Latest Updates
-
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್!
ಸೂರ್ಯ ಗ್ರಹಣ 2023: ಗ್ರಹಣದ ಸಮಯದಲ್ಲಿ ಆಹಾರ ಸೇವಿಸಬಾರದು ಏಕೆ?
ಏಪ್ರಿಲ್ 20ಕ್ಕೆ ಸೂರ್ಯಗ್ರಹಣ. ಸೂರ್ಯಗ್ರಹಣ ಎಂದಾಗ ನಮ್ಮಲ್ಲಿ ಹಲವಾರು ನಂಬಿಕೆಗಳಿವೆ, ಆ ನಂಬಿಕೆಗಳನ್ನು ಕೆಲವರು ನಂಬಿದರೆ ಇನ್ನು ಕೆಲವರಿಗೆ ಅದು ಮೂಢನಂಬಿಕೆ ಆಗಬಹುದು, ನಂಬಿಕೆಗಳು ಅವರವರ ಅನುಭವ ಹಾಗೂ ಆಲೋಚನೆಗೆ ಬಿಟ್ಟದ್ದು. ಸೂರ್ಯಗ್ರಹಣದಲ್ಲಿ ಆಹಾರ ಸೇವಿಸಬಾರದು ಎಂಬ ನಂಬಿಕೆ ಇದೆ, ಇದರ ಬಗ್ಗೆ ಹೆಚ್ಚಿನ ವಿವರ ನೋಡುವುದಾದರೆ.....

ಧರ್ಮಗ್ರಂಥಗಳ ಪ್ರಕಾರ
ಗ್ರಹಣವು ದುರದೃಷ್ಟಕರ ಮತ್ತು ಅನೇಕ ರೋಗಗಳಿಗೆ ಕಾರಣವಾಗುವುದರಿಂದ ಆಹಾರ ಸೇವಿಸುವುದನ್ನು ತಪ್ಪಿಸಬೇಕು ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಪವಿತ್ರ ಸ್ಕಂದ ಪುರಾಣದಲ್ಲಿ, ಈ ಅವಧಿಯಲ್ಲಿ ಆಹಾರವನ್ನು ನೀಡುವುದು/ದಾನ ಮಾಡುವುದು ಸಹ ಅಶುಭ ಎಂಬ ನಂಬಿಕೆ ಇದೆ. ಈ ವಿಕಿರಣಗಳು ಎಷ್ಟು ಶಕ್ತಿಯುತವಾಗಿವೆ ಎಂದರೆ ಮುಂದಿನ ಜನ್ಮದಲ್ಲೂ ಅವು ಪರಿಣಾಮಗಳನ್ನು ಬೀರಬಹುದು.
ವೈಜ್ಞಾನಿಕ ಕಾರಣ
ಗ್ರಹಣದ ಸಮಯದಲ್ಲಿ ಆಹಾರದಿಂದ ದೂರವಿರುವುದು ಒಳ್ಳೆಯದು, ಏಕೆಂದರೆ ವೈಜ್ಞಾನಿಕವಾಗಿ ಸೂರ್ಯನ ಬೆಳಕಿನ ಅನುಪಸ್ಥಿತಿಯಲ್ಲಿ ಬ್ಯಾಕ್ಟೀರಿಯಾಗಳು ಸಕ್ರಿಯವಾಗಬಹುದು, ಇದು ಆಹಾರದ ಮೇಲೆ ದುಷ್ಪರಿಣಾಮ ಬೀರಬಹುದು ಮತ್ತು ನಿಮ್ಮ ಆರೋಗ್ಯವನ್ನು ಹಾನಿಗೊಳಿಸಬಹುದು ಎನ್ನುತ್ತಾರೆ ತಜ್ಞರು. ಗ್ರಹಣದ ಮೊದಲು ಮತ್ತು ನಂತರ ಬೇಯಿಸಿದ ಆಹಾರಗಳಲ್ಲಿ ಸಹ ರಾಸಾಯನಿಕ ಬದಲಾವಣೆ ಅಗುವ ಸಾಧ್ಯತೆ ಇದೆ. ಹಾಗಾಗಿ ಗ್ರಹಣದ ಸಮಯದಲ್ಲಿ ಅಡುಗೆ ಮಾಡುವುದನ್ನು ತಪ್ಪಿಸುವುದು ಉತ್ತಮ.
ಅಜೀರ್ಣ ಉಂಟುಮಾಡುತ್ತದೆ
ಸೂರ್ಯಗ್ರಹಣದ ಕಿರಣಗಳು ಬೇಯಿಸಿದ ಆಹಾರದ ಮೇಲೆ ಪರಿಣಾಮ ಬೀರುವುದರಿಂದ ಇಂಥಾ ಆಹಾರವನ್ನು ಸೇವಿಸಿದಾಗ ಅಜೀರ್ಣ ಮತ್ತು ಹೊಟ್ಟೆಯ ತೊಂದರೆ ಉಂಟಾಗುತ್ತದೆ. ಕೆಲವು ಸಂಶೋಧಕರು ಗ್ರಹಣದ ಸಮಯದಲ್ಲಿ ತಿನ್ನುವುದು ಅಜೀರ್ಣಕ್ಕೆ ಕಾರಣವಾಗುತ್ತದೆ ಎಂಬ ಅಂಶವನ್ನು ಒಪ್ಪಿಕೊಂಡಿದ್ದಾರೆ.
ಗ್ರಹಣದ ಸಮಯದಲ್ಲಿ ಇಂಥಾ ಆಹಾರ ಕಡ್ಡಾಯವಾಗಿ ನಿಷಿದ್ಧ
ಆಲ್ಕೋಹಾಲ್, ಹುದುಗಿಸಿದ ಆಹಾರ ಮತ್ತು ಹೆಚ್ಚಿನ ಪ್ರೋಟೀನ್ ಆಹಾರವನ್ನು ತಪ್ಪಿಸಿ. ಇವುಗಳೆಲ್ಲಾ ಕಿರಣಗಳಿಂದ ಕಲುಷಿತಗೊಳ್ಳುತ್ತವೆ ಮತ್ತು ಅಂತಹ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು, ಏಕೆಂದರೆ ಅವು ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಭಾರತೀಯರು ಬೇಯಿಸಿದ ಆಹಾರಕ್ಕೆ ತುಳಸಿ ಎಲೆ ಅಥವಾ ಗರಿಕೆ ಹುಲ್ಲನ್ನು ಸೇರಿಸುತ್ತಾರೆ, ಕಾರಣ ಇದು ಎಲ್ಲಾ ದುಷ್ಪರಿಣಾಮಗಳನ್ನು ತೆಗೆದುಹಾಕುತ್ತದೆ ಮತ್ತು ಎಲೆಗಳಲ್ಲಿರುವ ಬ್ಯಾಕ್ಟೀರಿಯಾದ ಗುಣಲಕ್ಷಣಗಳು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ ಎಂದು ನಂಬುತ್ತಾರೆ.
ಗ್ರಹಣದ ಸಮಯದಲ್ಲಿ ಆಹಾರ ಸೇವಿಸಲೇಬೇಕಾದರೆ ಏನು ಮಾಡಬೇಕು?
ಗ್ರಹಣದ ಸಮಯದಲ್ಲಿ ಮಕ್ಕಳು, ವೃದ್ಧರು, ಅಸ್ವಸ್ಥ ರೋಗಿಗಳು ಮತ್ತು ಗರ್ಭಿಣಿಯರು ಹೇಗಿರಬೇಕು ಎಂಬ ಗೊಂದಲ ಕಾಡುವುದು ಸಹಜ. ಇವರೆಲ್ಲಾ ಗ್ರಹಣದ ಸಮಯದಲ್ಲಿ ಸಾತ್ವಿಕ ಆಹಾರಗಳನ್ನು ಸೇವಿಸಬಹುದು. ಗ್ರಹಣದ ಸಮಯದಲ್ಲಿ ನೀರು ಕುಡಿಯುವುದನ್ನು ಸಹ ತಪ್ಪಿಸಲಾಗುತ್ತದೆ. ಹಾಗೂ ನೀವು ನೀರನ್ನು ಸೇವಿಸಲು ಬಯಸಿದರೆ ಗ್ರಹಣ ಪ್ರಾರಂಭವಾಗುವ ಮೊದಲು ತುಳಸಿ ಎಲೆಗಳನ್ನು ಸೇರಿಸಿ ಕುಡಿಯಬಹುದು.



Click it and Unblock the Notifications