Latest Updates
-
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ವಿವಿಧ ಸಮಸ್ಯೆಗಳಿಗೆ ಜ್ಯೋತಿಷ್ಯದ ಸಿಂಪಲ್ ಪರಿಹಾರಗಳು
ಸಮಸ್ಯೆಗಳಿಲ್ಲದ ಮನುಷ್ಯರಿಲ್ಲ, ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಸಮಸ್ಯೆಗಳು ಇದ್ದೇ ಇರುತ್ತದೆ. ಕೆಲವರು ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿದರೆ, ಇನ್ನೂ ಹಲವರು ಸಮಸ್ಯೆಗಳಿಗೆ ಬೆನ್ನು ಹಾಕುವುದೇ ಹೆಚ್ಚು. ಸಮಸ್ಯೆಯನ್ನು ನಾವು ಎದುರಿಸದ ಹೊರತು ಸಮಸ್ಯೆ ನಮ್ಮಿಂದ ದೂರಾಗದು.

ಅಂತೆಯೇ ಕೆಲವು ಸಮಸ್ಯೆಗಳಿಗೆ ನಾವೇ ಸುಲಭವಾಗಿ ಪರಿಹಾರ ಕಂಡುಕೊಂಡರೆ, ಇನ್ನೂ ಕೆಲವು ಸಮಸ್ಯೆಗಳಿಗೆ ಜ್ಯೋತಿಶಾಸ್ತ್ರದ ಸಹಾಯದಿಂದ ಪರಿಹಾರಗಳನ್ನು ಕಂಡುಕೊಳ್ಳಬಹುದು. ಈ ಲೇಖನದಲ್ಲಿ ನಿಮ್ಮ ಆರೋಗ್ಯ, ಪ್ರೀತಿ, ಮದುವೆ ಮತ್ತು ವೃತ್ತಿಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಜ್ಯೋತಿಶಾಸ್ತ್ರದ ಪ್ರಕಾರ ಕೆಲವು ಸಿಂಪಲ್ ಸಲಹೆಗಳನ್ನು ನೀಡಿದ್ದೇವೆ.

ಆರೋಗ್ಯ ಸಮಸ್ಯೆಗಳಿಗೆ ಪರಿಹಾರಗಳು
ನೀವು ಆರೋಗ್ಯ ಸಮಸ್ಯೆಗಳನ್ನು ನಿರಂತರವಾಗಿ ಎದುರಿಸುತ್ತಿದ್ದರೆ ಮನೆಯಲ್ಲಿ ಶಿವಲಿಂಗಕ್ಕೆ ರುದ್ರ-ಅಭಿಷೇಕ ಮಾಡಿ. ರುದ್ರ ಅಭಿಷೇಕ ಮಾಡುವಾಗ, "ತತ್ ಪುರುಷ ವಿದ್ಮಹೇ, ಮಹಾದೇವ ಧೀಮಹಿ, ತನ್ನೋ ರುದ್ರ ಪ್ರಚೋದಯಾತ್" ಎಂದು ಜಪಿಸಿ. ಈ ಮಂತ್ರಪೂಜೆಯನ್ನು ವಾರದ ಒಂದು ದಿನ 11 ವಾರಗಳವರೆಗೆ ನಿರಂತರವಾಗಿ ಮಾಡಿ. ಪೂಜಿಸುವಾದ ಶುದ್ಧವಾಗಿ ಮಡಿಯಿಂದ ಮಾಡಿ, ಬೆಳಗ್ಗೆ ಅಥವಾ ಸಂಜೆ ಈ ಪೂಜೆ ಮಾಡಿದರೆ ಶುಭ.
ಆರೋಗ್ಯ ಸಮಸ್ಯೆ ದೀರ್ಘಕಾಲದವರೆಗೆ ಗುಣವಾಗದಿದ್ದರೆ ಅಥವಾ ಒಂದು ದಿನಕ್ಕಾಗುವಷ್ಟು ಹಳೆಯ ಔಷಧಿಗಳನ್ನು ಎಸೆಯಿರಿ ಮತ್ತು ಪೌರ್ಣಿಮೆಯ ದಿನ ಅಥವಾ ಪಂಚಮಿ, ಷಷ್ಟಿ, ಸಪ್ತಮಿ, ಅಷ್ಟಮಿ ಅಥವಾ ತ್ರಯೋದಶಿಗಳಂದು ಹೊಸ ಔಷಧಿಗಳನ್ನು ಖರೀದಿಸಿ ಬಳಸಿ.
ಸಣ್ಣ-ಪುಟ್ಟ ಕಾಯಿಲೆಗಳು ನಿಮಗೆ ಪದೇ ಪದೇ ತೊಂದರೆ ನೀಡುತ್ತಿದ್ದರೆ, ‘ಓಂ ಗಣಪತಾಯ ನಮಃ' ಎಂದು ಪ್ರತಿ ಗುರುವಾರ ಸಾಸಿವೆಯನ್ನು ಕೈಯಲ್ಲಿ ಹಿಡಿದು 1008 ಬಾರಿ ಜಪಿಸಿ. ಜಪಿಸಿದ ನಂತರ ಈ ಬೀಜಗಳನ್ನು ಹಳದಿ ಬಟ್ಟೆಯಲ್ಲಿ ಸುತ್ತಿ ನಿಮ್ಮ ಕುತ್ತಿಗೆಗೆ ಕಟ್ಟಿಕೊಳ್ಳಿ.

ಪ್ರೀತಿಯ ಜೀವನದಲ್ಲಿ ಸಮರಸವಿರಲು
ನೀವು ಹಾಗೂ ನಿಮ್ಮ ಪ್ರೇಮಿಯ ನಡುವೆ ಯಾವುದೇ ಸಮಸ್ಯೆ ಇದ್ದರೆ, ಇಬ್ಬರ ನಡುವೆ ಆಗಾಗ್ಗೆ ಜಗಳ, ಮನಸ್ತಾಪ ಉಂಟಾಗುತ್ತಿದ್ದರೆ ಗುರುವಾರ ಅಕ್ಕಿ ಮತ್ತು ಕಡಲೆಹಿಟ್ಟನ್ನು ಸಾಧು, ಸಂತರಿಗೆ ಅಥವಾ ಪುರೋಹಿತರಿಗೆ ದಾನ ಮಾಡಿ.
ಶನಿವಾರದಂದು ಎಣ್ಣೆಯನ್ನು ದಾನ ಮಾಡಿ ಮತ್ತು ಕಪ್ಪು ಬಟ್ಟ ಧರಿಸುವುದನ್ನು ತಪ್ಪಿಸಿ. ಸಂಜೆ ಸೂರ್ಯಾಸ್ತದ ನಂತರ ಪೂರ್ವ ದಿಕ್ಕಿನತ್ತ ಮುಖ ಮಾಡಿ "ಓಂ ಪ್ರಮ್ ಪ್ರೀಮ್ ಪ್ರಾಮ್ ಸಾ ಶನಿಶ್ವರಾಯ ನಮಃ" ಎಂಬ ಮಂತ್ರವನ್ನು ಪಠಿಸಿ.

ಮದುವೆಯ ಸಮಸ್ಯೆಗಳನ್ನು ಪರಿಹರಿಸಲು
ಮದುವೆ ವಿಚಾರದಲ್ಲಿ ಪದೇ ಪದೇ ವಿಳಂಬವಾಗುತ್ತಿದ್ದರೆ, "ಓಂ ಜವಾಲ್ ಜವಾಲ್ ಶುಲಾನಿ, ದುಷ್ಟಗ್ರಹಾನ್, ಹುವಾನ್ ಫಟ್ ಸ್ವಹಾ" ಎಂಬ ಮಂತ್ರವನ್ನು ಬೆಳಿಗ್ಗೆ ಮತ್ತು ಸಂಜೆ 10 ನಿಮಿಷಗಳ ಕಾಲ ಪಠಿಸಿ, ವಿಶೇಷವಾಗಿ ಅಷ್ಟಮಿ ದಿನದಂದು ದುರ್ಗಾ ದೇವಿಯ ಮುಂದೆ ಭಜಿಸಿ.
ರಾತ್ರಿಯ ವೇಳೆ ಚಂದ್ರನ ಮುಂದೆ ನಿಂತು "ಓಂ ಶ್ರಮ್ ಶ್ರೀಮ್ ಶ್ರೋಮ್ ಸಾಹ್ ಚಂದ್ರಮೇ ನಮಃ" ಎಂಬ ಮಂತ್ರವನ್ನು ಪ್ರತಿರಾತ್ರಿ ಒಂದು ವರ್ಷದವರೆಗೆ ಜಪಿಸಿ.

ವೃತ್ತಿಜೀವನದ ಸಮಸ್ಯೆಗಳಿಗೆ ಪರಿಹಾರ
ನಿಮಗೆ ಕೆಲಸ ಸಿಗುವಲ್ಲಿ ಸಮಸಯೆ ಎದುರಿಸುತ್ತಿದ್ದರೆ, 41 ದಿನಗಳ ಕಾಲ ನಿರಂತರವಾಗಿ ಒಂದು ಚಮಚ ಸಾಸಿವೆ ಕಾಳನ್ನು ಸೂರ್ಯ ದೇವರಿಗೆ ಅರ್ಪಿಸಿ. ಭಾನುವಾರದಂದು ನೀರನ್ನು ದಾನ ಮಾಡಿ. ಜತೆಗೆ, ನಿಮ್ಮ ವೃತ್ತಿಜೀವನದಲ್ಲಿ ಆಗಾಗ್ಗೆ ಸಮಸ್ಯೆಗಳು ಮತ್ತು ವರ್ಗಾವಣೆ, ಅಸ್ಥಿರತೆ ಕಾಡುತ್ತಿದ್ದರೆ ಐದು ತಾಮ್ರದ ಪಾತ್ರೆಗಳಲ್ಲಿ ಕಡಲೆಹಿಟ್ಟನಿಂದ ಮಾಡಿದ ಸಿಹಿತಿಂಡಿಗಳಿಂದ ತುಂಬಿಸಿ ಮತ್ತು ಕನಿಷ್ಠ 11 ಭಾನುವಾರದವರೆಗೆ ಇದೇ ಅಭ್ಯಾಸವನ್ನು ಮುಂದುವರಿಸಿ. ನಿಮ್ಮ ಕರ್ತವ್ಯದಲ್ಲಿ ಅಡೆತಡೆಗಳನ್ನು ಎದುರಿಸಿದರೆ, "ಓಂ ವಿಘ್ನೇಶ್ವರಾಯ ನಮಃ" ಎಂಬ ಮಂತ್ರವನ್ನು ದಿನಕ್ಕೆ 108 ಬಾರಿ ಜಪಿಸಿ.



Click it and Unblock the Notifications