Makar Sankranti 2023 : ರಾಜ್ಯ-ರಾಜ್ಯಕ್ಕೆ ಮಕರ ಸಂಕ್ರಾಂತಿ ಆಚರಣೆ ಭಿನ್ನ, ಹೇಗೆ ಆಚರಿಸಲಾಗುವುದು?

ಮಕರ ಸಂಕ್ರಾಂತಿಯನ್ನು ದೇಶದೆಲ್ಲಡೆ ತುಂಬಾ ಸಡಗರ-ಸಂಭ್ರಮದಿಂದ ಆಚರಿಸಲಾಗುವುದು. ರಾಜ್ಯದಿಂದ-ರಾಜ್ಯಕ್ಕೆ ಆಚರಣೆಯ ವಿಧಾನಗಳು ಸ್ವಲ್ಪ ಭಿನ್ನವಾಗಿರುತ್ತದೆ, ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಎಂದರೆ ಸುಗ್ಗಿಯ ಹಬ್ಬ, ಕೇರಳದಲ್ಲಿ ಅಯ್ಯಪ್ಪ ದರ್ಶನ, ಗುಜರಾತ್‌ನಲ್ಲಿ ಗಾಳಿ ಪಟದ ಸಂಭ್ರಮ ಹೀಗೆ ವಿವಿಧ ರೀತಿಯಲ್ಲಿ ತುಂಬಾನೇ ವಿಜೃಂಭಣೆಯಿಂದ ಆಚರಿಸಲಾಗುವುದು.

Traditions Of Makar Sankranti,

ಯಾವ ರಾಜ್ಯಗಳಲ್ಲಿ ಹೇಗೆ ಆಚರಿಸುತ್ತಾರೆ ಎಂಬ ಕಿರು ಮಾಹಿತಿ ಇಲ್ಲಿದೆ ನೋಡಿ:

ಕರ್ನಾಟಕ
ಕರ್ನಾಕದಲ್ಲಿ ಸಂಕ್ರಾಂತಿ ಸುಗ್ಗಿಯ ಹಬ್ಬವಾಗಿದೆ. ಈ ದಿನ ಮನೆಯನ್ನು ಅಲಂಕರಿಸಿ, ಹೊಸ ಬಟ್ಟೆಗಳನ್ನು ಧರಿಸಿ ಎಳ್ಳು-ಬೆಲ್ಲ ಕೊಟ್ಟು ಶುಭಾಶಯ ಕೋರುವ ಸಂಪ್ರದಾಯವಿದೆ.

ಮಹಾರಾಷ್ಟ್ರ
ಮಹಾರಾಷ್ಟ್ರದಲ್ಲೂ ಎಳ್ಳು-ಬೆಲ್ಲದಿಂದ ತಿಂಡಿಗಳನ್ನು ತಯಾರಿಸಲಾಗುವುದು. ಈ ದಿನದಂದು ವಿವಿಧ ಬಗೆಯ ಹಲ್ವಾ ಕೂಡ ತಯಾರಿಸಲಾಗುವುದು.

ಆಂಧ್ರ ಪ್ರದೇಶ ಮತ್ತು ತೆಲಂಗಾಣ
ಸಂಕ್ರಾಂತಿ ಹಬ್ಬವನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ನಾಲ್ಕು ದಿನಗಳ ಕಾಲ ಆಚರಿಸಲಾಗುತ್ತದೆ: ಮನೆ ಮುಂದೆ ರಂಗೋಲಿ ಬಿಟ್ಟು ವಿವಿಧ ಬಗೆಯ ತಿನಿಸುಗಳನ್ನು ಮಾಡಿ ಹಬ್ಬವನ್ನು ಆಚರಿಸಲಾಗುವುದು.

ಕೇರಳ
ಕೇರಳದಲ್ಲಿ ಮಕರ ವಿಳಕ್ಕು ಎಂದು ಆಚರಿಸಲಾಗುವುದು, ಈ ದಿನ ಅಯ್ಯಪ್ಪ ದೇವಾಲಯಕ್ಕೆ ದಿವ್ಯ ಜ್ಯೋತಿ ನೋಡಲು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ಅಸ್ಸಾಂ

ಅಸ್ಸಾಂನಲ್ಲಿ ಮಾಘ ಬಿಹು, ಭೋಗಾಲಿ ಬಿಹು ಎಂಬ ಹೆಸರಿನಲ್ಲಿ ಹಬ್ಬವನ್ನು ಆಚರಿಸಲಾಗುವುದು. ಒಂದು ವಾರಗಳ ಕಾಲ ಹಬ್ಬವನ್ನು ಆಚರಿಸಲಾಗುವುದು.

ಗೋವಾ
ಗೋವಾದಲ್ಲಿ ಸಂಕ್ರಾಂತ್ ಎಂದು ಕರೆಯಲಾಗುತ್ತದೆ. ವಿವಾಹಿತ ಮಹಿಳೆಯರು ಐದು ಸಣ್ಣ ಮಣ್ಣಿನ ಮಡಕೆಗಳ ಸುತ್ತ ಕಪ್ಪು ಮಣಿಗಳ ದಾರಗಳನ್ನು ಕಟ್ಟಿಕೊಂಡು ದೇವರಿಗೆ ಅರ್ಪಿಸುತ್ತಾರೆ. ಈ ಮಡಕೆಗಳಿಗೆ ವೀಳ್ಯೆದೆಲೆ, ಅಡಿಕೆ, ಹೊಸದಾಗಿ ಕೊಯ್ಲು ಮಾಡಿದ ಆಹಾರ ಧಾನ್ಯಗಳನ್ನು ತುಂಬಲಾಗುವುದು.

ಗುಜರಾತ್

ಗುಜರಾತ್‌ನಲ್ಲಿ ಸಂಕ್ರಾಂತಿ ಹಬ್ಬದಂದು ಗಾಳಿಪಟ ಹಾರಿಸಿ ಸಂಭ್ರಮಿಸಲಾಗುವುದು. ಈ ದಿನದಂದು ವಿಶೇಷ ತಿನಿಸುಗಳನ್ನು ತಯಾರಿಸಿ ಹಬ್ಬವನ್ನು ಆಚರಿಸಲಾಗುವುದು.

ಹರಿಯಾಣ ಮತ್ತು ದೆಹಲಿ
ಈ ಭಾಗಗಳಲ್ಲಿ ಈ ದಿನ ಜನರು ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ, ಈ ದಿನ ದೇಸಿ ತುಪ್ಪದಲ್ಲಿ ಖೀರ್‌, ಹಲ್ವಾವನ್ನು ತಯಾರಿಸಲಾಗುವುದು. ಈ ದಿನ ಸಹೋದರರು ಉಡುಗೊರೆ ಜೊತೆ ತಮ್ಮ ತಂಗಿ ಮನೆಗೆ ಭೇಟಿ ನೀಡುತ್ತಾರೆ. ಹರ್ಯಾಣದಲ್ಲಿ ಜಾನಪದ ಹಾಡುಗಳನ್ನು ಹೇಳುತ್ತಾ ಅದಕ್ಕೆ ನೃತ್ಯ ಮಾಡುತ್ತಾ ಈ ದಿನವನ್ನು ಸಂಭ್ರಮಿಸಲಾಗುವುದು.

ಜಮ್ಮು
ಜಮ್ಮುವಿನಲ್ಲಿ ಉತ್ರೇನ್‌ ಎಂದು ಆಚರಿಸಲಾಗುವಿದು, ಈ ದಿನದಂದು ವಿವಾಹಿತ ಹೆಣ್ಣು ಮಕ್ಕಳ ಮನೆಗೆ ಆಹಾರ ಪದಾರ್ಥಗಳನ್ನು ಕಳುಹಿಸುವ ಸಂಪ್ರದಾಯವಿದೆ.
ಜಮ್ಮುವಿನಲ್ಲಿರುವ ವಾಸುಕಿ ದೇವಾಲಯದಲ್ಲಿ ಈ ದಿನದಂದು ನಾಗನ ವಿಗ್ರಹವನ್ನು ಮುಚ್ಚಲಾಗುವುದು, ಮೂರು ತಿಂಗಳ ನಂತರ ಅಂದರೆ ವೈಶಾಖ ಸಂಕ್ರಾಂತಿಯಂದು ಮತ್ತೆ ನಾಗನ ದರ್ಶನ ಪಡೆಯಬಹುದು.

ಒಡಿಶಾ
ಒಡಿಶಾದಲ್ಲಿ ಮಕರ ಸಂಕ್ರಾಂತಿಯೆಂದು ಆಚರಿಸಲಾಗುವುದು. ಹೊಸದಾಗಿ ಬೆಳೆದ ಅಕ್ಕಿ, ಬಾಳೆಹಣ್ಣು, ತೆಂಗಿನಕಾಯಿ, ಬೆಲ್ಲ, ಎಳ್ಳು ಬಳಸಿ ಸಿಹಿ ತಿಂಡಿಗಳನ್ನು ತಯಾರಿಸಿ ಹಬ್ಬವನ್ನು ಆಚರಿಸಲಾಗುವುದು.

ಪಂಜಾಬ್
ಪಂಜಾಬ್‌ನಲ್ಲಿ ಮಾಘಿ ಎಂದು ಆಚರಿಸಲಾಗುವುದು. ಈ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ಎಳ್ಳೆಣ್ಣೆ ದೀಪವನ್ನು ಹಚ್ಚುತ್ತಾರೆ. ಎಳ್ಳೆಣ್ಣೆ ಹಚ್ಚುವುದರಿಂದ ಸಮೃದ್ಧಿ ದೊರೆಯುತ್ತದೆ ಎಂಬುವುದು ನಂಬಿಕೆ. ಈ ದಿನ ವಿವಿಧ ತಿನಿಸುಗಳನ್ನು ಮಾಡಿ ಹಬ್ಬವನ್ನು ಆಚರಿಸಲಾಗುವುದು.

ರಾಜಸ್ಥಾನ ಮತ್ತು ಪಶ್ಚಿಮ ಮಧ್ಯ ಪ್ರದೇಶ
ಇಲ್ಲಿ ಸಂಕ್ರಾಂತಿ ಹಬ್ಬವನ್ನು ಸಕ್ರತ್‌ ಎಂದು ಕರೆಯಲಾಗುವುದು. ಈ ದಿನ 13 ವಿವಾಹಿತ ಮಹಿಳೆಯರಿಗೆ ಮೇಕಪ್ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಈ ದಿನದಂದು ಗಾಳಿಪಟ ಆರಿಸಿ ಸಂಭ್ರಮಿಸಲಾಗುವುದು.

ತಮಿಳುನಾಡು
ತಮಿಳುನಾಡಿನಲ್ಲಿ ಪೊಂಗಲ್ ಎಂದು ಆಚರಿಸಲಾಗುವುದು. ನಾಲ್ಕು ದಿನಗಳ ಕಾಲ ನಡೆಯುವ ಆಚರಣೆಯಲ್ಲಿ ಮಾಟು ಪೊಂಗಲ್, ಕಾಣುಂ ಪೊಂಗಲ್ ಇವೆಲ್ಲಾ ವಿಶೇಷವಾಗಿದೆ.

ಉತ್ತರ ಪ್ರದೇಶ
12 ವರ್ಷಗಳಿಗೊಮ್ಮೆ ಮಕರ ಸಂಕ್ರಾಂತಿ ದಿನದಂದು ಕುಂಭಮೇಳ ಆಚರಿಸಲಾಗುವುದು. ಈ ಸಂದರ್ಭದಲ್ಲಿ ದೇಶದ ವಿವಿಧ ಮೂಲಗಳಿಂದ ಲಕ್ಷಾಂತರ ಸಾಧುಗಳು, ಜನರು ಇಲ್ಲಿಗೆ ಭೇಟಿಕೊಡುತ್ತಾರೆ.

ಉತ್ತರಾಖಂಡ
ಇಲ್ಲಿ ಉತ್ತರಾಯಣಿ, ಖಿಚರಿ ಸಂಗ್ರಾಂಡ್, ಘೋಲ್ಡಾ, ಗ್ವಾಲ್ಡಾ ಹೀಗೆ ಮುಂತಾದ ಹೆಸರುಗಳಿಂದ ಆಚರಿಸಲಾಗುವುದು. ಈ ದಿನ ಖಿಚಡಿ ಮಾಡಲಾಗುವುದು.

ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದಲ್ಲಿ ಪೌಶ್‌ ಸಂಕ್ರಾಂತಿಯೆಂದು ಆಚರಿಸಲಾಗುವುದು. ಇಲ್ಲಿ ಸಂಕ್ರಾಂತಿಯ ದಿನ ಲಕ್ಷ್ಮಿಯನ್ನು ಆರಾಧಿಸಲಾಗುವುದು.

English summary

Makar Sankranti 2023 : Traditions And Customs Of Makar Sankranti in Kannada

These are Traditions And Customs Of Makar Sankranti follow in different states, read on...
X
Desktop Bottom Promotion