿಯಂದು ಅಯೋಧ್ಯೆಯಲ್ಲಿ ರಾಮನಿಗೆ ಪಟ್ಟಾಭಿಷೇಕ
ರಾಮಾಯಣದಲ್ಲಿ ಯುಗಾದಿಯಂದು ಅಯೋಧ್ಯೆಯ ರಾಜನಾಗಿ ರಾಮನನ್ನು ಪಟ್ಟಾಭಿಷೇಕ ಮಾಡಲಾಯಿತು ಎಂದು ಹೇಳಲಾಗಿದೆ. ಶ್ರೀರಾಮ ದುಷ್ಟನಾದ ರಾವಣನ ಸಂಹರಿಸಿ ವಿಜಯದೊಂದಿಗೆ ಅಯೋಧ್ಯೆಗೆ ಹಿಂತಿರುಗಿದ, ಅಯೋಧ್ಯೆಯ ಜನರು ರಂಗೋಲಿ ಹಾಕಿ, ಹಣತೆಗಳನ್ನು ಹಚ್ಚಿ ಶ್ರೀರಾಮ, ಸೀತೆ, ಲಕ್ಷ್ಮಣರನ್ನು ಸ್ವಾಗತಿಸಿದರು ಎಂದು ರಾಮಾಯಣದಲ್ಲಿ ಹೇಳಲಾಗಿದೆ.

ಕಲಿಯುಗದ ಆರಂಭ
ಯುಗಾದಿಯಂದು ದ್ವಾಪರಯುಗ ಮುಗಿದು ಕಲಿಯುಗ ಪ್ರಾರಂಭವಾಯಿತು, ಶ್ರೀಕೃಷ್ಣ ದ್ವಾಪರಯುಗದ ನಂತರ ದೇವ ಲೋಕಕ್ಕೆ ಹಿಂತಿರುಗಿದ. ಕಲಿಯುಗದದಲ್ಲಿ ಹಿಂಸೆ, ಅನ್ಯಾಯಗಳು ಹೆಚ್ಚಾದಾಗ ಮತ್ತೆ ರೂಪವೆತ್ತಿ ಬರುತ್ತಾನೆ ಬಂದು ದುಷ್ಟರಿಗೆ ತಕ್ಕ ಪಾಠ ಕಲಿಸುತ್ತಾನೆ ಎಂದು ನಂಬಲಾಗಿದೆ.

ಯುಗಾದಿ ಆಚರಣೆ ಹೇಗೆ?
ಯುಗಾದಿಯನ್ನು ಬೇವು-ಬೆಲ್ಲದ ಜೊತೆಗೆ ಆಚರಿಸಲಾಗುವುದು. ಮಾನವ ಜೀವನವೆಂದರೆ ಅಲ್ಲಿ ಸಿಹಿಯೂ ಇರುತ್ತೆ, ಕಹಿಯೂ ಇರುತ್ತೆ ಅಂದರೆ ಸುಖ: ದುಃಖ ಎರಡೂ ಇರುತ್ತದೆ. ಸುಖ ಬಂದಾಗ ಹಿಗ್ಗಬಾರದು, ದುಃಖ ಬಂದಾಗ ಕುಗ್ಗಬಾರದು, ಸಮತೋಲನದ ಜೀವನ ನಡೆಸಬೇಕೆಂಬುವುದೇ ಯುಗಾದಿಯಲ್ಲಿ ಬೇವು-ಬೆಲ್ಲ ಸವಿಯುವುದರ ಹಿಂದಿನ ಅರ್ಥವಾಗಿದೆ.
ವೈಜ್ಞಾನಿಕವಾಗಿಯೂ ಬೇವು-ಬೆಲ್ಲ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಈ ದಿನ ರಂಗೋಲಿ ಹಾಕಿ, ಮನೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ, ಯುಗಾದಿ ಪಚಡಿ ತಯಾರಿಸಿ, ಹಬ್ಬದ ಅಡುಗೆ ಮಾಡಿ ಸಂತೋಷ, ಸಡಗರದಿಂದ ಆಚರಿಸಲಾಗುವುದು.
ಈ ಯುಗಾದಿ ನಿಮ್ಮೆಲ್ಲರ ಬಾಳಲ್ಲಿ ಹೊಸತನ್ನು ತರಲಿ, ನಿಮ್ಮ ಆಸೆ ಈಡೇರಲಿ, ಕನಸು ನನಸಾಗಲಿ, ಬಾಳು ಬಂಗಾರವಾಗಲಿ.



Click it and Unblock the Notifications
