Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಸೀತೆಯಿಂದ ಆಂಜನೇಯ ಪಡೆದ 9 ವರಗಳು ಯಾವುದು ಗೊತ್ತಾ?
ಭಗವಾನ್ ಆಂಜನೇಯ ಸೀತಾಮಾತೆಯನ್ನು ತಾಯಿಯಂತೆ ಪೂಜಿಸುತ್ತಿದ್ದನು. "ಅಷ್ಟ ಸಿದ್ಧಿ ನವ ನಿಧಿ ಕೇ ಧಾತ, ಅಸಬರ ದಿನ್ಹಾ ಜಾನಕಿ ಮಾತ" ಅಂದ್ರೆ ಸೀತಮ್ಮ ಆಂಜನೇಯನಿಗೆ ಒಟ್ಟು 9 ವರಗಳನ್ನು ನೀಡಿದ್ದಳು ಅದರಲ್ಲಿ 8 ಸಿದ್ಧಿ ಹಾಗು 9 ನಿಧಿ ಸೇರಿತ್ತು. ಅಮ್ಮ ಜಾನಕಿ ಆಂಜನೇಯನಿಗೆ ಆ ವರಗಳನ್ನು ನೀಡಿದ್ರ ಹಿಂದೆ ಒಂದು ಬಲವಾದ ಕಾರಣವಿದೆ. ಸೀತಮ್ಮ ಆ 9 ನಿಧಿಗಳನ್ನು ಹನುಮಂತನಿಗೆ ನೀಡಿದ್ದೇಕೆ, ಸೀತೆ ಹನುಮಂತನಿಗೆ ನೀಡಿದ ನಿಧಿಗಳಾವುವು ಎಂದು ನೋಡೋಣ ಬನ್ನಿ

ಹಾಗಾದ್ರೆ ಆಂಜನೇಯನು ಸೀತಮ್ಮನಿಂದ ಪಡೆದ ನಿಧಿಗಳನ್ನು ಒಂದೊಂದಾಗೆ ತಿಳಿಸಿ ಕೊಡ್ತೀವಿ.

1. ಪದ್ಮನಿಧಿ
ಪದ್ಮ ಎಂದರೆ ಕಮಲ ಎಂದರ್ಥ. ಸತ್ವ, ಸತ್ಯ ಮತ್ತು ನೀತಿಗಳನ್ನು ಮೀರಿದ ವ್ಯಕ್ತಿಯು ಅದನ್ನು ಪಡೆಯಲು ಅರ್ಹನಾಗಿರುತ್ತಾನೆ. ಈ ಸಂಪತ್ತು ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರವಾಗುತ್ತದೆ. ಈ ಆಸ್ತಿಯು ಚಿನ್ನ ಮತ್ತು ಬೆಳ್ಳಿಯ ರೂಪದಲ್ಲಿರುತ್ತವೆ.

2. ಮಹಾಪದ್ಮ
ಈ ನಿಧಿಯು ಸಾತ್ವಿಕ ಸ್ವಭಾವವನ್ನು ಹೊಂದಿದೆ. ಮತ್ತು ಮುಂದಿನ ಏಳು ತಲೆಮಾರುಗಳಿಗೆ ಹಸ್ತಾಂತರವಾಗುತ್ತದೆ. ಇದು ಮಹಾಪದ್ಮ ಅಥವಾ ಬೃಹತ್ ಗಾತ್ರದ ಕಮಲವಾಗಿ ಬದಲಾಗುತ್ತದೆ. ಮೇಲಿನ ಎರಡು ನಿಧಿಗಳು ದಾನದಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸುತ್ತವೆ.

3. ನೀಲ ನಿಧಿ
ನೀಲ ನಿಧಿಯನ್ನು ವ್ಯಾಪಾರ ವಹಿವಾಟುಗಳ ಮೂಲಕ ಸಂಗ್ರಹಿಸಲಾಗುತ್ತದೆ. ರಾಜಸ್ ಮತ್ತು ಸತ್ವ ಗುಣಗಳೊಂದಿಗೆ ಸಂಬಂಧವನ್ನು ಹೊಂದಿದೆ. ಇದು ಮೂರು ತಲೆಮಾರುಗಳಿಗೆ ಹಸ್ತಾಂತರವಾಗುತ್ತದೆ. ರಾಜಸ್ ಚಾತುರ್ಯದ ಅಂಶವನ್ನು ಒಳಗೊಂಡಿದ್ದು, ಈ ನಿಧಿಯನ್ನುಪದ್ಮ ಹಾಗೂ ಮಹಾಪದ್ಮಕ್ಕೆ ಸಮಾನವೆಂದು ಪರಿಗಣಿಸಲಾಗುವುದಿಲ್ಲ.

4. ಶಂಖ ನಿಧಿ
ಶಂಖವು ಕೂಡ ಒಂದು ರೀತಿಯ ನಿಧಿಯಾಗಿದೆ. ಈ ನಿಧಿಯನ್ನು ಹೊಂದಿದವನು ಸ್ವಾರ್ಥಿಯಾಗಿರುತ್ತಾನಂತೆ. ಆ ವ್ಯಕ್ತಿ ಅವನ ಬಗ್ಗೆ ಬಿಟ್ಟು ಬೇರೆಯವರ ಬಗ್ಗೆ ಚಿಂತಿಸುವುದಿಲ್ಲ. ಆ ವ್ಯಕ್ತಿ ಅಪಾಯ ಸಂಪತ್ತನ್ನು ಗಳಿಸಿದರೂ ಕೂಡ ಕೇವಲ ತನಗಾಗಿ ಮಾತ್ರ ಉಪಯೋಗಿಸುತ್ತಾನೆ ಹೊರತು ತನ್ನ ಕುಟುಂಬದ ಬಗ್ಗೆ ಕೂಡ ಚಿಂತೆ ಮಾಡುವುದಿಲ್ಲವಂತೆ.

5. ಮಕರ ನಿಧಿ
ಮೊಸಳೆಯು ತಮೋ ಗುಣದಿಂದ ನಿಯಂತ್ರಿಸಲ್ಪಡುತ್ತದೆ. ಈ ವ್ಯಕ್ತಿಯು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಲು ಪ್ರೇರಿತನಾಗುತ್ತಾನೆ. ಆತ ಯಾರಿಗೂ ಜಗ್ಗೋದಿಲ್ಲ, ಅಧಿಕಾರಿಗಳಿಗೂ ಸವಾಲ್ ಹಾಕುವ ಗುಣ ಈತನಲ್ಲಿರುತ್ತದೆ. ಇಂತವರು ಒಂದಲ್ಲ ಒಂದು ಒಂದು ದಿನ ಶಸ್ತ್ರಾಸ್ತ್ರಗಳಿಂದಾನೇ ಸಾಯುತ್ತಾರಂತೆ.

6. ಕಚ್ಚಪ ನಿಧಿ
ಕಚ್ಚಪ ಎಂದರೆ ಆಮೆ. ಈ ಆಮೆಯು ಹೆಚ್ಚಿನ ಸಂಪತ್ತನ್ನು ಸಂಗ್ರಹಿಸುತ್ತದೆ ಆದರೆ ಅದನ್ನು ಖರ್ಚು ಪಡುವುದಿಲ್ಲ. ಇಂತವರ ಗುಣ ಹೇಗಿರುತ್ತೆ ಅಂದ್ರೆ ಜಿಪುಣರಿಗೆ ಆದರ್ಶ ಪ್ರಾಯರಾಗಿರುತ್ತಾರೆ.

7. ಮುಕುಂದ ನಿಧಿ
ಮುಕುಂದ ನಿಧಿ ಎಂದರೆ ಪಾದರಸ. ಈ ನಿಧಿ ಮುಂದಿನ ಒಂದು ಪೀಳಿಗೆಗೆ ಮಾತ್ರ ಹಸ್ತಾಂತರವಾಗುತ್ತದೆ. ಆ ನಂತರ ಹಂಸ್ತಾಂತರ ನಿಂತುಹೋಗುತ್ತದೆ. ಇವರು ಸಂಪತ್ತನ್ನು ಗಳಿಸುತ್ತಾರೆ. ಆದರೆ ಅದೇ ಕ್ಷಣದಲ್ಲಿ ಸಂಪೂರ್ಣ ಖರ್ಚು ಮಾಡುತ್ತಾರೆ.

8. ನಂದ ನಿಧಿ
ನಂದ ನಿಧಿ ಎಂದರೆ ದೀರ್ಘಾಯುಷ್ಯ ನಿಧಿ. ಸತ್ವ ಮತ್ತು ರಜೋ ಗುಣಗಳಿಂದ ಪ್ರಭಾವಿತರಾಗಿ, ನಂದ ನಿಧಿಯನ್ನು ಹೊಂದಿರುವ ಜನರು ದೀರ್ಘಾಯುಷ್ಯವನ್ನು ಪಡೆಯುತ್ತಾರೆ. ಇವರು ಮಹಾತ್ವಾಕಾಂಕ್ಷೆಯುಳ್ಳ ವ್ಯಕ್ತಿಯಾಗಿರುತ್ತಾರೆ. ಮತ್ತು ಹೊಗಳಿಕೆಗೆ ಅರ್ಹರಾಗಿರುತ್ತಾರೆ.

9. ಖಾರ್ವ ನಿಧಿ
ಖಾರ್ವ ಎಂದರೆ ಲೆಕ್ಕಕ್ಕೆ ಸಿಗದ ಎಂದರ್ಥ. ಇದರಲ್ಲಿ ಎಂಟು ನಿಧಿಗಳ ಉಳಿದ ಕೆಲವು ಭಾಗಗಳು ಸಂಗ್ರಹವಾಗಿದೆ. ಖಾರ್ವ ನಿಧಿಯ ವ್ಯಕ್ತಿತ್ವ ಹೊಂದಿರುವವರು ಯಾವಾಗಲೂ ಹಣಕ್ಕಾಗಿ ಹಂಬಲಿಸುತ್ತಿರುತ್ತಾರೆ. ಮತ್ತು ಇತರರಿಂದ ಸಂಪತ್ತನ್ನು ಸಂಪಾದಿಸುವ ಮೂಲಕ ತನ್ನ ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಾರೆ.
Desclaimer : ಈ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಬೋಲ್ಡ್‌ಸ್ಕೈ ಕನ್ನಡ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಕೇವಲ ಮಾಹಿತಿಯನ್ನು ತಲುಪಿಸುವುದು ಮಾತ್ರ ನಮ್ಮ ಏಕೈಕ ಉದ್ದೇಶವಾಗಿದೆ. ದಯವಿಟ್ಟು ಇದನ್ನು ಆಚರಿಸುವ ಮೊದಲು ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಿ.



Click it and Unblock the Notifications
